Home
ಸುದ್ದಿಜಾಲ

ಬಿಎಸ್‌ಎನ್‌ಎಲ್‌ನ 1999ರೂ. ಪ್ಲ್ಯಾನಿನಲ್ಲಿ ಮತ್ತೆ ಬದಲಾವಣೆ!..ಗ್ರಾಹಕರಿಗೆ ಶಾಕ್!

ಬಿಎಸ್‌ಎನ್ಎಲ್ ಟೆಲಿಕಾಂ ಸಂಸ್ಥೆಯು ಇತ್ತೀಚಿಗೆ ಖಾಸಗಿ ಟೆಲಿಕಾಂ ಸಂಸ್ಥೆಗಳಿಗೆ ನೇರವಾಗಿ ಪೈಪೋಟಿ ನೀಡುವ ಯೋಜನೆಗಳನ್ನು ಪರಿಚಯಿಸುತ್ತ ಸಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಕೆಲವು ಆಕರ್ಷಕ ಪ್ರೀಪೇಡ್‌ ಪ್ಲ್ಯಾನ್‌ಗಳನ್ನು ಪರಿಚಯಿಸಿ ಸೈ ಅನಿಸಿಕೊಂಡಿದೆ. ಇದೀಗ ಬಿಎಸ್‌ಎನ್ಎಲ್ ತನ್ನ ಜನಪ್ರಿಯ ಪ್ಲ್ಯಾನ್‌ವೊಂದನ್ನು ಪರಿಷ್ಕರಿಸಿದ್ದು, ಈ ಯೋಜನೆಯು ದೀರ್ಘಾವಧಿಯ ವ್ಯಾಲಿಡಿಟಿ ಹೊಂದಿದ್ದು, ಆದರೆ ದೈನಂದಿನ ಡೇಟಾದಲ್ಲಿ ಈಗ ಕಡಿತ ಮಾಡಲಾಗಿದೆ.

ಬಿಎಸ್‌ಎನ್ಎಲ್

ಹೌದು, ಬಿಎಸ್‌ಎನ್ಎಲ್ ಇದೀಗ ತನ್ನ ಜನಪ್ರಿಯ 1999ರೂ.ಗಳ ವಾರ್ಷಿಕ ಪ್ರೀಪೇಡ್‌ ಪ್ಲ್ಯಾನ್‌ ಅನ್ನು ಪರಿಷ್ಕರಣೆ ಮಾಡಿದೆ. ಈ ಪ್ರತಿದಿನ 3GB ಡೇಟಾ ಪ್ರಯೋಜನ ದೊರೆಯುತ್ತದೆ. ಆದರೆ ಕಂಪನಿಯು 1GB ಕಡಿತ ಮಾಡಿದ್ದು, ಪ್ರತಿದಿನ 2GB ಡೇಟಾ ಲಭ್ಯವಾಗಲಿದೆ. ಉಳಿದಂತೆ ವಾರ್ಷಿಕ ವ್ಯಾಲಿಡಿಟಿ, ಅನಿಯಮಿತ ವಾಯಿಸ್‌ ಕರೆಗಳ ಸೌಲಭ್ಯ, ಎಸ್‌ಎಮ್‌ಎಸ್‌ ಪ್ರಯೋಜನಗಳು ಸೇರಿದಂತೆ ಇರೋಸ್‌ ನೌ ಓಟಿಟಿ ಸೇವೆ ಮುಂದುವರೆಯಲಿವೆ. ಹಾಗಾದರೇ ಬಿಎಸ್‌ಎನ್‌ಎಲ್‌ನ 1999ರೂ. ಯೋಜನೆಯ ಪ್ರಯೋಜನಗಳೆನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಬಿಎಸ್‌ಎನ್ಎಲ್‌ 1999ರೂ. ಪ್ರೀಪೇಡ್‌ ಯೋಜನೆ

ಬಿಎಸ್‌ಎನ್ಎಲ್‌ 1999ರೂ. ಪ್ರೀಪೇಡ್‌ ಯೋಜನೆ

ಬಿಎಸ್‌ಎನ್ಎಲ್‌ 1999ರೂ. ಪ್ರೀಪೇಡ್‌ ಪ್ಲ್ಯಾನ್‌ ವಾರ್ಷಿಕ ಅವಧಿಯ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಈ ಯೋಜನೆಯು ಪ್ರತಿದಿನ 2GB ಡೇಟಾ ಸೌಲಭ್ಯವನ್ನು ಹೊಂದಿದೆ(ಪರಿಷ್ಕರಣೆಯ ಮೊದಲು 3GB). ಇದರೊಂದಿಗೆ ಪ್ರತಿದಿನ 250 ನಿಮಿಷದ ಉಚಿತ ಕರೆಗಳ ಪ್ರಯೋಜನವನ್ನು ಒಳಗೊಂಡಿದೆ. ಪ್ರತಿದಿನದ ನಿಗದಿತ ಡೇಟಾ ಮಿತಿ ಮುಗಿದ ಬಳಿಕ (FUP ) 80 Kbps ವೇಗದಲ್ಲಿ ಇಂಟರ್ನೆಟ್ ಮುಂದುವರೆಯುವುದು. ಹಾಗೆಯೇ ಗ್ರಾಹಕರಿಗೆ 365 ದಿನಗಳ Eros Now ವಾರ್ಷಿಕ ಚಂದಾದಾರಿಕೆ ಲಭ್ಯವಾಗಲಿದೆ.

ಫೆಬ್ರವರಿ 1ರಿಂದ ಜಾರಿ

ಫೆಬ್ರವರಿ 1ರಿಂದ ಜಾರಿ

ಬಿಎಸ್ಎನ್ಎಲ್ ಟೆಲಿಕಾಂನ ಬಿಎಸ್‌ಎನ್ಎಲ್‌ 1999ರೂ. ಪ್ರೀಪೇಯ್ಡ್‌ ಯೋಜನೆಯ ಪರಿಷ್ಕರಣೆಯು ಇದೇ ಫೆಬ್ರವರಿ 1, 2021 ರಿಂದ ಜಾರಿಗೆ ಬರಲಿದೆ. ಇನ್ನುಳಿದಂತೆ ಬಿಎಸ್‌ಎನ್‌ಎಲ್‌ನ ಇತರೆ ದೀರ್ಘಾವಧಿಯ ವ್ಯಾಲಿಡಿಟಿ ಯೋಜನೆಗಳನ್ನು ತಿಳಿಯಲು ಮುಂದೆ ಓದಿರಿ.

ಬಿಎಸ್‌ಎನ್‌ಎಲ್‌ 2,399ರೂ. ಪ್ಲ್ಯಾನ್

ಬಿಎಸ್‌ಎನ್‌ಎಲ್‌ 2,399ರೂ. ಪ್ಲ್ಯಾನ್

ಬಿಎಸ್‌ಎನ್‌ಎಲ್‌ನ ಈ ಪ್ಲ್ಯಾನ್ ಒಟ್ಟು 600 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದ್ದು, ಈ ಅವಧಿಯಲ್ಲಿ ಪ್ರತಿದಿನ 250 FUP ನಿಮಿಷಗಳ ಮಿತಿಯಲ್ಲಿ ಉಚಿತ ವಾಯಿಸ್‌ ಕರೆಗಳ ಪ್ರಯೋಜನವನ್ನು ಒದಗಿಸಲಿದೆ. ಇದರೊಂದಿಗೆ ಪ್ರತಿದಿನ 100 ಎಸ್‌ಎಮ್‌ಎಸ್‌ಗಳ ಸೌಲಭ್ಯ ದೊರೆಯಲಿದ್ದು, 60 ದಿನಗಳಿಗೆ ಬಿಎಸ್‌ಎನ್‌ಎಲ್‌ ಟ್ಯೂನ್‌ ಸೌಲಭ್ಯವು ಸಿಗಲಿದೆ.

ಬಿಎಸ್‌ಎನ್‌ಎಲ್‌ 1212ರೂ. ಪ್ರೀಪೇಯ್ಡ್‌ ಪ್ಲ್ಯಾನ್

ಬಿಎಸ್‌ಎನ್‌ಎಲ್‌ 1212ರೂ. ಪ್ರೀಪೇಯ್ಡ್‌ ಪ್ಲ್ಯಾನ್

ಬಿಎಸ್‌ಎನ್‌ಎಲ್‌ 1,212ರೂ. ಡೇಟಾ ಎಸ್‌ಟಿವಿ ಡೇಟಾ ಯೋಜನೆಯು ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಪ್ಲ್ಯಾನಿನಲ್ಲಿ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 500GB ಡೇಟಾ ಪ್ರಯೋಜನೆ ದೊರೆಯುತ್ತದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ ಯಾವುದೇ ವಾಯಿಸ್‌ ಕರೆ ಹಾಗೂ ಎಸ್‌ಎಮ್‌ಎಸ್‌ ಸೌಲಭ್ಯಗಳು ದೊರೆಯುವುದಿಲ್ಲ. ಇದೊಂದು ಡೇಟಾ ಪ್ಲ್ಯಾನ್ ಆಗಿದೆ.

Best Mobiles in India

English summary
BSNL Again Revises Rs 1,999 Annual Prepaid Plan, Data Benefit Reduced.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+