Home
ಸುದ್ದಿಜಾಲ

ಲಾಕ್‌ಡೌನ್‌ ಎಫೆಕ್ಟ್‌: ಬಿಎಸ್‌ಎನ್‌ಎಲ್‌ ಗ್ರಾಹಕರಿಗೆ ಸಂತಸದ ಸುದ್ದಿ!

ದೇಶದಲ್ಲಿ ಮಹಾಮಾರಿ ಕೊರೊನಾ ವೈರಸ್ ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರಿ ಲಾಕ್‌ಡೌನ್ ಜಾರಿ ಮಾಡಿದೆ. ಈ ಸಂದರ್ಭದಲ್ಲಿ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಸೇರಿದಂತೆ ಖಾಸಗಿ ಟೆಲಿಕಾಂ ಸಂಸ್ಥೆಗಳು ತಮ್ಮ ಚಂದಾದಾರರಿಗೆ ಡೇಟಾ, ವ್ಯಾಲಿಡಿಟಿ ಮತ್ತು ರೀಚಾರ್ಜ್ ಅನುಕೂಲಗಳನ್ನು ಮಾಡಿಕೊಡುತ್ತಿವೆ. ಆ ಪೈಕಿ ಬಿಎಸ್‌ಎನ್‌ಎಲ್‌ ತನ್ನ ಚಂದಾದಾರಿಗೆ ಇದೀಗ ಭರ್ಜರಿ ಘೋಷಣೆಯೊಂದನ್ನು ಮಾಡಿದೆ.

ಬಿಎಸ್‌ಎನ್‌ಎಲ್‌

ಹೌದು, ಬಿಎಸ್‌ಎನ್‌ಎಲ್‌ ಈಗ ತನ್ನ 96ರೂ. ವಸಂತಂ ಗೋಲ್ಡ್‌ ಪ್ರೀಪೇಯ್ಡ್‌ ವೋಚರ್‌ ಪ್ಲ್ಯಾನಿನ ಲಭ್ಯತೆಯನ್ನು ವಿಸ್ತರಿಸಿದೆ. ಲಾಕ್‌ಡೌನ್‌ ಅವಧಿಯಲ್ಲಿ ತನ್ನ ಚಂದಾದಾರರಿಗೆ ಅನುಕೂಲವಾಗಲೆಂದು ಬಿಎಸ್‌ಎನ್‌ಎಲ್ ಈ ವೋಚರ್‌ನ ಲಭ್ಯತೆಯ ಅವಧಿಯನ್ನು ಹೆಚ್ಚು ಮಾಡಿದೆ. ಈ ವೋಚರ್‌ನಲ್ಲಿ ಒಟ್ಟು 90 ದಿನಗಳ ವ್ಯಾಲಿಡಿಟಿ ಅವಧಿ ಚಂದಾದಾರರಿಗೆ ಸಿಗಲಿದೆ. ಪ್ರತಿದಿನ ಎಸ್‌ಎಮ್‌ಎಸ್‌ ಹಾಗೂ ವಾಯಿಸ್‌ ಕರೆ ಸೌಲಭ್ಯಗಳು ಲಭ್ಯವಾಗಲಿದೆ.

96ರೂ. ವಸಂತಂ ಗೋಲ್ಡ್ ಪ್ರಿಪೇಯ್ಡ್ ಪ್ರಯೋಜನಗಳು

96ರೂ. ವಸಂತಂ ಗೋಲ್ಡ್ ಪ್ರಿಪೇಯ್ಡ್ ಪ್ರಯೋಜನಗಳು

ಬಿಎಸ್ಎನ್ಎಲ್ ತನ್ನ 96ರೂ. ವಸಂತಂ ಗೋಲ್ಡ್ ಪ್ರಿಪೇಯ್ಡ್ ವೋಚರ್‌ನಲ್ಲಿ ಒಟ್ಟು 90 ದಿನಗಳ ವ್ಯಾಲಿಡಿಟಿ ಲಭ್ಯವಾಗಲಿದ್ದು, ಪ್ರಯೋಜನಗಳ ಅವಧಿಯು 21 ದಿನಗಳಿಗೆ ಮಾತ್ರ ಇರಲಿದೆ. ಪ್ರತಿದಿನ 250 ನಿಮಿಷಗಳ ಕರೆಯ ಮಿತಿಯ ಸೌಲಭ್ಯ ಇರಲಿದ್ದು, ಹಾಗೆಯೇ ಪ್ರತಿದಿನ 100 ಎಸ್‌ಎಮ್‌ಎಸ್‌ಗಳ ಪ್ರಯೋಜನ ದೊರೆಯುತ್ತದೆ. 21 ದಿನಗಳ ಸೌಲಭ್ಯಗಳ ಅವಧಿ ಮುಗಿದ ಬಳಿಕ 90 ದಿನಗಳ ವ್ಯಾಲಿಡಿಟಿ ಅವಧಿ ಮುಗಿಯುವವರೆಗೂ ಒಳಬರುವ ಕರೆಗಳಿಗೆ ವಾಯ್ದೆ ಮುಂದುವರೆಯುತ್ತದೆ.

ವೋಚರ್‌ ಲಭ್ಯತೆ ಅವಧಿ ವಿಸ್ತರಣೆ

ವೋಚರ್‌ ಲಭ್ಯತೆ ಅವಧಿ ವಿಸ್ತರಣೆ

ಬಿಎಸ್ಎನ್ಎಲ್ 96ರೂ. ವಸಂತಂ ಗೋಲ್ಡ್ ಪ್ರಿಪೇಯ್ಡ್ ವೋಚರ್‌ ಲಭ್ಯತೆಯನ್ನು ಇದೇ ಜೂನ್ 30, 2020 ರವರೆಗೆ ವಿಸ್ತರಿಸಿದೆ. ಅಲ್ಲಿಯವರೆಗೂ ಚಂದಾದಾರರು ಈ ಕೊಡುಗೆಯ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಈ ಯೋಜನೆಯಲ್ಲಿ ದೇಶದಾದ್ಯಂತದ ಇತರೆ ವಲಯಗಳಲ್ಲಿನ ಯಾವುದೇ ನೆಟ್‌ವರ್ಕ್‌ಗೆ 250 ನಿಮಿಷಗಳ ವಾಯಿಸ್‌ ಕರೆಗಳನ್ನು ಮಾಡಬಹುದಾಗಿದೆ. ಅಂದಹಾಗೆ ಈ ಯೋಜನೆಯು ಚೆನ್ನೈ ಟೆಲಿಕಾಂ ಸರ್ಕಲ್ ವ್ಯಾಪ್ತಿಯಲ್ಲಿ ಮಾತ್ರ ಲಭ್ಯ ಇದೆ. ಹಾಗೆಯೇ ಬಿಎಸ್‌ಎನ್‌ಎಲ್‌ ಹೊಸದಾಗಿ ವಾರ್ಷಿಕ ವ್ಯಾಲಿಡಿಟಿ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ. ಅವುಗಳ ಬಗ್ಗೆ ತಿಳಿಯಲು ಮುಂದೆ ಓದಿರಿ.

ಬಿಎಸ್‌ಎನ್‌ಎಲ್‌ 693ರೂ.ಪ್ಲ್ಯಾನ್

ಬಿಎಸ್‌ಎನ್‌ಎಲ್‌ 693ರೂ.ಪ್ಲ್ಯಾನ್

ಬಿಎಸ್‌ಎನ್‌ಎಲ್‌ 693ರೂ. ಡೇಟಾ ಎಸ್‌ಟಿವಿ ಯೋಜನೆಯು ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಪ್ಲ್ಯಾನಿನಲ್ಲಿ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 300GB ಡೇಟಾ ಸೌಲಭ್ಯ ಲಭ್ಯವಾಗಲಿದೆ. ಇದು ಡೇಟಾ ಪ್ರೀಪೇಯ್ಡ್ ಯೋಜನೆ ಆಗಿರುವುದರಿಂದ ಯಾವುದೇ ವಾಯಿಸ್‌ ಕರೆ ಹಾಗೂ ಎಸ್‌ಎಮ್‌ಎಸ್‌ ಸೌಲಭ್ಯಗಳು ದೊರೆಯುವುದಿಲ್ಲ.

ಬಿಎಸ್‌ಎನ್‌ಎಲ್‌ 1,212ರೂ.ಪ್ಲ್ಯಾನ್

ಬಿಎಸ್‌ಎನ್‌ಎಲ್‌ 1,212ರೂ.ಪ್ಲ್ಯಾನ್

ಬಿಎಸ್‌ಎನ್‌ಎಲ್‌ 1,212ರೂ. ಡೇಟಾ ಎಸ್‌ಟಿವಿ ಡೇಟಾ ಯೋಜನೆಯು ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಪ್ಲ್ಯಾನಿನಲ್ಲಿ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 500GB ಡೇಟಾ ಪ್ರಯೋಜನೆ ದೊರೆಯುತ್ತದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ ಯಾವುದೇ ವಾಯಿಸ್‌ ಕರೆ ಹಾಗೂ ಎಸ್‌ಎಮ್‌ಎಸ್‌ ಸೌಲಭ್ಯಗಳು ದೊರೆಯುವುದಿಲ್ಲ. ಇದೊಂದು ಡೇಟಾ ಪ್ಲ್ಯಾನ್ ಆಗಿದೆ.

ಡೇಟಾ ಸೌಲಭ್ಯದ ಪ್ಲ್ಯಾನ್‌ಗಳು

ಡೇಟಾ ಸೌಲಭ್ಯದ ಪ್ಲ್ಯಾನ್‌ಗಳು

ಬಿಎಸ್‌ಎನ್‌ಎಲ್‌ನ 693ರೂ ಮತ್ತು 1,212ರೂ ಬೆಲೆಯ ಎರಡು ಪ್ರೀಪೇಯ್ಡ್‌ ಡೇಟಾ ಪ್ಲ್ಯಾನ್‌ಗಳು ಅಧಿಕ ಡೇಟಾ ಬಳಕೆ ಬಯಸುವ ಚಂದಾದಾರರಿಗೆ ಉತ್ತಮ ಆಯ್ಕೆ ಆಗಿದೆ. ಈ ಎರಡು ಯೋಜನೆಗಳು ಅಧಿಕ ಡೇಟಾ ಸೌಲಭ್ಯ ಹೊಂದಿದ್ದು, ವಾರ್ಷಿಕ ವ್ಯಾಲಿಡಿಟಿಯನ್ನು ಪಡೆದಿವೆ. ಸದ್ಯ ಕೊರೊನಾ ಎಫೆಕ್ಟ್‌ ನಿಂದ ಲಾಕ್‌ಡೌನ್ ಜಾರಿಯಿದ್ದು, ಮನೆಯಿಂದ ಕೆಲಸ ನಿರ್ವಹಿಸುವವರಿಗೆ ಈ ಡೇಟಾ ಪ್ಲ್ಯಾನ್ ಅನುಕೂಲ ಅನಿಸಲಿವೆ.

Best Mobiles in India

English summary
BSNL Rs 96 Vasantham Gold plan is applicable for the new connection, migration and validity extension with freebies.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+