Home
ಸುದ್ದಿಜಾಲ

BSNL ಬೆಲೆ ಏರಿಕೆ ಮಾಡುವ ಮೊದಲೇ ಈ ಪ್ಲ್ಯಾನ್‌ ರೀಚಾರ್ಜ್ ಮಾಡೋದು ಬೆಸ್ಟ್‌!

ಪ್ರಸ್ತುತ ಟೆಲಿಕಾಂ ಕ್ಷೇತ್ರದಲ್ಲಿ ಪ್ರೀಪೇಡ್‌ ಪ್ಲ್ಯಾನ್‌ಗಳ ಬೆಲೆ ಏರಿಕೆಯದ್ದೆ ಸದ್ದು ಇದೆ. ದೇಶದ ಖಾಸಗಿ ಟೆಲಿಕಾಂಗಳು ಈಗಾಗಾಲೇ ದರ ಹೆಚ್ಚಳದ ಮುನ್ಸೂಚನೆಯನ್ನು ಹೊರಹಾಕಿವೆ. ಆದ್ರೆ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಸಂಸ್ಥೆಯು ತನ್ನ ಪ್ಲ್ಯಾನ್‌ಗಳ ದರ ಹೆಚ್ಚಳದ ಬಗ್ಗೆ ಇನ್ನು ಯಾವುದೇ ಸೂಚನೆಗಳನ್ನು ತಿಳಿಯಪಡಿಸಿಲ್ಲ. ಆದ್ರೆ ಸದ್ಯದಲ್ಲಿಯೇ ಬಿಎಸ್‌ಎನ್‌ಎಲ್‌ ಸಹ ತನ್ನ ಟಾರೀಫ್‌ ಬೆಲೆ ಏರಿಕೆ ಮಾಡುವ ಸಾಧ್ಯತೆಗಳಿವೆ.

ಬಿಎಸ್‌ಎನ್‌ಎಲ್‌

ಹೌದು, ಬಿಎಸ್‌ಎನ್‌ಎಲ್‌ ಸಂಸ್ಥೆಯು ಇತ್ತೀಚಿಗೆ ಹಲವು ಆಕರ್ಷಕ ದೀರ್ಘಾವಧಿಯ ಪ್ರೀಪೇಡ್‌ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ. ಇದೇ ಡಿಸೆಂಬರ್‌ನಲ್ಲಿ ಖಾಸಗಿ ಟೆಲಿಕಾಂಗಳು ಕರೆ ಮತ್ತು ಡೇಟಾ ಬೆಲೆಗಳ ಹೆಚ್ಚಳ ಮಾಡುವುದಾಗಿ ಹೇಳಿವೆ. ಹಾಗೆಯೇ ಬಿಎಸ್‌ಎನ್‌ಎಲ್‌ ಸಹ ತನ್ನ ಪ್ರೀಪೆಡ್‌ ಪ್ಲ್ಯಾನ್‌ಗಳ ಪ್ರೈಸ್‌ ಅನ್ನು ಹೆಚ್ಚಿಸುವ ಸೂಚನೆಗಳಿವೆ. ಆದ್ರೆ ಅಷ್ಟರೊಳಗೆ ಬಿಎಸ್‌ಎನ್‌ಎಲ್‌ನ ಕೆಲವು ಪ್ಲ್ಯಾನ್‌ಗಳು ಗ್ರಾಹಕರಿಗೆ ಅನುಕೂಲ ಒದಗಿಸಲಿವೆ. ಹಾಗಾದರೇ ಬಿಎಸ್‌ಎನ್‌ಎಲ್‌ನಲ್ಲಿರುವ ಕೆಲವು ದೀರ್ಘಾವಧಿಯ ಪ್ರೀಪೇಡ್‌ ಪ್ಲ್ಯಾನ್‌ಗಳು ಯಾವುವು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಬಿಎಸ್‌ಎಲ್‌ಎನ್ 437ರೂ.ಪ್ಲ್ಯಾನ್‌

ಬಿಎಸ್‌ಎಲ್‌ಎನ್ 437ರೂ.ಪ್ಲ್ಯಾನ್‌

ಬಿಎಸ್‌ಎನ್‌ಎಲ್‌ನ ಈ 437ರೂ. ಪ್ಲ್ಯಾನ್‌ ಪ್ರತಿದಿನ 1GB ಡೇಟಾ ಸೌಲಭ್ಯವನ್ನು ಹೊಂದಿದ್ದು, ಜೊತೆಗೆ ಪ್ರತಿದಿನ 100 ಉಚಿತ ಎಸ್ಎಮ್ಎಸ್‌ ಪ್ರಯೋಜನವನ್ನು ನೀಡುತ್ತದೆ. ಇದರೊಂದಿಗೆ ಪ್ರತಿದಿನ 250 ನಿಮಿಷಗಳ ಉಚಿತ ವಾಯಿಸ್‌ ಕಾಲಿಂಗ್ ಸೌಲಭ್ಯವನ್ನು ಪಡೆದಿದೆ. ಇನ್ನು ಈ ಪ್ಲ್ಯಾನ್‌ ಒಟ್ಟು 90 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ.

ಬಿಎಸ್‌ಎನ್ಎಲ್ 666ರೂ.ಪ್ಲ್ಯಾನ್

ಬಿಎಸ್‌ಎನ್ಎಲ್ 666ರೂ.ಪ್ಲ್ಯಾನ್

ಬಿಎಸ್‌ಎನ್ಎಲ್ 666ರೂ.ಪ್ಲ್ಯಾನ್ ಒಟ್ಟು 122 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದ್ದು, ಈ ಅವಧಿಯಲ್ಲಿ ಪ್ರತಿದಿನ 250 ನಿಮಿಷಗಳ ವಾಯಿಸ್‌ ಕಾಲಿಂಗ್ ಪ್ರಯೋಜನವನ್ನು ಹೊಂದಿದೆ. ಇದರೊಂದಿಗೆ ಡೇಟಾ ಸೌಲಭ್ಯ ಹಾಗೂ ಎಸ್‌ಎಮ್ಎಸ್‌ ಸೌಲಭ್ಯಗಳನ್ನು ಪಡೆದಿದೆ.

ಬಿಎಸ್‌ಎನ್‌ಎಲ್ 997ರೂ.ಪ್ಲ್ಯಾನ್‌

ಬಿಎಸ್‌ಎನ್‌ಎಲ್ 997ರೂ.ಪ್ಲ್ಯಾನ್‌

ಬಿಎಸ್‌ಎನ್‌ಎಲ್ 997ರೂ. ಪ್ರೀಪೇಡ್‌ ಪ್ಲ್ಯಾನ್‌ ಒಟ್ಟು 180 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಈ ಅವಧಿಯಲ್ಲಿ ಅನಿಯಮಿತ ಲೋಕಲ್ ಮತ್ತಯ ನ್ಯಾಶನಲ್ ಕರೆಗಳು ಉಚಿತವಾಗಿ ಲಭ್ಯವಾಗಲಿದ್ದು, ಇದರೊಂದಿಗೆ ಪ್ರತಿದಿನ 3GB ಡೇಟಾ ಸೌಲಭ್ಯವು ದೊರೆಯಲಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್‌ಎಮ್ಎಸ್‌ಗಳ ಪ್ರಯೋಜನ ಜೊತೆಗೆ 2 ತಿಂಗಳು PRBT ಬೇನಿಫಿಟ್ಸ್‌ ಲಭ್ಯವಾಗಲಿದೆ.

ಬಿಎಸ್‌ಎನ್‌ಎಲ್ 999ರೂ.ಪ್ಲ್ಯಾನ್‌

ಬಿಎಸ್‌ಎನ್‌ಎಲ್ 999ರೂ.ಪ್ಲ್ಯಾನ್‌

ವಾಯಿಸ್‌ ಕಾಲಿಂಗ್ ಸೌಲಭ್ಯವನ್ನು ಹೆಚ್ಚಾಗಿ ಬಯಸುವ ಬಿಎಸ್‌ಎನ್‌ಎಲ್ ಗ್ರಾಹಕರಿಗೆ ಈ ಪ್ಲ್ಯಾನ್ ಉತ್ತಮ ಆಯ್ಕೆ ಎನ್ನಬಹುದು. ಒಟ್ಟು 220 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದ್ದು, ಈ ಅವಧಿಯಲ್ಲಿ ಪ್ರತಿದಿನ 250 ನಿಮಿಷಗಳ ವಾಯಿಸ್‌ ಕಾಲಿಂಗ್ ಪ್ರಯೋಜನವು ಇರಲಿದೆ.

ಬಿಎಸ್‌ಎನ್ಎಲ್‌ 1699ರೂ.ಪ್ಲ್ಯಾನ್

ಬಿಎಸ್‌ಎನ್ಎಲ್‌ 1699ರೂ.ಪ್ಲ್ಯಾನ್

ಬಿಎಸ್‌ಎನ್‌ಎಲ್‌ನ ದೀರ್ಘಾವಧಿಯ ಪ್ಲ್ಯಾನ್‌ಗಳಿಲ್ಲಿಯೇ ಉತ್ತಮ ಆಯ್ಕೆ ಆಗಿರುವ 1699ರೂ. ಪ್ರೀಪೇಡ್ ಪ್ಲ್ಯಾನ್‌ ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಈ ವೇಳೆಯಲ್ಲಿ ಪ್ರತಿದಿನ 250 ನಿಮಿಷಗಳ ವಾಯಿಸ್‌ ಕಾಲಿಂಗ್ ಪ್ರಯೋಜನ ಲಭ್ಯ ಮತ್ತು ಪ್ರತಿದಿನ 2GB ಡೇಟಾ ಸೌಲಭ್ಯವು ದೊರೆಯುತ್ತದೆ. ಡೇಟಾ ಮತ್ತು ವಾಯಸ್‌ ಕಾಲಿಂಗ್ ಸೌಲಭ್ಯ ಬಯಸುವ ಗ್ರಾಹಕರಿಗೆ ಇದು ಉತ್ತಮ ಪ್ಲ್ಯಾನ್‌ ಎನ್ನಬಹುದು.

ಬಿಎಸ್‌ಎನ್ಎಲ್‌ 1999ರೂ.ಪ್ಲ್ಯಾನ್

ಬಿಎಸ್‌ಎನ್ಎಲ್‌ 1999ರೂ.ಪ್ಲ್ಯಾನ್

1699ರೂ. ಪ್ಲ್ಯಾನಿನಂತೆಯೇ ಬಿಎಸ್‌ಎನ್ಎಲ್‌ನ 1999ರೂ.ಪ್ಲ್ಯಾನ್ ಸಹ 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 250 ನಿಮಿಷಗಳ ವಾಯಿಸ್‌ ಕಾಲಿಂಗ್ ಪ್ರಯೋಜನ ಲಭ್ಯ ಹಾಗೂ ಪ್ರತಿದಿನ 3GB ಡೇಟಾ ಸೌಲಭ್ಯ ಸಿಗಲಿದೆ. ಇದರೊಂದಿಗೆ ಪ್ರತಿದಿನ 100 ಎಸ್‌ಎಮ್ಎಸ್‌ ಹಾಗೂ PRBT ಪ್ರಯೋಜನ ಸಹ ಇರಲಿದೆ.

Best Mobiles in India

English summary
BSNL subscribers have a few days until the tariff hike and they can go ahead and recharge with long term prepaid plans to enjoy the benefits for extended periods. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+