BSNLನಿಂದ ಹೊಸ STV-1345ರೂ. ಪ್ಲ್ಯಾನ್!.ಒಂದು ವರ್ಷ ವ್ಯಾಲಿಡಿಟಿ!
ಭಾರತ ಸಂಚಾರ ನಿಗಮ ಲಿಮಿಟೆಡ್ (BSNL) ಸಂಸ್ಥೆಯು ಟೆಲಿಕಾಂ ಕ್ಷೇತ್ರದಲ್ಲಿ ತನ್ನ ಜನಪ್ರಿಯತೆ ಉಳಿಸಿಕೊಳ್ಳಲು ಹಲವು ಸ್ಫರ್ಧಾತ್ಮಕ ಪ್ಲ್ಯಾನ್‌ಗಳನ್ನು ಈಗಾಗಲೇ ಬಿಡುಗಡೆ ಮಾಡಿದ್ದು, ಇತ್ತೀಚಿಗಷ್ಟೆ 24 ದಿನಗಳ ವ್ಯಾಲಿಡಿಟಿಯ 'ಅಭಿನಂದನ 151'ರೂ.ಗಳ ಯೋಜನೆಯನ್ನು ಪರಿಚಯಿಸಿದೆ. ಈ ದಿಸೆಯಲ್ಲಿ ಮುಂದುವರೆದಿರುವ ಸಂಸ್ಥೆಯು ಈಗ ದೀರ್ಘಾವಧಿಯ ಪ್ಲ್ಯಾನ್ ಮೂಲಕ ಗ್ರಾಹಕರನ್ನು ಸೆಳೆಯಲು ಒಂದು ವಿಶೇಷ ರೀಚಾರ್ಜ್ ಯೋಜನೆಯನ್ನು ರಿಲೀಸ್ ಮಾಡಿದೆ.

ಹೌದು, ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ (BSNL) ಸಂಸ್ಥೆಯು ಹೊಸದಾಗಿ 1345ರೂ.ಗಳ ಎಸ್‌ಟಿವಿ(ಸ್ಪೆಷಲ್ ಟಾರಿಫ್ ವೋಚರ್) ಪ್ರೀಪೇಡ್ ಪ್ಲ್ಯಾನ್ ಅನ್ನು ಗ್ರಾಹಕರಿಗೆ ಪರಿಚಯಿಸಿದೆ. ಈ ಯೋಜನೆಯು ಒಂದು ವರ್ಷದ (365 ಡೇಸ್ಸ್) ವ್ಯಾಲಿಡಿಟಿಯನ್ನು ಒಳಗೊಂಡಿದ್ದು, ಪ್ರತಿ ದಿನ 1.5GB ಇಂಟರ್ನೆಟ್ ಪ್ರಯೋಜನವು ದೊರೆಯಲಿದೆ. ಇದರೊಂದಿಗೆ ಹೆಚ್ಚುವರಿಯಾಗಿ 10GB ಡೇಟಾ ಸಹ ಗ್ರಾಹಕರಿಗೆ ಲಭ್ಯವಾಗಲಿದೆ.

ಬಿಎಸ್‌ಎನ್‌ಎಲ್ ಸಂಸ್ಥೆಯ ಈ ಎಸ್‌ಟಿವಿ ಪ್ಲ್ಯಾನ್ ಹೈಯರ್ ಎಂಡ್ ಮಾದರಿಯಲ್ಲಿದ್ದು, 1345ರೂ.ಗಳ ರೀಚಾರ್ಜ್ ಮಾಡಿಸಿಕೊಳ್ಳುವ ಗ್ರಾಹಕರು ಒಂದು ವರ್ಷದ ಅವಧಿಯ ವ್ಯಾಲಿಡಿಟಿ ಪಡೆಯಲಿದ್ದಾರೆ. ಈ ಯೋಜನೆಯಲ್ಲಿ ಪ್ರತಿದಿನ 5GB ಡೇಟಾ ಲಭ್ಯವಾಗಲಿದ್ದು, ಹೆಚ್ಚುವರಿಯಾಗಿ ವಾರ್ಷಿಕ 100GB ಡೇಟಾವನ್ನು ನೀಡಲಾಗಿದೆ. ಆದರೆ ಯಾವುದೇ ಕರೆಗಳು ಮತ್ತು ಎಸ್‌ಎಮ್‌ಎಸ್‌ಗಳು ಇರುವುದಿಲ್ಲ.

ಎಸ್‌ಟಿವಿ 1345ರೂ.ಗಳ ಈ ಪ್ಲ್ಯಾನ್ ಇದೇ ಸೆಪ್ಟಂಬರ್ 9ರ ವರೆಗೂ ಗ್ರಾಹಕರಿಗೆ ಲಭ್ಯವಿರಲಿದ್ದು, ಸದ್ಯ ಈ ರೀಚಾರ್ಜ್ ಪ್ಲ್ಯಾನ್ ಕೊಡುಗೆಯು ಕೇರಳದ ಬಿಎಸ್‌ಎನ್‌ಎಲ್ ಪ್ರೀಪೇಡ್ ಗ್ರಾಹಕರಿಗೆ ದೊರೆಯುತ್ತಿದೆ. ಈ ಮೂಲಕ ಬಿಎಸ್‌ಎನ್‌ಎಲ್ ಸಂಸ್ಥೆಯು ಇಂಟರ್ನೆಟ್ ಪ್ರಿಯ ಗ್ರಾಹಕರನ್ನು ಮತ್ತು ಹೆಚ್ಚು ವ್ಯಾಲಿಡಿಟಿಯನ್ನು ಬಯಸುವ ಬಳಕೆದಾರರನ್ನು ಸಮಾಧಾನ ಪಡಿಸಲು ಮುಂದಾಗಿದೆ.
ಇತ್ತೀಚಿಗಷ್ಟೆ ಹಲವು ಬೆಸ್ಟ್ ಆಫರ್‌ಗಳನ್ನು ನೀಡಿದ್ದು, ಅವುಗಳಲ್ಲಿ ಅಭಿನಂದನ 151ರೂ.ಗಳ ಪ್ಲ್ಯಾನ್ ಹೈಲೈಟ್ ಆಗಿದೆ. ಈ ಯೋಜನೆಯು 24ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಪ್ರತಿದಿನ ಉಚಿತ ಇಂಟರ್ನೆಟ್ ಮತ್ತು ಎಸ್‌ಎಮ್‌ಎಸ್ ಸೇವೆಗಳನ್ನು ನೀಡಿದೆ. ಹಾಗೆಯೇ 749ರೂ.ಗಳಿಗೆ ಸೂಪರ್ ಸ್ಟಾರ್ 300 ಬ್ರಾಡ್‌ಬ್ಯಾಂಡ್ ಸೇವೆಯನ್ನು ಪರಿಚಯಿಸಿ ಹೆಚ್ಚು ಬಳಕೆದಾರರನ್ನು ಆಕರ್ಷಿಸುತ್ತಿದೆ.


Click it and Unblock the Notifications