Subscribe to Gizbot

BSNL ಬ್ರಾಡ್‌ಬ್ಯಾಂಡ್ ಬಳಸುತ್ತಿದ್ದರೆ ಶೀಘ್ರವೇ ಪಾಸ್‌ವರ್ಡ್ ಚೇಂಜ್ ಮಾಡಿ!! ಏಕೆ?

Written By:

ಭಾರತ ಸರ್ಕಾರದ ಅಧೀನ ಟೆಲಿಕಾಂ ಸಂಸ್ಥೆ ಬಿಎಸ್‌ಎನ್‌ಎಲ್ ಬ್ರಾಡ್‌ಬ್ಯಾಂಡ್ ಸೇವೆ ಹ್ಯಾಕ್ ಆಗಿದೆ.! ಹಾಗಾಗಿ, ಕೂಡಲೇ ಬಿಎಸ್‌ಎನ್‌ಎಲ್ ಬ್ರಾಡ್‌ಬ್ಯಾಂಡ್ ಪಾಸ್‌ವರ್ಡ್ ಅನ್ನು ಚೇಂಡ್ ಮಾಡಿಕೊಳ್ಳಲು ಬಿಎಸ್‌ಎನ್‌ಎಲ್ ತನ್ನ ಗ್ರಾಹಕರಿಗೆ ಸೂಚನೆ ನೀಡಿದೆ.!!

ಒಂದೇ ವಾರದ ಅವಧಿಯಲ್ಲಿ ಬಿಎಸ್‌ಎನ್‌ಎಲ್ ಒಡೆತನದ ಸುಮಾರು 2000ಕ್ಕೂ ಹೆಚ್ಚು ಬ್ರಾಡ್‌ಬ್ಯಾಂಡ್‌ಗಳು ವೈರಸ್‌ ದಾಳಿಗೆ ತುತ್ತಾಗಿದ್ದು, ಗ್ರಾಹಕರು ತಮ್ಮ ಪಾಸ್‌ವರ್ಡ್ ಅನ್ನು ಬದಲಿಸದೇ ಇರುವುದೆ ಇದಕ್ಕೆ ಕಾರಣ ಎಂದು ಬಿಎಸ್‌ಎನ್‌ಎಲ್ ತಿಳಿಸಿದೆ.! ಬಹುತೇಕ ಬಳಕೆದಾರರು "admin'' ಪದವನ್ನೆ ಉಳಿಸಿಕೊಂಡಿರುವುದು ಇದಕ್ಕೆ ಕಾರಣ ಎಂದು ಹೇಳಿದೆ.!!

BSNL ಬ್ರಾಡ್‌ಬ್ಯಾಂಡ್ ಬಳಸುತ್ತಿದ್ದರೆ ಶೀಘ್ರವೇ ಪಾಸ್‌ವರ್ಡ್ ಚೇಂಜ್ ಮಾಡಿ!! ಏಕೆ?

ಈ ಬಗ್ಗೆ BSNL ಚೇರ್‌ಮನ್ ಅನುಪಮ್ ಶ್ರೀವಾಸ್ತವ್ ಮಾತನಾಡಿ, ನಾವು ಬಿಎಸ್‌ಎನ್‌ಎಲ್ ಬ್ರಾಡ್‌ಬ್ಯಾಂಡ್ ಬಳಕೆದಾರರಿಗೆ ಪಾಸ್‌ವರ್ಡ್ ಚೇಂಜ್ ಮಾಡಲು ಸಲಹೆ ನೀಡುತ್ತಿದ್ದೇವೆ.! ಒಮ್ಮೆ ಪಾಸ್‌ವರ್ಡ್ ಚೇಂಜ್ ಮಾಡಿದ ನಂತರ ಬ್ರಾಡ್‌ಬ್ಯಾಂಡ್ ಭದ್ರತೆ ಬಗ್ಗೆ ಗ್ರಾಹಕರು ಹೆದರಬೇಕಿಲ್ಲ ಎಂದು ಹೇಳಿದ್ದಾರೆ.!!

BSNL ಬ್ರಾಡ್‌ಬ್ಯಾಂಡ್ ಬಳಸುತ್ತಿದ್ದರೆ ಶೀಘ್ರವೇ ಪಾಸ್‌ವರ್ಡ್ ಚೇಂಜ್ ಮಾಡಿ!! ಏಕೆ?

ಬಿಎಸ್‌ಎನ್‌ಎಲ್ ಬ್ರಾಡ್‌ಬ್ಯಾಂಡ್‌ನ ಕೋರ್‌ನೆಟ್ ಅಥವಾ ಯಾವುದೇ ಪೇಮೆಂಟ್ ಸಿಸ್ಟಮ್ ಮೇಲೆ ಈ ವೈರಸ್ ದಾಳಿ ನಡೆದಿಲ್ಲ. ಹಾಗಾಗಿ, ಮಾಲ್ವೇರ್‌ ಬಗ್ಗೆ ಹೆಚ್ಚು ಹೆದರುವ ಅವಶ್ಯಕತೆ ಇಲ್ಲ ಎಂದು ಅವರು ಹೇಳಿದ್ದಾರೆ.! ಈ ಬಗ್ಗೆ ಬಿಎಸ್‌ಎನ್‌ಎಲ್ ಮಾಹಿತಿ ನೀಡುತ್ತಿದ್ದು, ಪತ್ರಿಕಾ ಹೇಳಿಕೆಯನ್ನು ಸಹ ಬಿಡುಗಡೆ ಮಾಡಿದೆ.!!

ಓದಿರಿ: ಇನ್ಮುಂದೇ ಕಾಲೇಜುಗಳಲ್ಲಿಯೇ ವಿತರಣೆಯಾಗಲಿದೆ ಡ್ರೈವಿಂಗ್ ಲೈಸೆನ್ಸ್!!

English summary
Malware attack impacted nearly 2,000 broadband modems.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot