BSNLನಿಂದ ಹೊಸ ಅಗ್ಗದ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ಗಳು ಲಾಂಚ್; ದಂಗಾದ ಜಿಯೋ!

|

ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಟೆಲಿಕಾಂ ಖಾಸಗಿ ಟೆಲಿಕಾಂಗಳಿಗೆ ಪೈಪೋಟಿ ನೀಡುವಂತಹ ಆಕರ್ಷಕ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ. ಬಿಎಸ್‌ಎನ್‌ಎಲ್‌ ಟೆಲಿಕಾಂ ಕಡಿಮೆ ದರದಿಂದ ದುಬಾರಿ ಬೆಲೆಯ ವರೆಗೂ ಹಲವು ಭಿನ್ನ ಭಾರತ್ ಫೈಬರ್ ಯೋಜನೆಗಳನ್ನು ಹೊಂದಿದೆ. ಆದರೆ ಸಂಸ್ಥೆಯು ತನ್ನ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ಗಳ ಲಿಸ್ಟ್‌ಗೆ ಈಗ ಮತ್ತೊಂದು ಅಗ್ಗದ ಯೋಜನೆಗಳ ಸರಣಿಯನ್ನು ಸೇರ್ಪಡೆ ಮಾಡಿದೆ. ಈ ಮೂಲಕ ಜಿಯೋದ ಪರಿಷ್ಕೃತ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ಗಳಿಗೆ ಸ್ಫರ್ಧೆ ಒಡ್ಡುವ ಲಕ್ಷಣ ಹೊರಹಾಕಿದೆ.

ಬಿಎಸ್‌ಎನ್‌ಎಲ್‌

ಹೌದು, ಬಿಎಸ್‌ಎನ್‌ಎಲ್‌ ಸಂಸ್ಥೆಯು ಈಗ ಹೊಸದಾಗಿ ಭಾರತ್ ಫೈಬರ್ ಬ್ರಾಡ್‌ಬ್ಯಾಂಡ್‌ ಯೋಜನೆಗಳನ್ನು ಪರಿಚಯಿಸಿದ್ದು, ಆರಂಭಿಕ ಯೋಜನೆಯ ದರವು ಜಸ್ಟ್‌ 499ರೂ. ಆಗಿದೆ. ಬಿಎಸ್‌ಎನ್‌ಎಲ್‌ನ ಈ ಅಗ್ಗದ ಬ್ರಾಡ್‌ಬ್ಯಾಂಡ್‌ ಯೋಜನೆಯನ್ನು ಫೈಬರ್ ಬೇಸಿಕ್‌ ಎಂದು ಹೇಳಲಾಗಿದೆ. ಈ ಯೋಜನೆಯು 3.3TB ಡೇಟಾ ಬಳಕೆಯ ವರೆಗೂ 30 Mbps ವೇಗದಲ್ಲಿ ಇಂಟರ್ನೆಟ್ ಸೌಲಭ್ಯ ಲಭ್ಯವಾಗಲಿದೆ. ಈ ಯೋಜನೆಯ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಮುಂದೆ ಓದಿರಿ.

ಬಿಎಸ್‌ಎನ್‌ಎಲ್‌ 499ರೂ. ಭಾರತ್ ಫೈಬರ್  ಪ್ಲ್ಯಾನ್

ಬಿಎಸ್‌ಎನ್‌ಎಲ್‌ 499ರೂ. ಭಾರತ್ ಫೈಬರ್ ಪ್ಲ್ಯಾನ್

ಬಿಎಸ್‌ಎನ್‌ಎಲ್‌ ಹೊಸ 499ರೂ.ಗಳ ಭಾರತ ಫೈಬರ್‌ ಪ್ಲ್ಯಾನ್‌ ಒಂದು ಅಗ್ಗದ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ ಆಗಿದೆ. 3.3TB ಡೇಟಾ ಬಳಕೆಯ ವರೆಗೂ 30 Mbps ವೇಗದಲ್ಲಿ ಇಂಟರ್ನೆಟ್ ಸೌಲಭ್ಯವು ಇರುತ್ತದೆ. ನಿಗದಿತ ಡೇಟಾ ಮಿತಿ ಮುಗಿದ ಬಳಿಕ 2 Mbps ವೇಗದಲ್ಲಿ ಇಂಟರ್ನೆಟ್ ಮುಂದುವರೆಯುತ್ತದೆ. ಇದರೊಂದಿಗೆ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ವಾಯಿಸ್‌ ಕರೆ ಪ್ರಯೋಜನ ಲಭ್ಯ.

ಬಿಎಸ್‌ಎನ್‌ಎಲ್‌ 799ರೂ. ಭಾರತ್ ಫೈಬರ್  ಪ್ಲ್ಯಾನ್

ಬಿಎಸ್‌ಎನ್‌ಎಲ್‌ 799ರೂ. ಭಾರತ್ ಫೈಬರ್ ಪ್ಲ್ಯಾನ್

ಬಿಎಸ್‌ಎನ್‌ಎಲ್ 799ರೂ. ಭಾರತ್ ಫೈಬರ್ ಪ್ಲ್ಯಾನ್ ಅನ್ನು ಫೈಬರ್ ವ್ಯಾಲ್ಯೂ ಎಂದು ಹೆಸರಿಸಲಾಗಿದೆ. ಈ ಪ್ಲ್ಯಾನ್ ತಿಂಗಳಿಗೆ 799ರೂ. ಆಗಿದ್ದು, 3300GB ಅಥವಾ 3.3TB ವರೆಗೆ 100 Mbps ವೇಗದಲ್ಲಿ ಇಂಟರ್ನೆಟ್‌ ಸೌಲಭ್ಯ ನೀಡುತ್ತದೆ. ಡೇಟಾ ಮಿತಿ ಮುಗಿದ ಬಳಿಕ 2 Mbps ವೇಗದಲ್ಲಿ ಇಂಟರ್ನೆಟ್ ಮುಂದುವರೆಯುತ್ತದೆ.

ಬಿಎಸ್‌ಎನ್‌ಎಲ್‌ 999ರೂ. ಭಾರತ್ ಫೈಬರ್  ಪ್ಲ್ಯಾನ್

ಬಿಎಸ್‌ಎನ್‌ಎಲ್‌ 999ರೂ. ಭಾರತ್ ಫೈಬರ್ ಪ್ಲ್ಯಾನ್

ಬಿಎಸ್ಎನ್ಎಲ್ 999ರೂ. ಭಾರತ್ ಫೈಬರ್ ಪ್ಲ್ಯಾನ್ ಅನ್ನು ಫೈಬರ್ ಪ್ರೀಮಿಯಂ ಯೋಜನೆ ಎಂದು ಹೇಳಲಾಗಿದೆ. 3300GB ಅಥವಾ 3.3TB ವರೆಗೆ 100 Mbps ವೇಗದಲ್ಲಿ ಇಂಟರ್ನೆಟ್‌ ಸೌಲಭ್ಯ ನೀಡುತ್ತದೆ. ಡೇಟಾ ಮಿತಿ ಮುಗಿದ ಬಳಿಕ 2 Mbps ವೇಗದಲ್ಲಿ ಇಂಟರ್ನೆಟ್ ಮುಂದುವರೆಯುತ್ತದೆ. ಚಂದಾದಾರರಿಗೆ ಅನಿಯಮಿತ ಧ್ವನಿ ಕರೆ ಪ್ರಯೋಜನವನ್ನು ಸಹ ನೀಡುತ್ತದೆ.

ಬಿಎಸ್‌ಎನ್‌ಎಲ್‌ 1,499ರೂ. ಭಾರತ್ ಫೈಬರ್  ಪ್ಲ್ಯಾನ್

ಬಿಎಸ್‌ಎನ್‌ಎಲ್‌ 1,499ರೂ. ಭಾರತ್ ಫೈಬರ್ ಪ್ಲ್ಯಾನ್

ಬಿಎಸ್‌ಎನ್‌ಎಲ್ ಈ ಯೋಜನೆಯನ್ನು ಫೈಬರ್ ಅಲ್ಟ್ರಾ ಬ್ರಾಡ್‌ಬ್ಯಾಂಡ್ ಯೋಜನೆ ಎಂದು ಹೆಸರಿಸಲಾಗಿದೆ. ಈ ಯೋಜನೆಯ ತಿಂಗಳ ಶುಲ್ಕ 1,499ರೂ. ಆಗಿದೆ. ಈ ಯೋಜನೆಯು 300 ಎಮ್‌ಬಿಪಿಎಸ್ ವೇಗದೊಂದಿಗೆ ಬರುತ್ತದೆ.

ಪ್ಲ್ಯಾನ್ ಲಭ್ಯತೆ

ಪ್ಲ್ಯಾನ್ ಲಭ್ಯತೆ

ಬಿಎಸ್‌ಎನ್‌ಎಲ್‌ ಹೊಸ 499ರೂ.ಗಳ ಭಾರತ ಫೈಬರ್‌ ಪ್ಲ್ಯಾನ್‌ ಅಗ್ಗದ ಪ್ರೈಸ್‌ಟ್ಯಾಗ್‌ನಿಂದ ಗಮನ ಸೆಳೆದಿದೆ. ಇನ್ನು ಈ ಪ್ಲ್ಯಾನ್ ಅಂಡಮಾನ್ ಹಾಗೂ ನಿಕೋಬಾರ್‌ ಪ್ರದೇಶಗಳನ್ನು ಹೊರತುಪಡಿಸಿ ದೇಶದ ಎಲ್ಲ ಟೆಲಿಕಾಂ ಪ್ರದೇಶಗಳ ವ್ಯಾಪ್ತಿಗಳಲ್ಲಿ ಲಭ್ಯವಾಗಲಿದೆ. ಅಕ್ಟೋಬರ್ 1, 2020ರಿಂದ ಲಭ್ಯವಾಗಲಿವೆ.

Best Mobiles in India

English summary
BSNL will start offering the four plans in several cities starting October 1, 2020.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X