Home
ಸುದ್ದಿಜಾಲ

ಅಧಿಕ ಡೇಟಾ ಜೊತೆಗೆ ಬಿಗ್ ವ್ಯಾಲಿಡಿಟಿ ಬೇಕಿದ್ರೆ, ಈ ಪ್ಲ್ಯಾನ್ ರೀಚಾರ್ಜ್ ಮಾಡಿಬಿಡಿ!

ದೇಶದಲ್ಲಿ ಟೆಲಿಕಾಂ ವಲಯದಲ್ಲಿ ಜಿಯೋ, ಏರ್‌ಟೆಲ್‌, ವಿ ಟೆಲಿಕಾಂ ಹಾಗೂ ಬಿಎಸ್‌ಎನ್‌ಎಲ್‌ ಟೆಲಿಕಾಂಗಳು ಆಕರ್ಷಕ ಪ್ರೀಪೇಯ್ಡ್‌ ಪ್ಲ್ಯಾನ್‌ಗಳ ಮೂಲಕ ಗ್ರಾಹಕರನ್ನು ಸೆಳೆದಿವೆ. ಈ ಎಲ್ಲ ಟೆಲಿಕಾಂಗಳು ಅಲ್ಪಾವಧಿಯ ವ್ಯಾಲಿಡಿಟಿ ಸೌಲಭ್ಯದ ಜೊತೆಗೆ ದೀರ್ಘಾವಧಿಯ ವ್ಯಾಲಿಡಿಟಿಯ ಯೋಜನೆಗಳ ಆಯ್ಕೆಯನ್ನು ಒಳಗೊಂಡಿವೆ. ಇವುಗಳಲ್ಲಿ ಬಹುತೇಕ ಗ್ರಾಹಕರು ವಾರ್ಷಿಕ ವ್ಯಾಲಿಡಿಟಿ ಸೌಲಭ್ಯದ ಯೋಜನೆಗಳನ್ನು ರೀಚಾರ್ಜ್ ಮಾಡಿಸಲು ಮುಂದಾಗುತ್ತಾರೆ.

ಅಧಿಕ ಡೇಟಾ ಜತೆ ಬಿಗ್ ವ್ಯಾಲಿಡಿಟಿ ಬೇಕಿದ್ರೆ, ಈ ಪ್ಲ್ಯಾನ್ ರೀಚಾರ್ಜ್ ಮಾಡಿಬಿಡಿ

ಹೌದು, ಜಿಯೋ, ಏರ್‌ಟೆಲ್‌, ವಿ ಟೆಲಿಕಾಂ ಹಾಗೂ ಬಿಎಸ್‌ಎನ್‌ಎಲ್‌ ಟೆಲಿಕಾಂನ ವಾರ್ಷಿಕ ಪ್ರೀಪೇಯ್ಡ್‌ ಪ್ಲ್ಯಾನ್‌ಗಳು ದೀರ್ಘಾವಧಿ ವ್ಯಾಲಿಡಿಟಿಯಲ್ಲಿ ಹೆಚ್ಚು ಗಮನ ಸೆಳೆದಿವೆ. ಈ ಎಲ್ಲ ಸಂಸ್ಥೆಗಳು 365 ದಿನಗಳ ವ್ಯಾಲಿಡಿಟಿಯ ಕೆಲವು ಯೋಜನೆಗಳ ಆಯ್ಕೆ ಹೊಂದಿದ್ದು, ಆದರೆ ಪ್ರಯೋಜನಗಳಲ್ಲಿ ಭಿನ್ನತೆ ಪಡೆದಿವೆ. ಇನ್ನು ವಾರ್ಷಿಕ ಪ್ಲ್ಯಾನ್‌ಗಳು ಅನಿಯಮಿತ ವಾಯಿಸ್‌ ಕರೆ, ಡೇಟಾ ಪ್ರಯೋಜನ ಸೇರಿದಂತೆ ಇತರೆ ಕೆಲವು ಸೌಲಭ್ಯಗಳನ್ನು ನೀಡುತ್ತವೆ. ಹಾಗಾದರೇ 365 ದಿನಗಳ ವ್ಯಾಲಿಡಿಟಿ ಸೌಲಭ್ಯದ ಪ್ರೀಪೇಯ್ಡ್‌ ಪ್ಲ್ಯಾನ್‌ಗಳ ಪ್ರಯೋಜನಗಳ ಬಗ್ಗೆ ತಿಳಿಯಲು ಮುಂದೆ ಓದಿರಿ.

ಅಧಿಕ ಡೇಟಾ ಜತೆ ಬಿಗ್ ವ್ಯಾಲಿಡಿಟಿ ಬೇಕಿದ್ರೆ, ಈ ಪ್ಲ್ಯಾನ್ ರೀಚಾರ್ಜ್ ಮಾಡಿಬಿಡಿ

ಜಿಯೋ ಟೆಲಿಕಾಂ 2999ರೂ. ಪ್ರೀಪೇಯ್ಡ್‌ ಪ್ಲಾನ್ ಪ್ರಯೋಜನಗಳು
ಜಿಯೋ ಟೆಲಿಕಾಂನ ಈ ಪ್ರೀಪೇಯ್ಡ್‌ ಪ್ಲ್ಯಾನ್ ವಾರ್ಷಿಕ ಅವಧಿಯ ಯೋಜನೆ ಆಗಿದ್ದು, 365 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದಿದೆ. ಪ್ರತಿದಿನ 2.5 GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಜಿಯೋ ಸೇರಿದಂತೆ ಇತರೆ ನೆಟವರ್ಕ್‌ ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ. ಹೆಚ್ಚುವರಿ ಯಾಗಿ ಜಿಯೋ Xstream ಪ್ರೀಮಿಯಂ, ವಿಂಕ್ ಮ್ಯೂಸಿಕ್, ಫಾಸ್ಟ್‌ ಟ್ಯಾಗ್ ಕ್ಯಾಶ್‌ಬ್ಯಾಕ್ ಸೇವೆಗಳು ಲಭ್ಯ.

ವಿ ಟೆಲಿಕಾಂನ 3099ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು
ವಿ ಟೆಲಿಕಾಂನ ಈ ಪ್ಲ್ಯಾನಿನಲ್ಲಿ ಪ್ರತಿದಿನ 1.5 GB ಡೇಟಾ ಪ್ರಯೋಜನ ದೊರೆಯುತ್ತದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್‌ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಹಾಗೆಯೇ ಈ ಯೋಜನೆಯಲ್ಲಿ ಹೆಚ್ಚುವರಿಯಾಗಿ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಚಂದಾದಾರಿಕೆ ಸಹ ದೊರೆಯಲಿದೆ.

ಅಧಿಕ ಡೇಟಾ ಜತೆ ಬಿಗ್ ವ್ಯಾಲಿಡಿಟಿ ಬೇಕಿದ್ರೆ, ಈ ಪ್ಲ್ಯಾನ್ ರೀಚಾರ್ಜ್ ಮಾಡಿಬಿಡಿ

ಬಿಎಸ್‌ಎನ್‌ಎಲ್‌ 2999ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಪ್ರಯೋಜನಗಳು
ಬಿಎಸ್‌ಎನ್‌ಎಲ್‌ ಟೆಲಿಕಾಂನ 2999ರೂ. ಪ್ರೀಪೇಯ್ಡ್‌ ಯೋಜನೆ ದೀರ್ಘಾವಧಿಯ ಪ್ಲ್ಯಾನ್ ಆಗಿದ್ದು, ಪ್ರತಿದಿನ 3 GB ಡೇಟಾ ಸೌಲಭ್ಯ ದೊರೆಯುತ್ತದೆ. ಇದರೊಂದಿಗೆ ಪ್ರತಿದಿನ 100 ಎಸ್‌ಎಮ್‌ಎಸ್‌ ಹಾಗೂ ಅನಿಯಮಿತ ವಾಯಿಸ್ ಕರೆಯ ಸೌಲಭ್ಯಗಳು ಲಭ್ಯವಾಗುತ್ತವೆ. ಇನ್ನು ಈ ಯೋಜನೆಯು ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದ್ದು, ಹೆಚ್ಚುವರಿಯಾಗಿ 90 ದಿನಗಳ ವ್ಯಾಲಿಡಿಟಿ ಸಹ ಲಭ್ಯವಾಗಲಿದೆ.

ಏರ್‌ಟೆಲ್‌ನ 2999ರೂ. ಪ್ರೀಪೇಯ್ಡ್‌ ಪ್ಲಾನ್ ಪ್ರಯೋಜನಗಳು
ಏರ್‌ಟೆಲ್‌ ಟೆಲಿಕಾಂನ 2999ರೂ. ಪ್ರೀಪೇಯ್ಡ್‌ ಪ್ಲಾನ್ ವಾರ್ಷಿಕ ಅವಧಿಯ ಯೋಜನೆ ಆಗಿದ್ದು, 365 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದಿದೆ. ಈ ಅವಧಿಯಲ್ಲಿ ಪ್ರತಿದಿನ 2 GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಹಾಗೆಯೇ ಡಿಸ್ನಿ ಹಾಟ್‌ಸ್ಟಾರ್ ಪ್ಲಸ್‌ ಓಟಿಟಿ ಪ್ರಯೋಜನ ದೊರೆಯಲಿದೆ. ಏರ್‌ಟೆಲ್‌ ಸೇರಿದಂತೆ ಇತರೆ ನೆಟವರ್ಕ್‌ ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ. ಹೆಚ್ಚುವರಿಯಾಗಿ ವೆಂಕ್ ಮ್ಯೂಸಿಕ್, ಫಾಸ್ಟ್‌ಟ್ಯಾಗ್ ಕ್ಯಾಶ್‌ಬ್ಯಾಕ್ ಕೊಡುಗೆ ದೊರೆಯಲಿದೆ.

Best Mobiles in India

English summary
BSNL, Jio, Vi, Airtel: Best Plans with Year Long Validity.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+