Home
ಸುದ್ದಿಜಾಲ

ಈ ಸ್ಮಾರ್ಟ್‌ಫೋನ್‌ನಲ್ಲಿದೆ 108ಎಂಪಿ ಕ್ಯಾಮೆರಾ!..ಅಚ್ಚರಿಯ ಡಿಸೈನ್!

ಮೊಬೈಲ್‌ ಮಾರುಕಟ್ಟೆಯಲ್ಲಿ ಭಿನ್ನ ವಿಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳು ಲಗ್ಗೆ ಇಡುತ್ತಲೇ ಸಾಗಿವೆ. ಅವುಗಳಲ್ಲಿ ಕೆಲವು ನೂತನ ಫೀಚರ್ಸ್‌ಗಳಿಂದ ಗ್ರಾಹಕರನ್ನು ಆಕರ್ಷಿಸಿದರೇ, ಇನ್ನೂ ಕೆಲವು ಫೋನ್‌ಗಳು ವಿಶೇಷ ಡಿಸೈನ್ ಹಾಗೂ ಹೈ ಎಂಡ್‌ ಫೀಚರ್ಸ್‌ಗಳಿಂದ ಗ್ರಾಹಕರ ಚಿತ್ತವನ್ನು ಸೆಳೆದು ಬಿಡುತ್ತವೆ. ಇನ್ನೂ ಕೆಲವು ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳು ಲಕ್ಸುರಿ ಫೀಚರ್ಸ್‌ ಹಾಗೂ ದುಬಾರಿ ಬೆಲೆಯಿಂದ ಟ್ರೆಂಡ್‌ ಸೃಷ್ಟಿಸಿಬಿಡುತ್ತವೆ. ಅಂತಹದೊಂದು ಫೋನ್ ಈಗ ಟಾಪ್‌ ಲಿಸ್ಟ್‌ನಲ್ಲಿ ಕಾಣಿಸಿಕೊಂಡಿದೆ.

ಬ್ರಾಂಡೀಸ್ ಪ್ರಮೀತಿಯಸ್

ಹೌದು, ಬ್ರಾಂಡೀಸ್ ಪ್ರಮೀತಿಯಸ್ (BRANDEIS PROMETHEUS) ಹೆಸರಿನ ಸ್ಮಾರ್ಟ್‌ಫೋನ್ ಭಿನ್ನ ರಚನೆಯ ಫೀಚರ್ಸ್‌ಗಳಿಂದ ಈಗ ವರ್ಷದ ಅಸಾಧಾರಣ ಸ್ಮಾರ್ಟ್‌ಫೋನ್ ಆಗಿ ಗುರುತಿಸಿಕೊಂಡಿದೆ. ಈ ಸ್ಮಾರ್ಟ್‌ಫೋನ್ ಕೋನಾಕಾರದ ಡಿಸೈನ್‌ನಲ್ಲಿದ್ದು, ಮೇಲ್ಭಾಗದಲ್ಲಿ ಮತ್ತು ಕೆಳಭಾಗದಲ್ಲಿ ಚೂಪಾದ ಅಂಚುಗಳನ್ನು ಹೊಂದಿರುತ್ತದೆ. 8 LED ಲೈಟ್‌ಗಳ ರಚನೆಯನ್ನು ಒಳಗೊಂಡಿದೆ. ಡಿಸ್‌ಪ್ಲೇ ರಚನೆಯಲ್ಲಿ ಸಂಪೂರ್ಣ ನೂತನವಾಗಿರುವ ಈ ಫೋನ್ ಗ್ರಾಹಕರು ಹುಬ್ಬೇರಿಸುವಂತಿದೆ. ಹಾಗಾದರೆ ಈ ಸ್ಮಾರ್ಟ್‌ಫೋನಿನ ವಿಶೇಷ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ರಚನೆ

ಡಿಸ್‌ಪ್ಲೇ ರಚನೆ

ಬ್ರಾಂಡೀಸ್ ಪ್ರಮೀತಿಯಸ್ ಸ್ಮಾರ್ಟ್‌ಫೋನ್ 6.5-ಇಂಚಿನ QHD+ ಫ್ರೀಡಂ ಸೂಪರ್ ಅಮೋಲೆಡ್ ಡಿಸ್‌ಪ್ಲೇ ಮಾದರಿಯನ್ನು ಹೊಂದಿದೆ. ಈ ಡಿಸ್‌ಪ್ಲೈಯು 120Hz ರಿಫ್ರೆಶ್ ದರ ಹೊಂದಿದ್ದು, 240Hz ಟಚ್ ಸ್ಯಾಂಪ್ಲಿಂಗ್ ರೇಟ್ ಅನ್ನು ಪಡೆದಿದೆ. ಹಾಗೆಯೇ HDR10 + ಬೆಂಬಲವನ್ನು ಒಳಗೊಂಡಿದೆ. ಇನ್ನು ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ ಸೌಲಭ್ಯವು ಸಹ ಈ ಫೋನ್‌ ಹೊಂದಿದೆ. ಹಾಗೆಯೇ Sapphire ಕ್ರಿಸ್ಟಲ್ ಗ್ಲಾಸ್ ಹೊಂದಿದ್ದು, ಧೂಳು ಮತ್ತು ನೀರಿನಿಂದ ರಕ್ಷಣೆಗಾಗಿ IP68- ರೇಟೆಡ್ ಆಗಿದೆ.

ಪ್ರೊಸೆಸರ್ ಯಾವುದು

ಪ್ರೊಸೆಸರ್ ಯಾವುದು

ಬ್ರಾಂಡೀಸ್ ಪ್ರಮೀತಿಯಸ್ ಸ್ಮಾರ್ಟ್‌ಫೋನ್ ಇತ್ತೀಚಿನ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 865 (5G) SoC ಅನ್ನು ಒಳಗೊಂಡಿದೆ. ಇದರೊಂದಿಗೆ 16GB RAM ಮತ್ತು 512GB ಆಂತರಿಕ ಸ್ಟೋರೇಜ್ ಸೌಲಭ್ಯವನ್ನು ಪಡೆದಿದೆ. ಹಾಗೆಯೇ UFS 3.0 ವಿಸ್ತರಿಸಬಹುದಾದ ಆಯ್ಕೆಯನ್ನು ನೀಡಿದೆ. ಈ ಫೋನಿನ ಪ್ರೊಸೆಸರ್ ಹಾಗೂ RAM ಬಲವು ಫೋನ್ ಕಾರ್ಯವೈಖರಿಗೆ ಹೆಚ್ಚು ಬಲ ಒದಗಿಸುತ್ತದೆ.

108MP ಕ್ಯಾಮೆರಾ

108MP ಕ್ಯಾಮೆರಾ

ಈ ಸ್ಮಾರ್ಟ್‌ಫೋನ್ ಕ್ಯಾಮೆರಾ ರಚನೆಯಿಂದಲೂ ವಿಭಿನ್ನ ಎನಸಿಕೊಂಡಿದೆ. ಹಿಂಭಾಗದಲ್ಲಿ ಒಟ್ಟು ಡ್ಯುಯಲ್-ಕ್ಯಾಮೆರಾ ಸೆಟ್‌ಅಪ್‌ ಹೊಂದಿರುವ ಈ ಫೋನ್ ಮುಖ್ಯ ಕ್ಯಾಮೆರಾವು 108ಎಂಪಿ ಸೆನ್ಸಾರ್ ಹೊಂದಿದೆ. ಹಾಗೂ ಸೆಕೆಂಡರಿ ಕ್ಯಾಮೆರಾವು 48 ಎಂಪಿ ಅಲ್ಟ್ರಾ-ವೈಡ್-ಆಂಗಲ್ ಸೆನ್ಸಾರ್ ಅನ್ನು ಒಳಗೊಂಡಿದೆ. ಮುಂಭಾಗದಲ್ಲಿ 40 ಎಂಪಿ ಸೆಲ್ಫಿ ಶೂಟರ್ ಇದೆ. ಈ ಫೋನಿನಲ್ಲಿ 8 ಕೆ ವೀಡಿಯೊಗಳನ್ನು ಶೂಟ್ ಮಾಡಬಹುದು.

ಬ್ಯಾಟರಿ ಲೈಫ್

ಬ್ಯಾಟರಿ ಲೈಫ್

ಈ ಸ್ಮಾರ್ಟ್‌ಫೋನ್ 4,000mAh ಬ್ಯಾಟರಿಯ ಸಾಮರ್ಥ್ಯದ ಶಕ್ತಿಯನ್ನು ಒಳಗೊಂಡಿದೆ. ಹಾಗೆಯೇ ಎರಡು ಚಾರ್ಜಿಂಗ್ ವ್ಯವಸ್ಥೆಯನ್ನು ಹೊಂದಿದ್ದು, 65W ವೈರ್ಡ್ ಹೈಪರ್‌ಚಾರ್ಜ್ ಮತ್ತು 40W ವೈರ್‌ಲೆಸ್ ಚಾರ್ಜಿಂಗ್ ಅನ್ನು ಸಪೋರ್ಟ್ ಪಡೆದಿದೆ. ಇನ್ನು 5 ಜಿ, 4 ಜಿ ವೋಲ್ಟಿಇ, ವೈ-ಫೈ 6, ಬ್ಲೂಟೂತ್ 5.1, ಎನ್‌ಎಫ್‌ಸಿ, ಯುಎಸ್‌ಬಿ ಟೈಪ್-ಸಿ ಪೋರ್ಟ್ ಮತ್ತು 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಅನ್ನು ಬೆಂಬಲಿಸುತ್ತದೆ.

Best Mobiles in India

English summary
The Brandeis Prometheus smartphone which is currently an Indiegogo project promises to come with an excitingly new design with an angular display on the top and bottom,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+