BSNL ನಿಂದ ರೂ.1ಕ್ಕೆ ಸೇವೆ: ಆದರೆ ಇದು ನಿಮಗಲ್ಲ!

ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ತನ್ನ ಸೇವೆಯ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದ್ದು, ಗ್ರಾಹಕರಿಗೆ ತಮ್ಮ ಡೇಟಾವನ್ನು ಗೌಪ್ಯತೆ ಮತ್ತು ಭದ್ರತೆಗಾಗಿ ಖಾತ್ರಿಪಡಿಸಲು ಇ-ಮೇಲ್ ಸೇವೆಗಳನ್ನು ಪ್ರಾರಂಭಿಸಲು ಮುಂದಾಗಿದೆ

|

ಇಷ್ಟು ದಿನ ಗ್ರಾಹಕರಿಗೆ ಗಾಳ ಹಾಕುತ್ತಿದ್ದ ಸರ್ಕಾರಿ ಸ್ವಾಮ್ಯದ BSNL ಈ ಬಾರಿ ಕಾರ್ಪೋರೇಟ್ ಸಂಸ್ಥೆಗಳಿಗೆಗಾಳ ಹಾಕಲು ಮುಂದಾಗಿದೆ. BSNL ಜೈಪುರ ಮೂಲದ ಡಾಟಾ ಇನ್ಫೋಸಿಸ್ ಸಹಭಾಗಿತ್ವದಲ್ಲಿ ಇಂದಿನಿಂದ ದಿನಕ್ಕೆ ರೂ. 1 ನಂತೆ ಕಾರ್ಪೊರೇಟ್ ಇ-ಮೇಲ್ ಸೇವೆಯನ್ನು ಪ್ರಾರಂಭಿಸಿದೆ.

BSNL ನಿಂದ ರೂ.1ಕ್ಕೆ ಸೇವೆ: ಆದರೆ ಇದು ನಿಮಗಲ್ಲ!

ಓದಿರಿ: ಕನ್ನಡಕ್ಕೆ ಮತ್ತೊಂದು ಟಿವಿ ಚಾನಲ್ ಆಗಮನ

ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ತನ್ನ ಸೇವೆಯ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದ್ದು, ಗ್ರಾಹಕರಿಗೆ ಗೌಪ್ಯತೆ ಮತ್ತು ಭದ್ರತೆಯ ಇ-ಮೇಲ್ ಸೇವೆಗಳನ್ನು ಪ್ರಾರಂಭಿಸಲು ಮುಂದಾಗಿದೆ ಅದು ಕಡಿಮೆ ಬೆಲೆಗೆ.

ಮೇಲ್‌ಗಳು ಫುಲ್ ಸೆಕ್ಯೂರ್:

ಮೇಲ್‌ಗಳು ಫುಲ್ ಸೆಕ್ಯೂರ್:

BSNL ನೀಡುತ್ತಿರುವ ಮೇಲ್ ಸೇವೆಯಲ್ಲಿ ನಿಮ್ಮ ಮೇಲ್‌ಗಳು ಸಂಪೂರ್ಣ ಸೇಫ್ ಆಗಿರಲಿದ್ದು, ಯಾವುದೇ ರೀತಿಯಲ್ಲಿಯೂ ಲೀಕ್ ಆಗುವ ಸಾಧ್ಯತೆ ಗಳು ಇರುವುದಿಲ್ಲ. ಅದುವೇ ಕಡಿಮೆ ಬೆಲೆಗೆ ಈ ಸೇವೆಯೂ ಲಭ್ಯವಿದೆ.

ವರ್ಷಕ್ಕೆ ರೂ.365 ಮಾತ್ರವೇ ಶುಲ್ಕ:

ವರ್ಷಕ್ಕೆ ರೂ.365 ಮಾತ್ರವೇ ಶುಲ್ಕ:

BSNL ಗ್ರಾಹಕರು ತಮ್ಮ ವೆಬ್ ಸೈಟ್ ಗಳಿಗೆ ವಾರ್ಷಿಕ ಶುಲ್ಕ 365 ರೂ. ನೀಡಿದಲ್ಲಿ ಪ್ರತಿ ಐಡಿಗೆ 1 GB ಸ್ಟೋರೇಜ್ ಅನ್ನು ಪಡೆಯಬಹುದಾಗಿದೆ. ಅಲ್ಲದೇ ರೂ. 999 ಗೆ 10 GB ಸ್ಟೋರೇಜ್ ದೊರೆಯಲಿದೆ.

ಒಂದಕ್ಕಿಂತ ಹೆಚ್ಚು ಜಿಯೋ ಉಚಿತ ಫೋನ್ ಬುಕ್ ಮಾಡುವುದು ಹೇಗೆ?
ವರ್ಷಕ್ಕೊಂದೇ ದರ:

ವರ್ಷಕ್ಕೊಂದೇ ದರ:

ಒಂದು ವರ್ಷದಲ್ಲಿ ಒಮ್ಮೆ ಮಾತ್ರ ಹಣವನ್ನು ಪಾವತಿ ಮಾಡಬೇಕಾಗುತ್ತದೆ, ಇ-ಮೇಲ್ ಸೇವೆ ಬೆಲೆ ದಿನಕ್ಕೆ ರೂ.1 ಇದ್ದು. 10 GB ಗಿಂತ ಹೆಚ್ಚಿನ ಸ್ಟೋರೇಜ್ ಅವಶ್ಯವಿದಲ್ಲಿ ಹೆಚ್ಚುವರಿ 5 GB ಗಾಗಿ ವಾರ್ಷಿಕ ರೂ.500 ಪಾವತಿ ಮಾಡಬೇಕಾಗಿದೆ.

Best Mobiles in India

English summary
State-run telecom firm BSNL on Thursday started corporate e-mail service for Re. 1 per day in partnership with Jaipur-based firm Data Infosys. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X