BSNLನ ಅಗ್ಗದ ಬೆಲೆಯ ಬ್ರಾಡ್‌ಬ್ಯಾಂಡ್ ಪ್ಲ್ಯಾನ್‌ಗಳಲ್ಲಿ ಸಿಗುತ್ತೆ ಅಧಿಕ ಡಾಟಾ!
ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್ಎಲ್ ಸಂಸ್ಥೆಯು ಇತ್ತೀಚಿಗೆ ಖಾಸಗಿ ಟೆಲಿಕಾಂ ಸಂಸ್ಥೆಗಳಿಗೆ ಚುರುಕು ಮುಟ್ಟಿಸುವ ದಾರಿಯಲ್ಲಿ ನಡೆಯುತ್ತಿದೆ. ಮುಖ್ಯವಾಗಿ ಬ್ರಾಡ್‌ಬ್ಯಾಂಡ್ ಕ್ಷೇತ್ರದಲ್ಲಿಯೂ ಸಹ ಮಹತ್ತರ ಹೆಜ್ಜೆಗಳನ್ನು ಇಡುತ್ತಿರುವ ಬಿಎಸ್ಎನ್‌ಎಲ್ ಇತ್ತೀಚಿಗೆ ಕೆಲವು ಆಕರ್ಷಕ ತಿಂಗಳ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ. ಅವುಗಳು ಕಡಿಮೆ ದರದ ಪ್ರೈಸ್‌ಟ್ಯಾಗ್‌ನಲ್ಲಿದ್ದು, ಹಾಗೂ ಯಾವುದೇ ದಿನದ ಮಿತಿ ಹೊಂದಿಲ್ಲ ಎನ್ನುವುದು ಪ್ಲಸ್ ಪಾಯಿಂಟ್ ಆಗಿವೆ.

ಹೌದು, ಬಿಎಸ್‌ಎನ್‌ಎಲ್ ಸಂಸ್ಥೆಯು ಅಗ್ಗದ ಬೆಲೆಯಿಂದ ದುಬಾರಿ ಬೆಲೆಯಲ್ಲಿ ಬ್ರಾಡ್‌ಬ್ಯಾಂಡ್ ಪ್ಲ್ಯಾನ್‌ಗಳನ್ನು ಬಿಡುಗಡೆ ಮಾಡಿದೆ. ಆದರೆ ಬಹುತೇಕ ಗ್ರಾಹಕರು ಬಜೆಟ್ ಬೆಲೆಯಲ್ಲಿ ಉತ್ತಮ ಸೇವೆ ಪ್ಲ್ಯಾನ್‌ಗಳತ್ತ ಹೆಚ್ಚು ಆಕರ್ಷಿತರಾಗುತ್ತಾರೆ. ಇನ್ನು ಅಂತಹ ಅಗ್ಗದ ಬ್ರಾಡ್‌ಬ್ಯಾಂಡ್ ಪ್ಲ್ಯಾನ್ ಡಾಟಾ ಬಳಕೆಗೆ ಯಾವುದೇ FUP ಮಿತಿ ಹೊಂದಿಲ್ಲದಿದ್ದರೇ, ಆ ಪ್ಲ್ಯಾನ್ ಬಹುಬೇಗ ಅಟ್ರ್ಯಾಕ್ಟ್ ಆಗಿಬಿಡುತ್ತದೆ. ಈ ನಿಟ್ಟಿನಲ್ಲಿ ಬಿಎಸ್‌ಎನ್ಎಲ್ ಸಹ FUP ಮಿತಿ ಇಲ್ಲದ ಬ್ರಾಡ್‌ಬ್ಯಾಂಡ್ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ. ಹಾಗಾದರೆ ಬಿಎಸ್‌ಎನ್ಎಲ್ ಅಗ್ಗದ ಪ್ರಿಪೇಡ್ ಪ್ಲ್ಯಾನ್‌ಗಳ ಬಗ್ಗೆ ತಿಳಿಯಲು ಮುಂದೆ ಓದಿರಿ.

ಬಿಎಸ್‌ಎನ್‌ಎಲ್-555ರೂ.ಪ್ಲ್ಯಾನ್
ಬಿಎಸ್‌ಎನ್‌ಎಲ್ ಸಂಸ್ಥೆಯ ಬೇಸಿಕ್ ಬ್ರಾಡ್‌ಬ್ಯಾಂಡ್ ಪ್ಲ್ಯಾನ್ ಇದಾಗಿದ್ದು, ಈ ಪ್ಲ್ಯಾನಿನಲ್ಲಿ ಒಟ್ಟು 100GB ಡೇಟಾ ಸಿಗಲಿದೆ. 20 Mbps ವೇಗದ ಸಾಮರ್ಥ್ಯದಲ್ಲಿರಲಿದ್ದು, ಪ್ರತಿದಿನ ಯಾವುದೇ ಮಿತಿ ಇಲ್ಲದೇ ಡೇಟಾ ಬಳಕೆ ಮಾಡಬಹುದಾಗಿದೆ. ತಿಂಗಳ ಮಿತಿ 100GB ಡೇಟಾ ಮುಗಿದ ಬಳಿಕ 1 Mbps ವೇಗದಲ್ಲಿ ಡೇಟಾ ಸೌಲಭ್ಯವು ಲಭ್ಯವಾಗಲಿದೆ. ಬಿಎಸ್‌ಎನ್‌ಎಲ್ ಕರೆಗಳು ಉಚಿತವಾಗಿದ್ದು, ಇತರೆ ನೆಟವರ್ಕ್ ಕರೆಗಳು 10:30 PM ಯಿಂದ 6:00 AM ವರೆಗೂ ಉಚಿತವಾಗಿರಲಿವೆ. ಭಾನುವಾರ ಅನಿಯಮಿತ ಕರೆ ಸೌಲಭ್ಯ ಲಭ್ಯ.

ಬಿಎಸ್‌ಎನ್‌ಎಲ್-777ರೂ.ಪ್ಲ್ಯಾನ್
ಬಿಎಸ್‌ಎನ್‌ಎಲ್ ಸಂಸ್ಥೆಯ ಈ 777ರೂ.ಪ್ಲ್ಯಾನ್ ಒಂದು ತಿಂಗಳಿನಲ್ಲಿ 500GB ಡೇಟಾ ಸಿಗಲಿದೆ. ಡೇಟಾ ವೇಗದ ಮಿತಿಯು 50 Mbps ಸಾಮರ್ಥ್ಯದಲ್ಲಿರಲಿದ್ದು, ತಿಂಗಳ ನಿಗದಿತ ಡೇಟಾ ಬಳಕೆ ಮುಗಿದ ಬಳಿಕ 2Mbps ವೇಗದಲ್ಲಿ ಡೇಟಾ ಸೌಲಭ್ಯ ಮುಂದವರೆಯಲಿದೆ. ಈ ಪ್ಲ್ಯಾನಿನಲ್ಲಿಯೂ ಸಹ ಹೆಚ್ಚುವರಿಯಾಗಿ ಒಂದು ವರ್ಷದ ಅಮೆಜಾನ್ ಪ್ರೈಮ್ ಸದಸ್ಯತ್ವ ಸಹ ದೊರೆಯಲಿದೆ.

ಬಿಎಸ್‌ಎನ್‌ಎಲ್-849ರೂ.ಪ್ಲ್ಯಾನ್
ಬಿಎಸ್‌ಎನ್‌ಎಲ್‌ನ ಈ ಬ್ರಾಡ್‌ಬಾಂಡ್ ಪ್ಲ್ಯಾನಿನಲ್ಲಿ ಒಂದು ತಿಂಗಳಿಗೆ ಒಟ್ಟು 600GB ಡೇಟಾ ಮಿತಿಯನ್ನು ನೀಡಲಾಗಿದ್ದು, ಯಾವುದೇ ದೈನಂದಿನ FUP ಮಿತಿ ಇರುವುದಿಲ್ಲ. ಈ ಪ್ಲ್ಯಾನ್‌ನಲ್ಲಿ ಡೇಟಾ ವೇಗವು 50 Mbps ಸಾಮರ್ಥ್ಯದಲ್ಲಿರಲಿದ್ದು, ಇತರೆ ನೆಟವರ್ಕ್‌ಗಳಿಗೆ ಅನಿಯಮಿತ ಉಚಿತ ಕರೆಗಳ ಸೌಲಬ್ಯವನ್ನು ಪಡೆದಿದೆ. ಇದರೊಂದಿಗೆ ಒಂದು ವರ್ಷದ ಅಮೆಜಾನ್ ಪ್ರೈಮ್ ಸದಸ್ಯತ್ವ ಸಹ ದೊರೆಯಲಿದೆ.

BSNLನ ಇತರೆ ದುಬಾರಿ ಬ್ರಾಡ್‌ಬ್ಯಾಂಡ್ ಪ್ಲ್ಯಾನ್‌ಗಳು
ಅಗ್ಗದ ದರದಲ್ಲಿ ಹಲವು ಬ್ರಾಡ್‌ಬ್ಯಾಂಡ್ ಪರಿಚಯಿಸಿರುವ ಬಿಎಸ್‌ಎನ್ಎಲ್ ದುಬಾರಿ ಬೆಲೆಯ ಪ್ಲ್ಯಾನ್‌ಗಳನ್ನು ಒಳಗೊಂಡಿದೆ. ಅವುಗಳು ಕ್ರಮವಾಗಿ 2,999ರೂ. ಪ್ಲ್ಯಾನಿನಲ್ಲಿ ತಿಂಗಳಿಗೆ 2000GB ಡಾಟಾ ಸಿಗಲಿದೆ. 4,999ರೂ. ಪ್ಲ್ಯಾನಿನಲ್ಲಿ ತಿಂಗಳಿಗೆ 2000GB ಡಾಟಾ ಯಾವುದೇ ಮಿತಿ ಇರದೆ ಲಭ್ಯ. ಇನ್ನು 9,999ರೂ. ಪ್ಲ್ಯಾನಿನಲ್ಲಿ ತಿಂಗಳಿಗೆ 2250GB ಡಾಟಾ ದೊರೆಯುತ್ತದೆ.


Click it and Unblock the Notifications








