Home
ಸುದ್ದಿಜಾಲ

BSNLನಿಂದ ಮತ್ತೆ ಎರಡು ಹೊಸ ಪ್ಲ್ಯಾನ್‌; ದಂಗಾದ ಖಾಸಗಿ ಟೆಲಿಕಾಂಗಳು!

ಸದ್ಯ ಬಹುತೇಕ ಸಂಸ್ಥೆಗಳು ತಮ್ಮ ನೌಕರರಿಗೆ ಮನೆಯಿಂದ ಕೆಲಸ ಮಾಡಲು ಸೂಚಿಸಿವೆ. ಆದರೆ ಮನೆಯಲ್ಲಿ ಕೆಲಸ ಮಾಡಲು ಹೆಚ್ಚಿನ ಇಂಟರ್ನೆಟ್ ಅಗತ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಟೆಲಿಕಾಂ ಕಂಪನಿಗಳು ಆಕರ್ಷಕ ಡೇಟಾ ಯೋಜನೆಗಳನ್ನು ಪರಿಚಯಿಸಿ ಸೈ ಅನಿಸಿಕೊಂಡಿವೆ. ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಸಹ ಅತ್ಯುತ್ತಮ ಡೇಟಾ ಸೌಲಭ್ಯದ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ. ಹಾಗೆಯೇ ಇದೀಗ ಹೊಸದಾಗಿ ಡೇಟಾ ವೋಚರ್‌ ಪರಿಚಯಿಸಿದೆ.

ಬಿಎಸ್‌ಎನ್‌ಎಲ್‌ ಸಂಸ್ಥೆ

ಹೌದು, ಬಿಎಸ್‌ಎನ್‌ಎಲ್‌ ಸಂಸ್ಥೆಯು ಹೊಸದಾಗಿ ಎರಡು ಡೇಟಾ ವೋಚರ್‌ ಯೋಜನೆಗಳನ್ನು ಲಾಂಚ್ ಮಾಡಿದೆ. ಅವುಗಳು ಕ್ರಮವಾಗಿ 151ರೂ. ಮತ್ತು 251ರೂ. ಬೆಲೆಯನ್ನು ಹೊಂದಿವೆ. ಸುಮಾರು 70GBವರೆಗೂ ಡೇಟಾ ಪ್ರಯೋಜನವನ್ನು ಒದಗಿಸಲಿವೆ ಹಾಗೂ 30 ದಿನಗಳ ವ್ಯಾಲಿಡಿಟಿ ಸೌಲಭ್ಯವನ್ನು ಸಹ ಪಡೆದಿವೆ. ಅಧಿಕ ಡೇಟಾ ಬಳಕೆ ಮಾಡುವ ಗ್ರಾಹಕರಿಗೆ ಈ ಯೋಜನೆಗಳು ಹೆಚ್ಚು ಉಪಯುಕ್ತ ಅನಿಸಲಿವೆ.

ವರ್ಕ್‌ ಫ್ರಮ್‌ ಹೋಮ್

ಇತರೆ ಖಾಸಗಿ ಟೆಲಿಕಾಂಗಳು ಸಹ ವರ್ಕ್‌ ಫ್ರಮ್‌ ಹೋಮ್‌ ಡೇಟಾ ವೋಚರ್‌ ಯೋಜನೆಗಳನ್ನು ಪರಿಚಯಿಸಿವೆ. ಮುಖ್ಯವಾಗಿ ಇತರೆ ಟೆಲಿಕಾಂಗಳ 251ರೂ. ಡೇಟಾ ವೋಚರ್‌ಗೆ ಬಿಎಸ್‌ಎನ್‌ಎಲ್‌ 251ರೂ. ವರ್ಕ್‌ ಫ್ರಮ್‌ ಹೋಮ್‌ ಪ್ಲ್ಯಾನ್‌ ಹೋಲಿಸಿದರೇ ಬಿಎಸ್‌ಎನ್‌ಎಲ್‌ ಯೋಜನೆಯೇ ಹೆಚ್ಚಿನ ಡೇಟಾ ಸೌಲಭ್ಯ ಪಡೆದಿದೆ.

ಬಿಎಸ್‌ಎನ್‌ಎಲ್‌ 151ರೂ. ಡೇಟಾ ವೋಚರ್‌

ಬಿಎಸ್‌ಎನ್‌ಎಲ್‌ 151ರೂ. ಡೇಟಾ ವೋಚರ್‌

ಬಿಎಸ್‌ಎನ್‌ಎಲ್‌ನ ಈ ಹೊಸ ಡೇಟಾ ವೋಚರ್‌ (STV DATA151) ಒಟ್ಟು 30 ದಿನಗಳ ವ್ಯಾಲಿಡಿಟಿ ಪ್ರಯೋಜನ ಹೊಂದಿದೆ. ಈ ಅವಧಿಯಲ್ಲಿ ಒಟ್ಟು 40GB ಡೇಟಾ ಸೌಲಭ್ಯವನ್ನು ಒದಗಿಸಲಿದೆ.

ಬಿಎಸ್‌ಎನ್‌ಎಲ್‌ 251ರೂ. ಡೇಟಾ ವೋಚರ್‌

ಬಿಎಸ್‌ಎನ್‌ಎಲ್‌ 251ರೂ. ಡೇಟಾ ವೋಚರ್‌

ಬಿಎಸ್‌ಎನ್‌ಎಲ್‌ನ ಈ ಹೊಸ ಡೇಟಾ ವೋಚರ್‌ ಸಹ (STV DATA251) ಒಟ್ಟು 30 ದಿನಗಳ ವ್ಯಾಲಿಡಿಟಿ ಪ್ರಯೋಜನ ಹೊಂದಿದೆ. ಆದರೆ ಈ ಅವಧಿಯಲ್ಲಿ ಒಟ್ಟು 70GB ಡೇಟಾ ಸೌಲಭ್ಯವನ್ನು ಒದಗಿಸಲಿದೆ. ಹಾಗೆಯೇ ಇತ್ತೀಚಿಗಿನ ಬಿಎಸ್‌ಎನ್‌ಎಲ್‌ ಪ್ಲ್ಯಾನ್‌ಗಳ ಬಗ್ಗೆ ಇನ್ನಷ್ಟು ಮಾಹಿತಿಗೆ ಮುಂದೆ ಓದಿರಿ.

ಬಿಎಸ್‌ಎನ್‌ಎಲ್‌ 365ರೂ.ಪ್ಲ್ಯಾನ್

ಬಿಎಸ್‌ಎನ್‌ಎಲ್‌ 365ರೂ.ಪ್ಲ್ಯಾನ್

ಬಿಎಸ್‌ಎನ್‌ಎಲ್‌ ಈ ಯೋಜನೆಯಲ್ಲಿ ಪ್ರತಿದಿನ 2GB ಡೇಟಾ, ಪ್ರತಿದಿನ 100 ಎಸ್‌ಎಮ್‌ಎಸ್‌ ಹಾಗೂ ಪ್ರತಿದಿನ 250 ನಿಮಿಷಗಳ ಕರೆಯ ಸೌಲಭ್ಯಗಳು ಲಭ್ಯವಾಗುತ್ತವೆ. ಇನ್ನು ಈ ಯೋಜನೆಯು ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಆದರೆ ಡೇಟಾ, ಎಸ್‌ಎಮ್‌ಎಸ್‌ ಹಾಗೂ ವಾಯಿಸ್‌ ಕರೆಗಳ ಪ್ರಯೋಜನಗಳು ಮೊದಲ 60 ದಿನಗಳ ವರೆಗೆ ಲಭ್ಯವಾಗಲಿವೆ.

ಬಿಎಸ್‌ಎನ್‌ಎಲ್‌ 693ರೂ.ಪ್ಲ್ಯಾನ್

ಬಿಎಸ್‌ಎನ್‌ಎಲ್‌ 693ರೂ.ಪ್ಲ್ಯಾನ್

ಬಿಎಸ್‌ಎನ್‌ಎಲ್‌ 693ರೂ. ಡೇಟಾ ಎಸ್‌ಟಿವಿ ಯೋಜನೆಯು ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಪ್ಲ್ಯಾನಿನಲ್ಲಿ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 300GB ಡೇಟಾ ಸೌಲಭ್ಯ ಲಭ್ಯವಾಗಲಿದೆ. ಇದು ಡೇಟಾ ಪ್ರೀಪೇಯ್ಡ್ ಯೋಜನೆ ಆಗಿರುವುದರಿಂದ ಯಾವುದೇ ವಾಯಿಸ್‌ ಕರೆ ಹಾಗೂ ಎಸ್‌ಎಮ್‌ಎಸ್‌ ಸೌಲಭ್ಯಗಳು ದೊರೆಯುವುದಿಲ್ಲ.

ಬಿಎಸ್‌ಎನ್‌ಎಲ್‌ 1,212ರೂ.ಪ್ಲ್ಯಾನ್

ಬಿಎಸ್‌ಎನ್‌ಎಲ್‌ 1,212ರೂ.ಪ್ಲ್ಯಾನ್

ಬಿಎಸ್‌ಎನ್‌ಎಲ್‌ 1,212ರೂ. ಡೇಟಾ ಎಸ್‌ಟಿವಿ ಡೇಟಾ ಯೋಜನೆಯು ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಪ್ಲ್ಯಾನಿನಲ್ಲಿ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 500GB ಡೇಟಾ ಪ್ರಯೋಜನೆ ದೊರೆಯುತ್ತದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ ಯಾವುದೇ ವಾಯಿಸ್‌ ಕರೆ ಹಾಗೂ ಎಸ್‌ಎಮ್‌ಎಸ್‌ ಸೌಲಭ್ಯಗಳು ದೊರೆಯುವುದಿಲ್ಲ. ಇದೊಂದು ಡೇಟಾ ಪ್ಲ್ಯಾನ್ ಆಗಿದೆ.

Best Mobiles in India

English summary
BSNL launched two new work from home data STVs.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+