Home
ಸುದ್ದಿಜಾಲ

ಬಿಎಸ್‌ಎನ್‌ಎಲ್‌ನಿಂದ 2ರೂ.ಗೆ ವ್ಯಾಲಿಡಿಟಿ ವಿಸ್ತರಣೆಯ ಯೋಜನೆ!

ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಈಗಾಗಲೇ ಆಕರ್ಷಕ ಪ್ರೀಪೇಯ್ಡ್‌ ಯೋಜನೆಗಳನ್ನು ಪರಿಚಯಿಸಿ ಗ್ರಾಹಕರಿಂದ ಮೆಚ್ಚುಗೆ ಪಡೆದಿದೆ. ವಿಶೇಷವಾಗಿ ವ್ಯಾಲಿಡಿಟಿ ಅವಧಿಯ ಹಾಗೂ ಅಧಿಕ ಡೇಟಾ ಸೌಲಭ್ಯದ ಪ್ರೀಪೇಯ್ಡ್‌ ಪ್ಲ್ಯಾನ್‌ಗಳಿಗೆ ಹೆಚ್ಚಿನ ಒತ್ತನ್ನು ನೀಡಿದ್ದು, ಇತ್ತೀಚಿಗಷ್ಟೆ ವಾರ್ಷಿಕ ಪ್ಲ್ಯಾನ್‌ನೊಂದರಲ್ಲಿ ಒಟ್ಟು 600 ದಿನಗಳ ವ್ಯಾಲಿಡಿಟಿ ಪ್ರಯೋಜನ ನೀಡಿದೆ. ಇದೀಗ ಮತ್ತೊಂದು ವ್ಯಾಲಿಡಿಟಿಯ ವಿಶೇಷ ಯೋಜನೆ ಘೋಷಿಸಿದೆ.

ಬಿಎಸ್‌ಎನ್‌ಎಲ್‌

ಹೌದು, ಬಿಎಸ್‌ಎನ್‌ಎಲ್‌ ಇದೀಗ ಕೇವಲ 2ರೂ. ಬೆಲೆಯಲ್ಲಿ ಪ್ರಸಕ್ತ ಪ್ಲ್ಯಾನ್‌ ವ್ಯಾಲಿಡಿಟಿ ಅವಧಿಯನ್ನು ವಿಸ್ತರಿಸುವ ಯೋಜನೆಯನ್ನು ತಿಳಿಸಿದೆ. ಪ್ರೀಪೇಯ್ಡ್‌ ಗ್ರಾಹಕರು 2ರೂ. ರೀಚಾರ್ಜ್ ಮಾಡಿಕೊಳ್ಳುವ ಮೂಲಕ ಸದ್ಯ ಇರುವ ಪ್ಲ್ಯಾನಿನ ವ್ಯಾಲಿಡಿಟಿ ಅವಧಿಯನ್ನು ಹೆಚ್ಚುವರಿಯಾಗಿ ವಿಸ್ತರಿಸಿಕೊಳ್ಳಬಹುದಾಗಿದೆ. ಅಗತ್ಯ ಕೆಲವು ಸಂದರ್ಭಗಳಲ್ಲಿ ಈ ಯೋಜನೆಯು ಗ್ರಾಹಕರಿಗೆ ಉಪಯುಕ್ತವೆನಿಸಲಿದೆ.

ಬಿಎಸ್‌ಎನ್‌ಎಲ್‌ 2ರೂ. ರೀಚಾರ್ಜ್‌

ಬಿಎಸ್‌ಎನ್‌ಎಲ್‌ 2ರೂ. ರೀಚಾರ್ಜ್‌

ಬಿಎಸ್‌ಎನ್‌ಎಲ್‌ನ ಪ್ರೀಪೇಯ್ಡ್‌ ಗ್ರಾಹಕರು ಕೇವಲ 2ರೂ. ರೀಚಾರ್ಜ್‌ ಮಾಡಿಕೊಳ್ಳುವ ಮೂಲಕ ಸದ್ಯ ಚಾಲ್ತಿ ಇರುವ ಪ್ರೀಪೇಯ್ಡ್‌ ಯೋಜನೆಯ ವ್ಯಾಲಿಡಿಟಿ ಅವಧಿಯನ್ನು ಹೆಚ್ಚುವರಿಯಾಗಿ 3 ದಿನಗಳ ವರೆಗೆ ವಿಸ್ತರಿಸಿಕೊಳ್ಳಬಹುದಾಗಿದೆ. ಈ ಚಿಕ್ಕ ರೀಚಾರ್ಜ್‌ನಲ್ಲಿ ವ್ಯಾಲಿಡಿಟಿ ಸೌಲಭ್ಯ ಲಭ್ಯವಾಗಲಿದೆ ಆದರೆ ಡೇಟಾ, ಕರೆಗಳಂತಹ ಯಾವುದೇ ಹೆಚ್ಚುವರಿ ಪ್ರಯೋಜನಗಳು ಈ ಯೋಜನೆಯು ಒಳಗೊಂಡಿರುವುದಿಲ್ಲ.

ಬಿಎಸ್‌ಎನ್‌ಎಲ್‌ 19ರೂ. ಪ್ಲ್ಯಾನ್‌

ಬಿಎಸ್‌ಎನ್‌ಎಲ್‌ 19ರೂ. ಪ್ಲ್ಯಾನ್‌

ಬಿಎಸ್‌ಎನ್‌ಎಲ್‌ ಪ್ರಸಕ್ತ ಪ್ಲ್ಯಾನಿನ ವ್ಯಾಲಿಡಿಟಿ ವಿಸ್ತರಣೆ ಮಾಡಿಕೊಳ್ಳಲು ಈ ಹಿಂದೆ 19ರೂ.ಗಳ ಯೋಜನೆಯನ್ನು ಪರಿಚಯಿಸಿತ್ತು. ಈ ಯೋಜನೆಯಲ್ಲಿ ಗ್ರಾಹಕರಿಗೆ ಹೆಚ್ಚುವರಿಯಾಗಿ 30 ದಿನಗಳ ವ್ಯಾಲಿಡಿಟಿ ಲಭ್ಯತೆ ಇತ್ತು. ಅದೇ ರೀತಿ ಈಗ ಕೇವಲ 2ರೂ.ಗಳ ಬೆಲೆಯಲ್ಲಿ ಮೂರು ದಿನಗಳ ವ್ಯಾಲಿಡಿಟಿ ವಿಸ್ತರಣೆ ಮಾಡಿಕೊಳ್ಳಲು ಅನುಕೂಲ ನೀಡಿದೆ. ಹಾಗೆಯೇ ಬಿಎಸ್‌ಎನ್‌ಎಲ್‌ನ ಇತ್ತೀಚಿನ ದೀರ್ಘ ವ್ಯಾಲಿಡಿಟಿ ಪ್ಲ್ಯಾನ್‌ಗಳ ಬಗ್ಗೆ ತಿಳಿಯಲು ಮುಂದಿನ ಸ್ಲೈಡ್‌ಗಳನ್ನು ಓದಿರಿ.

ಬಿಎಸ್‌ಎನ್‌ಎಲ್‌ನ 2,399ರೂ. ಪ್ಲ್ಯಾನ್

ಬಿಎಸ್‌ಎನ್‌ಎಲ್‌ನ 2,399ರೂ. ಪ್ಲ್ಯಾನ್

ಬಿಎಸ್‌ಎನ್‌ಎಲ್‌ನ ಈ ಪ್ಲ್ಯಾನ್ ಒಟ್ಟು 600 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದ್ದು, ಈ ಅವಧಿಯಲ್ಲಿ ಪ್ರತಿದಿನ 250 FUP ನಿಮಿಷಗಳ ಮಿತಿಯಲ್ಲಿ ಉಚಿತ ವಾಯಿಸ್‌ ಕರೆಗಳ ಪ್ರಯೋಜನವನ್ನು ಒದಗಿಸಲಿದೆ. ಇದರೊಂದಿಗೆ ಪ್ರತಿದಿನ 100 ಎಸ್‌ಎಮ್‌ಎಸ್‌ಗಳ ಸೌಲಭ್ಯ ದೊರೆಯಲಿದ್ದು, 60 ದಿನಗಳಿಗೆ ಬಿಎಸ್‌ಎನ್‌ಎಲ್‌ ಟ್ಯೂನ್‌ ಸೌಲಭ್ಯವು ಸಿಗಲಿದೆ. ಆದರೆ ಯಾವುದೇ ಡೇಟಾ ಪ್ರಯೋಜನ ಲಭ್ಯ ಇರುವುದಿಲ್ಲ. ಡೇಟಾ ಅಗತ್ಯ ಇರದ ಹಾಗೂ ವಾಯಿಸ್ ಕರೆ ಮತ್ತು ಹೆಚ್ಚಿನ ವ್ಯಾಲಿಡಿಟಿ ಬಯಸುವ ಗ್ರಾಹಕರಿಗೆ ಈ ಪ್ಲ್ಯಾನ್ ಉತ್ತಮ ಆಯ್ಕೆ ಆಗಿದೆ.

ಬಿಎಸ್‌ಎನ್‌ಎಲ್‌ 693ರೂ.ಪ್ಲ್ಯಾನ್

ಬಿಎಸ್‌ಎನ್‌ಎಲ್‌ 693ರೂ.ಪ್ಲ್ಯಾನ್

ಹಾಗೆಯೇ ಬಿಎಸ್‌ಎನ್‌ಎಲ್‌ 693ರೂ. ಡೇಟಾ ಎಸ್‌ಟಿವಿ ಯೋಜನೆಯು ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಪ್ಲ್ಯಾನಿನಲ್ಲಿ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 300GB ಡೇಟಾ ಸೌಲಭ್ಯ ಲಭ್ಯವಾಗಲಿದೆ. ಇದು ಡೇಟಾ ಪ್ರೀಪೇಯ್ಡ್ ಯೋಜನೆ ಆಗಿರುವುದರಿಂದ ಯಾವುದೇ ವಾಯಿಸ್‌ ಕರೆ ಹಾಗೂ ಎಸ್‌ಎಮ್‌ಎಸ್‌ ಸೌಲಭ್ಯಗಳು ದೊರೆಯುವುದಿಲ್ಲ.

ಬಿಎಸ್‌ಎನ್‌ಎಲ್‌ 1,212ರೂ.ಪ್ಲ್ಯಾನ್

ಬಿಎಸ್‌ಎನ್‌ಎಲ್‌ 1,212ರೂ.ಪ್ಲ್ಯಾನ್

ಬಿಎಸ್‌ಎನ್‌ಎಲ್‌ 1,212ರೂ. ಡೇಟಾ ಎಸ್‌ಟಿವಿ ಡೇಟಾ ಯೋಜನೆಯು ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಪ್ಲ್ಯಾನಿನಲ್ಲಿ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 500GB ಡೇಟಾ ಪ್ರಯೋಜನೆ ದೊರೆಯುತ್ತದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ ಯಾವುದೇ ವಾಯಿಸ್‌ ಕರೆ ಹಾಗೂ ಎಸ್‌ಎಮ್‌ಎಸ್‌ ಸೌಲಭ್ಯಗಳು ದೊರೆಯುವುದಿಲ್ಲ. ಇದೊಂದು ಡೇಟಾ ಪ್ಲ್ಯಾನ್ ಆಗಿದೆ.

Best Mobiles in India

English summary
BSNL’s Rs 2 Prepaid plan will allow the users to extend the validity of their existing plan by 3 days.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+