ದಸರಾ ಹಬ್ಬಕ್ಕೆ BSNL ಭರ್ಜರಿ ಆಫರ್!..ಅಮಿತ ಕರೆ ಮತ್ತು 90 ಜಿಬಿ ಡೇಟಾ __ಬೆಲೆಗೆ!!?
ದಸರಾ ಹಬ್ಬದ ಪ್ರಯುಕ್ತ ಸರ್ಕಾರಿ ನಿಯಮಿತ ಟೆಲಿಕಾಂ ಸಂಸ್ಥೆ ಬಿಎಸ್ಎನ್‌ಎಲ್ ತನ್ನ ಗ್ರಾಹಕರಿಗೆ ಭರ್ಜರಿ ಕ್ಯಾಶ್‌ಬ್ಯಾಕ್ ಆಫರ್‌ಗಳನ್ನು ಘೋಷಿಸಿದೆ.!
ದಸರಾ ಹಬ್ಬದ ಪ್ರಯುಕ್ತ ಸರ್ಕಾರಿ ನಿಯಮಿತ ಟೆಲಿಕಾಂ ಸಂಸ್ಥೆ ಬಿಎಸ್ಎನ್‌ಎಲ್ ತನ್ನ ಗ್ರಾಹಕರಿಗೆ ಭರ್ಜರಿ ಕ್ಯಾಶ್‌ಬ್ಯಾಕ್ ಆಫರ್‌ಗಳನ್ನು ಘೋಷಿಸಿದೆ.! ಬಿಎಸ್ಎನ್‌ಎಲ್ ಗ್ರಾಹಕರು ಶೇ.50ರಷ್ಟು ಕ್ಯಾಶ್‌ಬ್ಯಾಕ್ ಕೊಡುಗೆಗಳನ್ನು ಸೀಮಿತ ಅವಧಿಗೆ ಪಡೆದುಕೊಳ್ಳಬಹುದಾಗಿದ್ದು, ರೀಚಾರ್ಜ್ ಮಾಡಿಕೊಳ್ಳಲು ಇದು ಸಕಾಲವಾಗಿದೆ.!!
ಬಿಎಸ್ಎನ್‌ಎಲ್ ಗ್ರಾಹಕರು 'ಕ್ಯಾಶ್ ಬ್ಯಾಕ್ ಇನ್ ಮೇನ್ ಅಕೌಂಟ್' ವಿಭಾಗದಲ್ಲಿ ಟಾಕ್ ವಾಲ್ಯೂ ರೂಪದಲ್ಲಿ ಶೇ.50ರಷ್ಟು ಕ್ಯಾಶ್ ಬ್ಯಾಕ್ ಪಡೆಯಬಹುದಾಗಿದ್ದು, ಎಸ್‌ಟಿವಿಎಸ್ ವಾಯ್ಸ್ ರಿಚಾರ್ಜ್‌ಗಳಲ್ಲಿ ಸೆಪ್ಟೆಂಬರ್ 25ರಿಂದ ಒಂದು ತಿಂಗಳಿನ ಕಾಲ ಈ ಆಫರ್ ಲಭ್ಯವಿದೆ ಎಂದು ಬಿಎಸ್ಎನ್‌ಎಲ್ ಪ್ರಕಟಣೆಯಲ್ಲಿ ತಿಳಿಸಿದೆ.!!

429 ರೂ.ಗಳ ವಾಯ್ಸ್ ಮತ್ತು ಡೇಟಾ ಸೆಂಟ್ರಿಕ್ ಪ್ಲಾನ್‌ನಲ್ಲಿ ಯಾವುದೇ ನೆಟ್‌ವರ್ಕ್‌ಗೆ ಅಮಿತ ಕರೆ ಮತ್ತು ದಿನಕ್ಕೆ 1 ಜಿಬಿ ಡೇಟಾವನ್ನು ಕೂಡ 90 ದಿನಗಳ ಅವಧಿಗೆ ಪಡೆಯಬಹುದು ಎಂದು ಬಿಎಸ್‌ನ್ನೆಲ್ ಪ್ರಕಟಣೆ ತಿಳಿಸಿದೆ.! ಜೊತೆಗೆ ಬಿಎಸ್ಎನ್‌ಎಲ್‌ನ ಎಸ್‌ಟಿವಿ 44, 132, 65, ಮತ್ತು 69ಕ್ಕೆ ಶೇ.50ರಷ್ಟು ಕ್ಯಾಶ್ ಬ್ಯಾಕ್ ಅನ್ವಯವಾಗುತ್ತದೆ.!!

40 ರೂ, 60 ಮತ್ತು 80 ರೂ. ಟಾಪ್-ಅಪ್‌ನಲ್ಲಿ ಫುಲ್ ಟಾಕ್ ಟೈಮ್ ದೊರೆಯಲಿದೆ. ಜೊತೆಗೆ ಹಲವು ಆಫರ್‌ಗಳನ್ನು ಬಿಎಸ್ಎನ್‌ಎಲ್ ನೀಡಿದ್ದು, ಬಿಎಸ್‌ಎನ್‌ಎಲ್ ಅಫಿಷಿಯಲ್ ವೆಬ್‌ಸೈಟ್‌ನಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಬಹುದು.!!
ಓದಿರಿ: 5000 ರೂ.ಒಳಗೆ ಲಭ್ಯವಿರುವ ಟಾಪ್ 5 ಸ್ಮಾರ್ಟ್‌ಫೋನ್ ಲೀಸ್ಟ್ ಇಲ್ಲಿದೆ!!


Click it and Unblock the Notifications