ಬಿಎಸ್‌ಎನ್‌ಎಲ್‌ನಿಂದ 'BOSS' ವೆಬ್ ಪೋರ್ಟಲ್ ಅನಾವರಣ!
ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್) 'ಬಾಸ್' ಎಂಬ ಹೊಸ ವೆಬ್ ಪೋರ್ಟಲ್ ಅನ್ನು ಪ್ರಕಟಿಸಿದೆ. ಬಾಸ್ ಎಂದರೆ 'Bundle Offer System Simplified'. ಆಗಿದೆ. ಈ ಪೋರ್ಟಲ್ ಚಂದಾದಾರರಿಗೆ ಒಂದೇ ಕಡೆಯಲ್ಲಿ ಬಿಎಸ್‌ಎನ್‌ಎಲ್‌ನ ವಿವಿಧ ಸೇವೆಗಳನ್ನು ಖರೀದಿಸುವ ಸ್ಥಳವಾಗಿ ಪರಿಣಮಿಸುತ್ತದೆ. ಹಾಗೆಯೇ ಇತ್ತೀಚಿಗೆ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಚಂದಾದಾರರಿಗೆ ಆಕರ್ಷಕ ಕೊಡುಗೆಗಳನ್ನು ಪ್ರಕಟಿಸುತ್ತಿದೆ.

ಬಿಎಸ್ಎನ್ಎಲ್ ಹೊಸದಾಗಿ ಅನಾವರಣ ಮಾಡಿರುವ ಬಾಸ್-BOSS ಪೋರ್ಟಲ್‌ನಲ್ಲಿ ಸಂಸ್ಥೆಯು ಸೇವೆಗಳು ಲಭ್ಯವಾಗಲಿವೆ. ಅದರೊಂದಿಗೆ ಗೂಗಲ್ ನೆಸ್ಟ್ ಹಬ್, ಗೂಗಲ್ ನೆಸ್ಟ್ ಮಿನಿ, ನಂತಹ ಉತ್ಪನ್ನಗಳನ್ನು ಪಡೆಯಬಹುದಾಗಿದೆ. ಅಲ್ಲದೇ ಈ ಪೋರ್ಟಲ್‌ನಲ್ಲಿ ಹೊಸ ಬ್ರಾಡ್‌ಬ್ಯಾಂಡ್ ಯೋಜನೆಗಳು ಮತ್ತು ಹಳೆಯ ಯೋಜನೆಗಳಲ್ಲಿ ನವೀಕರಿಸಿದ ಪ್ರಯೋಜನಗಳು ಸೇರಿವೆ.

ಚಂದಾದಾರರಿಗೆ ದೀರ್ಘಾವಧಿಯ ಯೋಜನೆಗಳನ್ನು ಖರೀದಿಸಲು ಬಾಸ್ ಪೋರ್ಟಲ್ ಅನುಮತಿಸುತ್ತದೆ. ಲಭ್ಯವಿರುವ ಡಿವೈಸ್ ಬಂಡಲ್ ಕೊಡುಗೆಗಳನ್ನು ಪರಿಶೀಲಿಸಲು ಚಂದಾದಾರರು ಬಿಎಸ್‌ಎನ್‌ಎಲ್ ಬಾಸ್‌ನ ಪ್ಲಾಟ್‌ಫಾರ್ಮ್‌ಗೆ ಭೇಟಿ ನೀಡಬಹುದು. ಗ್ರಾಹಕರ ಅಗತ್ಯಗಳಿಗೆ ಅನುಗುಣವಾಗಿ, ಚಂದಾದಾರರು ನಿರ್ದಿಷ್ಟ ಯೋಜನೆ ಮತ್ತು ಡಿವೈಸ್‌ಗಳನ್ನು ಆರಿಸಿಕೊಳ್ಳಬಹುದು ಮತ್ತು ಮುಂಗಡ ವಾರ್ಷಿಕ ಬಾಡಿಗೆಯನ್ನು ಡಿವೈಸ್ ಶುಲ್ಕದೊಂದಿಗೆ ಪಾವತಿಸಬಹುದು.

ಬಿಎಸ್ಎನ್ಎಲ್ ಟೆಲಿಕಾಂ ಮುಂಬರುವ ತಿಂಗಳುಗಳಲ್ಲಿ ಬಾಸ್ ವೆಬ್ ಪೋರ್ಟಲ್ ಮೂಲಕ ಅನೇಕ ಆಕರ್ಷಕ ಕಟ್ಟುಗಳು/bundles ಮತ್ತು ಕೊಡುಗೆಗಳನ್ನು ತಮ್ಮ ಚಂದಾದಾರರಿಗೆ ಬಿಡುಗಡೆ ಮಾಡುವ ಯೋಜನೆಯನ್ನು ಹೊಂದಿದೆ. ಬಳಕೆದಾರರು ದೀರ್ಘಾವಧಿಯ ಬ್ರಾಡ್‌ಬ್ಯಾಂಡ್ ಯೋಜನೆಯನ್ನು ಖರೀದಿಸಿದಾಗ, ಅವರು ಬಂಡಲ್‌ನೊಂದಿಗೆ ಗೂಗಲ್ ಡಿವೈಸ್‌ಗಳನ್ನು ರಿಯಾಯಿತಿ ದರದಲ್ಲಿ ಪಡೆಯಬಹುದು. ಇನ್ನು BSNL BOSS ವೆಬ್‌ಸೈಟ್‌ಗೆ ಭೇಟಿ ನೀಡಲು URL ‘https://bsnloffers.bsnl.in/.

ಇತ್ತೀಚಿಗೆ ಬಿಎಸ್ಎನ್ಎಲ್ ತನ್ನ ಬ್ರಾಡ್‌ಬ್ಯಾಂಡ್ ಯೋಜನೆಗಳನ್ನು ದೇಶದ ಅನೇಕ ನಗರಗಳಲ್ಲಿ ಪರಿಷ್ಕರಿಸಿತು. ಈಗ ಕಂಪನಿಯು ತನ್ನ ಉನ್ನತ ಶ್ರೇಣಿಯ ಯೋಜನೆಗಳೊಂದಿಗೆ 4TB (4,000GB) ಡೇಟಾವನ್ನು ನೀಡುತ್ತಿದೆ. ಹಾಗೆಯೇ ತನ್ನ ‘ಫೈಬರ್ ಅಲ್ಟ್ರಾ' ಯೋಜನೆಯೊಂದಿಗೆ ಬಳಕೆದಾರರಿಗೆ ಗರಿಷ್ಠ 300 ಎಮ್‌ಬಿಪಿಎಸ್ ವೇಗವನ್ನು ನೀಡುತ್ತಿದೆ.


Click it and Unblock the Notifications