BSNLನಿಂದ ಭರ್ಜರಿ ಪ್ಲ್ಯಾನ್: ಪ್ರತಿದಿನ 5GB ಡೇಟಾ ಮತ್ತು ಅಧಿಕ ವ್ಯಾಲಿಡಿಟಿ!
ದೇಶದ ಟೆಲಿಕಾಂ ವಲಯದಲ್ಲಿ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಇತ್ತೀಚಿಗೆ ಖಾಸಗಿ ಟೆಲಿಕಾಂಗಳಿಗೆ ಪೈಪೋಟಿ ನೀಡುವಂತಹ ಆಕರ್ಷಕ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ. ಹಾಗೆಯೇ ಲಾಕ್‌ಡೌನ್ ಅವಧಿಯಲ್ಲಿ ಗ್ರಾಹಕರಿಗೆ ಅನುಕೂಲವಾಗಲೆಂದು ಅಧಿಕ ಡೇಟಾ ಹಾಗೂ ದೀರ್ಘಾವಧಿಯ ವ್ಯಾಲಿಡಿಟಿಯ ಪ್ಲ್ಯಾನ್‌ಗಳನ್ನು ಬಿಎಸ್‌ಎನ್‌ಎಲ್ ಪರಿಚಯಿಸಿತು. ಅದೇ ರೀತಿ ಇದೀಗ ಬಿಎಸ್‌ಎನ್‌ಎಲ್ ಹೊಸದೊಂದು ಪ್ಲ್ಯಾನ್ ಪರಿಚಯಿಸಿದೆ.

ಹೌದು, ಬಿಎಸ್‌ಎನ್‌ಎಲ್ ಈಗ ಹೊಸದಾಗಿ STV 599ರೂ. ಬೆಲೆಯ ವರ್ಕ ಫ್ರಮ್ ಹೋಮ್ ಪ್ರೀಪೇಯ್ಡ್ ಪ್ಲ್ಯಾನ್ ಪರಿಚಯಿಸಿದೆ. ಮನೆಯಿಂದ ಕೆಲಸ ಮಾಡುವ ಉದ್ಯೋಗಿಗಳಿಗೆ ಅಧಿಕ ಡೇಟಾ ನೆರವಾಗಲು ಈ ಯೋಜನೆಯನ್ನು ಬಿಎಸ್‌ಎನ್‌ಎಲ್ ಪರಿಚಯಿಸಿದೆ. ಈ ಪ್ಲ್ಯಾನಿನಲ್ಲಿ ಗ್ರಾಹಕರಿಗೆ ಪ್ರತಿದಿನ 5GB ಡೇಟಾ ಪ್ರಯೋಜನ ದೊರೆಯಲಿದೆ ಹಾಗೂ ಅಧಿಕ ವ್ಯಾಲಿಡಿಟಿಯ ಸೌಲಭ್ಯವು ಲಭ್ಯವಾಗಲಿದೆ. ಈ ಯೋಜನೆ ಇನ್ನಷ್ಟು ಪ್ರಯೋಜನಗಳ ಬಗ್ಗೆ ತಿಳಿಯಲು ಮುಂದಿನ ಸ್ಲೈಡ್‌ಗಳನ್ನು ಓದಿರಿ.

ಬಿಎಸ್‌ಎನ್‌ಎಲ್ 599ರೂ. ಪ್ಲ್ಯಾನ್
ಬಿಎಸ್‌ಎನ್‌ಎಲ್ ಈ ಹೊಸ ಯೋಜನೆಯಲ್ಲಿ ಪ್ರತಿದಿನ 5GB ಡೇಟಾ ಸೌಲಭ್ಯ ದೊರೆಯುತ್ತದೆ. ಇದರೊಂದಿಗೆ ಪ್ರತಿದಿನ 100 ಎಸ್‌ಎಮ್‌ಎಸ್ ಹಾಗೂ ಪ್ರತಿದಿನ 250 ನಿಮಿಷಗಳ ಕರೆಯ ಸೌಲಭ್ಯಗಳು ಲಭ್ಯವಾಗುತ್ತವೆ. ಇನ್ನು ಈ ಯೋಜನೆಯು ಒಟ್ಟು 90 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಒಟ್ಟು ಪೂರ್ಣ ಅವಧಿಯ ವ್ಯಾಲಿಡಿಟಿಯಲ್ಲಿ ಒಟ್ಟು 450GB ಡೇಟಾ ಪ್ರಯೋಜನ ದೊರೆಯುತ್ತದೆ.

ಪ್ಲ್ಯಾನ್ ಲಭ್ಯತೆ
ಬಿಎಸ್‌ಎನ್‌ಎಲ್‌ನ ಹೊಸ 599ರೂ. ಪ್ಲ್ಯಾನ್ ಮುಂಬೈ ಹಾಗೂ ದೆಹಲಿ ಟೆಲಿಕಾಂ ಪ್ರದೇಶಗಳನ್ನು ಹೊರತುಪಡಿಸಿ ಇತರೆ ಎಲ್ಲ ಟೆಲಿಕಾಂ ಪ್ರದೇಶಗಳ ವ್ಯಾಪ್ತಿಯಲ್ಲಿ ಈ ಯೋಜನೆ ಲಭ್ಯವಾಗಲಿದೆ ಎನ್ನಲಾಗಿದೆ.

ಬಿಎಸ್‌ಎನ್‌ಎಲ್ 2,399ರೂ. ಪ್ಲ್ಯಾನ್
ಬಿಎಸ್‌ಎನ್‌ಎಲ್‌ನ ಈ ಪ್ಲ್ಯಾನ್ ಒಟ್ಟು 600 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದ್ದು, ಈ ಅವಧಿಯಲ್ಲಿ ಪ್ರತಿದಿನ 250 FUP ನಿಮಿಷಗಳ ಮಿತಿಯಲ್ಲಿ ಉಚಿತ ವಾಯಿಸ್ ಕರೆಗಳ ಪ್ರಯೋಜನವನ್ನು ಒದಗಿಸಲಿದೆ. ಇದರೊಂದಿಗೆ ಪ್ರತಿದಿನ 100 ಎಸ್‌ಎಮ್‌ಎಸ್‌ಗಳ ಸೌಲಭ್ಯ ದೊರೆಯಲಿದ್ದು, 60 ದಿನಗಳಿಗೆ ಬಿಎಸ್‌ಎನ್‌ಎಲ್ ಟ್ಯೂನ್ ಸೌಲಭ್ಯವು ಸಿಗಲಿದೆ. ಆದರೆ ಯಾವುದೇ ಡೇಟಾ ಪ್ರಯೋಜನ ಲಭ್ಯ ಇರುವುದಿಲ್ಲ. ಡೇಟಾ ಅಗತ್ಯ ಇರದ ಹಾಗೂ ವಾಯಿಸ್ ಕರೆ ಮತ್ತು ಹೆಚ್ಚಿನ ವ್ಯಾಲಿಡಿಟಿ ಬಯಸುವ ಗ್ರಾಹಕರಿಗೆ ಈ ಪ್ಲ್ಯಾನ್ ಉತ್ತಮ ಆಯ್ಕೆ ಆಗಿದೆ.

ಬಿಎಸ್‌ಎನ್‌ಎಲ್ 1,212ರೂ.ಪ್ಲ್ಯಾನ್
ಬಿಎಸ್‌ಎನ್‌ಎಲ್ 1,212ರೂ. ಡೇಟಾ ಎಸ್‌ಟಿವಿ ಡೇಟಾ ಯೋಜನೆಯು ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಪ್ಲ್ಯಾನಿನಲ್ಲಿ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 500GB ಡೇಟಾ ಪ್ರಯೋಜನೆ ದೊರೆಯುತ್ತದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ ಯಾವುದೇ ವಾಯಿಸ್ ಕರೆ ಹಾಗೂ ಎಸ್‌ಎಮ್‌ಎಸ್ ಸೌಲಭ್ಯಗಳು ದೊರೆಯುವುದಿಲ್ಲ. ಇದೊಂದು ಡೇಟಾ ಪ್ಲ್ಯಾನ್ ಆಗಿದೆ.


Click it and Unblock the Notifications








