ಬಿಎಸ್‌ಎನ್‌ಎಲ್: ಯಾವುದೇ ಹೆಚ್ಚಿನ ದರವಿಲ್ಲದೆ ವೇಗದ ಇಂಟರ್ನೆಟ್

By Shwetha
|

ರಾಜ್ಯದ ಆಡಳಿತದಲ್ಲಿರುವ ಟೆಲಿಕಾಮ್ ಸಂಸ್ಥೆ ಬಿಎಸ್‌ಎನ್‌ಎಲ್ ಯಾವುದೇ ದರವಿಲ್ಲದೆ ಪ್ರತಿ ಸೆಕುಂಡಿಗೆ ಕನಿಷ್ಟ ಬ್ರಾಡ್‌ಬ್ಯಾಂಡ್ ವೇಗದ 2 ಮೆಗಾ ಬೈಟ್ ಬ್ರ್ಯಾಡ್‌ಬ್ಯಾಂಡ್ ಅನ್ನು ಅಕ್ಟೋಬರ್ 1 ರಿಂದ ಬಳಕೆದಾರರಿಗೆ ಒದಗಿಸಲಿದೆ.

ಓದಿರಿ: ಟೆಲಿಕಾಮ್ ಸಂಸ್ಥೆ ಬಿಎಸ್‌ಎನ್ಎಲ್ ಸಂಕಷ್ಟದಲ್ಲಿ!!!

ಪ್ರಸ್ತುತ ಕಂಪೆನಿ ಕನಿಷ್ಟ ವೇಗ 512ಕೆಬಿಪಿಎಸ್ ಅನ್ನು ಒದಗಿಸುತ್ತಿದ್ದು ಈ ಸಂಚಲನೆ ಅದರ ಪ್ರಯತ್ನಕ್ಕೆ ಒಂದು ಮೈಲಿಗಲ್ಲಾಗಿದೆ. ಮಾರುಕಟ್ಟೆಯಲ್ಲಿ ತನಗಿರುವ ಕಠಿಣ ಸ್ಪರ್ಧೆಗೆ ಸಡ್ಡು ಹೊಡೆದು ನಿಂತಿದ್ದು ಹೊಸ ಹೊಸ ಪ್ರಯೋಗಗಳನ್ನು ಕಾರ್ಯರೂಪಕ್ಕೆ ತರುತ್ತಿದೆ ಮತ್ತು ಬಳಕೆದಾರರನ್ನು ತನ್ನತ್ತ ಸೆಳೆಯುವ ಪ್ರಯತ್ನದಲ್ಲಿದೆ.

ಖಾಸಗಿ ಆಪರೇಟರ್‌

ಖಾಸಗಿ ಆಪರೇಟರ್‌

ಗ್ರಾಹಕರನ್ನು ಹಿಂದಕ್ಕೆ ಕರೆತರುವ ತನ್ನ ಪ್ರಯತ್ನದಲ್ಲಿ ಬಿಎಸ್‌ಎನ್‌ಎಲ್ ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದು ತನ್ನ ಮೊಬೈಲ್ ಮತ್ತು ಲ್ಯಾಂಡ್‌ಲೈನ್ ಸೇವೆಗಳನ್ನು ಖಾಸಗಿ ಆಪರೇಟರ್‌ಗಳಿಂದಾಗಿ ಕಳೆದುಕೊಳ್ಳುತ್ತಿದೆ.

ಕಳೆದುಕೊಂಡಿದೆ

ಕಳೆದುಕೊಂಡಿದೆ

ಮಾರ್ಚ್ 2014 ಮತ್ತು ಮಾರ್ಚ್ 2015 ರಲ್ಲಿ ಕಂಪೆನಿ 1.78 ಕೋಟಿ ವೈರ್‌ಲೆಸ್ ಮತ್ತು 20 ಲಕ್ಷ ವೈರ್‌ಲೈನ್ ಚಂದಾದಾರರನ್ನು ಕಳೆದುಕೊಂಡಿದೆ.

ನಷ್ಟ

ನಷ್ಟ

ಇನ್ನು ಇದರಿಂದ ಸಂಸ್ಥೆಗಾದ ನಷ್ಟ ರೂ 7.600 ಕೋಟಿಯಾಗಿದೆ.

ಕಠಿಣ ಪೈಪೋಟಿ

ಕಠಿಣ ಪೈಪೋಟಿ

ಇನ್ನು ಸಂಸ್ಥೆಗೆ ಕಠಿಣ ಪೈಪೋಟಿಯನ್ನು ನೀಡುವ ಸಲುವಾಗಿ ಖಾಸಗಿ ಸಂಸ್ಥೆಗಳು ಕೂಡ ಬಿಎಸ್‌ಎನ್‌ಎಲ್ ಯೋಜನೆಯಾದ ಯಾವುದೇ ಹೆಚ್ಚುವರಿ ದರವಿಲ್ಲದೆ ಹೆಚ್ಚು ಬ್ರಾಡ್‌ಬ್ಯಾಂಡ್ ವೇಗ ಒದಗಿಸುವ ಸೇವೆಯನ್ನು ಅನುಸರಿಸುವ ಸಾಧ್ಯತೆ ಕೂಡ ಇದೆ.

512 ಕೆಬಿಪಿಎಸ್

512 ಕೆಬಿಪಿಎಸ್

ಸೆಕ್ಟರಲ್ ನಿಯಂತ್ರಕ ಟೆಲಿಕಾಮ್ ರೆಗ್ಯುಲೇಟರಿ ಆಥಾರಿಟಿ ಆಫ್ ಇಂಡಿಯಾ ಪ್ರಸ್ತುತವಿರುವ ಬ್ರಾಡ್‌ಬ್ಯಾಂಡ್ ವೇಗ 512 ಕೆಬಿಪಿಎಸ್ ಅನ್ನು ಸದ್ಯದಲ್ಲೇ ಪುನರ್ ಸ್ಥಾಪಿಸಲಿದೆ.

ಭದ್ರವಾಗಿ ಮಾರುಕಟ್ಟೆಯಲ್ಲಿ ನೆಲೆಯೂರಲಿದೆ

ಭದ್ರವಾಗಿ ಮಾರುಕಟ್ಟೆಯಲ್ಲಿ ನೆಲೆಯೂರಲಿದೆ

ಡಿಜಿಟಲ್ ಇಂಡಿಯಾ ಆರಂಭಕ್ಕೆ ನೆರವಾಗುವ ಈ ಯೋಜನೆಯಿಂದ ಬಿಎಸ್ಎನ್‌ಎಲ್ ಇನ್ನಷ್ಟು ಭದ್ರವಾಗಿ ಮಾರುಕಟ್ಟೆಯಲ್ಲಿ ನೆಲೆಯೂರಲಿದೆ ಎಂದು ಸ್ಕೀಮ್ ಅನ್ನು ಉದ್ಘಾಟಿಸಿರುವ ಟೆಲಿಕಾಮ್ ಸಚಿವರಾದ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.

ನಾಲ್ಕು ಬಾರಿ ಇಂಟರ್ನೆಟ್ ವೇಗ

ನಾಲ್ಕು ಬಾರಿ ಇಂಟರ್ನೆಟ್ ವೇಗ

ನಾವು ನಾಲ್ಕು ಬಾರಿ ಇಂಟರ್ನೆಟ್ ವೇಗವನ್ನು ಹೆಚ್ಚಿಸಿದ್ದೇವೆ ಮತ್ತು ಈ ಯೋಜನೆಯು ಗ್ರಾಹಕರಿಗೆ ಅಕ್ಟೋಬರ್ 1 ರಿಂದ ಲಭ್ಯವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಪುನಶ್ಚೇತನ ಹಂತ

ಪುನಶ್ಚೇತನ ಹಂತ

ಇನ್ನು ಕಂಪೆನಿ ಪುನಶ್ಚೇತನ ಹಂತದಲ್ಲಿದ್ದು ಪ್ರತೀ ತಿಂಗಳ 7-8 ಲಕ್ಷ ಚಂದಾದಾರರಿಗಿಂತಲೂ ಕೆಲವೇ ತಿಂಗಳಲ್ಲಿ ಈ ಸಂಖ್ಯೆ 15 ಲಕ್ಷಕ್ಕೆ ಏರಿದೆ ಎಂದು ತಿಳಿಸಿದೆ.

Best Mobiles in India

English summary
BSNL, the state-run telecom firm, is all set to take on competition, by offering a minimum broadband speed of 2 mega bit per second (Mbps) from October 1 onwards, at no extra cost.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X