Home
ಸುದ್ದಿಜಾಲ

ಬಿಎಸ್‌ಎನ್‌ಎಲ್‌ನ ಈ ಅಗ್ಗದ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ನಲ್ಲಿ ಈಗ ವಿಶೇಷ ಕೊಡುಗೆ!

ಬಿಎಸ್‌ಎನ್‌ಎಲ್‌ ಟೆಲಿಕಾಂ ಸಂಸ್ಥೆಯು ಇತ್ತೀಚಿನ ದಿನಗಳಲ್ಲಿ ಅತ್ಯುತ್ತಮ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ಗಳನ್ನು ಪರಿಚಯಿಸಿ ಗ್ರಾಹಕರಿಂದ ಸೈ ಎನಿಸಿಕೊಂಡಿದೆ. ಇದೀಗ ಬಿಎಸ್‌ಎನ್‌ಎಲ್‌ ತನ್ನ ಅಗ್ಗದ 449ರೂ. ಬ್ರಾಡ್‌ಬ್ಯಾಂಡ್‌ ಪ್ರಮೋಷನಲ್ ಯೋಜನೆಯಲ್ಲಿ ಮತ್ತೆ ವಿಶೇಷ ಕೊಡುಗೆಯನ್ನು ತಿಳಿಸಿದ್ದು, ವ್ಯಾಲಿಡಿಟಿ ಅವಧಿಯನ್ನು ವಿಸ್ತರಿಸಿದೆ. ಬಿಎಸ್‌ಎನ್‌ಎಲ್‌ನ ಈ ಯೋಜನೆಯು ಜಿಯೋ ಹಾಗೂ ಏರ್‌ಟೆಲ್‌ ಟೆಲಿಕಾಂ ಯೋಜನೆಗಳಿಗೆ ಪೈಪೋಟಿ ನೀಡುವಂತಿದೆ.

ಬಿಎಸ್‌ಎನ್‌ಎಲ್‌

ಹೌದು, ಬಿಎಸ್‌ಎನ್‌ಎಲ್‌ ಸಂಸ್ಥೆಯು ತನ್ನ 449ರೂ. ಬ್ರಾಡ್‌ಬ್ಯಾಂಡ್‌ ಪ್ರಮೋಷನಲ್ ಯೋಜನೆ ಅವಧಿಯನ್ನು ವಿಸ್ತರಿಸಿದೆ. ಈ ಯೋಜನೆಯು ಅತ್ಯಂತ ಜನಪ್ರಿಯ ಯೋಜನೆಗಳಲ್ಲಿ ಒಂದಾಗಿದೆ. ಆದಾಗ್ಯೂ, 6 ತಿಂಗಳ ನಂತರ ಬಳಕೆದಾರರು 599 ರೂ ಫೈಬರ್ ಬೇಸಿಕ್ ಪ್ಲಸ್ ಯೋಜನೆಗೆ ವಲಸೆ ಹೋಗಬೇಕಾಗುತ್ತದೆ. ಗ್ರಾಹಕರು ಈ ಪ್ರಮೋಷನಲ್ ಯೋಜನೆಯಿಂದ ಮುಂದಿನ ಯೋಜನೆಗೆ ರೀಚಾರ್ಜ್ ಮಾಡಿಸಲು ಜುಲೈ ವರೆಗೂ ಇದ್ದ, ಗಡವನ್ನು ಅಕ್ಟೋಬರ್ 6 ರವರೆಗೂ ಹೆಚ್ಚಿಸಿದೆ. ಹಾಗಾದರೇ ಬಿಎಸ್‌ಎನ್‌ಎಲ್‌ನ 449ರೂ. ಯೋಜನೆ ಹಾಗೂ ಇತರೆ ಜನಪ್ರಿಯ ಯೋಜನೆಗಳ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಮುಂದೆ ಓದಿರಿ.

ಬಿಎಸ್‌ಎನ್‌ಎಲ್‌ ಫೈಬರ್ ಬೇಸಿಕ್ 449ರೂ. ಪ್ಲ್ಯಾನ್

ಬಿಎಸ್‌ಎನ್‌ಎಲ್‌ ಫೈಬರ್ ಬೇಸಿಕ್ 449ರೂ. ಪ್ಲ್ಯಾನ್

ಬಿಎಸ್‌ಎನ್‌ಎಲ್‌ ಫೈಬರ್ ಬೇಸಿಕ್ 449ರೂ ಬೆಲೆ ಹೊಂದಿದ್ದು, ಯೋಜನೆ ಬಳಕೆದಾರರಿಗೆ ತಿಂಗಳಿಗೆ 3.3 ಟಿಬಿ (3,300 ಜಿಬಿ) ವರೆಗೆ 30 ಎಮ್‌ಬಿಪಿಎಸ್ ವೇಗವನ್ನು ಬ್ರೌಸ್ ಮಾಡಲು ಅನುವು ಮಾಡಿಕೊಡುತ್ತದೆ. ಎಫ್‌ಯುಪಿ ಡೇಟಾದ ಬಳಕೆಯ ನಂತರ, ಆಪರೇಟರ್ ವೇಗವನ್ನು 2 ಎಮ್‌ಬಿಪಿಎಸ್‌ಗೆ ನಿರ್ಬಂಧಿಸುತ್ತದೆ. ಭಾರತದ ಪ್ರಮುಖ ಪ್ರದೇಶಗಳಲ್ಲಿ ಈ ಯೋಜನೆಯ ಲಭ್ಯತೆ ಪಡೆದಿದೆ.

ಬಿಎಸ್‌ಎನ್‌ಎಲ್‌ ಫೈಬರ್ ವ್ಯಾಲ್ಯೂ 799ರೂ. ಪ್ಲ್ಯಾನ್

ಬಿಎಸ್‌ಎನ್‌ಎಲ್‌ ಫೈಬರ್ ವ್ಯಾಲ್ಯೂ 799ರೂ. ಪ್ಲ್ಯಾನ್

ಬಿಎಸ್‌ಎನ್‌ಎಲ್ ‘ಫೈಬರ್ ವ್ಯಾಲ್ಯೂ' ಯೋಜನೆ ಶುಲ್ಕವು ಗಾಗಿ ತಿಂಗಳಿಗೆ 799 ರೂ. ಆಗಿದೆ. ಬಳಕೆದಾರರು ಅದೇ 3.3 ಟಿಬಿ (3,300 ಜಿಬಿ) ಮಾಸಿಕ ಡೇಟಾದವರೆಗೆ 100 ಎಮ್‌ಬಿಪಿಎಸ್ ವೇಗದಲ್ಲಿ ಬ್ರೌಸ್ ಮಾಡಲು ಅನುವು ಮಾಡಿಕೊಡುವ ಯೋಜನೆ ಇದಾಗಿದೆ. ಫೈಬರ್ ಬೇಸಿಕ್ ಯೋಜನೆಯಂತೆಯೇ, ಆಪರೇಟರ್ 3.3 ಟಿಬಿ ಡೇಟಾ ಮಿತಿಯನ್ನು ತಲುಪಿದ ನಂತರ ವೇಗವನ್ನು 2 ಎಮ್‌ಬಿಪಿಎಸ್‌ಗೆ ನಿರ್ಬಂಧಿಸುತ್ತದೆ.

ಬಿಎಸ್‌ಎನ್‌ಎಲ್‌ ಫೈಬರ್ ಪ್ರೀಮಿಯಂ 999ರೂ. ಪ್ಲ್ಯಾನ್

ಬಿಎಸ್‌ಎನ್‌ಎಲ್‌ ಫೈಬರ್ ಪ್ರೀಮಿಯಂ 999ರೂ. ಪ್ಲ್ಯಾನ್

ಬಿಎಸ್‌ಎನ್‌ಎಲ್ ‘ಫೈಬರ್ ಪ್ರೀಮಿಯಂ' ಯೋಜನೆ ತಿಂಗಳ ಶುಲ್ಕ 999 ರೂ. ಆಗಿದೆ. ಫೈಬರ್ ಪ್ರೀಮಿಯಂ ಬ್ರಾಡ್‌ಬ್ಯಾಂಡ್ ಯೋಜನೆ 3.3 ಟಿಬಿ (3,300 ಜಿಬಿ) ಡೇಟಾ ಮತ್ತು 200 ಎಮ್‌ಬಿಪಿಎಸ್ ಡೌನ್‌ಲೋಡ್ ಮತ್ತು ಅಪ್‌ಲೋಡ್ ವೇಗವನ್ನು ಹೊಂದಿದೆ. ಎಫ್‌ಯುಪಿ ಡೇಟಾವನ್ನು ಸೇವಿಸಿದ ನಂತರ ವೇಗವು 2 ಎಮ್‌ಬಿಪಿಎಸ್‌ಗೆ ಇಳಿಯುತ್ತದೆ.

ಬಿಎಸ್‌ಎನ್‌ಎಲ್‌ ಫೈಬರ್ ಅಲ್ಟ್ರಾ 1,499ರೂ. ಪ್ಲ್ಯಾನ್

ಬಿಎಸ್‌ಎನ್‌ಎಲ್‌ ಫೈಬರ್ ಅಲ್ಟ್ರಾ 1,499ರೂ. ಪ್ಲ್ಯಾನ್

ಬಿಎಸ್‌ಎನ್‌ಎಲ್ ‘ಫೈಬರ್ ಅಲ್ಟ್ರಾ' ಯೋಜನೆಯ ಬೆಲೆ ತಿಂಗಳಿಗೆ 1,499 ರೂ. ಆಗಿದೆ. ಬಳಕೆದಾರರು 300 ಎಮ್‌ಬಿಪಿಎಸ್ ವರೆಗೆ ಬ್ರೌಸ್ ಮಾಡಲು ಮತ್ತು 4 ಟಿಬಿ (4,000 ಜಿಬಿ) ಡೇಟಾದವರೆಗೆ ವೇಗವನ್ನು ಅಪ್‌ಲೋಡ್ ಮಾಡಲು ಅನುವು ಮಾಡಿಕೊಡುತ್ತದೆ. ಎಫ್‌ಯುಪಿ ಡೇಟಾವನ್ನು ಸೇವಿಸಿದ ನಂತರ, ವೇಗವು ಬಳಕೆದಾರರಿಗೆ 4 ಎಮ್‌ಬಿಪಿಎಸ್‌ಗೆ ಇಳಿಯುತ್ತದೆ.

Best Mobiles in India

English summary
This deadline has been further extended till 6th October.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+