BSNLನಿಂದ ಹೊಸದಾಗಿ ಜಸ್ಟ್‌ 18ರೂ. ಪ್ಲ್ಯಾನ್; ಡೈಲಿ 1.8GB ಡೇಟಾ, ಉಚಿತ ಕರೆ!

|

ಭಾರತದ ಟೆಲಿಕಾಂ ವಲಯದಲ್ಲಿ ಖಾಸಗಿ ಟೆಲಿಕಾಂ ಸಂಸ್ಥೆಗಳಿಗೆ ನೇರ ಸ್ಫರ್ಧೆ ನೀಡುತ್ತಾ ಸಾಗಿರುವ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಸಂಸ್ಥೆಯು ಹಲವು ಆಕರ್ಷಕ ಯೋಜನೆಗಳನ್ನು ಪರಿಚಯಿಸಿದೆ. ಇದೀಗ ಬಿಎಸ್‌ಎನ್‌ಎಲ್‌ ಹೊಸದಾಗಿ ಮಿನಿ ಕಾಂಬೊ ಪ್ಯಾಕ್‌ ಅನ್ನು ಬಿಡುಗಡೆ ಮಾಡಿದೆ. ನೂತನ ಕಾಂಬೊ ಪ್ಯಾಕ್ ಡೇಟಾ ಪ್ರಯೋಜನದೊಂದಿಗೆ ವಾಯಿಸ್‌ ಕರೆಗಳ ಸೌಲಭ್ಯವನ್ನು ಪಡೆದಿದೆ.

ಬಿಎಸ್‌ಎನ್‌ಎಲ್ ಟೆಲಿಕಾಂ

ಹೌದು, ಬಿಎಸ್‌ಎನ್‌ಎಲ್ ಟೆಲಿಕಾಂ ಸಂಸ್ಥೆಯು ಹೊಸದಾಗಿ ಕಾಂಬೊ 18ರೂ.ಪ್ಯಾಕ್‌ ಅನ್ನು ಪರಿಚಯಿಸಿದೆ. ಬಿಎಸ್‌ಎನ್‌ಎಲ್‌ನ ಈ ಹೊಸ ಪ್ಯಾಕ್‌ ತಮಿಳುನಾಡು ವಲಯ ಸೇರಿದಂತೆ ಸುಮಾರು 22 ಟೆಲಿಕಾಂ ಸರ್ಕಲ್ ವ್ಯಾಪ್ತಿಗಳಲ್ಲಿಯೂ ಲಭ್ಯವಾಗಲಿದೆ. ಈ ಯೋಜನೆಯು ಪ್ರತಿದಿನ 1.5GB ಡೇಟಾ ಜೊತೆಗೆ ವಾಯಿಸ್ ಕರೆಗಳ ಪ್ರಯೋಜನವನ್ನು ಪಡೆದಿದೆ. ಅಂದಹಾಗೆ ಈ ಪ್ಲ್ಯಾನ್ ವ್ಯಾಲಿಡಿಟಿ ಎಷ್ಟು ಹಾಗೂ ಯಾವೆಲ್ಲಾ ಟೆಲಿಕಾಂ ಸರ್ಕಲ್‌ಗಳಲ್ಲಿ ಲಭ್ಯ ಎನ್ನುವ ಮಾಹಿತಿಗಾಗಿ ಮುಂದೆ ಓದಿರಿ.

ಬಿಎಸ್‌ಎನ್‌ಎಲ್‌ ಕಾಂಬೊ 18ರೂ. ಪ್ಲ್ಯಾನ್

ಬಿಎಸ್‌ಎನ್‌ಎಲ್‌ ಕಾಂಬೊ 18ರೂ. ಪ್ಲ್ಯಾನ್

ಬಿಎಸ್‌ಎನ್‌ಎಲ್‌ ಟೆಲಿಕಾಂನ ಹೊಸ ಕಾಂಬೊ 18 ಪ್ಯಾಕ್‌ ಮಿನಿ ಪ್ಯಾನ್‌ ಆಗಿದೆ. ಈ ಪ್ಯಾಕ್‌ ಎರಡು ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದ್ದು, ಈ ವೇಳೆ ಪ್ರತಿದಿನ 1.8GB ಡೇಟಾ ಪ್ರಯೋಜನ ಒದಗಿಸಲಿದ್ದು, 80 Kbps ವೇಗದಲ್ಲಿ ಇಂಟರ್ನೆಟ್ ಕಾರ್ಯನಿರ್ವಹಿಸಲಿದೆ. ಜೊತೆಗೆ ಅನಿಯಮಿತ ಬಿಎಸ್‌ಎನ್‌ಎಲ್‌ ಟು ಬಿಎಸ್‌ಎನ್‌ಎಲ್‌ ವಾಯಿಸ್‌ ಕರೆಗಳು ಹಾಗೂ ಬಿಎಸ್‌ಎನ್‌ಎಲ್‌ ಟು ಇತರೆ ಟೆಲಿಕಾಂ ಗಳಿಗೆ 250 ನಿಮಿಷಗಳ ಕರೆಯ ಮಿತಿ ಸೌಲಭ್ಯವನ್ನು ಸಹ ಪಡೆದಿದೆ.

ಕಾಂಬೊ 18 ಯೋಜನೆ ಲಭ್ಯತೆ

ಕಾಂಬೊ 18 ಯೋಜನೆ ಲಭ್ಯತೆ

ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್) ತಮಿಳುನಾಡು ವಲಯದಲ್ಲಿ ತನ್ನ ಚಂದಾದಾರರಿಗೆ ಹೊಸ ಕಾಂಬೊ 18 ಯೋಜನೆಯನ್ನು ಪರಿಚಯಿಸಿದೆ. ಬಿಎಸ್ಎನ್ಎಲ್‌ನ ಕೈಗೆಟುಕುವ ಯೋಜನೆಗಳಲ್ಲಿ ಇದು ಒಂದಾಗಿದೆ. ಇನ್ನು ಈ ಯೋಜನೆಯು ಕೇಂದ್ರ ವಲಯಗಳಾದ ಲಕ್ಷದ್ವೀಪ ಮತ್ತು ಪುದುಚೇರಿ ಸೇರಿದಂತೆ ಅದರ 22 ವಲಯಗಳಲ್ಲಿ ಲಭ್ಯವಿದೆ. ದರೆ ಬಿಎಸ್ಎನ್ಎಲ್‌ ಈ ಯೋಜನೆಯು ಈಶಾನ್ಯ ರಾಜ್ಯಗಳಾದ ಅಸ್ಸಾಂ, ಮಣಿಪುರ ಮತ್ತು ನಾಗಾಲ್ಯಾಂಡ್ ಜೊತೆಗೆ ಆಂಧ್ರಪ್ರದೇಶ ಮತ್ತು ತೆಲಂಗಾಣ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಲಭ್ಯವಿರುವುದಿಲ್ಲ. ಇದಲ್ಲದೇ ಅಧಿಕ ಡೇಟಾ ಹಾಗೂ ವ್ಯಾಲಿಡಿಟಿ ಪ್ರಯೋಜನಗಳ ಬಿಎಸ್‌ಎನ್‌ಎಲ್‌ ಎರಡು ಯೋಜನೆಗಳ ಬಗ್ಗೆ ತಿಳಿಯಲು ಮುಂದೆ ಓದಿರಿ.

ಬಿಎಸ್‌ಎನ್‌ಎಲ್‌ 693ರೂ.ಪ್ಲ್ಯಾನ್

ಬಿಎಸ್‌ಎನ್‌ಎಲ್‌ 693ರೂ.ಪ್ಲ್ಯಾನ್

ಬಿಎಸ್‌ಎನ್‌ಎಲ್‌ 693ರೂ. ಡೇಟಾ ಎಸ್‌ಟಿವಿ ಯೋಜನೆಯು ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಪ್ಲ್ಯಾನಿನಲ್ಲಿ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 300GB ಡೇಟಾ ಸೌಲಭ್ಯ ಲಭ್ಯವಾಗಲಿದೆ. ಇದು ಡೇಟಾ ಪ್ರೀಪೇಯ್ಡ್ ಯೋಜನೆ ಆಗಿರುವುದರಿಂದ ಯಾವುದೇ ವಾಯಿಸ್‌ ಕರೆ ಹಾಗೂ ಎಸ್‌ಎಮ್‌ಎಸ್‌ ಸೌಲಭ್ಯಗಳು ದೊರೆಯುವುದಿಲ್ಲ.

ಬಿಎಸ್‌ಎನ್‌ಎಲ್‌ 1,212ರೂ.ಪ್ಲ್ಯಾನ್

ಬಿಎಸ್‌ಎನ್‌ಎಲ್‌ 1,212ರೂ.ಪ್ಲ್ಯಾನ್

ಬಿಎಸ್‌ಎನ್‌ಎಲ್‌ 1,212ರೂ. ಡೇಟಾ ಎಸ್‌ಟಿವಿ ಡೇಟಾ ಯೋಜನೆಯು ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಪ್ಲ್ಯಾನಿನಲ್ಲಿ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 500GB ಡೇಟಾ ಪ್ರಯೋಜನೆ ದೊರೆಯುತ್ತದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ ಯಾವುದೇ ವಾಯಿಸ್‌ ಕರೆ ಹಾಗೂ ಎಸ್‌ಎಮ್‌ಎಸ್‌ ಸೌಲಭ್ಯಗಳು ದೊರೆಯುವುದಿಲ್ಲ. ಇದೊಂದು ಡೇಟಾ ಪ್ಲ್ಯಾನ್ ಆಗಿದೆ.

Best Mobiles in India

English summary
The Combo 18 plan is currently available in 22 circles across India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X