BSNL ಗ್ರಾಹಕರಿಗೆ ಖುಷಿ ಸುದ್ದಿ: ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ನಲ್ಲಿ ಭಾರೀ ಉಳಿತಾಯ!

|

ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್) ತನ್ನ ಭಾರತ್ ಫೈಬರ್ ಗ್ರಾಹಕರಿಗೆ ಹೊಸ ಪ್ರಮೋಷನಲ್ ಆಫರ್ ಅನ್ನು ಇದೀಗ ಪ್ರಕಟಿಸಿದೆ. ಭಾರತ್ ಫೈಬರ್ ಬಿಎಸ್ಎನ್ಎಲ್ ನ ಫೈಬರ್ ಬ್ರಾಡ್‌ಬ್ಯಾಂಡ್‌ ಸೇವೆಯಾಗಿದೆ. ಬಿಎಸ್ಎನ್ಎಲ್ ತನ್ನ ಭಾರತ್ ಫೈಬರ್ ಗ್ರಾಹಕರಿಗೆ ಹೊಸ ಕೊಡುಗೆಯೊಂದನ್ನು ಘೋಷಿಸಿದೆ. ಈ ಕೊಡುಗೆಯಲ್ಲಿ ಬಿಎಸ್‌ಎನ್‌ಎಲ್‌ ಭಾರತ್ ಫೈಬರ್ ಬ್ರಾಡ್‌ಬ್ಯಾಂಡ್‌ ಬಳಕೆದಾರರು ಈಗ 600ರೂ.ವರೆಗೂ ಉಳಿತಾಯ ಮಾಡಬಹುದಾಗಿದೆ.

ಫೈಬರ್

ಹೌದು, ಬಿಎಸ್‌ಎನ್‌ಎಲ್ ಭಾರತ ಫೈಬರ್ ಹೊಸ ಗ್ರಾಹಕರಿಗೆ ವಿಶೇಷ ಆಫರ್ ನೀಡಿದೆ. ಈ ಆಫರ್‌ನಲ್ಲಿ ಗ್ರಾಹಕರು ಉಳಿತಾಯ ಮಾಡಬಹುದು. ಇದೊಂದು ಸೀಮಿತ ಅವಧಿಯ ಕೊಡುಗೆ ಆಗಿದ್ದು, ಜೂನ್ 14, 2021ರಿಂದ (ಇಂದಿನಿಂದ) ಒಟ್ಟು 90 ದಿನಗಳ ಕಾಲ (ಸೆಪ್ಟೆಂಬರ್ 12, 2021) ಜಾರಿಯಲ್ಲಿರುತ್ತದೆ. ಆದರೆ ಇಲ್ಲಿ ಗಮನಿಸಬೇಕಾದ ಮುಖ್ಯ ಸಂಗತಿಯೆಂದರೆ ಈ ಕೊಡುಗೆಯು ಸದ್ಯ ಅಸ್ತಿತ್ವದಲ್ಲಿರುವ ಬಿಎಸ್ಎನ್ಎಲ್ ಲ್ಯಾಂಡ್‌ಲೈನ್ ಗ್ರಾಹಕರಿಗೆ ಅನ್ವಯವಾಗುವುದಿಲ್ಲ.

ಆಗಲಿದೆ

ಬಿಎಸ್‌ಎನ್‌ಎಲ್‌ ಲ್ಯಾಂಡ್‌ಲೈನ್ ಸಂಪರ್ಕ ಹೊಂದಿರುವ ಗ್ರಾಹಕರು ಭಾರತ್ ಫೈಬರ್ ಹೊಸ ಕನೆಕ್ಷನ್ ಪಡೆದರೇ ಅಂತಹ ಗ್ರಾಹಕರಿಗೆ ಈ ಕೊಡುಗೆಯಲ್ಲಿ 600ರೂ.ಗಳ ವರೆಗೂ ಉಳಿತಾಯ ಆಗಲಿದೆ. ಬಿಎಸ್‌ಎನ್‌ಎಲ್‌ ಬ್ರಾಡ್‌ಬ್ಯಾಂಡ್ ಸೇವೆಗಳನ್ನು ಒದಗಿಸುವ ಎಲ್ಲಾ ವಲಯಗಳಲ್ಲಿ ಈ ಕೊಡುಗೆ ಅನ್ವಯವಾಗುತ್ತದೆ. ಪ್ರಮೋಷನ್ ಕೊಡುಗೆಗಾಗಿ ಯಾವುದೇ ಅರ್ಹ ಗ್ರಾಹಕರು ಮೊದಲ ಆರು ತಿಂಗಳವರೆಗೆ ಭಾರತ್ ಫೈಬರ್ ಬ್ರಾಡ್‌ಬ್ಯಾಂಡ್ ಯೋಜನೆಯಲ್ಲಿ 100ರೂ. ರಿಯಾಯಿತಿ ಪಡೆಯಲಿದ್ದಾರೆ.

ಪ್ರಮೋಷನಲ್

ಬಿಎಸ್‌ಎನ್‌ಎಲ್‌ನ ಈ ಪ್ರಮೋಷನಲ್ ಕೊಡುಗೆಯಲ್ಲಿ ಗ್ರಾಹಕರು ಮೊದಲ ಆರು ತಿಂಗಳು ಬಿಲ್ ಮೊತ್ತದಲ್ಲಿ 100ರೂ.ಗಳ ಡಿಸ್ಕೌಂಟ್‌ ಪಡೆಯುತ್ತಾರೆ. ಅಂದರೇ ಆರು ತಿಂಗಳಿಗೆ ಒಟ್ಟು ಗ್ರಾಹಕರಿಗೆ 600ರೂ.ಗಳ ರಿಯಾಯಿತಿ ದೊರೆತಂತೆ ಆಗುತ್ತದೆ. ಈ ಪ್ರಮೋಷನಲ್‌ ಕೊಡುಗೆಯು 3 ತಿಂಗಳು (90 ದಿನಗಳು) ಉಳಿಯುತ್ತದೆ ಅಂದರೆ ಅದು ಸೆಪ್ಟೆಂಬರ್ 12, 2021 ರಂದು ಕೊನೆಗೊಳ್ಳುತ್ತದೆ. ಈ ಅವಧಿಯವರೆಗೆ, ಬಿಎಸ್‌ಎನ್‌ಎಲ್‌ನ ಅಸ್ತಿತ್ವದಲ್ಲಿರುವ ಲ್ಯಾಂಡ್‌ಲೈನ್ ಬಳಕೆದಾರರು ಕಂಪನಿಯಿಂದ ಫೈಬರ್-ಟು-ಹೋಮ್ (ಎಫ್‌ಟಿಟಿಎಚ್) ಯೋಜನೆಯನ್ನು ಖರೀದಿಸಬಹುದು. ಭಾರತ್ ಫೈಬರ್ ಸೇವೆ ಮತ್ತು ಪ್ರಯೋಜನಗಳನ್ನು ಪಡೆದುಕೊಳ್ಳಿ.

ಬಿಎಸ್‌ಎನ್‌ಎಲ್‌ ಫೈಬರ್ ವ್ಯಾಲ್ಯೂ 799.ರೂ ಯೋಜನೆ

ಬಿಎಸ್‌ಎನ್‌ಎಲ್‌ ಫೈಬರ್ ವ್ಯಾಲ್ಯೂ 799.ರೂ ಯೋಜನೆ

ಬಿಎಸ್‌ಎನ್‌ಎಲ್ ‘ಫೈಬರ್ ವ್ಯಾಲ್ಯೂ' ಯೋಜನೆ ಶುಲ್ಕವು ಗಾಗಿ ತಿಂಗಳಿಗೆ 799 ರೂ. ಆಗಿದೆ. ಬಳಕೆದಾರರು ಅದೇ 3.3 ಟಿಬಿ (3,300 ಜಿಬಿ) ಮಾಸಿಕ ಡೇಟಾದವರೆಗೆ 100 ಎಮ್‌ಬಿಪಿಎಸ್ ವೇಗದಲ್ಲಿ ಬ್ರೌಸ್ ಮಾಡಲು ಅನುವು ಮಾಡಿ ಕೊಡುವ ಯೋಜನೆ ಇದಾಗಿದೆ. ಫೈಬರ್ ಬೇಸಿಕ್ ಯೋಜನೆಯಂತೆಯೇ, ಆಪರೇಟರ್ 3.3 ಟಿಬಿ ಡೇಟಾ ಮಿತಿಯನ್ನು ತಲುಪಿದ ನಂತರ ವೇಗವನ್ನು 2 ಎಮ್‌ಬಿಪಿಎಸ್‌ಗೆ ನಿರ್ಬಂಧಿಸುತ್ತದೆ.

ಬಿಎಸ್‌ಎನ್‌ಎಲ್‌ ಫೈಬರ್ ಪ್ರೀಮಿಯಂ 999.ರೂ ಯೋಜನೆ

ಬಿಎಸ್‌ಎನ್‌ಎಲ್‌ ಫೈಬರ್ ಪ್ರೀಮಿಯಂ 999.ರೂ ಯೋಜನೆ

ಬಿಎಸ್‌ಎನ್‌ಎಲ್ ‘ಫೈಬರ್ ಪ್ರೀಮಿಯಂ' ಯೋಜನೆ ತಿಂಗಳ ಶುಲ್ಕ 999 ರೂ. ಆಗಿದೆ. ಫೈಬರ್ ಪ್ರೀಮಿಯಂ ಬ್ರಾಡ್‌ಬ್ಯಾಂಡ್ ಯೋಜನೆ 3.3 ಟಿಬಿ (3,300 ಜಿಬಿ) ಡೇಟಾ ಮತ್ತು 200 ಎಮ್‌ಬಿಪಿಎಸ್ ಡೌನ್‌ಲೋಡ್ ಮತ್ತು ಅಪ್‌ಲೋಡ್ ವೇಗವನ್ನು ಹೊಂದಿದೆ. ಎಫ್‌ಯುಪಿ ಡೇಟಾ ವನ್ನು ಸೇವಿಸಿದ ನಂತರ ವೇಗವು 2 ಎಮ್‌ಬಿಪಿಎಸ್‌ಗೆ ಇಳಿಯುತ್ತದೆ. ಬಹುಮುಖ್ಯವಾಗಿ, ಡಿಸ್ನಿ + ಹಾಟ್‌ಸ್ಟಾರ್ ಪ್ರೀಮಿಯಂ ಚಂದಾದಾರಿಕೆಯನ್ನು ಸ್ವೀಕರಿಸುವ ಬಳಕೆದಾರರೊಂದಿಗೆ ಆಪರೇಟರ್ ಓವರ್-ದಿ-ಟಾಪ್ (ಒಟಿಟಿ) ಪ್ರಯೋಜನವನ್ನು ನೀಡುತ್ತದೆ.

ಬಿಎಸ್‌ಎನ್‌ಎಲ್‌ ಫೈಬರ್ ಅಲ್ಟ್ರಾ 1,499.ರೂ ಯೋಜನೆ

ಬಿಎಸ್‌ಎನ್‌ಎಲ್‌ ಫೈಬರ್ ಅಲ್ಟ್ರಾ 1,499.ರೂ ಯೋಜನೆ

ಬಿಎಸ್‌ಎನ್‌ಎಲ್ ‘ಫೈಬರ್ ಅಲ್ಟ್ರಾ' ಯೋಜನೆಯ ಬೆಲೆ ತಿಂಗಳಿಗೆ 1,499 ರೂ. ಆಗಿದೆ. ಬಳಕೆದಾರರು 300 ಎಮ್‌ಬಿಪಿಎಸ್ ವರೆಗೆ ಬ್ರೌಸ್ ಮಾಡಲು ಮತ್ತು 4 ಟಿಬಿ (4,000 ಜಿಬಿ) ಡೇಟಾದವರೆಗೆ ವೇಗವನ್ನು ಅಪ್‌ಲೋಡ್ ಮಾಡಲು ಅನುವು ಮಾಡಿ ಕೊಡುತ್ತದೆ. ಎಫ್‌ಯುಪಿ ಡೇಟಾ ವನ್ನು ಸೇವಿಸಿದ ನಂತರ, ವೇಗವು ಬಳಕೆದಾರರಿಗೆ 4 ಎಮ್‌ಬಿಪಿಎಸ್‌ಗೆ ಇಳಿಯುತ್ತದೆ. ಇದಲ್ಲದೆ, ಈ ಯೋಜನೆಯು ಡಿಸ್ನಿ + ಹಾಟ್‌ಸ್ಟಾರ್ ಪ್ರೀಮಿಯಂ ಚಂದಾದಾರಿಕೆಯ ಒಟಿಟಿ ಪ್ರಯೋಜನ ವನ್ನು ಸಹ ನೀಡುತ್ತದೆ.

Most Read Articles
Best Mobiles in India

English summary
BSNL who doesn’t have a broadband connection purchases a plan from the company’s Bharat Fiber’s offerings, he/she can save up to Rs 600 on his/her broadband plan.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X