ಬಿಎಸ್‌ಎನ್‌ಎಲ್‌ನಿಂದ ಅಗ್ಗದ ಪ್ಲ್ಯಾನ್ ಪರಿಚಯ; 1,000GB ಡೇಟಾ ಪಕ್ಕಾ!
ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಟೆಲಿಕಾಂ (BSNL) ಈಗಾಗಲೇ ಗ್ರಾಹಕರ ಸ್ನೇಹಿ ಬೆಲೆಯಲ್ಲಿ ಹಲವು ಫೈಬರ್ ಬ್ರಾಡ್‌ಬ್ಯಾಂಡ್ ಯೋಜನೆಯನ್ನು ಪ್ರಾರಂಭಿಸಿದೆ. ಆ ಮೂಲಕ ಖಾಸಗಿ ಟೆಲಿಕಾಂಗಳಿಗೆ ನೇರ ಫೈಟ್ ನೀಡುತ್ತ ಮುನ್ನಡೆದಿದೆ. ಅದರ ಮುಂದುವರಿದ ಭಾಗವಾಗಿ ಬಿಎಸ್‌ಎನ್‌ಎನ್ ಇದೀಗ 329ರೂ. ಬೆಲೆಯ ಫೈಬರ್ ಬ್ರಾಡ್‌ಬ್ಯಾಂಡ್ ಯೋಜನೆಯನ್ನು ಪರಿಚಯಿಸಿದ್ದು, ಮತ್ತೆ ಗ್ರಾಹಕರನ್ನು ತನ್ನತ್ತ ಸೆಳೆದಿದೆ.

ಹೌದು, ಬಿಎಸ್‌ಎನ್‌ಎಲ್ ಟೆಲಿಕಾಂ ನೂತನವಾಗಿ 329ರೂ. ಬೆಲೆಯಲ್ಲಿ ಬ್ರಾಡ್‌ಬ್ಯಾಂಡ್ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯು 1TB ಡೇಟಾ (1,000GB ಡೇಟಾ) ಪ್ರಯೋಜನವನ್ನು ಒಳಗೊಂಡಿದ್ದು, ಇಂಟರ್ನೆಟ್ ವೇಗವು 20Mbps ವೇಗದಲ್ಲಿ ಇರಲಿದೆ. ಹಾಗೆಯೇ ಇದು ಉಚಿತ ಫಿಕ್ಸಡ್ ಲೈನ್ ವಾಯಿಸ್ ಕರೆಗಳ ಪ್ರಯೋಜನ ಸಹ ಪಡೆದಿದೆ. ಇದರೊಂದಿಗೆ ಬಿಲ್‌ನಲ್ಲಿ ರಿಯಾಯಿತಿ ಲಭ್ಯ ಮಾಡಲಿದೆ ಎನ್ನಲಾಗಿದೆ. ಅಂದಹಾಗೇ ಈ ಯೋಜನೆಯು ಆಯ್ದ ಕೆಲವು ರಾಜ್ಯಗಳಲ್ಲಿ ಲಭ್ಯ ಇರಲಿದೆ. ಹಾಗಾದರೆ ಈ ಯೋಜನೆ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.
18% ತೆರಿಗೆ ವೆಚ್ಚ ಸೇರಲಿದೆ
ಬಿಎಸ್‌ಎನ್‌ಎಲ್ ಟೆಲಿಕಾಂ ನೂತನವಾಗಿ ಪರಿಚಯಿಸಿರುವ 329 ರೂ. ಬ್ರಾಡ್‌ಬ್ಯಾಂಡ್ ಯೋಜನೆ ಅಗ್ಗದ ಪ್ರೈಸ್ ಟ್ಯಾಗ್ ಎನಿಸುತ್ತದೆ. ಆದರೆ ಈ ಯೋಜನೆಗೆ 18% ತೆರಿಗೆ ವೆಚ್ಚ ಸೇರಲಿದೆ. 18% ತೆರಿಗೆ ಅನ್ವಯದ ಬಳಿಕ ಈ ಯೋಜನೆಯು ಒಟ್ಟು ಮೊತ್ತ 388 ರೂ. ಆಗಲಿದೆ. ಬಿಎಸ್‌ಎನ್‌ಎಲ್‌ನ ಇತರೆ ಬ್ರಾಡ್‌ಬ್ಯಾಂಡ್ ಯೋಜನೆಗಳ ಬಗ್ಗೆ ಮುಂದೆ ತಿಳಿಯೋಣ.

ಬಿಎಸ್ಎನ್ಎಲ್ 949ರೂ. ಭಾರತ್ ಫೈಬರ್ ಪ್ಲ್ಯಾನ್ ಪ್ರಯೋಜನ
ಬಿಎಸ್ಎನ್ಎಲ್ 949ರೂ. ಹೊಸ ಸೂಪರ್‌ಸ್ಟಾರ್ ಪ್ರೀಮಿಯಂ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯು ತಿಂಗಳಿಗೆ 2000GB ಡೇಟಾ ಪ್ರಯೋಜನವನ್ನು ಪಡೆದಿದ್ದು, 150 Mbps ವೇಗದಲ್ಲಿ ಇಂಟರ್ನೆಟ್ ಸೌಲಭ್ಯ ನೀಡುತ್ತದೆ.
ಬಿಎಸ್‌ಎನ್‌ಎಲ್ 749ರೂ. ಭಾರತ್ ಫೈಬರ್ ಪ್ಲ್ಯಾನ್ ಪ್ರಯೋಜನ
ಬಿಎಸ್ಎನ್ಎಲ್ 749ರೂ. ಭಾರತ್ ಫೈಬರ್ ಪ್ಲ್ಯಾನ್ ಅನ್ನು ಫೈಬರ್ ಹೈ ಸ್ಪೀಡ್ ಪಡೆದಿದೆ. ಈ ಯೋಜನೆಯು ತಿಂಗಳಿಗೆ 1000GB ಡೇಟಾ ಪ್ರಯೋಜನವನ್ನು ಪಡೆದಿದ್ದು, 100 Mbps ವೇಗದಲ್ಲಿ ಇಂಟರ್ನೆಟ್ ಸೌಲಭ್ಯ ನೀಡುತ್ತದೆ. ಇದಲ್ಲದೆ, ಈ ಯೋಜನೆಯು ಬಿಎಸ್ಎನ್ಎಲ್ ಸಿನಿಮಾ ಪ್ಲಸ್, ಸೋನಿಲೈವ್ ಪ್ರೀಮಿಯಂ, ಜೀ5 ಪ್ರೀಮಿಯಂ, ವೂಟ್ ಸೆಲೆಕ್ಟ್, ಯಪ್ ಟಿವಿ ಮತ್ತು ಇತರೆ ಕೆಲವು OTT ಪ್ಲಾಟ್‌ಫಾರ್ಮ್‌ಗಳಿಗೆ ಚಂದಾದಾರಿಕೆಯೊಂದಿಗೆ ಬರುತ್ತದೆ.

ಬಿಎಸ್ಎನ್ಎಲ್ 999ರೂ. ಭಾರತ್ ಫೈಬರ್ ಪ್ಲ್ಯಾನ್ ಪ್ರಯೋಜನ
ಬಿಎಸ್ಎನ್ಎಲ್ 999ರೂ. ಭಾರತ್ ಫೈಬರ್ ಪ್ಲ್ಯಾನ್ ಅನ್ನು ಫೈಬರ್ ಹೈ ಸ್ಪೀಡ್ ಪಡೆದಿದೆ. ಈ ಯೋಜನೆಯು ತಿಂಗಳಿಗೆ 3300GB ಅಥವಾ 3.3TB ವರೆಗೆ ಡೇಟಾ ಪ್ರಯೋಜನವನ್ನು ಪಡೆದಿದ್ದು, 200 Mbps ವೇಗದಲ್ಲಿ ಇಂಟರ್ನೆಟ್ ಸೌಲಭ್ಯ ನೀಡುತ್ತದೆ. ಇದಲ್ಲದೆ, ಈ ಯೋಜನೆಯು ಅನಿಯಮಿತ ಧ್ವನಿ ಕರೆ ಪ್ರಯೋಜನದೊಂದಿಗೆ ಉಚಿತ ಫಿಕ್ಸಡ್ ಲೈನ್ ಸಂಪರ್ಕದೊಂದಿಗೆ ಬರುತ್ತದೆ. ಹಾಗೆಯೇ ಒಂದು ವರ್ಷಕ್ಕೆ ಡಿಸ್ನಿ+ ಹಾಟ್‌ಸ್ಟಾರ್ ಪ್ರೀಮಿಯಂ ಓಟಿಟಿ ಪ್ರಯೋಜನ ಲಭ್ಯ.
ಬಿಎಸ್‌ಎನ್‌ಎಲ್ 1,499ರೂ. ಭಾರತ್ ಫೈಬರ್ ಪ್ಲ್ಯಾನ್ ಪ್ರಯೋಜನ
ಬಿಎಸ್ಎನ್ಎಲ್ 1,499ರೂ. ಯೋಜನೆಯು ದುಬಾರಿ ಮಾಸಿಕ ಫೈಬರ್ ಬ್ರಾಡ್‌ಬ್ಯಾಂಡ್ ಆಗಿದೆ. ಈ ಯೋಜನೆಯು ತಿಂಗಳಿಗೆ 4TB ಡೇಟಾ ಪ್ರಯೋಜನವನ್ನು ಒಳಗೊಂಡಿದ್ದು, 300 Mbps ಎಮ್‌ಬಿಪಿಎಸ್ ವೇಗದೊಂದಿಗೆ ಬರುತ್ತದೆ. ಇದರೊಂದಿಗೆ ಈ ಯೋಜನೆಯು ಅನಿಯಮಿತ ಧ್ವನಿ ಕರೆ ಪ್ರಯೋಜನದೊಂದಿಗೆ ಉಚಿತ ಫಿಕ್ಸಡ್ ಲೈನ್ ಸಂಪರ್ಕದೊಂದಿಗೆ ಬರುತ್ತದೆ. ಹಾಗೆಯೇ ಒಂದು ವರ್ಷಕ್ಕೆ ಡಿಸ್ನಿ+ ಹಾಟ್‌ಸ್ಟಾರ್ ಪ್ರೀಮಿಯಂ ಓಟಿಟಿ ಪ್ರಯೋಜನ ದೊರೆಯುತ್ತದೆ.


Click it and Unblock the Notifications