Home
ಸುದ್ದಿಜಾಲ

ಮಳೆಯಲಿ ಜೊತೆಯಲಿ...ಈ ಆಟೋಮ್ಯಾಟಿಕ್‌ ಸ್ಮಾರ್ಟ್‌ ಛತ್ರಿಯಲ್ಲಿ ಏನೆಲ್ಲಾ ವಿಶೇಷತೆ ಇದೆ ಗೊತ್ತಾ!?

ಈಗಾಗಲೇ ಮಳೆ ಆರಂಭ ಆಗಿದ್ದು, ಮಹಾನಗರಗಳಲ್ಲಂತೂ ಭಾರೀ ಅನಾಹುತ ಉಂಟಾಗುತ್ತಿದೆ. ಅದರಂತೆ ಆಫೀಸಿಗೆ ಹೋಗುವವರರಿಗೆ ಹಾಗೂ ಶಾಲೆ ಹಾಗೂ ಇನ್ನಿತರೆ ಕೆಲಸ ಕಾರ್ಯಗಳಿಗಾಗಿ ಈ ಸಂದರ್ಭದಲ್ಲಿ ಹೊರಗಡೆ ಹೋಗುವವರಿಗೆ ಛತ್ರಿ ಅನಿವಾರ್ಯವಾದ ವಸ್ತುವಾಗಿದೆ. ಈ ನಡುವೆ ಮಾರುಕಟ್ಟೆಯಲ್ಲಿ ಈ ವಿಶೇಷವಾದ ಛತ್ರಿ ಭಾರೀ ಜನಪ್ರಿಯತೆ ಪಡೆದುಕೊಳ್ಳುತ್ತಿದ್ದು, ಖಂಡಿತಾ ಇದನ್ನು ನೋಡಿ ಬೆರಾಗುತ್ತೀರಾ.

ಹೌದು, ಈಗಂತೂ ಮಾರುಕಟ್ಟೆಯಲ್ಲಿ ಭಿನ್ನ ವಿಭಿನ್ನವಾದ ಛತ್ರಿಗಳು ಲಭ್ಯ ಇವೆ. ಈ ಹಿಂದೆ ಬೃಹದಾಕಾರವಾಗಿರುತ್ತಿದ್ದ ಛತ್ರಿಗಳು ಈಗ ಜೇಬಿನಲ್ಲಿ ಇರಿಸಿಕೊಳ್ಳುವ ಹಾಗೆ ರೂಪ ಪಡೆದುಕೊಂಡಿವೆ. ಜೊತೆಗೆ ಬಟನ್‌ ಪ್ರೆಸ್‌ ಮಾಡಿದರೆ ಓಪನ್‌ ಆಗುವ ಛತ್ರಿಗಳು ಬಳಕೆದಾರರಿಗೆ ಹಲವು ರೀತಿಯಲ್ಲಿ ಅನುಕೂಲಕರ ಆಗಿದೆ. ಅದಾಗ್ಯೂ ಈಗ ಲಭ್ಯ ಇರುವ ಛತ್ರಿ ಮಾತ್ರ ಇವೆಲ್ಲಾ ಛತ್ರಿಗಳನ್ನು ಮೀರಿಸುವ ಫೀಚರ್ಸ್ ಅನ್ನು ಪಡೆದುಕೊಂಡಿದ್ದು, ಇದೊಂದು ಸ್ಮಾರ್ಟ್‌ ಛತ್ರಿ ಎಂದು ಕರೆದರೆ ತಪ್ಪಿಲ್ಲ.

ಮಳೆಯಲಿ ಜೊತೆಯಲಿ, ಆಟೋಮ್ಯಾಟಿಕ್‌ ಸ್ಮಾರ್ಟ್‌ ಛತ್ರಿಯಲ್ಲಿ ಏನೆಲ್ಲಾ ವಿಶೇಷತೆ ಇದೆ?

ಆಟೋಮ್ಯಾಟಿಕ್‌ ಆಗಿ ಕೆಲಸ ಮಾಡುವ ಛತ್ರಿ: ನಾವಿಲ್ಲ ನಿಮಗೆ ತಿಳಿಸಲು ಹೊರಟಿರುವ ಈ ಬ್ರಿಗೇಟ್ಸ್‌ ಆಟೋಮ್ಯಾಟಿಕ್‌ ಸ್ಮಾರ್ಟ್‌ ಛತ್ರಿ (Brigattes Automatic Open And Close Umbrella ) ಅಗ್ಗದ ಬೆಲೆ ಹೊಂದಿದ್ದು, ವಿಶೇಷವಾದ ಫೀಚರ್ಸ್‌ ಅನ್ನು ಪಡೆದುಕೊಂಡಿದೆ. ಅಂದರೆ, ಇದೇ ಆಟೋಮ್ಯಾಟಿಕ್‌ ಆಗಿ ತೆರೆದುಕೊಳ್ಳುತ್ತದೆ, ಆಟೋಮ್ಯಾಟಿಕ್‌ ಆಗಿ ಕ್ಲೋಸ್‌ ಆಗುತ್ತದೆ. ಅಷ್ಟು ಮಾತ್ರವಲ್ಲದೆ ಹಿಡಿಕೆ ಬಳಿ ಬ್ಯಾಟರಿ ಆಯ್ಕೆ ಸಹ ನೀಡಲಾಗಿದ್ದು, ಇದರಿಂದಾಗಿ ರಾತ್ರಿ ಹೊತ್ತು ನಡೆದುಕೊಂಡು ಹೋಗಲು ಪ್ರತ್ಯೇಕವಾದ ಬ್ಯಾಟರಿ ಅವಶ್ಯಕತೆ ಇರುವುದಿಲ್ಲ.

ಇನ್ನು ಈ ಛತ್ರಿಯನ್ನು ಬ್ರಿಗೇಟ್ಸ್‌ ಕಂಪೆನಿಯವರು ನಿರ್ಮಾಣ ಮಾಡಿದ್ದಾರೆ. ಅದರಂತೆ ಈ ಛತ್ರಿಗೆ ಬಳಕೆ ಮಾಡಲಾದ ಎಲ್ಲಾ ವಸ್ತುಗಳು ಸಹ ಪ್ರೀಮಿಯಂ ಕ್ವಾಲಿಟಿ ವಸ್ತುಗಳಾಗಿದ್ದು, ನೋಡಲು ಸಹ ಉತ್ತಮ ಎನಿಸುತ್ತದೆ. ಇದರೊಂದಿಗೆ ನೀವು ಮಳೆಗಾಲ ಆಗಿರಲಿ ಅಥವಾ ಬಿರು ಬಿಸಿಲಾಗಿರಲಿ ಎಲ್ಲಾ ಸಮಯದಲ್ಲೂ ಸಹ ಬಳಕೆ ಮಾಡಬಹುದಾಗಿದ್ದು, ಬಳಕೆದಾರರು ಈ ಮೂಲಕ ಹೊಸ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ.

ಪ್ರಮುಖ ವಿಷಯ ಏನೆಂದರೆ ಸಾಮಾನ್ಯ ಛತ್ರಿಗಳು ಸ್ವಲ್ಪ ಗಾಳಿಗೆ ಎದುರಾರದೂ ಹಾಳಾಗುತ್ತವೆ. ಅಂದರೆ ಅದರಲ್ಲಿ ಬಳಕೆ ಮಾಡಲಾದ ತಂತಿಗಳು ಮುರಿಯುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹಾಗೆಯೇ ಬಟ್ಟೆ ಸಹ ಹರಿದು ಹೋಗುವ ಸಾಧ್ಯತೆ ಸಹ ಇರುತ್ತದೆ. ಆದರೆ ಈ ಛತ್ರಿ ಮಾತ್ರ ಇದ್ಯಾವುದನ್ನೂ ಲೆಕ್ಕಿಸುವುದಿಲ್ಲ. ಯಾಕೆಂದರೆ ಇದು ಗಾಳಿ ನಿರೋಧಕವಾಗಿದ್ದು, ದೀರ್ಘ ಬಾಳಿಕೆ ಬರುವ ಹಾಗೂ ಎಂತಹ ಗಾಳಿ ಬಂದರೂ ತಡೆದುಕೊಳ್ಳುವ ಸಾಮರ್ಥ್ಯ ಪಡೆದುಕೊಂಡಿದೆ.

ಇದು ಪೋರ್ಟಬಲ್‌ ಆಗಿರುವುದರಿಂದ ಎಲ್ಲಿ ಬೇಕಾದರೂ ಕೊಂಡೊಯ್ಯಬಹುದಾಗಿದ್ದು, ಪುರುಷರು ಹಾಗೂ ಮಹಿಳೆಯರು ಇಬ್ಬರೂ ಇದನ್ನು ಬಳಕೆ ಮಾಡಬಹುದು. ಇದರ ತೂಕ 300 ಗ್ರಾಂ ಅಷ್ಟೇ ಇದ್ದು, ಹಗುರ ಆಗಿರುವುದರಿಂದ ಮಕ್ಕಳು ಸಹ ಸುಲಭವಾಗಿ ಬಳಕೆ ಮಾಡಬಹುದು. ಹಾಗೆಯೇ ಇದನ್ನು ಓಪನ್‌ ಮಾಡಿದಾಗ 115 ಸೆಂಟಿ ಮೀಟರ್‌ ಉದ್ದ ಆಗಲಿದ್ದು, ಇದನ್ನು ಮಡಿಚಿಟ್ಟಾಗ ಕೇವಲ 33 ಸೆಂಟಿ ಮೀಟರ್‌ ಆಗಲಿದೆ.

ಇದನ್ನು ಓಪನ್‌ ಮಾಡಲು ಹಾಗೂ ಮಡಿಚಿಡಲು ನೀವು ಕೊಂಚವೂ ಕಷ್ಟಪಡಬೇಕಿಲ್ಲ. ಇದಕ್ಕಾಗಿ ಪ್ರತ್ಯೇಕ ಸ್ಮಾರ್ಟ್‌ ಬಟನ್‌ ಆಯ್ಕೆ ಸಹ ನೀಡಲಾಗಿದೆ. ಇದರೊಂದಿಗೆ ನೀಡಲಾಗಿರುವ ಬ್ಯಾಟರಿಯನ್ನು ರಿಮೂವ್‌ ಮಾಡುವ ಆಯ್ಕೆಯನ್ನೂ ಸಹ ಬಳಕೆದಾರರಿಗೆ ನೀಡಲಾಗಿದ್ದು, ಅಗತ್ಯ ಇಲ್ಲ ಎಂದಾದಲ್ಲಿ ಅದನ್ನು ತೆಗೆದುಹಾಕಬಹುದು. ಉಳಿದಂತೆ ಸಾಮಾನ್ಯ ಛತ್ರಿಗಳಂತೆ ವಾಟರ್‌ ರೆಸಿಸ್ಟೆಂಟ್‌ ಆಯ್ಕೆ ಈ ಛತ್ರಿಯಲ್ಲೂ ಸಹ ಇದೆ.

ಮಳೆಯಲಿ ಜೊತೆಯಲಿ, ಆಟೋಮ್ಯಾಟಿಕ್‌ ಸ್ಮಾರ್ಟ್‌ ಛತ್ರಿಯಲ್ಲಿ ಏನೆಲ್ಲಾ ವಿಶೇಷತೆ ಇದೆ?

ಬ್ರಿಗೇಟ್ಸ್‌ ಆಟೋಮ್ಯಾಟಿಕ್‌ ಸ್ಮಾರ್ಟ್‌ ಛತ್ರಿಯ ಬೆಲೆ ಹಾಗೂ ಲಭ್ಯತೆ: ಈ ಛತ್ರಿ ಸಾಮಾನ್ಯ ಬೆಲೆ 2,599ರೂ.ಆಗಿದ್ದು, ಆದರೆ ನೀವು ಇದನ್ನು ಕೇವಲ 799ರೂ.ಗಳಿಗೆ ಖರೀದಿ ಮಾಡಬಹುದು. ಯಾಕೆಂದರೆ ಅಮೆಜಾನ್‌ ಈ ಛತ್ರಿಗೆ 69 % ಡಿಸ್ಕೌಂಟ್‌ ನೀಡಿದೆ. ಸಾಮಾನ್ಯ ಛತ್ರಿಗಳಿಗೆ ಐದು ನೂರರಿಂದ ಸಾವಿರದ ವರೆಗೂ ಬೆಲೆ ಇದೆ. ಈ ನಡುವೆ ಈ ಸ್ಮಾರ್ಟ್‌ ಛತ್ರಿ ಇಷ್ಟು ಕಡಿಮೆ ಬೆಲೆಗೆ ಲಭ್ಯ ಆಗುತ್ತಿದ್ದು, ಗ್ರಾಹಕರಿಗೆ ಹಣ ಉಳಿತಾಯ ಮಾಡಲಿದೆ. ಅದರಂತೆ ಈ ಛತ್ರಿ ವಿವಿಧ ಬಣ್ಣಗಳ ಆಯ್ಕೆಯಲ್ಲಿಯೂ ಲಭ್ಯ.

Best Mobiles in India

English summary
This Brigattes Automated Smart Umbrella is affordable and packed with exclusive features. That is work automatically.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+