BSNL 'ಅಭಿನಂದನ್' 151ರೂ. ಪ್ಲ್ಯಾನ್‌!..ಉಚಿತ ಡಾಟಾ ಮತ್ತು ಫ್ರೀ ರೋಮಿಂಗ್!

|

ಭಾರತೀಯ ಟೆಲಿಕಾಂ ವಲಯವು ಸಾಕಷ್ಟು ಪೈಪೋಟಿಯಲ್ಲಿದ್ದು, ಜಿಯೋ, ಏರ್‌ಟೆಲ್‌ ಸಂಸ್ಥೆಗಳ ಜನಪ್ರಿಯತೆ ಮುಂದೆ ಬಿಎಸ್‌ಎನ್‌ಎಲ್ ಸಂಸ್ಥೆಯು ಹಿಂದೆ ಬಿದ್ದಿದೆ. ತನ್ನ ಗ್ರಾಹಕರನ್ನು ಉಳಿಸಿಕೊಳ್ಳಲು ಬಿಎಸ್‌ಎನ್‌ಎಲ್ ಸಹ ಇತ್ತೀಚಿಗೆ ಹಲವು ಹೊಸ ಆಕರ್ಷಕ ರೀಚಾರ್ಜ್‌ ಪ್ಲ್ಯಾನ್‌ಗಳನ್ನು ಘೋಷಿಸಿದ್ದು, ಅದರ ಮುಂದುವರಿದ ಭಾಗವಾಗಿ ಈಗ ಮತ್ತೆ ವಿಶೇಷ ಆಫರ್‌ ಒಂದನ್ನು ಪರಿಚಯಿಸಿದೆ.

BSNL 'ಅಭಿನಂದನ್' 151ರೂ. ಪ್ಲ್ಯಾನ್‌!..ಉಚಿತ ಡಾಟಾ ಮತ್ತು ಫ್ರೀ ರೋಮಿಂಗ್!

ಹೌದು, ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್‌ಎನ್‌ಎಲ್) ಟೆಲಿಕಾಂ ಸಂಸ್ಥೆಯು ಅಭಿನಂದನ್ 151ರೂ.ಗಳ ಪ್ಲ್ಯಾನ್‌ ಅನ್ನು ಬಿಡುಗಡೆ ಮಾಡಿದ್ದು, ಬಳಕೆದಾರರಿಗೆ ಪ್ರತಿದಿನ 1GB ಡೇಟಾ ಉಚಿತವಾಗಿ ಲಭ್ಯವಾಗಲಿದೆ. ಹಾಗೆಯೇ 100 ಉಚಿತ ಎಸ್‌ಎಮ್‌ಎಸ್‌ಗಳು ದೊರೆಯಲಿವೆ. ಈ ರೀಚಾರ್ಜ್‌ ಪ್ಲ್ಯಾನ್‌ ಬಳಕೆದಾರರಿಗೆ ವಿಶ್ವಕಪ್ ಕ್ರಿಕೆಟ್‌ ಮ್ಯಾಚ್‌ಗಳ ವೀಕ್ಷಣೆ ಅನುಕೂಲವಾಗಲಿದೆ.

BSNL 'ಅಭಿನಂದನ್' 151ರೂ. ಪ್ಲ್ಯಾನ್‌!..ಉಚಿತ ಡಾಟಾ ಮತ್ತು ಫ್ರೀ ರೋಮಿಂಗ್!

ಸಂಸ್ಥೆಯ ಅಭಿನಂದನ್ 151ರೂ.ಗಳ ಪ್ಲ್ಯಾನ್‌ ಒಟ್ಟು 180 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದ್ದು, ಆದರೆ ಈ ರೀಚಾರ್ಜ್‌ನಲ್ಲಿ ಲಭ್ಯವಾಗಿರುವ ಪ್ರಯೋಜನಗಳ ವ್ಯಾಲಿಡಿಟಿಯು 24 ದಿನಗಳು ಮಾತ್ರ ಇರಲಿದೆ. 100 ಎಸ್‌ಎಮ್‌ಎಸ್‌ ಮತ್ತು ಉಚಿತ ಕರೆಗಳು ಸೇರಿದಂತೆ ಅನಿಯಮಿತ ಉಚಿತ ಇನ್‌ಕಮಿಂಗ್ ಮತ್ತು ಔಟ್‌ಗೊಯಿಂಗ್ ಕರೆಗಳ ರೋಮಿಂಗ್ ಪ್ರಯೋಜನಗಳು ಗ್ರಾಹಕರಿಗೆ ದೊರೆಲಿವೆ.

BSNL 'ಅಭಿನಂದನ್' 151ರೂ. ಪ್ಲ್ಯಾನ್‌!..ಉಚಿತ ಡಾಟಾ ಮತ್ತು ಫ್ರೀ ರೋಮಿಂಗ್!

ಅಭಿನಂದನ್ 151ರೂ. ರೀಚಾರ್ಜ್‌ ಪ್ಲ್ಯಾನ್ ಪ್ರೀಪೇಡ್‌ ಮಾದರಿಯಲ್ಲಿದ್ದು, ಹೊಸ ಬಳಕೆದಾರರು ಮತ್ತು ಈಗಾಗಲೇ ಚಾಲ್ತಿಯಲ್ಲಿರುವ ಕಂಪನಿಯ ಗ್ರಾಹಕರಿಗೆ ಈ ಪ್ರಯೋಜನಗಳು ಲಭ್ಯವಾಗಲಿದೆ. ಪ್ರತಿದಿನ 1GB ಡೇಟಾ ಉಚಿತವಾಗಿ ಸೀಗಲಿದ್ದು, ವರ್ಲ್ಡ್‌ ಕಪ್‌ ಕ್ರಿಕೆಟ್‌ ಮ್ಯಾಪ್‌ ವೀಕ್ಷಿಸುವ ಗ್ರಾಹಕರಿಗೆ ಇದು ಪ್ರಯೋಜನ ಎನಿಸಲಿದೆ. ಸಂಸ್ಥೆಯು ಈ ಮೂಲಕ ಗ್ರಾಹಕರನ್ನು ಸೆಳೆಯಲು ಮುಂದಾಗಿದೆ.

ಓದಿರಿ : ಸ್ಕ್ರೀನ್‌ಶಾಟ್‌ ತೆಗೆಯದೆ ವಾಟ್ಸಪ್‌ನಲ್ಲಿ ಮೆಸೆಜ್ ಸೇವ್‌ ಮಾಡಿ! ಓದಿರಿ : ಸ್ಕ್ರೀನ್‌ಶಾಟ್‌ ತೆಗೆಯದೆ ವಾಟ್ಸಪ್‌ನಲ್ಲಿ ಮೆಸೆಜ್ ಸೇವ್‌ ಮಾಡಿ!

ಬಿಎಸ್‌ಎನ್‌ಎಲ್‌ ಅಭಿನಂದನ್ ಪ್ಲ್ಯಾನ್‌ ಜೊತೆಗೆ ಇದೀಗ ಮತ್ತೊಂದು 'STV 168' ವಿಶೇಷ ಟಾರಿಫ್ ರೀಚಾರ್ಜ್ ವೋಚರ್ ಅನ್ನು ಬಿಡುಗಡೆ ಮಾಡಿದೆ. ಈ ಪ್ಲ್ಯಾನ್‌ನಲ್ಲಿ ಗ್ರಾಹಕರಿಗೆ ಅಂತರಾಷ್ಟ್ರೀಯ ರೋಮಿಂಗ್ ವಾಯಿದೆಯಲ್ಲಿ ವಿಸ್ತರಣೆ ಸೀಗಲಿದೆ. ಅಲ್ಲದೇ ರೋಮಿಂಗ್ ಆಕ್ಟಿವೇಶನ್ ಇದ್ದು, ಈ ರೀಚಾರ್ಜ್‌ ಪ್ಲ್ಯಾನ್‌ನಡಿ ಗ್ರಾಹಕರಿಗೆ 90 ದಿನಗಳ ವ್ಯಾಲಿಡಿಟಿಯ ಪ್ರಯೋಜನ ದೊರೆಯಲಿದೆ.

ಓದಿರಿ : ನಿಮ್ಮ ಮಕ್ಕಳು ಸ್ಮಾರ್ಟ್‌ಫೋನ್‌ಗೆ ಅಡಿಕ್ಟ್‌ ಆಗದಿರಲು ಈ ಟಿಪ್ಸ್ ಅನುಸರಿಸಿ!ಓದಿರಿ : ನಿಮ್ಮ ಮಕ್ಕಳು ಸ್ಮಾರ್ಟ್‌ಫೋನ್‌ಗೆ ಅಡಿಕ್ಟ್‌ ಆಗದಿರಲು ಈ ಟಿಪ್ಸ್ ಅನುಸರಿಸಿ!

Best Mobiles in India

English summary
The new BSNL Abhinandan Rs 151, plan benefits have come with validity of 24 days. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X