BSNL ಕರೆ ದರ :10 ಪೈಸೆಗೆ 1 ನಿಮಿಷ ಮಾತನಾಡಿ

Written By:

ಬಿಎಸ್‌ಎನ್‌ಎಲ್‌ ಮೊಬೈಲ್‌ ನೆಟ್‌ವರ್ಕ್‌ ಆಯ್ಕೆಮಾಡಿಕೊಳ್ಳವ ಹೊಸ ಗ್ರಾಹಕರಿಗೆ ಈಗ ಬಂಪರ್‌ ಕೊಡುಗೆ ಇದೆ. ಹೌದು, ಬಿಎಸ್ಎನ್‌ಎಲ್‌ ಟೆಲಿಕಾಂ ಆಪರೇಟರ್‌ ಈಗ ತನ್ನ ಹೊಸ ಗ್ರಾಹಕರಿಗೆ ಅತಿ ಕಡಿಮೆ ಬೆಲೆಯಲ್ಲಿ ಕರೆದರಗಳ ಆಫರ್‌ ನೀಡಿದ್ದು, ಶೇಕಡ 80 ರಷ್ಟು ಕರೆ ದರವನ್ನು ಕಡಿಮೆ ಮಾಡಿದೆ. ಈ ಬಗ್ಗೆ ಬಿಎಸ್‌ಎನ್‌ಎಲ್‌ನ ವಿಶೇಷ ಪ್ಯಾಕ್‌ಗಳು ಮತ್ತು ಕರೆದರ ಕಡಿತದ ಹೊಸ ಮಾಹಿತಿಗಾಗಿ ಈ ಲೇಖನದ ಸ್ಲೈಡರ್‌ಗಳನ್ನು ಓದಿ.

ಓದಿರಿ: ಬಿಎಸ್‌ಎನ್‌ಎಲ್: ಯಾವುದೇ ಹೆಚ್ಚಿನ ದರವಿಲ್ಲದೆ ವೇಗದ ಇಂಟರ್ನೆಟ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಕರೆದರ ಕಡಿತ

ಬಿಎಸ್‌ಎನ್‌ಎಲ್‌ ಶೇಕಡ 80 ದರ ಕಡಿತ

ಸರ್ಕಾರಿ ಸ್ವಾಮ್ಯದ ಟೆಲಿಕಾಮ್‌ ಸಂಸ್ಥೆ ಬಿಎಸ್‌ಎನ್‌ಎಲ್‌ ತನ್ನ ಹೊಸ ಗ್ರಾಹಕರಿಗೆ ಕರೆದರದಲ್ಲಿ ಶೇಕಡ 80 ರಷ್ಟು ದರ ಕಡಿತಗೊಳಿಸಿದೆ.

ಹೊಸ ಗ್ರಾಹಕರಿಗೆ ಬಂಪರ್‌ ಕೊಡುಗೆ

ಬಿಎಸ್‌ಎನ್‌ಎಲ್‌ ಶೇಕಡ 80 ದರ ಕಡಿತ

ಬಿಎಸ್‌ಎನ್‌ಎಲ್‌ ಹೊಸ ಗ್ರಾಹಕರಿಗೆ ಶೇಕಡ 80 ಕರೆದರ ಕಡಿಮೆಯಾಗಲಿದ್ದು, ಈ ಸೌಲಭ್ಯ ಹೊಸ ಗ್ರಾಹಕರಿಗೆ ಮೊದಲ ಎರಡು ತಿಂಗಳು ಲಭ್ಯವಾಗಲಿದೆ.

ಸೆಕೆಂಡ್ ಹಾಗೂ ನಿಮಿಷಗಳು

ಬಿಎಸ್‌ಎನ್‌ಎಲ್‌ ಶೇಕಡ 80 ದರ ಕಡಿತ

ಗ್ರಾಹಕರಿಗೆ ಕರೆ ದರ ಕಡಿಮೆಯಲ್ಲಿ ಪ್ರತಿ ಸೆಕೆಂಡ್ ಮತ್ತು ಪ್ರತಿ ನಿಮಿಷಗಳಿಗೂ ಕಡಿಮೆ ಕರೆ ದರ ಸೇವೆ ಸಿಗಲಿದೆ.

ಪ್ಲಾನ್‌ ವೋಚರ್‌

ಬಿಎಸ್‌ಎನ್‌ಎಲ್‌ ಶೇಕಡ 80 ದರ ಕಡಿತ

ಬಿಎಸ್‌ಎನ್‌ಎಲ್‌ ಹೊಸ ಗ್ರಾಹಕರು ಸೆಕೆಂಡ್‌ ಆಧಾರಿತ ಪ್ಲಾನಿಂಗ್‌ ವೋಚರ್‌ ಅನ್ನು 36 ರೂಪಾಯಿ ನೀಡಿ ಪಡೆಯಬಹುದಾಗಿದೆ.

37 ರೂಪಾಯಿಗಳ ಪ್ಲಾನಿಂಗ್ ವೋಚರ್

ಬಿಎಸ್‌ಎನ್‌ಎಲ್‌ ಶೇಕಡ 80 ದರ ಕಡಿತ

ಈ ವೋಚರ್ ಪ್ಲಾನಿಂಗ್ ಪಡೆದರೆ ಒಂದು ನಿಮಿಷಕ್ಕೆ ಕರೆದರ ಕೇವಲ 10 ಪೈಸೆ ವೆಚ್ಚವಾಗುವುದು. ಆದರೆ ಇತರೆ ನೆಟ್‌ವರ್ಕ್‌ಗಳಿಗೆ ನಿಮಿಷಕ್ಕೆ 30 ಪೈಸೆ ವೆಚ್ಚವಾಗುವುದು.

ಕರೆದರ

ಬಿಎಸ್‌ಎನ್‌ಎಲ್‌ ಶೇಕಡ 80 ದರ ಕಡಿತ

ಹೊಸ ಗ್ರಾಹಕರು 36 ರೂಪಾಯಿ ರಿಚಾರ್ಜ್‌ ಮಾಡಿಸಿದ ನಂತರ ಗ್ರಾಹಕ ಬಿಎಸ್‌ಎನ್‌ಎಲ್‌ ನೆಟ್‌ವರ್ಕ್‌ ಬಳಕೆದಾರರಿಗೆ ಕರೆ ಮಾಡಿದಲ್ಲಿ ಸ್ಥಳೀಯ ಕರೆ ಮತ್ತು ಎಸ್‌ಟಿಡಿ ಕರೆಗಳಿಗೆ 3 ಸೆಕೆಂಡ್‌ಗಳಿಗೆ ಕೇವಲ 1 ಪೈಸೆ ವೆಚ್ಚವಾಗುವುದು, ಹಾಗೂ ಇತರ ನೆಟ್‌ವರ್ಕ್‌ಗಳಿಗೆ ಕರೆ ಮಾಡಿದಲ್ಲಿ 3 ಸೆಕೆಂಡ್‌ಗಳಿಗೆ 2 ಪೈಸೆ ಕರೆದರ ತಗುಲುವುದು.

ಬಿಎಸ್‌ಎನ್‌ಎಲ್‌ ಟೆಲಿಕಾಂ ಕಂಪನಿ

ಬಿಎಸ್‌ಎನ್‌ಎಲ್‌ ಶೇಕಡ 80 ದರ ಕಡಿತ

ಹೊಸ ಗ್ರಾಹಕರನ್ನು ವೇಗವಾಗಿ ಹೆಚ್ಚಿಸಲು ಈ ನಿರ್ಧಾರವನ್ನು ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಟೆಲಿಕಾಂ ಕಂಪನಿ ಕರೆದರ ಕಡಿತ ಯೋಜನೆಯನ್ನು ರೂಪಿಸಿದೆ.

ಕಂಪನಿ ಅಧ್ಯಕ್ಷ ಅನುಪಮ್ ಶ್ರಿವತ್ಸವ

ಬಿಎಸ್‌ಎನ್‌ಎಲ್‌ ಶೇಕಡ 80 ದರ ಕಡಿತ

ಬಿಎಸ್‌ಎನ್‌ಎಲ್‌ ಕಂಪನಿಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ಧೇಶಕ ಅನುಪಮ್ ಶ್ರಿವತ್ಸವ ರವರು ಕಂಪನಿಯು ಗ್ರಾಹಕರಿಗೆ ನೀಡುತ್ತಿರುವ ಮೂಲ ಸೌಕರ್ಯದ ಬಗ್ಗೆ ಪರಿಷ್ಕರಿಸಿ ಹೊಸ ಗ್ರಾಹಕರಿಗೆ ಮೇಲಿನ ಸೌಲಭ್ಯ ನೀಡುತ್ತಿರುವ ಬಗ್ಗೆ ಸುದ್ದಿ ಮೂಲಗಳಿಗೆ ತಿಳಿಸಿದ್ದಾರೆ.

ಮೊಬೈಲ್‌ ನಂಬರ್ ಪೋರ್ಟಬಲಿಟಿ

ಬಿಎಸ್‌ಎನ್‌ಎಲ್‌ ಶೇಕಡ 80 ದರ ಕಡಿತ

ಬಿಎಸ್‌ಎನ್‌ಎಲ್‌ಗೆ ಇತರ ಕಂಪನಿಯಿಂದ 1,57,564 ಜನರು ಮೊಬೈಲ್‌ ನಂಬರ್ ಪೋರ್ಟಬಲಿಟಿ ಮೂಲಕ ಸೇರಿಸಿಕೊಂಡಿದ್ದಾರೆ. ಆದರೆ ಕಂಪನಿಯಿಂದ ಜುಲೈನಿಂದ ನವೆಂಬರ್‌ ತಿಂಗಳವರೆಗೆ 1,24,158 ಜನರು ಕಂಪನಿ ಬಿಟ್ಟಿದ್ದಾರೆ ಎನ್ನಾಲಾಗಿದೆ.

ಟಾಪ್‌ 5ನೇ ಸ್ಥಾನ

ಬಿಎಸ್‌ಎನ್‌ಎಲ್‌ ಶೇಕಡ 80 ದರ ಕಡಿತ

ಸೆಪ್ಟೆಂಬರ್‌ ಅಂತ್ಯದ ವೇಳೆಗೆ ಬಿಎಸ್‌ಎನ್‌ಎಲ್‌ ಕಂಪನಿಯು 79.6 ಮಿಲಿಯನ್‌ ಗ್ರಾಹಕರನ್ನು ಒಳಗೊಂಡಿದ್ದು, ಹೊಸ ಗ್ರಾಹಕರನ್ನು ಸೆಳೆಯುವಲ್ಲಿ ಟಾಪ್‌ 5ನೇ ಸ್ಥಾನದಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
BSNL has slashed mobile rates by up to 80 per cent for the first two months under a scheme for new customers.The call rates have been reduced both per minute and per second billing plan.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot