BSNLನಿಂದ ಸಿಹಿಸುದ್ದಿ: 5GB ಡೇಟಾ ಬ್ರಾಡ್‌ಬ್ಯಾಂಡ್ ಪ್ಲ್ಯಾನ್ ಅವಧಿ ವಿಸ್ತರಣೆ!
ಡೆಡ್ಲಿ ಕೊರೊನಾ ವೈರಸ್ ವಕ್ಕರಿಸಿ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದೆ. ಕೋವಿಡ್ ಸಾಂಕ್ರಾಮಿಕವನ್ನು ನಿಯಂತ್ರಿಸಲು ಸರ್ಕಾರ ಲಾಕ್‌ಡೌನ್ ಜಾರಿಮಾಡಿದೆ. ಈ ನಿಟ್ಟಿನಲ್ಲಿ ಬಹುತೇಕ ಸಂಸ್ಥೆಗಳ ಅವರ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡಲು ಸೂಚಿಸಿವೆ. ಮನೆಯಿಂದ ಕೆಲಸ ಮಾಡುವ ಉದ್ಯೋಗಿಗಳಿಗಾಗಿ ಸರಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಟೆಲಿಕಾಂ ವರ್ಕ್ ಫ್ರಂ ಹೋಮ್ ಬ್ರಾಡ್‌ಬ್ಯಾಂಡ್ ಯೋಜನೆಗಳನ್ನು ಪರಿಚಯಿಸಿತ್ತು. ಇದೀಗ ಗ್ರಾಹಕರಿಗೆ ಮತ್ತೊಂದು ಕೊಡುಗೆ ತಿಳಿಸಿದೆ.

ಹೌದು, ಬಿಎಸ್‌ಎನ್‌ಎಲ್ ಸಂಸ್ಥೆಯು ವರ್ಕ್ ಅಟ್ ಹೋಮ್ (Work@home) ಬ್ರಾಡ್‌ಬ್ಯಾಂಡ್ ಪ್ಲ್ಯಾನ್‌ಗಳ ಲಭ್ಯತೆಯ ಅವಧಿಯನ್ನು ಇದೇ ಮೇ 19, 2020ರ ವರೆಗೂ ವಿಸ್ತರಿಸಿದೆ. ಏಪ್ರಿಲ್ 14ರ ವರೆಗೆ ಲಭ್ಯವಿದ್ದ ಈ ಪ್ಲ್ಯಾನ್ ಲಾಕ್‌ಡೌನ್ ವಿಸ್ತರಣೆಯ ಹಿನ್ನಲೆಯಲ್ಲಿ ವರ್ಕ್ ಅಟ್ ಹೋಮ್ ಬ್ರಾಡ್‌ಬ್ಯಾಂಡ್ ಪ್ಲ್ಯಾನ್ ಲಭ್ಯತೆಯ ಅವಧಿಯನ್ನು ಸಹ ವಿಸ್ತರಿಸಿದೆ. ಇನ್ನು ಈ ಪ್ಲ್ಯಾನ್‌ಗಳಲ್ಲಿ ಪ್ರತಿದಿನ 5GB ಡೇಟಾ ಪ್ರಯೋಜನ ಲಭ್ಯವಿದ್ದು, 10 Mbps ವೇಗದಲ್ಲಿ ಇಂಟರ್ನೆಟ್ ಲಭ್ಯವಾಗಲಿದೆ.

ವರ್ಕ್ @ ಹೋಮ್ ಪ್ಲ್ಯಾನ್ ಮಾಹಿತಿ
ಲಾಕ್‌ಡೌನ್ ಇರುವುದರಿಂದ ಬಹುತೇಕರು ಮನೆಗಳಿಂದ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಡೇಟಾ ಬಳಕೆಯ ಬೇಡಿಕೆಯೂ ಸಹ ಎರಡು ಪಟ್ಟು ಹೆಚ್ಚಾಗಿದೆ. ಹೀಗಾಗಿ ಬಿಎಸ್‌ಎನ್‌ಎಲ್ ತನ್ನ ವರ್ಕ್ @ ಹೋಮ್ ಬ್ರಾಡ್‌ಬ್ಯಾಂಡ್ ಪ್ಲ್ಯಾನ್ ಅನ್ನು ಉಚಿತವಾಗಿ ಹೊರತಂದಿತು. ಈಗಾಗಲೇ ಬಲಕೆಯಲ್ಲಿರುವ ಗ್ರಾಹಕರು ಮಾತ್ರ ಈ ಪ್ಲ್ಯಾನ್ ಅನ್ನು ಆರಿಸಿಕೊಳ್ಳಬಹುದಾಗಿದ್ದು, ಹೊಸ ಗ್ರಾಹಕರಿಗೆ ಈ ಯೋಜನೆ ಪಡೆದುಕೊಳ್ಳಲು ಸಾಧ್ಯವಿಲ್ಲ. ಈ ಪ್ಲ್ಯಾನಿನಲ್ಲಿ ಪ್ರತಿದಿನ 5GB ಡೇಟಾ ಲಭ್ಯವಾಗಲಿದೆ.

BSNL ಲ್ಯಾಂಡ್‌ಲೈನ್ ಸಂಪರ್ಕ ಇರಬೇಕು
10MBPS ಸಾಮರ್ಥ್ಯದ ವೇಗದಲ್ಲಿ ಪ್ರತಿದಿನ 5GB ಇಂಟರ್ನೆಟ್ ಒದಗಿಸುವ ಬಿಎಸ್‌ಎನ್‌ಎಲ್‌ನ ವರ್ಕ್ @ ಹೋಮ್ ಪ್ಲ್ಯಾನ್ ನಿಗದಿತ 5GB ಡೇಟಾ ಮುಗಿದ ಬಳಿಕ 1Mbps ನಲ್ಲಿ ಇಂಟರ್ನೆಟ್ ಸೇವೆಯು ಮುಂದುವರೆಯಲಿದೆ. ಈ ಯೋಜನೆಯು ಯಾವುದೇ ಎಫ್‌ಯುಪಿ-FUP ಮಿತಿಯನ್ನು ಹೊಂದಿಲ್ಲ. ಅಂದಹಾಗೆ ಬಿಎಸ್‌ಎನ್ಎಲ್ ಲ್ಯಾಂಡ್‌ಲೈನ್ ಸಂಪರ್ಕ ಹೊಂದಿರುವ ಬಿಎಸ್‌ಎನ್‌ಎಲ್ ಚಂದಾದಾರರು ಮಾತ್ರ ಈ ಯೋಜನೆಯನ್ನು ಉಚಿತವಾಗಿ ಪಡೆಯಬಹುದು.

ವರ್ಕ್ ಫ್ರಂ ಹೋಮ್ ಪ್ಲ್ಯಾನ್ ಆಕ್ಟಿವ್ ಹೀಗೆ ಮಾಡಿ
ಬಿಎಸ್‌ಎನ್‌ಎಲ್ ವರ್ಕ್ @ ಹೋಮ್ ಬ್ರಾಡ್‌ಬ್ಯಾಂಡ್ ಯೋಜನೆ ಪಡೆಯ ಬಯಸುವ ಗ್ರಾಹಕರು ಬಿಎಸ್‌ಎನ್‌ಎಲ್ ಲ್ಯಾಂಡ್‌ಲೈನ್ ಬಳಕೆದಾರರಾಗಿರಬೇಕು. ಲ್ಯಾಂಡ್‌ಲೈನ್‌ನಿಂದ ಟೋಲ್-ಫ್ರೀ ಬಿಎಸ್ಎನ್ಎಲ್ ನಂಬರ್ - 1800-345-1504 ಅನ್ನು ಸಂಪರ್ಕಿಸಿ ಮತ್ತು ಸೇವೆ ಪಡೆಯುವ ಬಗ್ಗೆ ವಿನಂತಿಸಬಹುದಾಗಿದೆ. ಈ ಸೇವೆಗೆ ಯಾವುದೇ ಶುಲ್ಕಗಳ ಭರಿಸುವ ಅಗತ್ಯವಿಲ್ಲ ಆದರೆ ಲ್ಯಾಂಡ್‌ಲೈನ್ ಬಿಲ್ ಅನ್ನು ಮಾತ್ರ ಪಾವತಿಸಬೇಕಿರುತ್ತದೆ. ಈ ಮೂಲಕ ಬಿಎಸ್‌ಎನ್‌ಎಲ್‌ನ ಬಳಕೆಯಲ್ಲಿರುವ ತನ್ನ ಲ್ಯಾಂಡ್‌ಲೈನ್ ಬಳಕೆದಾರರನ್ನು ಬ್ರಾಡ್‌ಬ್ಯಾಂಡ್ ಬಳಕೆದಾರರನ್ನಾಗಿ ಮಾಡಲು ಪ್ರೇರೇಪಿಸುವ ಗುರಿಯನ್ನು ಹೊಂದಿದೆ. ಹಾಗೆಯೇ ಲಾಕ್‌ಡೌನ್ ಅವಧಿಯಲ್ಲಿ ಮನೆಯಿಂದ ಕೆಲಸ ಮಾಡುವ ಉದ್ಯೋಗಿಗಳಿಗೆ ನೆರವಾಗುವ ಉದ್ದೇಶ ಹೊಂದಿದೆ.


Click it and Unblock the Notifications








