ಬಿಎಸ್‌ಎನ್‌ಎಲ್ 499ರೂ. ಭಾರತ ಫೈಬರ್ ಬ್ರಾಡ್‌ಬ್ಯಾಂಡ್ ಪ್ಲ್ಯಾನ್ ಮತ್ತೆ ಲಭ್ಯ!
ಬಿಎಸ್‌ಎನ್‌ಎಲ್ ಟೆಲಿಕಾಂ ಸಂಸ್ಥೆಯು ಇತ್ತೀಚಿನ ದಿನಗಳಲ್ಲಿ ಅತ್ಯುತ್ತಮ ಬ್ರಾಡ್‌ಬ್ಯಾಂಡ್ ಪ್ಲ್ಯಾನ್‌ಗಳನ್ನು ಪರಿಚಯಿಸಿ ಗ್ರಾಹಕರಿಂದ ಸೈ ಎನಿಸಿಕೊಂಡಿದೆ. ಹಾಗೆಯೇ ಬಿಎಸ್‌ಎನ್‌ಎಲ್ ಫೆಬ್ರುವರಿಯಲ್ಲಿ ಸೀಮಿತ ಅವಧಿಗೆ 499ರೂ.ಬೆಲೆಗೆ ಭಾರತ್ ಫೈಬರ್ ಬ್ರಾಡ್‌ಬ್ಯಾಂಡ್ ಪ್ಲ್ಯಾನ್‌ವೊಂದನ್ನು ಬಿಡುಗಡೆ ಮಾಡಿ, ಖಾಸಗಿ ಬ್ರಾಡ್‌ಬ್ಯಾಂಡ್ ಸಂಸ್ಥೆಗಳಿಗೆ ಶಾಕ್ ನೀಡಿತ್ತು. ಆದ್ರೆ ಇದೀಗ ಈ ಸೀಮಿತ ಅವಧಿಯ ಯೋಜನೆಯನ್ನು ಮುಂದುವರೆಸುವುದಾಗಿ ಸಂಸ್ಥೆಯು ಹೇಳಿದೆ.

ಹೌದು, ಬಿಎಸ್‌ಎನ್‌ಎಲ್ ಸಂಸ್ಥೆ 499ರೂ.ಬೆಲೆಗೆ ಭಾರತ್ ಫೈಬರ್ ಬ್ರಾಡ್‌ಬ್ಯಾಂಡ್ ಪ್ಲ್ಯಾನ್ ಅನ್ನು ಜೂನ್ 29, 2020ರ ವರೆಗೂ ಗ್ರಾಹಕರಿಗೆ ಲಭ್ಯವಾಗಲಿದೆ ಎಂದು ಹೇಳಿದೆ. ಈ ವರ್ಷ ಫೆಬ್ರುವರಿಯಲ್ಲಿ ಲಾಂಚ್ ಆಗಿದ್ದ 499ರೂ. ಬ್ರಾಡ್‌ಬ್ಯಾಂಡ್ ಪ್ಲ್ಯಾನ್ ಸೀಮಿತ ಅವಧಿಯ ಪ್ಲ್ಯಾನ್ ಆಗಿದ್ದು, ಅದರ ವಾಯ್ದೆಯು ಮಾರ್ಚ್ 31, 2020ರ ವರೆಗೆ ಮಾತ್ರ ಇತ್ತು. ಆದರೆ ಲಾಕ್‌ಡೌನ್ ಅವಧಿಯಲ್ಲಿ ಚಂದಾದಾರರಿಗೆ ಅನುಕೂಲವಾಗಲೆಂದು ಪ್ಲ್ಯಾನ್ ಲಭ್ಯತೆಯನ್ನು ವಿಸ್ತರಿಸಿದೆ.

ಬ್ರಾಡ್‌ಬ್ಯಾಂಡ್ ಪ್ಲ್ಯಾನ್ ಪ್ರಯೋಜನಗಳು
ಬಿಎಸ್‌ಎನ್‌ಎಲ್ 499ರೂ.ಗಳ ಭಾರತ ಫೈಬರ್ ಪ್ಲ್ಯಾನ್ ಒಂದು ಅಗ್ಗದ ಬ್ರಾಡ್‌ಬ್ಯಾಂಡ್ ಪ್ಲ್ಯಾನ್ ಆಗಿದೆ. ಚಂದಾದಾರರಿಗೆ ಈ ಪ್ಲ್ಯಾನ್‌ನಲ್ಲಿ ತಿಂಗಳಿಗೆ 100GB ಡೇಟಾ ಸೌಲಭ್ಯವು FUP ಮಿತಿ ಇರುತ್ತದೆ. 20 Mbps ವೇಗದಲ್ಲಿ ಇಂಟರ್ನೆಟ್ ದೊರೆಯುತ್ತದೆ. ಇದರೊಂದಿಗೆ ಅನಿಯಮಿತ ವಾಯಿಸ್ ಕರೆಗಳ ಪ್ರಯೋಜನವು ಲಭ್ಯವಿದೆ. ನಿಗದಿತ ಡೇಟಾ ಮಿತಿ ಮುಗಿದ ಬಳಿಕ 2 Mbps ವೇಗದಲ್ಲಿ ಇಂಟರ್ನೆಟ್ ಮುಂದುವರೆಯುತ್ತದೆ.

ಪ್ಲ್ಯಾನ್ ಲಭ್ಯತೆ ಮತ್ತು ರೀಚಾರ್ಜ್
ಅಂಡಮಾನ್ ಮತ್ತು ನಿಕೋಬಾರ್ ಪ್ರದೇಶಗಳನ್ನು ಹೊರತುಪಡಿಸಿ ದೇಶದ ಎಲ್ಲಾ ಟೆಲಿಕಾಂ ಸರ್ಕಲ್‌ಗಳಲ್ಲಿಯೂ ಬಿಎಸ್‌ಎನ್‌ಎಲ್ 499ರೂ.ಗಳ ಭಾರತ ಫೈಬರ್ ಪ್ಲ್ಯಾನ್ ಲಭ್ಯವಿರುತ್ತದೆ. ಈ ಪ್ಲ್ಯಾನ್ ತಿಂಗಳ ರೀಚಾರ್ಜ್‌ಗೆ ಮಾತ್ರ ಲಭ್ಯ ಇರುತ್ತದೆ. ಒಮ್ಮೆಲೆ ವಾರ್ಷಿಕ ಶುಲ್ಕ ರೀಚಾರ್ಜ್ ಮಾಡುವ ಸೌಲಭ್ಯವನ್ನು ಪಡೆದಿಲ್ಲ. ಹಾಗೆಯೇ ಬಿಎಸ್‌ಎನ್‌ಎಲ್‌ನ ಇತರೆ ಎರಡು ಅಗ್ಗದ ಬ್ರಾಡ್‌ಬ್ಯಾಂಡ್ ಪ್ಲ್ಯಾನ್‌ಗಳ ಬಗ್ಗೆಯು ತಿಳಿಸಲಾಗಿದೆ. ಮುಂದೆ ಓದಿರಿ.

ಬಿಎಸ್‌ಎನ್‌ಎಲ್-777ರೂ.ಪ್ಲ್ಯಾನ್
ಬಿಎಸ್‌ಎನ್‌ಎಲ್ ಸಂಸ್ಥೆಯ ಈ 777ರೂ.ಪ್ಲ್ಯಾನ್ ಒಂದು ತಿಂಗಳಿನಲ್ಲಿ 500GB ಡೇಟಾ ಸಿಗಲಿದೆ. ಡೇಟಾ ವೇಗದ ಮಿತಿಯು 50 Mbps ಸಾಮರ್ಥ್ಯದಲ್ಲಿರಲಿದ್ದು, ತಿಂಗಳ ನಿಗದಿತ ಡೇಟಾ ಬಳಕೆ ಮುಗಿದ ಬಳಿಕ 2Mbps ವೇಗದಲ್ಲಿ ಡೇಟಾ ಸೌಲಭ್ಯ ಮುಂದವರೆಯಲಿದೆ. ಈ ಪ್ಲ್ಯಾನಿನಲ್ಲಿಯೂ ಸಹ ಹೆಚ್ಚುವರಿಯಾಗಿ ಒಂದು ವರ್ಷದ ಅಮೆಜಾನ್ ಪ್ರೈಮ್ ಸದಸ್ಯತ್ವ ಸಹ ದೊರೆಯಲಿದೆ.

ಬಿಎಸ್‌ಎನ್‌ಎಲ್-849ರೂ.ಪ್ಲ್ಯಾನ್
ಬಿಎಸ್‌ಎನ್‌ಎಲ್‌ನ ಈ ಬ್ರಾಡ್‌ಬಾಂಡ್ ಪ್ಲ್ಯಾನಿನಲ್ಲಿ ಒಂದು ತಿಂಗಳಿಗೆ ಒಟ್ಟು 600GB ಡೇಟಾ ಮಿತಿಯನ್ನು ನೀಡಲಾಗಿದ್ದು, ಯಾವುದೇ ದೈನಂದಿನ FUP ಮಿತಿ ಇರುವುದಿಲ್ಲ. ಈ ಪ್ಲ್ಯಾನ್‌ನಲ್ಲಿ ಡೇಟಾ ವೇಗವು 50 Mbps ಸಾಮರ್ಥ್ಯದಲ್ಲಿರಲಿದ್ದು, ಇತರೆ ನೆಟವರ್ಕ್‌ಗಳಿಗೆ ಅನಿಯಮಿತ ಉಚಿತ ಕರೆಗಳ ಸೌಲಬ್ಯವನ್ನು ಪಡೆದಿದೆ. ಇದರೊಂದಿಗೆ ಒಂದು ವರ್ಷದ ಅಮೆಜಾನ್ ಪ್ರೈಮ್ ಸದಸ್ಯತ್ವ ಸಹ ದೊರೆಯಲಿದೆ.


Click it and Unblock the Notifications








