BSNL ನಲ್ಲಿ ಮ್ಯಾನೆಜರ್ ಹುದ್ದೆಗೆ ಅರ್ಜಿ ಆಹ್ವಾನ, 80,000/m ವೇತನ

|

ಭಾರತ ಸರ್ಕಾರದ ಅಧೀನ ಟೆಲಿಕಾಂ ಸಂಸ್ಥೆ ಬಿಎಸ್‌ಎನ್‌ಎಲ್‌( BSNL) 18 ವ್ಯವಸ್ಥಾಪಕರ (manager) ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಬಿಎಸ್‌ಎನ್‌ಎಲ್‌ ಈ ಬಗ್ಗೆ ಉದ್ಯೋಗದ ಪ್ರಕಟಣೆ ನೀಡಿದ್ದು, ಅರ್ಹ ಅಭ್ಯರ್ಥಿಗಳು ಹಿರಿಯ ಪ್ರಧಾನ ವ್ಯವಸ್ಥಾಪಕ ಮತ್ತು ಪ್ರಧಾನ ವ್ಯವಸ್ಥಾಪಕ( ಟೆಲಿಕಾಂ ಹಣಕಾಸು ಸಂಸ್ಥೆ) ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಮೂರು ವರ್ಷ ಅವಧಿಯ ನಿಯೋಗದ ಮೇಲೆ ಈ ಹುದ್ದೆಗಳಿಗೆ ಬಿಎಸ್‌ಎನ್‌ಎಲ್‌ ಅರ್ಜಿ ಆಹ್ವಾನಿಸಿದ್ದು, ಉದ್ಯೋಗ ಆಕಾಂಕ್ಷಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಸಲ್ಲಿಸಲು ಬೇಕಾಗಿರುವ ಅರ್ಹತೆ ಮತ್ತು ಮಾನದಂಡಗಳೇನು ಎಂಬುದನ್ನು ಈ ಕೆಳಗಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ಇನ್ನು ಆಪಲ್ ಐಫೋನ್ ಖರೀದಿಸುವ ಗೀಳು ಬಿಡಿ!! ಯಾಕೆ ಗೊತ್ತಾ?

ಶೈಕ್ಷಣಿಕ ಅರ್ಹತೆ.

ಶೈಕ್ಷಣಿಕ ಅರ್ಹತೆ.

ಬಿಎಸ್‌ಎನ್‌ಎಲ್‌ನಲ್ಲಿ ಉದ್ಯೋಗ ಬಯಸುವವರು ಹಣಕಾಸು ಖಾತೆ ಸೇವೆಗಳ ಬಗ್ಗೆ ಹೆಚ್ಚು ತಿಳಿದಿರಬೇಕು. ರೆಗ್ಯುಲರ್‌ನಲ್ಲಿ ಪದವಿ ಹೊಂದಿರುವದು ಕಡ್ಡಾಯ. ಇನ್ನು DOT ನಲ್ಲಿ IFAs ವಿಂಗ್ ಕಾರ್ಯಾಚರಣೆ ತಿಳಿದವರಿಗೆ ಮೊದಲ ಆದ್ಯತೆ ಇದೆ.

ವಯಸ್ಸಿನ ಮಿತಿ ಮತ್ತು ಆಯ್ಕೆ ವಿಧಾನ

ವಯಸ್ಸಿನ ಮಿತಿ ಮತ್ತು ಆಯ್ಕೆ ವಿಧಾನ

56 ವರ್ಷ ವಯಸ್ಸಿನೊಳಗಿನ ಎಲ್ಲಾ ಅರ್ಹ ಅಭ್ಯರ್ಥಿಗಳು ಉದ್ಯೋಗಕ್ಕೆ ಅರ್ಜಿ ಹಾಕಬಹುದು. ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯುತ್ತದೆ

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವೇತನ ಶ್ರೇಣಿ ಮತ್ತು ಉದ್ಯೋಗ ಸ್ಥಳ

ವೇತನ ಶ್ರೇಣಿ ಮತ್ತು ಉದ್ಯೋಗ ಸ್ಥಳ

ಆಯ್ಕೆಯಾದ ಅಭ್ಯರ್ಥಿಗಳು ತಿಂಗಳಿಗೆ 60 ರಿಂದ 80 ಸಾವಿರ ರೂಪಾಯಿ ವೇತನವನ್ನು ಪಡೆಯಬಹುದು. ಮತ್ತು ಆಯ್ಕೆಯಾದ ಅಭ್ಯರ್ಥಿಗಳು ದೆಹಲಿಯಲ್ಲಿ ಕಾರ್ಯನಿರ್ವಹಿಸಲು ಸಿದ್ದವಿರಬೇಕು

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ

ಉದ್ಯೋಗ ಆಕಾಂಕ್ಷಿಗಳು ಇದೇ ತಿಂಗಳು ನವೆಂಬರ್ 30 ರ ದಿನಾಂಕದ ಒಳಗೆ ಅರ್ಜಿ ಸಲ್ಲಿಸಬೇಕು. ಬಿಎಸ್‌ಎನ್‌ಎಲ್‌ನ ಅಫಿಷಿಯಲ್ ವೆಬ್‌ಸೈಟ್‌ನಲ್ಲಿ ಉದ್ಯೋಗದ ಹಚ್ಚಿನ ಮಾಹಿತಿಯನ್ನು ಪಡೆಯಿರಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
BSNL has released an employment notification inviting candidates to apply for the positions of Managers. Last date for the submission of an application is November 30. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X