Home
ಸುದ್ದಿಜಾಲ

ಬಿಎಸ್‌ಎನ್‌ಎಲ್‌ನ 499ರೂ. ಬ್ರಾಡ್‌ಬ್ಯಾಂಡ್‌ ಪ್ಲ್ಯಾನಿನಲ್ಲಿ ಅಧಿಕ ಡೇಟಾ ಸೌಲಭ್ಯ!

ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಹಲವು ಆಕರ್ಷಕ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ಗಳನ್ನು ಒಳಗೊಂಡಿದೆ. ಲಾಕ್‌ಡೌನ್‌ ಅವಧಿಯಲ್ಲಿ ಅಧಿಕ ಡೇಟಾ ಪ್ರಯೋಜನಗಳ್ನು ಘೋಷಿಸಿತ್ತು. ಅದೇ ಹಾದಿಯಲ್ಲಿ ಬಿಎಸ್‌ಎನ್‌ಎಲ್‌ ಇದೀಗ ತನ್ನ ಗ್ರಾಹಕರಿಗೆ ಭರ್ಜರಿ ಖುಷಿ ಸುದ್ದಿ ನೀಡಿದ್ದು, ಫೆಬ್ರುವರಿಯಲ್ಲಿ ಬಿಡುಗಡೆ ಮಾಡಿದ್ದ ತನ್ನ ಜನಪ್ರಿಯ 499ರೂ. ಬ್ರಾಡ್‌ಬ್ಯಾಂಡ್‌ ಪ್ಲ್ಯಾನಿನ ಪ್ರಯೋಜನಗಳನ್ನು ಮುಂದುವರಿಸಿದೆ.

ಬಿಎಸ್‌ಎನ್‌ಎಲ್‌

ಹೌದು, ಬಿಎಸ್‌ಎನ್‌ಎಲ್‌ ಟೆಲಿಕಾಂ ತನ್ನ 499ರೂ. ಬ್ರಾಡ್‌ಬ್ಯಾಂಡ್‌ ಯೋಜನೆಯ ಲಭ್ಯತೆಯನ್ನು ಇದೇ ಸೆಪ್ಟೆಂಬರ್ 9, 2020ರ ವರೆಗೂ ವಿಸ್ತರಿಸಿದ್ದು, ಈ ಯೋಜನೆಯನ್ನು 300 GB Plan CS337 ಎಂದು ಕರೆಯಲಾಗಿದೆ. ಈ ಮೊದಲು ಇದೇ ಜೂನ್ 10ರಂದು ಈ ಯೋಜನೆಯನ್ನು ಮುಕ್ತಾಯಮಾಡುವುದಾಗಿತ್ತು. ಆದರೆ ಈ ಯೋಜನೆಯ ಲಭ್ಯತೆಯನ್ನು ವಿಸ್ತರಿಸಲಾಗಿದೆ. ಕೆಲವು ಆಯ್ದ ಟೆಲಿಕಾಂ ಸರ್ಕಲ್ ವ್ಯಾಪ್ತಿಗಳಲ್ಲಿ ಈ ಯೋಜನೆಯು ಗ್ರಾಹಕರಿಗೆ ಲಭ್ಯವಿರುತ್ತದೆ. ಬಿಎಸ್‌ಎನ್‌ಎಲ್‌ನ 499ರೂ. ಯೋಜನೆಯ ಪ್ರಯೋಜನಗಳೆನು ಮತ್ತು ಇತರೆ ಪ್ಲ್ಯಾನ್‌ಗಳ ಸೌಲಭ್ಯಗಳೆನು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಬಿಎಸ್‌ಎನ್‌ಎಲ್‌ 499ರೂ. ಪ್ಲ್ಯಾನ್

ಬಿಎಸ್‌ಎನ್‌ಎಲ್‌ 499ರೂ. ಪ್ಲ್ಯಾನ್

ಬಿಎಸ್‌ಎನ್‌ಎಲ್‌ 499ರೂ.ಗಳ ಬ್ರಾಡ್‌ಬ್ಯಾಂಡ್ ಪ್ಲ್ಯಾನ್‌ ಒಂದು ಅಗ್ಗದ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ ಆಗಿದೆ. ಚಂದಾದಾರರಿಗೆ ಈ ಪ್ಲ್ಯಾನ್‌ನಲ್ಲಿ ತಿಂಗಳಿಗೆ 300GB ಡೇಟಾ ಸೌಲಭ್ಯವು FUP ಮಿತಿ ಇರುತ್ತದೆ. 40 Mbps ವೇಗದಲ್ಲಿ ಇಂಟರ್ನೆಟ್ ದೊರೆಯುತ್ತದೆ. ಇದರೊಂದಿಗೆ ಅನಿಯಮಿತ ವಾಯಿಸ್‌ ಕರೆಗಳ ಪ್ರಯೋಜನವು ಲಭ್ಯವಿದೆ. ನಿಗದಿತ ಡೇಟಾ ಮಿತಿ ಮುಗಿದ ಬಳಿಕ 1 Mbps ವೇಗದಲ್ಲಿ ಇಂಟರ್ನೆಟ್ ಮುಂದುವರೆಯುತ್ತದೆ.

ಪ್ಲ್ಯಾನ್ ಲಭ್ಯತೆ

ಪ್ಲ್ಯಾನ್ ಲಭ್ಯತೆ

ಪ್ರಸ್ತುತ ಈ ಯೋಜನೆಯು ಕೋಲ್ಕತಾ, ಸಿಕ್ಕಿಂ ಮತ್ತು ಪಶ್ಚಿಮ ಬಂಗಾಳ ವಲಯಗಳಲ್ಲಿ ಸೇರಿದಂತೆ 9 ಟೆಲಿಕಾಂ ಸರ್ಕಲ್‌ ವ್ಯಾಪ್ತಿಗಳಲ್ಲಿ ಲಭ್ಯವಿದೆ. ಹೆಚ್ಚುವರಿಯಾಗಿ, "300 ಜಿಬಿ ಯೋಜನೆ ಸಿಎಸ್ 337" ನಲ್ಲಿರುವ ಬಳಕೆದಾರರು ಭಾರತದಾದ್ಯಂತ ಅನಿಯಮಿತ ಸ್ಥಳೀಯ ಮತ್ತು ಎಸ್‌ಟಿಡಿ ಕರೆಗಳನ್ನು ಮಾಡಬಹುದು.

ಬಿಎಸ್‌ಎನ್‌ಎಲ್‌-777ರೂ.ಪ್ಲ್ಯಾನ್

ಬಿಎಸ್‌ಎನ್‌ಎಲ್‌-777ರೂ.ಪ್ಲ್ಯಾನ್

ಬಿಎಸ್‌ಎನ್‌ಎಲ್‌ ಸಂಸ್ಥೆಯ ಈ 777ರೂ.ಪ್ಲ್ಯಾನ್‌ ಒಂದು ತಿಂಗಳಿನಲ್ಲಿ 500GB ಡೇಟಾ ಸಿಗಲಿದೆ. ಡೇಟಾ ವೇಗದ ಮಿತಿಯು 50 Mbps ಸಾಮರ್ಥ್ಯದಲ್ಲಿರಲಿದ್ದು, ತಿಂಗಳ ನಿಗದಿತ ಡೇಟಾ ಬಳಕೆ ಮುಗಿದ ಬಳಿಕ 2Mbps ವೇಗದಲ್ಲಿ ಡೇಟಾ ಸೌಲಭ್ಯ ಮುಂದವರೆಯಲಿದೆ. ಈ ಪ್ಲ್ಯಾನಿನಲ್ಲಿಯೂ ಸಹ ಹೆಚ್ಚುವರಿಯಾಗಿ ಒಂದು ವರ್ಷದ ಅಮೆಜಾನ್ ಪ್ರೈಮ್ ಸದಸ್ಯತ್ವ ಸಹ ದೊರೆಯಲಿದೆ.

ಬಿಎಸ್‌ಎನ್‌ಎಲ್‌-849ರೂ.ಪ್ಲ್ಯಾನ್

ಬಿಎಸ್‌ಎನ್‌ಎಲ್‌-849ರೂ.ಪ್ಲ್ಯಾನ್

ಬಿಎಸ್‌ಎನ್‌ಎಲ್‌ನ ಈ ಬ್ರಾಡ್‌ಬಾಂಡ್‌ ಪ್ಲ್ಯಾನಿನಲ್ಲಿ ಒಂದು ತಿಂಗಳಿಗೆ ಒಟ್ಟು 600GB ಡೇಟಾ ಮಿತಿಯನ್ನು ನೀಡಲಾಗಿದ್ದು, ಯಾವುದೇ ದೈನಂದಿನ FUP ಮಿತಿ ಇರುವುದಿಲ್ಲ. ಈ ಪ್ಲ್ಯಾನ್‌ನಲ್ಲಿ ಡೇಟಾ ವೇಗವು 50 Mbps ಸಾಮರ್ಥ್ಯದಲ್ಲಿರಲಿದ್ದು, ಇತರೆ ನೆಟವರ್ಕ್‌ಗಳಿಗೆ ಅನಿಯಮಿತ ಉಚಿತ ಕರೆಗಳ ಸೌಲಬ್ಯವನ್ನು ಪಡೆದಿದೆ.

Best Mobiles in India

English summary
BSNL has extended the 300 GB Plan CS337 to September 9 in select circles across India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+