Home
ಸುದ್ದಿಜಾಲ

ಬಿಎಸ್‌ಎನ್‌ಎಲ್‌ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ಗಳಲ್ಲಿನ್ನು ಅಮೆಜಾನ್‌ ಪ್ರೈಮ್‌ ಅಲಭ್ಯ!

ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಟೆಲಿಕಾಂ ಇತ್ತೀಚಿಗೆ ಹಲವು ಆಕರ್ಷಕ ಪ್ಲ್ಯಾನ್‌ಗಳ ಮೂಲಕ ತನ್ನ ಚಂದಾದಾರರಿಗೆ ಖುಷಿ ನೀಡಿದೆ. ಆ ಪೈಕಿ ಸಂಸ್ಥೆಯು ತನ್ನ ಕೆಲವು ಜನಪ್ರಿಯ ಬ್ರಾಡ್‌ಬ್ಯಾಂಡ್‌ ಯೋಜನೆಗಳಲ್ಲಿ ಉಚಿತ ಅಮೆಜಾನ್ ಪ್ರೈಮ್ ಸದಸ್ಯತ್ವದ ಕೊಡುಗೆ ನೀಡಿತ್ತು. ಆದರೆ ಇದೀಗ ಬಿಎಸ್‌ಎನ್‌ಎಲ್‌ನ ಬ್ರಾಡ್‌ಬ್ಯಾಂಡ್‌ ಯೋಜನೆಗಳಲ್ಲಿ ಹೆಚ್ಚುವರಿಯಾಗಿ ಅಮೆಜಾನ್ ಪ್ರೈಮ್ ಸದಸ್ಯತ್ವ ಲಭ್ಯವಾಗುವುದಿಲ್ಲ.

ಹೌದು

ಹೌದು, ಬಿಎಸ್‌ಎನ್‌ಎಲ್ ಸಂಸ್ಥೆಯು ಬಜೆಟ್ ದರದಿಂದ ದುಬಾರಿ ಬೆಲೆಯ ಹಲವು ಬ್ರಾಡ್‌ಬ್ಯಾಂಡ್‌ ಯೋಜನೆಗಳನ್ನು ಹೊಂದಿದೆ. 750ರೂ.ಗಿಂತ ಮೇಲ್ಪಟ್ಟ ಬಿಎಸ್‌ಎನ್‌ಎಲ್‌ನ ಎಲ್ಲಾ ಬ್ರಾಡ್‌ಬ್ಯಾಂಡ್ ಯೋಜನೆಗಳಲ್ಲಿ ಇನ್ನು ಮುಂದೆ ಅಮೆಜಾನ್ ಪ್ರೈಮ್ ಚಂದಾದಾರಿಕೆ ಲಭ್ಯವಿಲ್ಲ ಎಂದು ಕೇರಳ ವ್ಯಾಪ್ತಿಯ ಬಿಎಸ್‌ಎನ್‌ಎಲ್‌ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಬಿಎಸ್‌ಎನ್‌ಎಲ್‌ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಬಿಎಸ್‌ಎನ್‌ಎಲ್‌-777ರೂ.ಪ್ಲ್ಯಾನ್

ಬಿಎಸ್‌ಎನ್‌ಎಲ್‌-777ರೂ.ಪ್ಲ್ಯಾನ್

ಬಿಎಸ್‌ಎನ್‌ಎಲ್‌ ಸಂಸ್ಥೆಯ ಈ 777ರೂ.ಪ್ಲ್ಯಾನ್‌ ಒಂದು ತಿಂಗಳಿನಲ್ಲಿ 500GB ಡೇಟಾ ಸಿಗಲಿದೆ. ಡೇಟಾ ವೇಗದ ಮಿತಿಯು 50 Mbps ಸಾಮರ್ಥ್ಯದಲ್ಲಿರಲಿದ್ದು, ತಿಂಗಳ ನಿಗದಿತ ಡೇಟಾ ಬಳಕೆ ಮುಗಿದ ಬಳಿಕ 2Mbps ವೇಗದಲ್ಲಿ ಡೇಟಾ ಸೌಲಭ್ಯ ಮುಂದವರೆಯಲಿದೆ. ಈ ಪ್ಲ್ಯಾನಿನಲ್ಲಿ ಹೆಚ್ಚುವರಿಯಾಗಿ ಒಂದು ವರ್ಷದ ಅಮೆಜಾನ್ ಪ್ರೈಮ್ ಸದಸ್ಯತ್ವ ಸಹ ದೊರೆಯುತ್ತಿತ್ತು.

ಬಿಎಸ್‌ಎನ್‌ಎಲ್‌-849ರೂ.ಪ್ಲ್ಯಾನ್

ಬಿಎಸ್‌ಎನ್‌ಎಲ್‌-849ರೂ.ಪ್ಲ್ಯಾನ್

ಬಿಎಸ್‌ಎನ್‌ಎಲ್‌ನ ಈ ಬ್ರಾಡ್‌ಬಾಂಡ್‌ ಪ್ಲ್ಯಾನಿನಲ್ಲಿ ಒಂದು ತಿಂಗಳಿಗೆ ಒಟ್ಟು 600GB ಡೇಟಾ ಮಿತಿಯನ್ನು ನೀಡಲಾಗಿದ್ದು, ಯಾವುದೇ ದೈನಂದಿನ FUP ಮಿತಿ ಇರುವುದಿಲ್ಲ. ಈ ಪ್ಲ್ಯಾನ್‌ನಲ್ಲಿ ಡೇಟಾ ವೇಗವು 50 Mbps ಸಾಮರ್ಥ್ಯದಲ್ಲಿರಲಿದ್ದು, ಇತರೆ ನೆಟವರ್ಕ್‌ಗಳಿಗೆ ಅನಿಯಮಿತ ಉಚಿತ ಕರೆಗಳ ಸೌಲಭ್ಯವನ್ನು ಪಡೆದಿದೆ. ಇದರೊಂದಿಗೆ ಒಂದು ವರ್ಷದ ಅಮೆಜಾನ್ ಪ್ರೈಮ್ ಸದಸ್ಯತ್ವ ಸಹ ದೊರೆಯುತ್ತಿತ್ತು.

BSNLನ ದುಬಾರಿ ಬ್ರಾಡ್‌ಬ್ಯಾಂಡ್ ಪ್ಲ್ಯಾನ್‌ಗಳು

BSNLನ ದುಬಾರಿ ಬ್ರಾಡ್‌ಬ್ಯಾಂಡ್ ಪ್ಲ್ಯಾನ್‌ಗಳು

ಅಗ್ಗದ ದರದಲ್ಲಿ ಹಲವು ಬ್ರಾಡ್‌ಬ್ಯಾಂಡ್ ಪರಿಚಯಿಸಿರುವ ಬಿಎಸ್‌ಎನ್ಎಲ್ ದುಬಾರಿ ಬೆಲೆಯ ಪ್ಲ್ಯಾನ್‌ಗಳನ್ನು ಒಳಗೊಂಡಿದೆ. ಅವುಗಳು ಕ್ರಮವಾಗಿ 2,999ರೂ. ಪ್ಲ್ಯಾನಿನಲ್ಲಿ ತಿಂಗಳಿಗೆ 2000GB ಡಾಟಾ ಸಿಗಲಿದೆ. 4,999ರೂ. ಪ್ಲ್ಯಾನಿನಲ್ಲಿ ತಿಂಗಳಿಗೆ 2000GB ಡಾಟಾ ಯಾವುದೇ ಮಿತಿ ಇರದೆ ಲಭ್ಯ. ಇನ್ನು 9,999ರೂ. ಪ್ಲ್ಯಾನಿನಲ್ಲಿ ತಿಂಗಳಿಗೆ 2250GB ಡಾಟಾ ದೊರೆಯುತ್ತದೆ.

ವರ್ಕ್ ಫ್ರಂ ಹೋಮ್ ಪ್ಲ್ಯಾನ್‌

ವರ್ಕ್ ಫ್ರಂ ಹೋಮ್ ಪ್ಲ್ಯಾನ್‌

ಮನೆಯಿಂದ ಕೆಲಸ ಮಾಡುವ ಉದ್ಯೋಗಿಗಳಿಗೆ ನೆರವಾಗಲೆಂದೂ ಬಿಎಸ್‌ಎನ್‌ಎಲ್‌ ಇತ್ತೀಚಿಗಷ್ಟೆ ಲಾಂಚ್ ಮಾಡಿರುವ ವರ್ಕ್ ಫ್ರಂ ಹೋಮ್ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ನಲ್ಲಿ ಪ್ರತಿದಿನ 5GB ಇಂಟರ್ನೆಟ್ ಲಭ್ಯವಾಗಲಿದೆ. ಇಂಟರ್ನೆಟ್ ವೇಗವು 10MBPS ಸಾಮರ್ಥ್ಯದಲ್ಲಿ ಇರಲಿದೆ. ಇನ್ನು ಈ ಯೋಜನೆಯ ನಿಗದಿತ 5GB ಡೇಟಾ ಮುಗಿದ ಬಳಿಕ 1Mbps ನಲ್ಲಿ ಇಂಟರ್ನೆಟ್ ಸೇವೆಯು ಮುಂದುವರೆಯಲಿದೆ. ಈ ಯೋಜನೆಯು ಯಾವುದೇ ಎಫ್‌ಯುಪಿ-FUP ಮಿತಿಯನ್ನು ಹೊಂದಿಲ್ಲ. ಬಿಎಸ್‌ಎನ್ಎಲ್ ಲ್ಯಾಂಡ್‌ಲೈನ್ ಸಂಪರ್ಕ ಹೊಂದಿರುವ ಬಿಎಸ್‌ಎನ್‌ಎಲ್ ಚಂದಾದಾರರು ಮಾತ್ರ ಈ ಯೋಜನೆಯನ್ನು ಉಚಿತವಾಗಿ ಪಡೆಯಬಹುದು.

Best Mobiles in India

English summary
BSNL has discontinued the Amazon Prime promotional offer With Its Plan Broadband Plans.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+