ಆಡುವ ವಯಸ್ಸಿನಲ್ಲೇ ದೇಶವೇ ಮೆಚ್ಚುವಂತಹ ಸಾಧನೆ ಮಾಡಿದ 'ಅಯುಷ್'!

|

ಸಾಮಾನ್ಯವಾಗಿ ಬಹುತೇಕ ಮಕ್ಕಳು ಶಾಲಾ ಅವಧಿ ಮುಗಿದ ಬಳಿಕ ವಿಡಿಯೊ ಗೇಮ್‌ ಆಡುವುದರಲ್ಲಿ ತೊಡಗಿಸಿಕೊಳ್ಳುತ್ತಾರೆ ಇಲ್ಲವೇ, ಯಾವುದಾದರೂ ಆಟ ಆಡುವುದನ್ನು ಇಷ್ಟಪಡಿತ್ತಾರೆ. ಇನ್ನೂ ಕೇಲವರು ಹೋಮ್ ವರ್ಕ್‌ ಮಾಡುವುದರಲ್ಲಿ ತಲ್ಲಿನರಾಗುತ್ತಾರೆ. ಆದರೆ ಇಲ್ಲೊಬ್ಬ ಹುಡುಗ ಚಿಕ್ಕ ವಯಸ್ಸಿನಲ್ಲೇ ಆಪ್‌ ಒಂದನ್ನು ಸಿದ್ಧಪಡೆಸಿ ದೇಶವೆ ಮೆಚ್ಚುವಂತಹ ಸಾಧನೆ ಮಾಡಿ ಗಮನ ಸೆಳೆದಿದ್ದಾನೆ.

ಆಡುವ ವಯಸ್ಸಿನಲ್ಲೇ ದೇಶವೇ ಮೆಚ್ಚುವಂತಹ ಸಾಧನೆ ಮಾಡಿದ 'ಅಯುಷ್'!

ಹೌದು, ಬೆಂಗಳೂರಿನ ಹೆಡ್ ಸ್ಟಾರ್ಟ್ ಎಜುಕೇಶನಲ್ ಅಕಾಡೆಮಿಯ ಇಂಡಿಯನ್ ವಿದ್ಯಾರ್ಥಿ 'ಅಯುಷ್ ಘರತ್' ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ನೆರವಾಗುವಂತಹ ಎಮ್‌ನ್ಯೂಟ್ರಿಷಿಯನ್‌(mNutrition) ಆಪ್‌ವೊಂದನ್ನು ತಯಾರಿಸಿದ್ದಾನೆ. ಒಂಬತ್ತನೇ ತರಗತಿಯಲ್ಲಿ ಓದಿತ್ತಿರುವ ಆಯೂಷ್‌ ದೇಶದಲ್ಲಿನ ಅಪೌಷ್ಠಿಕತೆಯ ಸಮಸ್ಯೆಯನ್ನು ಅರಿತು ಅದಕ್ಕೆ ಪರಿಹಾರ ಕಂಡುಕೊಳ್ಳಲು ಆಪ್‌ ಅಭಿವೃದ್ಧಿ ಮಾಡಿದ್ದಾನೆ.

ಭಾರತದಲ್ಲಿ ಅಪೌಷ್ಟಿಕತೆ ಸಮಸ್ಯೆಯ ತೀವ್ರತೆ ಹೆಚ್ಚಾಗಿದ್ದು, ಅಂದಾಜು 5 ವರ್ಷದ ಮಕ್ಕಳ ಜನಸಂಖ್ಯೆಯಲ್ಲಿ ಶೇ 44 ಪ್ರತಿ ಶತದಷ್ಟು "ಅಪೌಷ್ಟಿಕತೆ" ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂಬುದನ್ನು ವಿಶ್ವ ಆರೋಗ್ಯ ಸಂಸ್ಥೆ ವರದಿ ನೀಡಿದೆ. ಅಂಥ ಅಪೌಷ್ಠಿಕ ಮಕ್ಕಳಿಗೆ ಸರಿಯಾದ ಪೌಷ್ಠಿಕ ಆಹಾರ ಸೀಗಬೇಕು ಎನ್ನುವ ಸಲುವಾಗಿ ಆಯೂಷ್ ಎಮ್‌ನ್ಯೂಟ್ರಿಷಿಯನ್ ಆಪ್‌ ತಯಾರಿಸಿದ್ದಾನೆ.

ಓದಿರಿ : ವಾಟ್ಸಪ್‌ ಸೇರಿಕೊಳ್ಳಲಿವೆ ನೀವು ನಿರೀಕ್ಷಿಸುತ್ತಿದ್ದ 5 ಹೊಸ ಫೀಚರ್ಸ್‌!ಓದಿರಿ : ವಾಟ್ಸಪ್‌ ಸೇರಿಕೊಳ್ಳಲಿವೆ ನೀವು ನಿರೀಕ್ಷಿಸುತ್ತಿದ್ದ 5 ಹೊಸ ಫೀಚರ್ಸ್‌!

ಆಡುವ ವಯಸ್ಸಿನಲ್ಲೇ ದೇಶವೇ ಮೆಚ್ಚುವಂತಹ ಸಾಧನೆ ಮಾಡಿದ 'ಅಯುಷ್'!

ಸ್ಮಾರ್ಟ್‌ಫೋನ್‌ನಲ್ಲಿ ಎಮ್‌ನ್ಯೂಟ್ರಿಷಿಯನ್ ಆಪ್‌ ಅನ್ನು ಡೌನಲೊಡ್‌ ಮಾಡಿಕೊಳ್ಳಬಹುದಾಗಿದ್ದು, ಈ ಆಪ್‌ನ ಬಳಕೆಯು ಸರಳವಾಗಿದೆ. ಆರೋಗ್ಯ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಈ ಆಪ್‌ನಲ್ಲಿ ಅಪೌಷ್ಠಿಕತೆ ಸಮಸ್ಯೆಯಿರುವ ಮಕ್ಕಳ ವಯಸ್ಸು, ಲಿಂಗ, ಎತ್ತರ, ತೂಕ ಮತ್ತು ಸ್ಥಳ ಹೀಗೆ ಅಗತ್ಯವಾದ ಎಲ್ಲ ಬೇಸಿಕ ಮಾಹಿತಿಗಳನ್ನು ನೋಂದಣಿಮಾಡಬೇಕು. ವರ್ಲ್ಡ್‌ ಹೆಲ್ತ್ ಆರ್ಗನೈಝೇಶನ್(WHO) ಸಂಸ್ಥೆ 2006 ಅಂಕಿ ಅಂಶ ಪ್ರಕಾರ ಮಕ್ಕಳ ಬೆಳವಣಿಗೆ ಕಂಡುಬಂದಿದೆಯಾ ಎಂಬುದನ್ನು ಗುರುತಿಸುವುದು.

ಈ ಎಮ್‌ನ್ಯೂಟ್ರಿಷಿಯನ್ ಆಪ್‌ ಅನ್ನು ಅನಕ್ಷರಸ್ಥರು ಸಹ ಬಳಕೆಮಾಡಬಹುದಾಗಿದೆ. ಹಾಗೂ ಹೆಲ್ತ್ ಕಾರ್ಯಕರ್ತರು ಹೊರತುಪಡಿಸಿ ಸಾಮಾನ್ಯ ಕಾರ್ಯಕರ್ತರು ಸಹ ಆಪ್‌ ಬಳಸಬಹುದಾಗಿದೆ. ಪ್ರತಿ ಮಗುವಿನ ಆರೋಗ್ಯದ ಮಾಹಿತಿ, ಅಗತ್ಯ ಚಿಕಿತ್ಸೆ, ಅಗತ್ಯ ಆಂಯಟಿ ಬಯೋಟಿಕ್ ಮತ್ತು ಪೌಷ್ಠಿಕ್ ಆಹಾರಗಳ ಕುರಿತಾಗಿ ಸಂಪೂರ್ಣ ಮಾಹಿತಿಯನ್ನು ಆಪ್‌ ಒಳಗೊಂಡಿರುತ್ತದೆ.

ಆಡುವ ವಯಸ್ಸಿನಲ್ಲೇ ದೇಶವೇ ಮೆಚ್ಚುವಂತಹ ಸಾಧನೆ ಮಾಡಿದ 'ಅಯುಷ್'!

ಗ್ರಾಮೀಣ ಭಾಗದಲ್ಲಿರುವ ಸರಿಯಾಗಿ ಆರೋಗ್ಯ ಕಾರ್ಯಕರ್ತೆಯರು ಇರುವುದಿಲ್ಲ ಮತ್ತು ಅಲ್ಲಿನ ಅಪೌಷ್ಠಿಕ ಮಕ್ಕಳ ನೆರವಿಗೆ ಈ ಆಪ್ ಹೆಚ್ಚು ಪರಿಣಾಮಕಾರಿಯಾಗಲಿದೆ. ಅಪೌಷ್ಟಿಕ ಕೊರತೆಯನ್ನು ಹೊಗಲಾಡಿಸಲು ಸರ್ಕಾರದ ಬಹುತೇಕ ಕಾರ್ಯಕ್ರಮಗಳು ಯಶಸ್ವಿಯಾಗಲು ಹೆಲ್ತ್ ಕಾರ್ಯಕರ್ತರ ಪಾತ್ರ ಮಹತ್ವದ್ದಾಗಿದೆ ಎನ್ನುತ್ತಾನೆ ಅಯೂಷ್‌. ಇದರೊಂದಿಗೆ ಆಪ್‌ ತಂತ್ರಜ್ಞಾನವು ಮಾಹಿತಿಗೆ ನೆರವಾಗಲಿದೆ.

ಓದಿರಿ : ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎಂ30 ವಿಮರ್ಶೆ : ಕೊಟ್ಟ ಹಣಕ್ಕೆ ಮೋಸವಿಲ್ಲ.!ಓದಿರಿ : ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎಂ30 ವಿಮರ್ಶೆ : ಕೊಟ್ಟ ಹಣಕ್ಕೆ ಮೋಸವಿಲ್ಲ.!

Best Mobiles in India

English summary
Boy Tech-Wiz From India Creates Smartphone App to Help Hungry Children.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X