ಕಡಿಮೆ ಬೆಲೆಗೆ ಲಭ್ಯವಿರುವ ಬಿಎಸ್‌ಎನ್‌ಎಲ್‌ನ ಬ್ರಾಡ್‌ಬ್ಯಾಂಡ್ ಪ್ಲ್ಯಾನ್‌ಗಳ ಮಾಹಿತಿ!
ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್ಎಲ್ (BSNL) ಸಂಸ್ಥೆಯು ಇತ್ತೀಚಿಗೆ ಖಾಸಗಿ ಟೆಲಿಕಾಂ ಸಂಸ್ಥೆಗಳಿಗೆ ಟಾಂಗ್ ನೀಡುವ ಹೆಜ್ಜೆಗಳನ್ನು ಹಾಕುತ್ತ ಸಾಗಿದೆ. ಮುಖ್ಯವಾಗಿ ಬ್ರಾಡ್‌ಬ್ಯಾಂಡ್ ವಲಯದಲ್ಲಿಯೂ ಸಹ ಮಹತ್ತರ ಹೆಜ್ಜೆಗಳನ್ನು ಇಡುತ್ತಿರುವ ಬಿಎಸ್ಎನ್‌ಎಲ್ ಇತ್ತೀಚಿಗೆ ಕೆಲವು ಆಕರ್ಷಕ ತಿಂಗಳ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ. ಅವುಗಳು ಕಡಿಮೆ ದರದ ಪ್ರೈಸ್‌ಟ್ಯಾಗ್‌ನಲ್ಲಿದ್ದು, ಹಾಗೂ ಯಾವುದೇ ದಿನದ ಮಿತಿ ಹೊಂದಿಲ್ಲ ಎನ್ನುವುದು ಪ್ಲಸ್ ಪಾಯಿಂಟ್ ಆಗಿವೆ.

ಹೌದು, ಬಿಎಸ್‌ಎನ್‌ಎಲ್ ಸಂಸ್ಥೆಯು ಅಗ್ಗದ ಬೆಲೆಯಿಂದ ದುಬಾರಿ ಬೆಲೆಯಲ್ಲಿ ಬ್ರಾಡ್‌ಬ್ಯಾಂಡ್ ಪ್ಲ್ಯಾನ್‌ಗಳನ್ನು(BSNL Broadband) ಬಿಡುಗಡೆ ಮಾಡಿದೆ. ಆದರೆ ಬಹುತೇಕ ಗ್ರಾಹಕರು ಬಜೆಟ್ ಬೆಲೆಯಲ್ಲಿ ಉತ್ತಮ ಸೇವೆ ಪ್ಲ್ಯಾನ್‌ಗಳತ್ತ ಹೆಚ್ಚು ಆಕರ್ಷಿತರಾಗುತ್ತಾರೆ. ಇನ್ನು ಅಂತಹ ಕಡಿಮೆ ದರದ ಬ್ರಾಡ್‌ಬ್ಯಾಂಡ್ ಯೋಜನೆ ಡಾಟಾ ಬಳಕೆಗೆ ಯಾವುದೇ FUP ಮಿತಿ ಹೊಂದಿಲ್ಲದಿದ್ದರೇ, ಆ ಯೋಜನೆ ಬಹುಬೇಗ ಆಕರ್ಷಕ ಆಗಿಬಿಡುತ್ತದೆ. ಈ ನಿಟ್ಟಿನಲ್ಲಿ ಬಿಎಸ್‌ಎನ್ಎಲ್ ಸಹ FUP ಮಿತಿ ಇಲ್ಲದ ಕೆಲವು ಬ್ರಾಡ್‌ಬ್ಯಾಂಡ್ ಪ್ಲ್ಯಾನ್‌ಗಳನ್ನು ಪರಿಚಯಿಸಿ ಗಮನ ಸೆಳೆದಿದೆ. ಹಾಗಾದರೆ ಬಿಎಸ್‌ಎನ್ಎಲ್ ಅಗ್ಗದ ಪ್ರಿಪೇಡ್ ಪ್ಲ್ಯಾನ್‌ಗಳ ಬಗ್ಗೆ ತಿಳಿಯಲು ಮುಂದೆ ಓದಿರಿ.

ಬಿಎಸ್‌ಎನ್‌ಎಲ್ 555ರೂ. ಬ್ರಾಡ್‌ಬ್ಯಾಂಡ್ ಪ್ಲ್ಯಾನ್
ಬಿಎಸ್‌ಎನ್‌ಎಲ್ ಸಂಸ್ಥೆಯ ಬೇಸಿಕ್ ಬ್ರಾಡ್‌ಬ್ಯಾಂಡ್ ಪ್ಲ್ಯಾನ್ ಇದಾಗಿದ್ದು, ಈ ಪ್ಲ್ಯಾನಿನಲ್ಲಿ ಒಟ್ಟು 100GB ಡೇಟಾ ಸಿಗಲಿದೆ. 20 Mbps ವೇಗದ ಸಾಮರ್ಥ್ಯದಲ್ಲಿರಲಿದ್ದು, ಪ್ರತಿದಿನ ಯಾವುದೇ ಮಿತಿ ಇಲ್ಲದೇ ಡೇಟಾ ಬಳಕೆ ಮಾಡಬಹುದಾಗಿದೆ. ತಿಂಗಳ ಮಿತಿ 100GB ಡೇಟಾ ಮುಗಿದ ಬಳಿಕ 1 Mbps ವೇಗದಲ್ಲಿ ಡೇಟಾ ಸೌಲಭ್ಯವು ಲಭ್ಯವಾಗಲಿದೆ. ಬಿಎಸ್‌ಎನ್‌ಎಲ್ ಕರೆಗಳು ಉಚಿತವಾಗಿವೆ.

ಬಿಎಸ್‌ಎನ್‌ಎಲ್ 777ರೂ. ಬ್ರಾಡ್‌ಬ್ಯಾಂಡ್ ಪ್ಲ್ಯಾನ್
ಬಿಎಸ್‌ಎನ್‌ಎಲ್ ಸಂಸ್ಥೆಯ ಈ 777ರೂ.ಪ್ಲ್ಯಾನ್ ಒಂದು ತಿಂಗಳಿನಲ್ಲಿ 500GB ಡೇಟಾ ಸಿಗಲಿದೆ. ಡೇಟಾ ವೇಗದ ಮಿತಿಯು 50 Mbps ಸಾಮರ್ಥ್ಯದಲ್ಲಿರಲಿದ್ದು, ತಿಂಗಳ ನಿಗದಿತ ಡೇಟಾ ಬಳಕೆ ಮುಗಿದ ಬಳಿಕ 2Mbps ವೇಗದಲ್ಲಿ ಡೇಟಾ ಸೌಲಭ್ಯ ಮುಂದವರೆಯಲಿದೆ. ಈ ಪ್ಲ್ಯಾನಿನಲ್ಲಿಯೂ ಸಹ ಹೆಚ್ಚುವರಿಯಾಗಿ ಒಂದು ವರ್ಷದ ಅಮೆಜಾನ್ ಪ್ರೈಮ್ ಸದಸ್ಯತ್ವ ಸಹ ದೊರೆಯಲಿದೆ.

ಬಿಎಸ್‌ಎನ್‌ಎಲ್ 849ರೂ. ಬ್ರಾಡ್‌ಬ್ಯಾಂಡ್ ಪ್ಲ್ಯಾನ್
ಬಿಎಸ್‌ಎನ್‌ಎಲ್‌ನ ಈ ಬ್ರಾಡ್‌ಬಾಂಡ್ ಪ್ಲ್ಯಾನಿನಲ್ಲಿ ಒಂದು ತಿಂಗಳಿಗೆ ಒಟ್ಟು 600GB ಡೇಟಾ ಮಿತಿಯನ್ನು ನೀಡಲಾಗಿದ್ದು, ಯಾವುದೇ ದೈನಂದಿನ FUP ಮಿತಿ ಇರುವುದಿಲ್ಲ. ಈ ಪ್ಲ್ಯಾನ್‌ನಲ್ಲಿ ಡೇಟಾ ವೇಗವು 50 Mbps ಸಾಮರ್ಥ್ಯದಲ್ಲಿರಲಿದ್ದು, ಇತರೆ ನೆಟವರ್ಕ್‌ಗಳಿಗೆ ಅನಿಯಮಿತ ಉಚಿತ ಕರೆಗಳ ಸೌಲಬ್ಯವನ್ನು ಪಡೆದಿದೆ. ಇದರೊಂದಿಗೆ ಒಂದು ವರ್ಷದ ಅಮೆಜಾನ್ ಪ್ರೈಮ್ ಸದಸ್ಯತ್ವ ಸಹ ದೊರೆಯಲಿದೆ.

ಬಿಎಸ್‌ಎನ್‌ಎಲ್ 749ರೂ. ಭಾರತ್ ಫೈಬರ್ ಪ್ಲ್ಯಾನ್ ಪ್ರಯೋಜನ
ಬಿಎಸ್ಎನ್ಎಲ್ 749ರೂ. ಭಾರತ್ ಫೈಬರ್ ಪ್ಲ್ಯಾನ್ ಅನ್ನು ಫೈಬರ್ ಹೈ ಸ್ಪೀಡ್ ಪಡೆದಿದೆ. ಈ ಯೋಜನೆಯು ತಿಂಗಳಿಗೆ 1000GB ಡೇಟಾ ಪ್ರಯೋಜನವನ್ನು ಪಡೆದಿದ್ದು, 100 Mbps ವೇಗದಲ್ಲಿ ಇಂಟರ್ನೆಟ್ ಸೌಲಭ್ಯ ನೀಡುತ್ತದೆ. ಇದಲ್ಲದೆ, ಈ ಯೋಜನೆಯು ಬಿಎಸ್ಎನ್ಎಲ್ ಸಿನಿಮಾ ಪ್ಲಸ್, ಸೋನಿಲೈವ್ ಪ್ರೀಮಿಯಂ, ಜೀ5 ಪ್ರೀಮಿಯಂ, ವೂಟ್ ಸೆಲೆಕ್ಟ್, ಯಪ್ ಟಿವಿ ಮತ್ತು ಇತರೆ ಕೆಲವು OTT ಪ್ಲಾಟ್‌ಫಾರ್ಮ್‌ಗಳಿಗೆ ಚಂದಾದಾರಿಕೆಯೊಂದಿಗೆ ಬರುತ್ತದೆ.

ಬಿಎಸ್‌ಎನ್‌ಎಲ್ 949ರೂ. ಭಾರತ್ ಫೈಬರ್ ಪ್ಲ್ಯಾನ್ ಪ್ರಯೋಜನ
ಬಿಎಸ್ಎನ್ಎಲ್ 949ರೂ. ಹೊಸ ಸೂಪರ್‌ಸ್ಟಾರ್ ಪ್ರೀಮಿಯಂ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯು ತಿಂಗಳಿಗೆ 2000GB ಡೇಟಾ ಪ್ರಯೋಜನವನ್ನು ಪಡೆದಿದ್ದು, 150 Mbps ವೇಗದಲ್ಲಿ ಇಂಟರ್ನೆಟ್ ಸೌಲಭ್ಯ ನೀಡುತ್ತದೆ. ಇದಲ್ಲದೆ, ಈ ಯೋಜನೆಯು ಬಿಎಸ್ಎನ್ಎಲ್ ಸಿನಿಮಾ ಪ್ಲಸ್, ಸೋನಿಲೈವ್ ಪ್ರೀಮಿಯಂ, ಜೀ5 ಪ್ರೀಮಿಯಂ, ವೂಟ್ ಸೆಲೆಕ್ಟ್, ಯಪ್ ಟಿವಿ ಮತ್ತು ಇತರೆ ಕೆಲವು OTT ಪ್ಲಾಟ್‌ಫಾರ್ಮ್‌ಗಳಿಗೆ ಚಂದಾದಾರಿಕೆಯೊಂದಿಗೆ ಬರುತ್ತದೆ.

ಬಿಎಸ್‌ಎನ್‌ಎಲ್ 999ರೂ. ಭಾರತ್ ಫೈಬರ್ ಪ್ಲ್ಯಾನ್ ಪ್ರಯೋಜನ
ಬಿಎಸ್ಎನ್ಎಲ್ 999ರೂ. ಭಾರತ್ ಫೈಬರ್ ಪ್ಲ್ಯಾನ್ ಅನ್ನು ಫೈಬರ್ ಹೈ ಸ್ಪೀಡ್ ಪಡೆದಿದೆ. ಈ ಯೋಜನೆಯು ತಿಂಗಳಿಗೆ 3300GB ಅಥವಾ 3.3TB ವರೆಗೆ ಡೇಟಾ ಪ್ರಯೋಜನವನ್ನು ಪಡೆದಿದ್ದು, 200 Mbps ವೇಗದಲ್ಲಿ ಇಂಟರ್ನೆಟ್ ಸೌಲಭ್ಯ ನೀಡುತ್ತದೆ. ಇದಲ್ಲದೆ, ಈ ಯೋಜನೆಯು ಅನಿಯಮಿತ ಧ್ವನಿ ಕರೆ ಪ್ರಯೋಜನದೊಂದಿಗೆ ಉಚಿತ ಫಿಕ್ಸಡ್ ಲೈನ್ ಸಂಪರ್ಕದೊಂದಿಗೆ ಬರುತ್ತದೆ. ಹಾಗೆಯೇ ಒಂದು ವರ್ಷಕ್ಕೆ ಡಿಸ್ನಿ+ ಹಾಟ್‌ಸ್ಟಾರ್ ಪ್ರೀಮಿಯಂ ಓಟಿಟಿ ಪ್ರಯೋಜನ ಲಭ್ಯ.

ಜಿಯೋಫೈಬರ್‌ನ ಕೆಲವು ಜನಪ್ರಿಯ ಬ್ರಾಡ್‌ಬ್ಯಾಂಡ್ ಯೋಜನೆಗಳು
ಜಿಯೋಫೈಬರ್‌ನ ಬ್ರೊನ್ಜ್ ಪ್ಲಾನ್ 399 ರೂ. ಬೆಲೆಯನ್ನು ಹೊಂದಿದೆ. ಈ ಪ್ಲಾನ್‌ನಲ್ಲಿ ನೀವು 30mbps ಇಂಟರ್ನೆಟ್ ವೇಗವನ್ನು ಪಡೆದುಕೊಳ್ಳಬಹುದು. ಜೊತೆಗೆ ಅನಿಯಮಿತ ಕರೆಯೊಂದಿಗೆ 3,300 FUP ಡೇಟಾ ಮಿತಿಯನ್ನು ನೀಡಲಿದೆ. ಆದರೆ ಈ ಬ್ರೊನ್ಜ್ ಪ್ಲಾನ್ ಯಾವುದೇ OTT ಅಪ್ಲಿಕೇಶನ್‌ಗಳಿಗೆ ಚಂದಾದಾರಿಕೆಯನ್ನು ನೀಡುವುದಿಲ್ಲ ಅನ್ನೊದು ಗಮನಾರ್ಹವಾಗಿದೆ.

ಜಿಯೋಫೈಬರ್ ತಿಂಗಳಿಗೆ 699 ರೂ,ಬೆಲೆಯಲ್ಲಿ ಸಿಲ್ವರ್ ಪ್ಲಾನ್ ಅನ್ನು ನೀಡುತ್ತಿದೆ. ಈ ಪ್ಲಾನ್‌ನಲ್ಲಿ ನೀವು ತಡರಹಿತ ಇಂಟರ್‌ನೆಟ್ ಪ್ರಯೋಜನ ಪಡೆಯಬಹುದು. ಇದು ನಿಮಗೆ 100Mbps ವೇಗವನ್ನು ನೀಡಲಿದೆ. ಆದರೆ ಈ ಪ್ಲಾನ್‌ನಲ್ಲಿ ನಿಮಗೆ ಯಾವುದೇ ಅನಿಯಮಿತ ಕರೆ ಮತ್ತು ಯಾವುದೇ OTT ಚಂದಾದಾರಿಕೆ ಪ್ರಯೋಜನ ನೀಡುವುದಿಲ್ಲ.

ಜಿಯೋ ಫೈಬರ್ ಗೋಲ್ಡ್ ಪ್ಲಾನ್ 150Mbps FUP ವೇಗದಲ್ಲಿ ಕಾರ್ಯನಿರ್ವಹಿಸಲಿದೆ. ಈ ಪ್ಲಾನ್ ನಿಮಗೆ ಅನಿಯಮಿತ ಕರೆಗಳ ಜೊತೆಗೆ ದೈನಂದಿನ ಅನಿಯಮಿತ ಡೇಟಾ ಪ್ರಯೋಜನ ನೀಡಲಿದೆ. ಈ ಪ್ಲಾನ್ ತಿಂಗಳಿಗೆ 999ರೂ.ಗಳಿಂದ ಆರಂಭವಾಗಲಿದೆ. ಇನ್ನು ಈ ಪ್ಲಾನ್ ಹೆಚ್ಚುವರಿಯಾಗಿ ನೆಟ್‌ಫ್ಲಿಕ್ಸ್ ಅನ್ನು ಹೊರತು ಪಡಿಸಿ ಇತರೆ 11 OTT ಅಪ್ಲಿಕೇಶನ್‌ಗಳಿಗೆ ಪೂರಕ ಚಂದಾದಾರಿಕೆಗಳನ್ನು ನೀಡುತ್ತದೆ.

ಡೈಮಂಡ್ ಪ್ಲಾನ್ 1,499 ರೂ. ಬೆಲೆಯನ್ನು ಹೊಂದಿದ್ದು, 300Mbps ವರೆಗಿನ ಅನಿಯಮಿತ ಇಂಟರ್‌ನೆಟ್ ವೇಗವನ್ನು ನೀಡಲಿದೆ. ಇನ್ನು ಈ ಪ್ಲಾನ್ ಅನಿಯಮಿತ ಕರೆ ಪ್ರಯೋಜನ ಜೊತೆಗೆ ತಿಂಗಳಿಗೆ 1,500 ರೂ ಮೌಲ್ಯದ 12 OTT ಅಪ್ಲಿಕೇಶನ್‌ಗಳಿಗೆ ಪೂರಕ ಪ್ರವೇಶವನ್ನು ನೀಡುತ್ತದೆ.


Click it and Unblock the Notifications








