ಈಗಲೇ ಈ ಕೆಲಸ ಮಾಡಿ ಎಂದು ತನ್ನೆಲ್ಲಾ ಗ್ರಾಹಕರಿಗೆ ಸೂಚನೆ ನೀಡಿದ BSNL! ಏನದು?
ಬಿಎಸ್‌ಎನ್‌ಎಲ್ (BSNL) ಇತರೆ ಮುಂಚೂಣಿ ಟೆಲಿಕಾಂ ಸಂಸ್ಥೆಗಳಿಗೆ ತನ್ನದೇ ಆದ ರೀತಿಯಲ್ಲಿ ಪೈಪೋಟಿ ನೀಡುತ್ತಾ ಬರುತ್ತಿದೆ. ಈ ಕಾರಣಕ್ಕೆ ಬಿಎಸ್ಎನ್‌ಎಲ್ ಗ್ರಾಹಕರ ಸಂಖ್ಯೆ ಸಹ ಹೆಚ್ಚಾಗುತ್ತಿದೆ. ಈ ಬೆಳವಣಿಗೆ ನಡುವೆ ಬಿಎಸ್‌ಎನ್‌ಎಲ್ ತನ್ನೆಲ್ಲಾ ಗ್ರಾಹಕರಿಗೆ ವಿಶೇಷ ಸೂಚನೆಯೊಂದನ್ನು ನೀಡಿದೆ.
ಹೌದು, ಸೆಪ್ಟೆಂಬರ್ ಅಂತ್ಯದ ಮೊದಲು ಡಿಜಿಟಲ್ ಕೆವೈಸಿ (Digital KYC) ಅನ್ನು ಪೂರ್ಣಗೊಳಿಸಲು ಎಲ್ಲಾ ಗ್ರಾಹಕರನ್ನು ಬಿಎಸ್‌ಎನ್‌ಎಲ್ ಒತ್ತಾಯಿಸಿದೆ. ಗ್ರಾಹಕರು ಯಾವುದೇ ಸಮಸ್ಯೆಗಳನ್ನು ಎದುರಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಈ ಕೆಲಸ ಮಾಡಬೇಕು ಎಂದು ಸಹ ತಿಳಿಸಲಾಗಿದೆ. ಆಗಿದ್ರೆ, ಇದನ್ನು ಹೇಗೆ ಮಾಡುವುದು?, ಇದರಿಂದ ಆಗುವ ಇತರೆ ಅನುಕೂಲಗಳು ಏನು ಎಂಬ ಮಾಹಿತಿ ಇಲ್ಲಿದೆ ನೋಡಿ.

ಬಿಎಸ್‌ಎನ್‌ಎಲ್‌ನಿಂದ ಸೂಚನೆ: ಸೆಪ್ಟೆಂಬರ್ 30, 2023 ರ ಮೊದಲು ಉಚಿತವಾಗಿ 4G ಸಿಮ್‌ಗಳಿಗೆ ಅಪ್‌ಗ್ರೇಡ್ ಮಾಡುವಂತೆ ಬಿಎಸ್‌ಎನ್‌ಎಲ್ ಒತ್ತಾಯಿಸಿದೆ. 4G ಸಿಮ್‌ಗಳಿಗೆ ಅಪ್‌ಗ್ರೇಡ್ ಮಾಡಿದ ನಂತರ, ಬಿಎಸ್‌ಎನ್‌ಎಲ್ ಬಳಕೆದಾರರು ಎಲ್ಲೇ ಇದ್ದರೂ ತಡೆರಹಿತ ನೆಟ್‌ವರ್ಕ್ ಸೇವೆಗಳನ್ನು ಪಡೆಯುತ್ತಾರೆ ಎಂದು ತಿಳಿಸಲಾಗಿದೆ. ಈ ಮೂಲಕ ಈವರೆಗೂ ಉಂಟಾಗುತ್ತಿದ್ದ ಕೆಲವು ನೆಟ್‌ವರ್ಕ್ ಸಂಬಂಧಿ ಅಡೆತಡೆಗಳಿಗೆ ಮುಕ್ತಿಯಾಡಲು ಸಜ್ಜಾಗಿದೆ.
ಇನ್ನು ಭಾರತ ಸಂಚಾರ ನಿಗಮ ಲಿಮಿಟೆಡ್ (BSNL) ಗ್ರಾಹಕರು ಡಿಜಿಟಲ್ ಕೆವೈಸಿ ಅನ್ನು ಈವರೆಗೂ ಮಾಡದಿದ್ದರೆ ಅದನ್ನು ಈಗ ಪೂರ್ಣಗೊಳಿಸಿ ಎಂದು ತಿಳಿಸಲಾಗಿದ್ದು, ಪೇಪರ್ ಅರ್ಜಿಗಳ ಮೂಲಕ ತಮ್ಮ ಸಿಮ್‌ಗಳನ್ನು ಸಕ್ರಿಯಗೊಳಿಸಿದ ಗ್ರಾಹಕರು ತಮ್ಮ ಡಿಜಿಟಲ್ ಕೆವೈಸಿಯನ್ನು ಮಾಡಿಸಿಕೊಳ್ಳಲು ಅನುವು ಆಗುವಂತೆ ಸರ್ಕಾರಿ ಟೆಲಿಕಾಂ ಆಪರೇಟರ್‌ಗಳನ್ನು ಒತ್ತಾಯಿಸಲಾಗಿದೆ. ಬಿಎಸ್‌ಎನ್‌ಎಲ್ 4G ಅನ್ನು ಪ್ರಾರಂಭಿಸುವ ಪ್ರಕ್ರಿಯೆಯಲ್ಲಿರುವುದರಿಂದ ಇದು ಒಂದು ಪ್ರಮುಖ ವಿಷಯವಾಗಿದೆ.
ಇನ್ನು ಹತ್ತಿರದ ಬಿಎಸ್‌ಎನ್‌ಎಲ್ ಗ್ರಾಹಕ ಆರೈಕೆ ಕೇಂದ್ರ ಅಥವಾ ಫ್ರಾಂಚೈಸಿ ಚಿಲ್ಲರೆ ವ್ಯಾಪಾರಿ ಸ್ಟೋರ್‌ಗಳಿಗೆ ಭೇಟಿ ನೀಡುವ ಮೂಲಕ ಡಿಜಿಟಲ್ ಕೆವೈಸಿ ಅನ್ನು ಮಾಡಿಸಿಕೊಳ್ಳಬಹುದು ಎಂದು ತಿಳಿಸಲಾಗಿದ್ದು, ಇದಕ್ಕಾಗಿ ಗ್ರಾಹಕರು ತಮ್ಮ ಆಧಾರ್ ಕಾರ್ಡ್‌ಗಳನ್ನು ಜೊತೆಗೆ ಕೊಂಡೊಯ್ಯಬೇಕಾಗುತ್ತದೆ. ಹಾಗೆಯೇ ಇದನ್ನುಸೆಪ್ಟೆಂಬರ್ 30, 2023 ರ ಒಳಗೆ ಮಾಡಿಸಬೇಕಿದೆ ಎಂದು ಸೂಚಿಸಲಾಗಿದೆ.
ಗಮನಿಸಬೇಕಾದ ವಿಷಯ ಏನೆಂದರೆ ಕೇಂದ್ರ ಸರ್ಕಾರವು 100% ಡಿಜಿಟಲೀಕರಣದಲ್ಲಿ ಹೊಸ ಮಾನದಂಡಗಳನ್ನು ಪರಿಚಯಿಸಿರುವುದರಿಂದ ಡಿಜಿಟಲ್ ಕೆವೈಸಿ ಈಗ ಅಗತ್ಯವಾದ ಕೆಲಸವಾಗಿದೆ. ಇದು ಗ್ರಾಹಕರನ್ನು ಸುರಕ್ಷಿತವಾಗಿರಿಸಲು ಉದ್ದೇಶಿಸಲಾಗಿದೆ ಎಂದು ಈ ಸಂಬಂಧ ಬಿಎಸ್‌ಎನ್‌ಎಲ್ ಟೆಲಿಕಾಂ ಜಿಲ್ಲೆಯ ಪ್ರಧಾನ ಜನರಲ್ ಮ್ಯಾನೇಜರ್ ಪಾಲ್ ವಿಲಿಯಂ ಮಾಹಿತಿ ನೀಡಿದ್ದಾರೆ.
ಬಿಎಸ್‌ಎನ್‌ಎಲ್ ಭಾರತದಾದ್ಯಂತ 4G ಅನ್ನು ಪ್ರಾರಂಭಿಸುವ ಪ್ರಕ್ರಿಯೆಯಲ್ಲಿದೆ ಎಂದು ಹೇಳಿದ್ದಾರೆ. ಅನೇಕ ಗ್ರಾಹಕರು ಇನ್ನೂ 3G ಸಿಮ್‌ಗಳಲ್ಲಿ 3G ನೆಟ್‌ವರ್ಕ್ ಸೇವೆಗಳನ್ನು ಬಳಕೆ ಮಾಡುತ್ತಿದ್ದಾರೆ. ಆದರೆ, 4G ಪರಿಚಯಿಸಿದ ನಂತರ ಅವರು ಸೇವೆಗಳಲ್ಲಿ ಅಡಚಣೆಯನ್ನು ಎದುರಿಸಬಹುದು.ಇದಕ್ಕಾಗಿ ತಕ್ಷಣವೇ ಕೆವೈಸಿ ಮಾಡಿಸಿಕೊಂಡು 4G ಗೆ ಅಪ್‌ಗ್ರೇಡ್ ಮಾಡಿಕೊಂಡರೆ ಉತ್ತಮ ಸೇವೆ ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.
ಹಾಗೆಯೇ ಗ್ರಾಹಕರು ಸೆಪ್ಟೆಂಬರ್ 30, 2023 ರ ಮೊದಲು ಉಚಿತವಾಗಿ 4G ಸಿಮ್‌ಗಳಿಗೆ ಅಪ್‌ಗ್ರೇಡ್ ಮಾಡಿಕೊಳ್ಳಲು ಅನುಕೂಲ ಮಾಡಿಕೊಡಲಾಗಿದೆ 4G ಸಿಮ್‌ಗಳಿಗೆ ಅಪ್‌ಗ್ರೇಡ್ ಮಾಡಿದ ನಂತರ, ಬಿಎಸ್‌ಎನ್‌ಎಲ್ ಬಳಕೆದಾರರು ಎಲ್ಲೇ ಇದ್ದರೂ ಸಹ ತಡೆರಹಿತ ನೆಟ್‌ವರ್ಕ್ ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ. ರಾಜ್ಯ-ಚಾಲಿತ ಟೆಲಿಕಾಂ ಆಪರೇಟರ್ ಗ್ರಾಹಕರನ್ನು ಡಿಜಿಟಲ್ ಕೆವೈಸಿ ಮಾಡುವಂತೆ ಮತ್ತು ಸೆಪ್ಟೆಂಬರ್ ಅಂತ್ಯದ ಮೊದಲು 4G ಸಿಮ್‌ಗಳಿಗೆ ಅಪ್‌ಗ್ರೇಡ್ ಮಾಡಲು ಬಿಎಸ್‌ಎನ್‌ಎಲ್ ಒತ್ತಾಯಿಸಿದೆ.

ಹೆಚ್ಚುವರಿ ಪಾವತಿ ಮಾಡಬೇಕಿಲ್ಲ: ಇನ್ನು ಸಿಮ್ ಅಪ್‌ಗ್ರೇಡ್‌ಗೆ ನೀವು ಹೆಚ್ಚುವರಿ ಹಣ ಪಾವತಿ ಮಾಡುವ ಅವಶ್ಯಕತೆ ಇರುವುದಿಲ್ಲ ಎಂದು ಬಿಎಸ್‌ಎನ್‌ಎಲ್ ತಿಳಿಸಿದೆ. ಇನ್ನು ಬಿಎಸ್‌ಎನ್‌ಎಲ್ ಸೆಪ್ಟೆಂಬರ್ ನಂತರ ಪ್ರತಿದಿನ 300 ಸೈಟ್‌ಗಳಲ್ಲಿ 4G ಅನ್ನು ಹೊರತರುವ ಯೋಜನೆಯನ್ನು ಸರ್ಕಾರ ಹೊಂದಿದೆ. ಇದರಿಂದಾಗಿ ಬಿಎಸ್‌ಎನ್‌ಎಲ್ ಗ್ರಾಹಕರು ತಡೆರಹಿತ ಸೇವೆಯನ್ನು ಪಡೆಯಬಹುದಾಗಿದೆ.


Click it and Unblock the Notifications








