ಬಿಎಸ್‌ಎನ್‌ಎಲ್‌ ಟೆಲಿಕಾಂನಿಂದ ಹೊಸ ಗ್ರಾಹಕರಿಗೆ ಭರ್ಜರಿ ಕೊಡುಗೆ!

|

ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಸಂಸ್ಥೆಗಳ ನಡುವೆ ಸ್ಪರ್ಧಾತ್ಮಕ ವಾತಾವರಣ ಇದ್ದು, ಆಕರ್ಷಕ ಯೋಜನೆಗಳ ಮೂಲಕ ಚಂದಾದಾರರ ಸಂಖ್ಯೆ ಹೆಚ್ಚಿಸಿಕೊಳ್ಳಲು ಟೆಲಿಕಾಂ ಸಂಸ್ಥೆಗಳು ಸರ್ಕಸ್ ನಡೆಸುತ್ತ ಸಾಗಿವೆ. ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಟೆಲಿಕಾಂ 4G ನೆಟ್‌ವರ್ಕ್‌ನಲ್ಲಿ ಹಿಂದೆ ಉಳಿದಿದ್ದರೂ, ಖಾಸಗಿ ಟೆಲಿಕಾಂಗಳಿಗೆ ಟಾಂಗ್ ನೀಡುವಂತಹ ಹಲವು ಪ್ರೀಪೇಯ್ಡ್‌ ಯೋಜನಗಳನ್ನು ಪರಿಚಯಿಸಿ ಗ್ರಾಹಕರ ಗಮನ ಸೆಳೆದಿದೆ. ಅದರಲ್ಲಿಯೂ ಅಗ್ಗದ ದರದಲ್ಲಿ ಫಸ್ಟ್‌ ರೀಚಾರ್ಜ್ ಆಯ್ಕೆಗಳನ್ನು ಹೊಂದಿದೆ.

ಪ್ರೀಪೇಯ್ಡ್

ಹೌದು, ಬಿಎಸ್‌ಎನ್‌ಎಲ್‌ ಈಗ ತನ್ನ ಪ್ರೀಪೇಯ್ಡ್ ಚಂದಾದಾರರಿಗಾಗಿ ಭಿನ್ನ ಫಸ್ಟ್ ರೀಚಾರ್ಜ್ (FRC) ಯೋಜನೆಯಲ್ಲಿ ಆಕರ್ಷಕ ಕೊಡುಗೆಯನ್ನು ಪರಿಚಯಿಸಿದೆ. ಖಾಸಗಿ ಟೆಲಿಕಾಂನಿಂದ ಬಿಎಸ್‌ಎನ್‌ಎಲ್‌ಗೆ ಪೋರ್ಟ್‌ ಮಾಡ ಬಯಸುವ ಗ್ರಾಹಕರಿಗೆ ಉಚಿತ ಸಿಮ್ ಲಭ್ಯ ಮಾಡಲಿದೆ. 100ರೂ. ಹಾಗೂ ಅದಕ್ಕಿಂತ ಹೆಚ್ಚಿನ ದರದ (FRC) ರೀಚಾರ್ಜ್ ಮಾಡಿಸುವ ಗ್ರಾಹಕರಿಗೆ ಈ ಕೊಡುಗೆಯು ಲಭ್ಯವಾಗಲಿದೆ.

ಬಿಎಸ್‌ಎನ್‌ಎಲ್

ಈ ಹೊಸ ಕೊಡುಗೆಯಡಿಯಲ್ಲಿ, ಬಿಎಸ್‌ಎನ್‌ಎಲ್ 4G ಸಿಮ್‌ಗೆ ಪೋರ್ಟ್ ಮಾಡಲು ಬಯಸುವ ಗ್ರಾಹಕರು ಅದನ್ನು ಸಂಪೂರ್ಣವಾಗಿ ಉಚಿತವಾಗಿ ಮಾಡಲು ಸಾಧ್ಯವಾಗುತ್ತದೆ. ಈ ಮೊದಲು ಸಿಮ್ ಪೋರ್ಟ್‌ಗಾಗಿ ಗ್ರಾಹಕರು 20 ರೂ. ಶುಲ್ಕವನ್ನು ಪಾವತಿಸಬೇಕಾಗಿತ್ತು. ಇನ್ನು ಸಿಮ್ ಪೋರ್ಟ್-ಇನ್ ಅನ್ನು ಬಿಎಸ್ಎನ್ಎಲ್ ಗ್ರಾಹಕ ಸೇವಾ ಕೇಂದ್ರಗಳಲ್ಲಿ ಅಥವಾ ಕೇರಳದಾದ್ಯಂತದ ಅನೇಕ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಮಾಡಬಹುದು. ಈ ಪ್ರಸ್ತಾಪವು ಪ್ರಸ್ತುತ ಕೇರಳ ವಲಯಕ್ಕೆ ಮಾತ್ರ ಎಂಬುದು ಗಮನಿಸಬೇಕಾದ ಸಂಗತಿ. ಹಾಗಾದರೇ ಬಿಎಸ್‌ಎನ್‌ಎಲ್‌ನ ಕೆಲವು ಆಕರ್ಷಕ ಯೋಜನೆಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಬಿಎಸ್‌ಎನ್‌ಎಲ್‌ 47ರೂ. FRC ಯೋಜನೆ

ಬಿಎಸ್‌ಎನ್‌ಎಲ್‌ 47ರೂ. FRC ಯೋಜನೆ

ಬಿಎಸ್‌ಎನ್‌ಎಲ್‌ ಟೆಲಿಕಾಂ FRC 47ರೂ. ಪ್ಲ್ಯಾನ್ ಒಟ್ಟು 28 ದಿನಗಳ ಮಾನ್ಯತೆ ಪಡೆದಿದೆ. ಈ ಯೋಜನೆಯಲ್ಲಿ ಅನಿಯಮಿತ ವಾಯಿಸ್‌ ಕರೆ ಸೌಲಭ್ಯಗಳು ಲಭ್ಯವಿದೆ. ಹಾಗೆಯೇ 14GB ಡೇಟಾ ಮತ್ತು ಪ್ರತಿದಿನ 100 ಎಸ್‌ಎಂಎಸ್ ಪ್ರಯೋಜನಗಳೊಂದಿಗೆ ಬರುತ್ತದೆ. ಎಂಟಿಎನ್ಎಲ್ ರೋಮಿಂಗ್ ಪ್ರದೇಶಗಳಾದ ಮುಂಬೈ ಮತ್ತು ದೆಹಲಿ ಸೇರಿದಂತೆ ರಾಷ್ಟ್ರೀಯ ರೋಮಿಂಗ್‌ನೊಂದಿಗೆ ಬರುತ್ತದೆ.

ಬಿಎಸ್‌ಎನ್‌ಎಲ್‌ 249ರೂ. FRC ಯೋಜನೆ

ಬಿಎಸ್‌ಎನ್‌ಎಲ್‌ 249ರೂ. FRC ಯೋಜನೆ

ಬಿಎಸ್‌ಎನ್‌ಎಲ್‌ ಹೊಸ ಫಸ್ಟ್‌ ರೀಚಾರ್ಜ್ ಕೂಪನ್ ಯೋಜನೆಯಲ್ಲಿ ಪ್ರತಿದಿನ 2GB ಡೇಟಾ ಪ್ರಯೋಜನ ದೊರೆಯಲಿದೆ. ಇದರೊಂದಿಗೆ ಪ್ರತಿದಿನ 100 ಎಸ್‌ಎಮ್‌ಎಸ್‌ ಸಿಗಲಿವೆ ಹಾಗೂ ಯಾವುದೇ ನೆಟವರ್ಕ್‌ಗೆ ಅನಿಯಮಿತ ವಾಯಿಸ್‌ ಕರೆಯ ಸೌಲಭ್ಯವು ಸಹ ಲಭ್ಯವಾಗುತ್ತವೆ. ಇನ್ನು ಈ ಯೋಜನೆಯು ಒಟ್ಟು 60 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಹಾಗೆಯೇ ಬಿಎಸ್‌ಎನ್‌ಎಲ್ ವಾರ್ಷಿಕ ವ್ಯಾಲಿಡಿಟಿಯ ಯೋಜನೆಗಳನ್ನು ಹೊಂದಿದೆ.

ಬಿಎಸ್‌ಎನ್ಎಲ್‌ 1999ರೂ. ವಾರ್ಷಿಕ ಯೋಜನೆ

ಬಿಎಸ್‌ಎನ್ಎಲ್‌ 1999ರೂ. ವಾರ್ಷಿಕ ಯೋಜನೆ

ಬಿಎಸ್‌ಎನ್ಎಲ್‌ 1999ರೂ. ಪ್ರೀಪೇಡ್‌ ಪ್ಲ್ಯಾನ್‌ ವಾರ್ಷಿಕ ಅವಧಿಯ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಈ ಯೋಜನೆಯು ಪ್ರತಿದಿನ 2GB ಡೇಟಾ ಸೌಲಭ್ಯವನ್ನು ಹೊಂದಿದೆ (ಪರಿಷ್ಕರಣೆಯ ಮೊದಲು 3GB). ಇದರೊಂದಿಗೆ ಪ್ರತಿದಿನ 250 ನಿಮಿಷದ ಉಚಿತ ಕರೆಗಳ ಪ್ರಯೋಜನವನ್ನು ಒಳಗೊಂಡಿದೆ. ಪ್ರತಿದಿನದ ನಿಗದಿತ ಡೇಟಾ ಮಿತಿ ಮುಗಿದ ಬಳಿಕ (FUP ) 80 Kbps ವೇಗದಲ್ಲಿ ಇಂಟರ್ನೆಟ್ ಮುಂದುವರೆಯುವುದು. ಹಾಗೆಯೇ ಗ್ರಾಹಕರಿಗೆ 365 ದಿನಗಳ Eros Now ವಾರ್ಷಿಕ ಚಂದಾದಾರಿಕೆ ಲಭ್ಯವಾಗಲಿದೆ.

Most Read Articles
Best Mobiles in India

English summary
They have to make a FRC (First Recharge Coupon) of Rs 100 or more, then only the free SIM offer would be available to the consumers.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X