Home
ಸುದ್ದಿಜಾಲ

ಬಜೆಟ್‌ ಪ್ರೈಸ್‌ನಲ್ಲಿರುವ ಬಿಎಸ್‌ಎನ್‌ಎಲ್‌ನ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ಗಳು!

ದೇಶದ ಟೆಲಿಕಾಂ ವಲಯದಲ್ಲಿ ಹಲವು ಖಾಸಗಿ ಕಂಪನಿಗಳು ಆಕರ್ಷಕ ದರದ ಬ್ರಾಡ್‌ಬ್ಯಾಂಡ್‌ ಯೋಜನೆಗಳನ್ನು ಪರಿಚಯಿಸಿ ಸೈ ಅನಿಸಿಕೊಂಡಿವೆ. ಹಾಗೆಯೇ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಟೆಲಿಕಾಂ ಸಹ ಅತ್ಯುತ್ತಮ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ಗಳ ಲಿಸ್ಟ್‌ ಹೊಂದಿದ್ದು, ಗ್ರಾಹಕ ಗಮನ ಸೆಳೆದಿದೆ. ಬಿಎಸ್‌ಎನ್‌ಎಲ್‌ ಭಾರತ್ ಫೈಬರ್ ಯೋಜನೆಗಳು ಹೆಚ್ಚು ಸದ್ದು ಮಾಡಿದ್ದು, ಖಾಸಗಿ ಟೆಲಿಕಾಂನ ಬ್ರಾಡ್‌ಬ್ಯಾಂಡ್‌ ಯೋಜನೆಗಳಿಗೆ ನೇರವಾಗಿ ಪೈಪೋಟಿ ನೀಡುವಂತಹ ಪ್ರಯೋಜನಗಳನ್ನು ಪಡೆದಿವೆ.

ಪ್ರೀಮಿಯಂ

ಹೌದು, ಬಿಎಸ್‌ಎನ್‌ಎಲ್‌ ಸಂಸ್ಥೆಯು ಭಾರತ್‌ ಬ್ರಾಡ್‌ಬ್ಯಾಂಡ್‌ ಹೆಸರಿನಲ್ಲಿ ಹಲವು ಭಿನ್ನ ಬೆಲೆಯ ಬ್ರಾಡ್‌ಬ್ಯಾಂಡ್‌ ಯೋಜನೆಗಳ ಆಯ್ಕೆ ಹೊಂದಿದೆ. ಅವುಗಳಲ್ಲಿ ಮುಖ್ಯವಾಗಿ ಬಿಎಸ್ಎನ್ಎಲ್‌ನ ಫೈಬರ್ ಬೇಸಿಕ್ (449 ರೂ) ಯೋಜನೆ, ಫೈಬರ್ ವ್ಯಾಲ್ಯೂ (799 ರೂ) ಯೋಜನೆ, ಫೈಬರ್ ಪ್ರೀಮಿಯಂ (999 ರೂ) ಯೋಜನೆ ಮತ್ತು ಫೈಬರ್ ಅಲ್ಟ್ರಾ (1,499 ರೂ.) ಯೋಜನೆಯು ಬಜೆಟ್‌ ಪ್ರೈಸ್‌ನಲ್ಲಿ ಹೆಚ್ಚಿನ ಆಕರ್ಷಣೆಯನ್ನು ಪಡೆದಿವೆ. ಈ ಬಜೆಟ್‌ ದರದ ಯೋಜನೆಗಳ ಪ್ರಯೋಜನಗಳು ಸಹ ಆಕರ್ಷಕ ಅನಿಸುವಂತಿವೆ. ಹಾಗಾದರೇ ಬಿಎಸ್‌ಎನ್‌ಎಲ್‌ ಟೆಲಿಕಾಂನ ಬಜೆಟ್‌ ಬೆಲೆಯ ಭಾರತ್ ಫೈಬರ್ ಬ್ರಾಡ್‌ಬ್ಯಾಂಡ್‌ ಯೋಜನೆಗಳ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಮುಂದೆ ಓದಿರಿ.

ಬಿಎಸ್‌ಎನ್‌ಎಲ್‌ ಫೈಬರ್ ಬೇಸಿಕ್ 449.ರೂ ಯೋಜನೆ

ಬಿಎಸ್‌ಎನ್‌ಎಲ್‌ ಫೈಬರ್ ಬೇಸಿಕ್ 449.ರೂ ಯೋಜನೆ

ಬಿಎಸ್‌ಎನ್‌ಎಲ್‌ ಫೈಬರ್ ಬೇಸಿಕ್ 449.ರೂ ಬೆಲೆ ಹೊಂದಿದ್ದು, ಯೋಜನೆ ಬಳಕೆದಾರರಿಗೆ ತಿಂಗಳಿಗೆ 3.3 ಟಿಬಿ (3,300 ಜಿಬಿ) ವರೆಗೆ 30 ಎಮ್‌ಬಿಪಿಎಸ್ ವೇಗವನ್ನು ಬ್ರೌಸ್ ಮಾಡಲು ಅನುವು ಮಾಡಿಕೊಡುತ್ತದೆ. ಎಫ್‌ಯುಪಿ ಡೇಟಾದ ಬಳಕೆಯ ನಂತರ, ಆಪರೇಟರ್ ವೇಗವನ್ನು 2 ಎಮ್‌ಬಿಪಿಎಸ್‌ಗೆ ನಿರ್ಬಂಧಿಸುತ್ತದೆ. ಭಾರತದ ಪ್ರಮುಖ ಪ್ರದೇಶಗಳಲ್ಲಿ ಈ ಯೋಜನೆಯ ಲಭ್ಯತೆ ಪಡೆದಿದೆ.

ಬಿಎಸ್‌ಎನ್‌ಎಲ್‌ ಫೈಬರ್ ವ್ಯಾಲ್ಯೂ 799.ರೂ ಯೋಜನೆ

ಬಿಎಸ್‌ಎನ್‌ಎಲ್‌ ಫೈಬರ್ ವ್ಯಾಲ್ಯೂ 799.ರೂ ಯೋಜನೆ

ಬಿಎಸ್‌ಎನ್‌ಎಲ್ ‘ಫೈಬರ್ ವ್ಯಾಲ್ಯೂ' ಯೋಜನೆ ಶುಲ್ಕವು ಗಾಗಿ ತಿಂಗಳಿಗೆ 799 ರೂ. ಆಗಿದೆ. ಬಳಕೆದಾರರು ಅದೇ 3.3 ಟಿಬಿ (3,300 ಜಿಬಿ) ಮಾಸಿಕ ಡೇಟಾದವರೆಗೆ 100 ಎಮ್‌ಬಿಪಿಎಸ್ ವೇಗದಲ್ಲಿ ಬ್ರೌಸ್ ಮಾಡಲು ಅನುವು ಮಾಡಿ ಕೊಡುವ ಯೋಜನೆ ಇದಾಗಿದೆ. ಫೈಬರ್ ಬೇಸಿಕ್ ಯೋಜನೆಯಂತೆಯೇ, ಆಪರೇಟರ್ 3.3 ಟಿಬಿ ಡೇಟಾ ಮಿತಿಯನ್ನು ತಲುಪಿದ ನಂತರ ವೇಗವನ್ನು 2 ಎಮ್‌ಬಿಪಿಎಸ್‌ಗೆ ನಿರ್ಬಂಧಿಸುತ್ತದೆ.

ಬಿಎಸ್‌ಎನ್‌ಎಲ್‌ ಫೈಬರ್ ಪ್ರೀಮಿಯಂ 999.ರೂ ಯೋಜನೆ

ಬಿಎಸ್‌ಎನ್‌ಎಲ್‌ ಫೈಬರ್ ಪ್ರೀಮಿಯಂ 999.ರೂ ಯೋಜನೆ

ಬಿಎಸ್‌ಎನ್‌ಎಲ್ ‘ಫೈಬರ್ ಪ್ರೀಮಿಯಂ' ಯೋಜನೆ ತಿಂಗಳ ಶುಲ್ಕ 999 ರೂ. ಆಗಿದೆ. ಫೈಬರ್ ಪ್ರೀಮಿಯಂ ಬ್ರಾಡ್‌ಬ್ಯಾಂಡ್ ಯೋಜನೆ 3.3 ಟಿಬಿ (3,300 ಜಿಬಿ) ಡೇಟಾ ಮತ್ತು 200 ಎಮ್‌ಬಿಪಿಎಸ್ ಡೌನ್‌ಲೋಡ್ ಮತ್ತು ಅಪ್‌ಲೋಡ್ ವೇಗವನ್ನು ಹೊಂದಿದೆ. ಎಫ್‌ಯುಪಿ ಡೇಟಾ ವನ್ನು ಸೇವಿಸಿದ ನಂತರ ವೇಗವು 2 ಎಮ್‌ಬಿಪಿಎಸ್‌ಗೆ ಇಳಿಯುತ್ತದೆ. ಬಹುಮುಖ್ಯವಾಗಿ, ಡಿಸ್ನಿ + ಹಾಟ್‌ಸ್ಟಾರ್ ಪ್ರೀಮಿಯಂ ಚಂದಾದಾರಿಕೆಯನ್ನು ಸ್ವೀಕರಿಸುವ ಬಳಕೆದಾರರೊಂದಿಗೆ ಆಪರೇಟರ್ ಓವರ್-ದಿ-ಟಾಪ್ (ಒಟಿಟಿ) ಪ್ರಯೋಜನವನ್ನು ನೀಡುತ್ತದೆ.

ಬಿಎಸ್‌ಎನ್‌ಎಲ್‌ ಫೈಬರ್ ಅಲ್ಟ್ರಾ 1,499.ರೂ ಯೋಜನೆ

ಬಿಎಸ್‌ಎನ್‌ಎಲ್‌ ಫೈಬರ್ ಅಲ್ಟ್ರಾ 1,499.ರೂ ಯೋಜನೆ

ಬಿಎಸ್‌ಎನ್‌ಎಲ್ ‘ಫೈಬರ್ ಅಲ್ಟ್ರಾ' ಯೋಜನೆಯ ಬೆಲೆ ತಿಂಗಳಿಗೆ 1,499 ರೂ. ಆಗಿದೆ. ಬಳಕೆದಾರರು 300 ಎಮ್‌ಬಿಪಿಎಸ್ ವರೆಗೆ ಬ್ರೌಸ್ ಮಾಡಲು ಮತ್ತು 4 ಟಿಬಿ (4,000 ಜಿಬಿ) ಡೇಟಾದವರೆಗೆ ವೇಗವನ್ನು ಅಪ್‌ಲೋಡ್ ಮಾಡಲು ಅನುವು ಮಾಡಿ ಕೊಡುತ್ತದೆ. ಎಫ್‌ಯುಪಿ ಡೇಟಾ ವನ್ನು ಸೇವಿಸಿದ ನಂತರ, ವೇಗವು ಬಳಕೆದಾರರಿಗೆ 4 ಎಮ್‌ಬಿಪಿಎಸ್‌ಗೆ ಇಳಿಯುತ್ತದೆ. ಇದಲ್ಲದೆ, ಈ ಯೋಜನೆಯು ಡಿಸ್ನಿ + ಹಾಟ್‌ಸ್ಟಾರ್ ಪ್ರೀಮಿಯಂ ಚಂದಾದಾರಿಕೆಯ ಒಟಿಟಿ ಪ್ರಯೋಜನ ವನ್ನು ಸಹ ನೀಡುತ್ತದೆ.

Best Mobiles in India

English summary
These Plans offers attractive benefits At Budget Price Tag.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+