Home
ಸುದ್ದಿಜಾಲ

BSNL ಆಫರ್!..ಬ್ರಾಡ್‌ಬ್ಯಾಂಡ್‌ ಸೇವೆ ಉಚಿತ, ಪ್ರತಿದಿನ 5GB ಡೇಟಾ ಖಚಿತ!

ಜಿಯೋ ಫೈಬರ್ ಎಂಟ್ರಿ ಬೆನ್ನಲ್ಲೇ, ಭಾರತದಲ್ಲಿ ಸದ್ಯ ಬ್ರಾಡ್‌ಬ್ಯಾಂಡ್ ಕನೆಕ್ಷನ್ ಫೈಟ್‌ ರಭಸದಿಂದ ನಡೆಯುತ್ತಿದೆ. ಖಾಸಗಿ ಟೆಲಿಕಾಂ ಸಂಸ್ಥೆಯಗಳಾದ ಏರ್‌ಟೆಲ್‌, ಟಾಟಾಸ್ಕೈ ಸೇರಿದಂತೆ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಸಹ ನೇರವಾಗಿ ಬ್ರಾಡ್‌ಬ್ಯಾಂಡ್ ಸಮರಕ್ಕೆ ಇಳಿದಿದೆ. ಬಿಎಸ್‌ಎನ್‌ಎಲ್ ಕಂಪನಿಯು ತನ್ನ ಗ್ರಾಹಕರಿಗೆ 'ಸ್ಟ್ಯಾಂಡ್‌ಅಲೋನ್' ಪ್ರಮೋಷನಲ್ ಆಫರ್‌ನಲ್ಲಿ ಪ್ರತಿದಿನ 5GB ಡೇಟಾವನ್ನು ಉಚಿತವಾಗಿ ನೀಡಲು ಅಣಿಯಾಗಿದೆ.

ಬಿಎಸ್‌ಎನ್ಎಲ್

ಹೌದು, ಬಿಎಸ್‌ಎನ್ಎಲ್ ಸಂಸ್ಥೆಯು ಈ ವರೆಗೂ ಬ್ರಾಡ್‌ಬ್ಯಾಂಡ್‌ ಸೇವೆಯನ್ನು ಪಡೆದಿರದ ತನ್ನ ಎಕ್ಸಿಸ್ಟಿಂಗ್ ಲ್ಯಾಂಡ್‌ಲೈನ್ ಗ್ರಾಹಕರಿಗೆ ಮತ್ತೆ 'ಸ್ಟ್ಯಾಂಡ್‌ಅಲೋನ್' ಪ್ರಮೋಷನಲ್' ಆಫರ್‌ ಪರಿಚಯಿಸಿದೆ. ಈ ಆಫರ್‌ನಲ್ಲಿ ಗ್ರಾಹಕರಿಗೆ ನೋ ಕಾಸ್ಟ್‌ ಬ್ರಾಡ್‌ಬ್ಯಾಂಡ್‌ ಕನೆಕ್ಷನ್ ಆಯ್ಕೆ ನೀಡಿದ್ದು, ಪ್ರತಿದಿನ 5GB ಡೇಟಾ ಉಚಿತವಾಗಿ ಸಿಗಲಿದೆ. ಒಂದು ತಿಂಗಳು ಮಾತ್ರ ಲಭ್ಯ ಇರುವ ಈ ಕೊಡುಗೆಯು ಸದ್ಯ ಚಾಲ್ತಿಯಲ್ಲಿದ್ದು, ಇದೇ ಸೆಪ್ಟಂಬರ್ 30ರಂದು ಕೊನೆಯಾಗಲಿದೆ.

ಆಫರ್‌ ಲಭ್ಯತೆ

ಇನ್ನು ಬ್ರಾಡ್‌ಬ್ಯಾಂಡ್ ಕನೆಕ್ಷನ್ ಪಡೆಯದಿರುವ ಬಿಎಸ್‌ಎನ್‌ಎಲ್‌ನ ಎಕ್ಸಿಸ್ಟಿಂಗ್ ಲ್ಯಾಂಡ್‌ಲೈನ್ ಗ್ರಾಹಕರಿಗೆ ಈ 'ಸ್ಟ್ಯಾಂಡ್‌ಅಲೋನ್' ಪ್ರಮೋಷನಲ್ ಬ್ರಾಡ್‌ಬ್ಯಾಂಡ್‌ ಆಫರ್‌' ಅನ್ವಯವಾಗಲಿದೆ. ಅಂಡಾಮಾನ ಮತ್ತು ನಿಕೋಬಾರ್ ಪ್ರದೇಶಗಳನ್ನು ಹೊರತುಪಡಿಸಿ ದೇಶದ ಎಲ್ಲ ಬಿಎಸ್‌ಎನ್‌ಎಲ್ ಟೆಲಿಕಾಂ ಸರ್ಕಲ್ ವ್ಯಾಪ್ತಿಯಲ್ಲಿಯೂ ಈ ಕೊಡುಗೆ ಗ್ರಾಹಕರಿಗೆ ಲಭ್ಯವಾಗಲಿದೆ.

10 Mbps ಸ್ಪೀಡ್

ಬಿಎಸ್‌ಎನ್‌ಎಲ್‌ನ್ 'ಸ್ಟ್ಯಾಂಡ್‌ಅಲೋನ್' ಪ್ರಮೋಷನಲ್ ಬ್ರಾಡ್‌ಬ್ಯಾಂಡ್‌ ಆಫರ್‌ ಕೊಡುಗೆಯನ್ನು ಪಡೆಯುವ ಗ್ರಾಹಕರಿಗೆ ಪ್ರತಿದಿನ 5GB ಉಚಿತ ಡೇಟಾ ಸಿಗಲಿದ್ದು, 10 Mbps ವೇಗದಲ್ಲಿ ಇಂಟರ್ನೆಟ್‌ ಸೇವೆಯು ಲಭ್ಯವಾಗಲಿದೆ. ನಿಗದಿ ಪಡೆಸಿದ 5GB ಡೇಟಾ ಮುಗಿದ ಬಳಿಕ, ಇಂಟರ್ನೆಟ್‌ ವೇಗವು 1 Mbps ನಲ್ಲಿ ದೊರೆಯುತ್ತದೆ. ಈ ಅವಕಾಶವು ಇದೇ ಸೆಪ್ಟಂಬರ್ 30ರ ವರೆಗೆ ಮಾತ್ರ ಇರಲಿದೆ.

ಕ್ಯಾಶ್‌ಬ್ಯಾಕ್‌ ಆಫರ್‌

ಬಿಎಸ್‌ಎನ್‌ಎಲ್‌ ಈ ಸ್ಟ್ಯಾಂಡ್‌ಅಲೋನ್' ಪ್ರಮೋಷನಲ್ ಬ್ರಾಡ್‌ಬ್ಯಾಂಡ್‌ ಆಫರ್‌ ಹೊರತು ಪಡೆಸಿ, ಕಂಪನಿಯ ಇತರೆ ಬ್ರಾಡ್‌ಬ್ಯಾಂಡ್‌ ರೀಚಾರ್ಜ್‌ ಪ್ಲ್ಯಾನ್‌ಗಳ ಮೇಲೆ ಕ್ಯಾಶ್‌ಬ್ಯಾಕ್‌ ಆಫರ್‌ ಸಹ ನೀಡುತ್ತಿದೆ. 499ರೂ.ವರೆಗಿನ ಪ್ಲ್ಯಾನ್‌ ರೀಚಾರ್ಜ್‌ಗೆ ಶೇ.15%, 499ರೂಪಾಯಿಂದ 900ರೂ.ವರೆಗಿನ ರೀಚಾರ್ಜ್‌ ಮೇಲೆ ಶೇ.20% ಹಾಗೂ 900ರೂ.ಗಿಂತ ಅಧಿಕ ರೀಚಾರ್ಜ್‌ ಮೇಲೆ ಶೇ.25% ಕ್ಯಾಶ್‌ಬ್ಯಾಕ್ ಸೌಲಭ್ಯ ನೀಡಿದೆ.

ಅಮೆಜಾನ್‌ ಪ್ರೈಮ್‌ ಉಚಿತ

ಇತ್ತೀಚಿಗೆ ಬಿಎಸ್‌ಎನ್‌ಎಲ್‌ ತನ್ನ ವಾರ್ಷಿಕ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ಗಳನ್ನು ರೀಚಾರ್ಜ್‌ ಮಾಡಿಸುವ ಗ್ರಾಹಕರಿಗೆ ಒಂದು ವರ್ಷದ ಅವಧಿಗೆ ಅಮೆಜಾನ್‌ ಪ್ರೈಮ್‌ ಸದಸ್ಯತ್ವ ಉಚಿತವಾಗಿ ನೀಡುತ್ತಿದೆ. ಈ ಆಫರ್‌ ಸೌಲಭ್ಯ ಪಡೆಯಲು ಗ್ರಾಹಕರು 399ರೂ. ಮೇಲ್ಪಟ್ಟ ವಾರ್ಷಿಕ ರೀಚಾರ್ಜ್‌ ಮಾಡಿಸಿಕೊಳ್ಳುವ ಗ್ರಾಹಕರಿಗೆ ಅನ್ವಯವಾಗಲಿದ್ದು, 999ರೂ.ಗಳ ಅಮೆಜಾನ್ ಪ್ರೈಮ್ ಸದಸ್ಯತ್ವವು ಸಿಗಲಿದೆ.

Best Mobiles in India

English summary
Existing BSNL landline customers who do not have a broadband connection will be able to experience BSNL broadband for no cost. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+