ಬಿಎಸ್‌ಎನ್‌ಎಲ್‌, ಜಿಯೋ, ಏರ್‌ಟೆಲ್‌: 500ರೂ. ಒಳಗೆ ಯಾವ ಯೋಜನೆ ಬೆಸ್ಟ್?

|

ದೇಶಿಯ ಬ್ರಾಡ್‌ಬ್ಯಾಂಡ್ ಕ್ಷೇತ್ರದಲ್ಲಿ ಈಗಾಗಲೇ ಹಲವು ಬದಲಾವಣೆಗಳು ನಡೆದಿವೆ. ಬಿಎಸ್‌ಎನ್‌ಎಲ್‌ ಸೇರಿದಂತೆ ಇತರೆ ಖಾಸಗಿ ಟೆಲಿಕಾಂಗಳು ಚಂದಾದಾರರನ್ನು ಹೆಚ್ಚಿಸಿಕೊಳ್ಳಲು ಕಡಿಮೆ ಬೆಲೆಯಲ್ಲಿ ಹಲವು ಪ್ರಯೋಜನಗಳ ಬ್ರಾಡ್‌ಬ್ಯಾಂಡ್‌ ಯೋಜನೆಗಳನ್ನು ಪರಿಚಯಿಸಿವೆ. ಆದರೆ ಮಾರುಕಟ್ಟೆಯಲ್ಲಿ ಜಿಯೋ, ಬಿಎಸ್‌ಎನ್‌ಎಲ್‌ ಹಾಗೂ ಏರ್‌ಟೆಲ್ ಸಂಸ್ಥೆಗಳು ಮುಂಚೂಣಿಯಲ್ಲಿ ಕಾಣಿಸಿಕೊಂಡಿವೆ.

ಬಿಎಸ್‌ಎನ್‌ಎಲ್‌

ಹೌದು, ಜಿಯೋ, ಬಿಎಸ್‌ಎನ್‌ಎಲ್‌ ಹಾಗೂ ಏರ್‌ಟೆಲ್ ಟೆಲಿಕಾಂಗಳು ಆಕರ್ಷಕ ಬ್ರಾಡ್‌ಬ್ಯಾಂಡ್‌ ಯೋಜನೆಗಳನ್ನು ಪರಿಚಯಿಸಿವೆ. ಆದರೆ ಬಹುತೇಕ ಗ್ರಾಹಕರು 500ರೂ. ಒಳಗೆ ಲಭ್ಯವಿರುವ ಯೋಜನೆಗಳನ್ನು ಆಯ್ದುಕೊಳ್ಳಲು ಹೆಚ್ಚು ಉತ್ಸುಕರಾಗಿರುತ್ತಾರೆ. ಈ ನಿಟ್ಟಿನಲ್ಲಿ ಈ ಮೂರು ಟೆಲಿಕಾಂಗಳು ಗ್ರಾಹಕರಿಗೆ ಅನುಕೂಲಕರ ಬ್ರಾಡ್‌ಬ್ಯಾಂಡ್‌ ಯೋಜನೆಗಳ ಆಯ್ಕೆ ನೀಡಿದೆ. ಹಾಗಾದರೇ ಬಿಎಸ್‌ಎನ್‌ಎಲ್‌, ಜಿಯೋ ಹಾಗೂ ಏರ್‌ಟೆಲ್‌ನ 500ರೂ. ಒಳಗೆ ಲಭ್ಯವಿರುವ ಯೋಜನೆಗಳ ಬಗ್ಗೆ ಈ ಲೇಖನದಲ್ಲಿ ಮಾಹಿತಿ ನೀಡಲಾಗಿದೆ ಮುಂದೆ ಓದಿರಿ.

ಬಿಎಸ್‌ಎನ್‌ಎಲ್‌ ಫೈಬರ್ ಬೇಸಿಕ್ 449.ರೂ ಯೋಜನೆ

ಬಿಎಸ್‌ಎನ್‌ಎಲ್‌ ಫೈಬರ್ ಬೇಸಿಕ್ 449.ರೂ ಯೋಜನೆ

ಬಿಎಸ್‌ಎನ್‌ಎಲ್‌ ಫೈಬರ್ ಬೇಸಿಕ್ 449.ರೂ ಬೆಲೆ ಹೊಂದಿದ್ದು, ಯೋಜನೆ ಬಳಕೆದಾರರಿಗೆ ತಿಂಗಳಿಗೆ 3.3 ಟಿಬಿ (3,300 ಜಿಬಿ) ವರೆಗೆ 30 ಎಮ್‌ಬಿಪಿಎಸ್ ವೇಗವನ್ನು ಬ್ರೌಸ್ ಮಾಡಲು ಅನುವು ಮಾಡಿಕೊಡುತ್ತದೆ. ಎಫ್‌ಯುಪಿ ಡೇಟಾದ ಬಳಕೆಯ ನಂತರ, ಆಪರೇಟರ್ ವೇಗವನ್ನು 2 ಎಮ್‌ಬಿಪಿಎಸ್‌ಗೆ ನಿರ್ಬಂಧಿಸುತ್ತದೆ. ಭಾರತದ ಪ್ರಮುಖ ಪ್ರದೇಶಗಳಲ್ಲಿ ಈ ಯೋಜನೆಯ ಲಭ್ಯತೆ ಪಡೆದಿದೆ.

ಏರ್‌ಟೆಲ್‌ ಎಕ್ಸ್‌ಟ್ರಿಮ್ ಫೈಬರ್ 499ರೂ. ಪ್ಲ್ಯಾನ್‌

ಏರ್‌ಟೆಲ್‌ ಎಕ್ಸ್‌ಟ್ರಿಮ್ ಫೈಬರ್ 499ರೂ. ಪ್ಲ್ಯಾನ್‌

ಏರ್‌ಟೆಲ್‌ನ 499ರೂ. ಪ್ಲ್ಯಾನ್‌ ಅಗ್ಗದ ಯೋಜನೆಯಾಗಿದೆ. ಈ ಯೋಜನೆಯು 40 Mbps ವೇಗವನ್ನು ನೀಡುತ್ತದೆ ಹಾಗೆಯೇ 3.3 ಟಿಬಿ (3300 ಜಿಬಿ) ಎಫ್‌ಯುಪಿ ಮಿತಿ ಮತ್ತು ಅನಿಯಮಿತ ಧ್ವನಿ ಕರೆ ಪ್ರಯೋಜನಗಳನ್ನು ಹೊಂದಿದೆ. ಇದನ್ನು ಆರಿಸಿಕೊಳ್ಳುವ ಬಳಕೆದಾರರು ವೂಟ್ ಬೇಸಿಕ್, ಇರೋಸ್ ನೌ, ಹಂಗಮಾ ಪ್ಲೇ, ಶೆಮರೂ ಮಿ ಮತ್ತು ಅಲ್ಟ್ರಾಗಳಿಂದ ಉಚಿತ ವಿಷಯವನ್ನು ಒದಗಿಸುವ ಏರ್ಟೆಲ್ ಎಕ್ಸ್‌ಸ್ಟ್ರೀಮ್ ಅಪ್ಲಿಕೇಶನ್‌ಗೆ ಉಚಿತ ಪ್ರವೇಶವನ್ನು ಪಡೆಯುತ್ತಾರೆ.

ಜಿಯೋ ಫೈಬರ್ 399ರೂ. ಪ್ಲ್ಯಾನ್‌

ಜಿಯೋ ಫೈಬರ್ 399ರೂ. ಪ್ಲ್ಯಾನ್‌

ಜಿಯೋ ಫೈಬರ್‌ 399ರೂ. ಗಳಿಗೆ ಬ್ರಾಡ್‌ಬ್ಯಾಂಡ್‌ ಯೋಜನೆಯನ್ನು ಬಿಡುಗಡೆ ಮಾಡಿ ಈಗಾಗಲೇ ಗ್ರಾಹಕರ ಗಮನ ಸೆಳೆದಿದೆ. ಈ ಯೋಜನೆಯು 30 Mbps ಡೌನ್‌ಲೋಡ್ ಮತ್ತು ಅಪ್‌ಲೋಡ್ ವೇಗ ಮತ್ತು ಅನಿಯಮಿತ ಧ್ವನಿ ಕರೆಗಳೊಂದಿಗೆ ಬರುತ್ತದೆ. ಬಿಎಸ್‌ಎನ್‌ಎಲ್‌ನಂತೆಯೇ, ಜಿಯೋ ಫೈಬರ್ ಯಾವುದೇ ಹೆಚ್ಚುವರಿ ಒಟಿಟಿ ಅಪ್ಲಿಕೇಶನ್‌ಗಳ ಚಂದಾದಾರಿಕೆಯನ್ನು ಒದಗಿಸುತ್ತಿಲ್ಲ. ಈ ಯೋಜನೆಯು ಎಫ್‌ಯುಪಿ ಮಿತಿ 3.3 ಟಿಬಿ ಅಥವಾ ತಿಂಗಳಿಗೆ 3300 ಜಿಬಿ ಇದೆ.

Best Mobiles in India

English summary
JioFiber still wins the race when it comes to the affordable broadband plans category.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X