BSNL ಬ್ರಾಡ್‌ಬ್ಯಾಂಡ್ ಪ್ಲ್ಯಾನಿನಲ್ಲಿ ಭರ್ಜರಿ ಆಫರ್; ಕಂಗಾಲಾದ ಖಾಸಗಿ ಸಂಸ್ಥೆಗಳು!

|

ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ತನ್ನ ಭಾರತ್ ಫೈಬರ್ ಗ್ರಾಹಕರಿಗೆ ಇದೀಗ ಬೊಂಬಾಟ್ ಉಳಿತಾಯದ ಆಫರ್ ಅನ್ನು ಪ್ರಕಟಿಸಿದೆ. ಭಾರತ್ ಫೈಬರ್ ಬಿಎಸ್ಎನ್ಎಲ್ ನ ಫೈಬರ್ ಬ್ರಾಡ್‌ಬ್ಯಾಂಡ್‌ ಸೇವೆಯಾಗಿದೆ. ಬಿಎಸ್ಎನ್ಎಲ್ ಹೊಸದಾಗಿ FTTH ಸಂಪರ್ಕ ಪಡೆಯುವ ಗ್ರಾಹಕರಿಗೆ ಭರ್ಜರಿ ಕೊಡುಗೆಯನ್ನು ಘೋಷಿಸಿದೆ. ಈ ಕೊಡುಗೆಯಲ್ಲಿ ಬಿಎಸ್‌ಎನ್‌ಎಲ್‌ ಭಾರತ್ ಫೈಬರ್ ಬ್ರಾಡ್‌ಬ್ಯಾಂಡ್‌ ಬಳಕೆದಾರರು ಈಗ 600ರೂ.ವರೆಗೂ ಉಳಿತಾಯ ಮಾಡಬಹುದಾಗಿದೆ.

ದಿನಗಳವರೆಗೆ

ಹೌದು, ಬಿಎಸ್‌ಎನ್‌ಎಲ್ ಲ್ಯಾಂಡ್‌ಲೈನ್ ಗ್ರಾಹಕರು FTTH ಸಂಪರ್ಕ ಪಡೆಯುವ ಗ್ರಾಹಕರಿಗೆ ಈಗ 600ರೂ.ವರೆಗೂ ರಿಯಾಯಿತಿ ತಿಳಿಸಿದೆ. ಇದು ಬಿಎಸ್‌ಎನ್‌ಎಲ್‌ನ 90 ದಿನಗಳವರೆಗೆ ಚಾಲ್ತಿ ಇರುವ ಪ್ರಮೋಷನಲ್ ಕೊಡುಗೆಯಾಗಿದೆ. ಇನ್ನು ಈ ಕೊಡುಗೆಯು ಇದೇ ಅಕ್ಟೋಬರ್ 6, 2021 ರಿಂದ ಜಾರಿಗೆ ಬಂದಿದ್ದು, ಜನವರಿ 3, 2022 ರಂದು ಮುಕ್ತಾಯವಾಗುತ್ತದೆ. ಈ ಕೊಡುಗೆ ಎಲ್ಲಾ ಟೆಲಿಕಾಂ ವಲಯಗಳಲ್ಲಿ ಬಳಕೆದಾರರಿಗೆ ಲಭ್ಯವಿದೆ. ಇಲ್ಲಿ ಗಮನಿಸಬೇಕಾದ ಮುಖ್ಯ ಸಂಗತಿಯೆಂದರೆ ಬಿಎಸ್‌ಎನ್‌ಎಲ್ ಸ್ಥಿರ ದೂರವಾಣಿ ಬಳಕೆದಾರರು ಮಾತ್ರ ಈ ಕೊಡುಗೆಯನ್ನು ಪಡೆಯಬಹುದು.

ಬಿಎಸ್‌ಎನ್‌ಎಲ್‌ 799ರೂ. ಬ್ರಾಡ್‌ಬ್ಯಾಂಡ್‌ ಯೋಜನೆ

ಬಿಎಸ್‌ಎನ್‌ಎಲ್‌ 799ರೂ. ಬ್ರಾಡ್‌ಬ್ಯಾಂಡ್‌ ಯೋಜನೆ

ಬಿಎಸ್‌ಎನ್‌ಎಲ್ ‘ಫೈಬರ್ ವ್ಯಾಲ್ಯೂ' ಯೋಜನೆ ಶುಲ್ಕವು ಗಾಗಿ ತಿಂಗಳಿಗೆ 799 ರೂ. ಆಗಿದೆ. ಬಳಕೆದಾರರು ಅದೇ 3.3 ಟಿಬಿ (3,300 ಜಿಬಿ) ಮಾಸಿಕ ಡೇಟಾದವರೆಗೆ 100 ಎಮ್‌ಬಿಪಿಎಸ್ ವೇಗದಲ್ಲಿ ಬ್ರೌಸ್ ಮಾಡಲು ಅನುವು ಮಾಡಿ ಕೊಡುವ ಯೋಜನೆ ಇದಾಗಿದೆ. ಫೈಬರ್ ಬೇಸಿಕ್ ಯೋಜನೆಯಂತೆಯೇ, ಆಪರೇಟರ್ 3.3 ಟಿಬಿ ಡೇಟಾ ಮಿತಿಯನ್ನು ತಲುಪಿದ ನಂತರ ವೇಗವನ್ನು 2 ಎಮ್‌ಬಿಪಿಎಸ್‌ಗೆ ನಿರ್ಬಂಧಿಸುತ್ತದೆ.

ಬಿಎಸ್‌ಎನ್‌ಎಲ್‌ 999ರೂ. ಬ್ರಾಡ್‌ಬ್ಯಾಂಡ್‌ ಯೋಜನೆ

ಬಿಎಸ್‌ಎನ್‌ಎಲ್‌ 999ರೂ. ಬ್ರಾಡ್‌ಬ್ಯಾಂಡ್‌ ಯೋಜನೆ

ಬಿಎಸ್‌ಎನ್‌ಎಲ್ ‘ಫೈಬರ್ ಪ್ರೀಮಿಯಂ' ಯೋಜನೆ ತಿಂಗಳ ಶುಲ್ಕ 999 ರೂ. ಆಗಿದೆ. ಫೈಬರ್ ಪ್ರೀಮಿಯಂ ಬ್ರಾಡ್‌ಬ್ಯಾಂಡ್ ಯೋಜನೆ 3.3 ಟಿಬಿ (3,300 ಜಿಬಿ) ಡೇಟಾ ಮತ್ತು 200 ಎಮ್‌ಬಿಪಿಎಸ್ ಡೌನ್‌ಲೋಡ್ ಮತ್ತು ಅಪ್‌ಲೋಡ್ ವೇಗವನ್ನು ಹೊಂದಿದೆ. ಎಫ್‌ಯುಪಿ ಡೇಟಾ ವನ್ನು ಸೇವಿಸಿದ ನಂತರ ವೇಗವು 2 ಎಮ್‌ಬಿಪಿಎಸ್‌ಗೆ ಇಳಿಯುತ್ತದೆ. ಒಟಿಟಿ ಪ್ರಯೋಜನವನ್ನು ನೀಡುತ್ತದೆ.

ಬಿಎಸ್‌ಎನ್‌ಎಲ್‌ 499ರೂ. ಬ್ರಾಡ್‌ಬ್ಯಾಂಡ್‌ ಯೋಜನೆ

ಬಿಎಸ್‌ಎನ್‌ಎಲ್‌ 499ರೂ. ಬ್ರಾಡ್‌ಬ್ಯಾಂಡ್‌ ಯೋಜನೆ

ಬಿಎಸ್‌ಎನ್‌ಎಲ್‌ 499ರೂ.ಗಳ ಭಾರತ ಫೈಬರ್‌ ಪ್ಲ್ಯಾನ್‌ ಒಂದು ಅಗ್ಗದ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ ಆಗಿದೆ. ಚಂದಾದಾರರಿಗೆ ಈ ಪ್ಲ್ಯಾನ್‌ನಲ್ಲಿ ತಿಂಗಳಿಗೆ 100GB ಡೇಟಾ ಸೌಲಭ್ಯವು FUP ಮಿತಿ ಇರುತ್ತದೆ. 20 Mbps ವೇಗದಲ್ಲಿ ಇಂಟರ್ನೆಟ್ ದೊರೆಯುತ್ತದೆ. ಇದರೊಂದಿಗೆ ಅನಿಯಮಿತ ವಾಯಿಸ್‌ ಕರೆಗಳ ಪ್ರಯೋಜನವು ಲಭ್ಯವಿದೆ. ನಿಗದಿತ ಡೇಟಾ ಮಿತಿ ಮುಗಿದ ಬಳಿಕ 2 Mbps ವೇಗದಲ್ಲಿ ಇಂಟರ್ನೆಟ್ ಮುಂದುವರೆಯುತ್ತದೆ.

ಬಿಎಸ್‌ಎನ್‌ಎಲ್‌ 599ರೂ.ಬ್ರಾಡ್‌ಬ್ಯಾಂಡ್‌ ಯೋಜನೆ

ಬಿಎಸ್‌ಎನ್‌ಎಲ್‌ 599ರೂ.ಬ್ರಾಡ್‌ಬ್ಯಾಂಡ್‌ ಯೋಜನೆ

ಬಿಎಸ್‌ಎನ್‌ಎಲ್‌ನ ಈ ಫೈಬರ್ ಬೇಸಿಕ್ ಪ್ಲಸ್ ಬ್ರಾಡ್‌ಬ್ಯಾಂಡ್ ಯೋಜನೆ 3300GB ವರೆಗೆ 60 Mbps ವೇಗವನ್ನು ನೀಡುತ್ತದೆ. ಆದಾಗ್ಯೂ, ISP ಯೋಜನೆಯನ್ನು ಪ್ರತಿಸ್ಪರ್ಧಿ ಬ್ರಾಡ್‌ಬ್ಯಾಂಡ್ ಆಪರೇಟರ್‌ಗಳಂತೆಯೇ ಅನಿಯಮಿತ ಡೇಟಾ ಯೋಜನೆ ನೀಡಿದೆ. ಬಳಕೆದಾರರು ಮಾಸಿಕ FUP ಮಿತಿಯನ್ನು ಖಾಲಿ ಮಾಡಿದ ನಂತರ, ವೇಗವನ್ನು 2 Mbpsಗೆ ಇಳಿಸಲಾಗುತ್ತದೆ.

ಬಿಎಸ್‌ಎನ್ಎಲ್‌ 777ರೂ. ಬ್ರಾಡ್‌ಬ್ಯಾಂಡ್‌ ಯೋಜನೆ

ಬಿಎಸ್‌ಎನ್ಎಲ್‌ 777ರೂ. ಬ್ರಾಡ್‌ಬ್ಯಾಂಡ್‌ ಯೋಜನೆ

ಬಿಎಸ್‌ಎನ್‌ಎಲ್‌ನ 777ರೂ. ಬ್ರಾಡ್‌ಬ್ಯಾಂಡ್‌ ಯೋಜನೆಯಲ್ಲಿ ಗ್ರಾಹಕರಿಗೆ 50mbps ವೇಗದಲ್ಲಿ 500GB ಡೇಟಾ ಲಭ್ಯವಾಗಲಿದೆ. ನಿಗದಿಪಡಿಸಿದ 500GB ಡೇಟಾ ಬಳಕೆ ಮುಗಿದ ಬಳಿಕ 5 mbps ವೇಗದಲ್ಲಿ ಇಂಟರ್ನೆಟ್‌ ಸೇವೆಯನ್ನು ಮುಂದುವರೆಯಲಿದೆ.

ಎದುರಾಗಿ

ಬಿಎಸ್‌ಎನ್ಎಲ್ ಸಂಸ್ಥೆಯು ಜಿಯೋ ಫೈಬರ್‌ಗೆ ಎದುರಾಗಿ 1,999ರೂ. ಪ್ಲ್ಯಾನ್‌ ಬಿಡುಗಡೆ ಮಾಡಿದ್ದು, ಈ ಪ್ಲ್ಯಾನ್‌ನಲ್ಲಿ ಗ್ರಾಹಕರಿಗೆ ಪ್ರತಿ ದಿನ 33GB ಡೇಟಾ ಲಭ್ಯವಾಗಲಿದೆ. ಅಂದರೇ ತಿಂಗಳಿಗೆ 990GB ಡೇಟಾ ಸಿಗಲಿದ್ದು, ಅದು 100Mbps ವೇಗದಲ್ಲಿರಲಿದೆ. ಗ್ರಾಹಕರಿಗೆ ಲಭ್ಯವಿರುವ ದಿನದ ಡೇಟಾ ಮುಗಿದ ಬಳಿಕ 4Mbps ವೇಗದಲ್ಲಿ ಇಂಟರ್ನೆಟ್‌ ಮುಂದುವರೆಯಲಿದೆ.

ಲಭ್ಯವಾಗಲಿದೆ

ಬಿಎಸ್‌ಎನ್‌ಎಲ್ ಭಾರತ್ ಬ್ರಾಡ್‌ಬ್ಯಾಂಡ್‌ನ ಇತರೆ ಜನಪ್ರಿಯ ಪ್ಲ್ಯಾನ್‌ಗಳು ಇಂತಿವೆ. 1,277ರೂ ಪ್ಲ್ಯಾನ್‌ನಲ್ಲಿ ತಿಂಗಳಿಗೆ ಒಟ್ಟು 750GB ಡೇಟಾ ಸಿಗಲಿದೆ. ಹಾಗೆಯೇ 2,499ರೂ. ಪ್ಲ್ಯಾನ್‌ನಲ್ಲಿ ಪ್ರತಿದಿನ 40GB ಡೇಟಾ ಲಭ್ಯವಾಗಲಿದೆ. 9,999ರೂ. ಪ್ಲ್ಯಾನ್‌ ಸಂಸ್ಥೆಯ ತಿಂಗಳ ದುಬಾರಿ ಪ್ಲ್ಯಾನ್‌ ಆಗಿ ಎನಿಸಿಕೊಂಡಿದ್ದು, ಪ್ರತಿದಿನ ಒಟ್ಟು 120GB ಡೇಟಾ ಒಳಗೊಂಡಿದೆ.

Most Read Articles
Best Mobiles in India

English summary
BSNL Offer: Bsnl Landline Customers Will Get Rs 600 Price Reduction On New FTTH Connection.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X