Home
ಸುದ್ದಿಜಾಲ

ಬಿಎಸ್‌ಎನ್‌ಎಲ್‌ ಗ್ರಾಹಕರಿಗೆ ಸಿಹಿಸುದ್ದಿ!..ಬಜೆಟ್‌ ದರದಲ್ಲಿ ಹೊಸ ಪ್ಲ್ಯಾನ್‌ ಲಾಂಚ್‌!

ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ( BSNL ಭಾರತ್ ಸಂಚಾರ್ ನಿಗಮ್ ಲಿಮಿಟೆಡ್) ಸಂಸ್ಥೆಯು ಈಗಾಗಲೇ ಹಲವು ಅನುಕೂಲಕರ ಯೋಜನೆ ಪಡರಿಚಯಿಸಿ ಮುನ್ನಡೆದಿದೆ. ಇದೀಗ ತನ್ನ ಚಂದಾದಾರರಿಗೆ ಇದೀಗ ಎರಡು ನೂತನ ಬ್ರಾಡ್‌ಬ್ಯಾಂಡ್ ಯೋಜನೆಗಳನ್ನು ಪರಿಚಯಿಸಿದೆ. ಈ ಹೊಸ ಯೋಜನೆಗಳು ಆಕರ್ಷಕ ಸೌಲಭ್ಯ ಪಡೆದಿದ್ದು, OTT (ಓವರ್-ದಿ-ಟಾಪ್) ಪ್ರಯೋಜನಗಳನ್ನು ಸಹ ಪಡೆದಿವೆ.

ಹೌದು, ಬಿಎಸ್‌ಎನ್‌ಎಲ್‌ ಟೆಲಿಕಾಂ ಸಂಸ್ಥೆಯು ಹೊಸದಾಗಿ 599ರೂ ಹಾಗೂ 699ರೂ ಬ್ರಾಡ್‌ಬ್ಯಾಂಡ್‌ ಯೋಜನೆ ಪರಿಚಯಿಸಿದೆ. ಇವುಗಳಲ್ಲಿ ಬಿಎಸ್‌ಎನ್‌ಎಲ್‌ 599ರೂ. ಯೋಜನೆಯು ಫೈಬರ್ ಬೇಸಿಕ್ ಓಟಿಟಿ ಯೋಜನೆ ಆಗಿದ್ದು, ಹಾಗೆಯೇ 699ರೂ. ಯೋಜನೆಯು ಫೈಬರ್ ಬೇಸಿಕ್ ಸೂಪರ್ ಪ್ಲಾನ್ ಆಗಿದೆ.

ಬಿಎಸ್‌ಎನ್‌ಎಲ್‌ ಗ್ರಾಹಕರಿಗೆ ಸಿಹಿಸುದ್ದಿ!..ಹೊಸ ಪ್ಲ್ಯಾನ್‌ ಲಾಂಚ್‌!

ಅಂದಹಾಗೆ ಸಂಸ್ಥೆಯು ಈ ಎರಡೂ ಪ್ಲ್ಯಾನ್‌ಗಳು 1000ರೂ. ಗಳಿಗಿಂತ ಕಡಿಮೆ ದರದಲ್ಲಿ ಕಾಣಿಸಿಕೊಂಡಿದ್ದು, ಓಟಿಟಿ ಪ್ರಯೋಜನಗಳನ್ನು ಒಳಗೊಂಡಿವೆ. ಹಾಗೆಯೇ ಅಧಿಕ ವೇಗದ ಇಂಟರ್ನೆಟ್ ಕನೆಕ್ಷನ್‌ ಅನ್ನು ನೀಡುತ್ತವೆ. ಬಿಎಸ್‌ಎನ್‌ಎಲ್‌ ನ ಫೈಬರ್-ಬ್ರಾಡ್‌ಬ್ಯಾಂಡ್ ಸೇವೆಗಳು, ಭಾರತದ ಎಲ್ಲ ಭಾಗದಲ್ಲಿ ವಾಸಿಸುವ ಗ್ರಾಹಕರಿಗೆ ಸೇವೆಗಳನ್ನು ಒದಗಿಸುತ್ತದೆ.

ಬಿಎಸ್‌ಎನ್‌ಎಲ್‌ 599ರೂ. ಫೈಬರ್ ಬೇಸಿಕ್ ಓಟಿಟಿ ಪ್ಲ್ಯಾನ್‌

ಬಿಎಸ್‌ಎನ್‌ಎಲ್‌ ಸಂಸ್ಥೆಯ 599ರೂ. ಗಳ ಈ ಫೈಬರ್ ಬೇಸಿಕ್ ಓಟಿಟಿ ಯೋಜನೆಯು ಗ್ರಾಹಕರಿಗೆ 75 Mbps ಕನೆಕ್ಷನ್‌ ಅನ್ನು ನೀಡುತ್ತದೆ. ಇದು 4TB ಅಥವಾ 4000GB ಮಾಸಿಕ ಡೇಟಾ ಸೌಲಭ್ಯವನ್ನು ಪಡೆದುಕೊಂಡಿದೆ. ನಿಗದಿತ ಡೇಟಾ ಮಿತಿ (FUP) ಬಳಕೆಯ ನಂತರ ಡೇಟಾ ಬಳಕೆಯ ವೇಗವು 4 Mbps ಗೆ ಕಡಿಮೆಯಾಗುತ್ತದೆ.

ಬಿಎಸ್‌ಎನ್‌ಎಲ್‌ ಗ್ರಾಹಕರಿಗೆ ಸಿಹಿಸುದ್ದಿ!..ಹೊಸ ಪ್ಲ್ಯಾನ್‌ ಲಾಂಚ್‌!

ಹಾಗೆಯೇ ಈ ಯೋಜನೆಯೊಂದಿಗೆ ಉಚಿತ ಲ್ಯಾಂಡ್‌-ಲೈನಿನ ಕನೆಕ್ಷನ್‌ ದೊರೆಯುತ್ತದೆ. ಇದಲ್ಲದೇ ಬಿಎಸ್‌ಎನ್‌ಎಲ್‌ನ ಈ ಯೋಜನೆಯು ಡಿಸ್ನಿ+ ಹಾಟ್‌ಸ್ಟಾರ್‌ ಸೂಪರ್‌ ನ (Disney+ Hotstar Super) ಉಚಿತ ಓಟಿಟಿ ಚಂದಾದಾರಿಕೆ ಸೌಲಭ್ಯ ಸಹ ಪಡೆದಿದೆ.

ಬಿಎಸ್‌ಎನ್‌ಎಲ್‌ 699ರೂ. ಫೈಬರ್ ಬೇಸಿಕ್ ಓಟಿಟಿ ಪ್ಲ್ಯಾನ್‌

ಬಿಎಸ್‌ಎನ್‌ಎಲ್‌ ಸಂಸ್ಥೆಯ 699ರೂ. ಗಳ ಈ ಫೈಬರ್ ಬೇಸಿಕ್ ಸೂಪರ್ ಓಟಿಟಿ ಯೋಜನೆಯು ಗ್ರಾಹಕರಿಗೆ 125 Mbps ಕನೆಕ್ಷನ್‌ ಅನ್ನು ನೀಡುತ್ತದೆ. ಇದು 4TB ಅಥವಾ 4000GB ಮಾಸಿಕ ಡೇಟಾ ಸೌಲಭ್ಯವನ್ನು ಪಡೆದುಕೊಂಡಿದೆ. ನಿಗದಿತ 4TB ಡೇಟಾ ಮಿತಿ (FUP) ಬಳಕೆಯ ನಂತರ ಡೇಟಾ ಬಳಕೆಯ ವೇಗವು 8 Mbps ಗೆ ಕಡಿಮೆಯಾಗುತ್ತದೆ.

ಹಾಗೆಯೇ ಈ ಯೋಜನೆಯೊಂದಿಗೆ ಅನಿಯಮಿತ ಧ್ವನಿ ಕರೆಯ ಉಚಿತ ಲ್ಯಾಂಡ್‌-ಲೈನಿನ ಕನೆಕ್ಷನ್‌ ದೊರೆಯುತ್ತದೆ. ಅಂದಹಾಗೆ ಈ ಪ್ಲ್ಯಾನ್‌ ಪಂಜಾಬ್ ಟೆಲಿಕಾಂ ವಲಯವನ್ನು ಹೊರತುಪಡಿಸಿ ದೇಶಾದ್ಯಂತ ಇತರೆ ವಲಯಗಳಲ್ಲಿ ಲಭ್ಯ. ಇನ್ನು ಈ ಯೋಜನೆಗಳು ಹೊಸ ಮತ್ತು ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಲಭ್ಯವಿದೆ. ಈ ಪ್ಲಾನ್‌ಗಳನ್ನು ರೀಚಾರ್ಜ್‌ ಮಾಡಿರುವ ಗ್ರಾಹಕರು ಸ್ಟ್ಯಾಟಿಕ್ ಐಪಿ ವಿಳಾಸವನ್ನು ಸಹ ಪಡೆಯಬಹುದು ಅದು ಒಂದು ಸ್ಥಿರ IPv4/6 ಗೆ ವಾರ್ಷಿಕ 3,000 ರೂ. ಆಗಿದೆ.

ಹಾಗೆಯೇ ಬಿಎಸ್‌ಎನ್‌ಎಲ್‌ ಟೆಲಿಕಾಂ ಕೆಲವು ಪ್ರೀಪೇಯ್ಡ್‌ ಪ್ಲ್ಯಾನ್‌ಗಳು ಆಕರ್ಷಕ ಎನಿಸಿವೆ. ಆ ಪೈಕಿ ಬಿಎಸ್‌ಎನ್‌ಎಲ್‌ನ 2999ರೂ. ಪ್ಲ್ಯಾನ್ ದೀರ್ಘಾವಧಿಗೆ ಉಪಯುಕ್ತ ಎನಿಸಿದೆ. ಈ ವಾರ್ಷಿಕ ಅವಧಿಯ ಪ್ಲ್ಯಾನ್‌ 395 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಈ ರೀಚಾರ್ಜ್‌ ಪ್ಲ್ಯಾನಿನಲ್ಲಿ ಗ್ರಾಹಕರಿಗೆ ಪ್ರತಿದಿನ 3 GB ಡೇಟಾ ಪ್ರಯೋಜನ ಸಿಗಲಿದ್ದು, ಇದರೊಂದಿಗೆ ನಿತ್ಯ 100 ಎಸ್‌ಎಮ್‌ಎಸ್‌ ಸೌಲಭ್ಯ ಸಹ ಲಭ್ಯ ಆಗಲಿದೆ. ಹಾಗೆಯೇ ಅನಿಯಮಿತ ವಾಯಿಸ್‌ ಕರೆಯ ಸೌಲಭ್ಯ ಸಹ ಗ್ರಾಹಕರಿಗೆ ಸಿಗುತ್ತವೆ.

Best Mobiles in India

English summary
BSNL has introduced two new broadband plans. check benefits and price details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+