ಬಿಎಸ್‌ಎನ್‌ಎಲ್‌ ಐಪಿಎಲ್‌ ಪ್ಲಾನ್!.ಅಭಿಮಾನಿಗಳಿಗೆ ಸೀಗಲಿದೆ ಭರ್ಜರಿ ಗಿಫ್ಟ್!

|

ಕ್ರಿಕೆಟ್ ಪ್ರೇಮಿಗಳ ಕ್ರೇಜ್ ಹೆಚ್ಚಿಸುವ ಐಪಿಎಲ್ ಪಂದ್ಯಗಳು ಮತ್ತೆ ಶುರುವಾಗಿದ್ದು, ಇದೀಗ ಸರ್ಕಾರಿ ಸ್ವಾಮ್ಯದ ಭಾರತ ಸಂಚಾರ ನಿಗಮ ಲಿಮಿಟೆಡ್ (ಬಿಎಸ್‌ಎನ್ಎಲ್) ಟೆಲಿಕಾಂ ಸಂಸ್ಥೆಯು ಗ್ರಾಹಕರಿಗೆ ಭರ್ಜರಿ ಧಮಾಕ್ ನೀಡಲು ಮುಂದಾಗಿದೆ. ಐಪಿಎಲ್ ಪ್ರಯುಕ್ತ ಬಿಎಸ್‌ಎನ್‌ಎಲ್‌ ಭರ್ಜರಿ ಪ್ಲಾನ್‌ಗಳನ್ನು ಪರಿಚಯಿಸಿದ್ದು, ಇದು ಕ್ರಿಕೆಟ್‌ ಅಭಿಮಾನಿಗಳಿಗೆ ಖುಷಿ ನೀಡಲಿದೆ.

ಬಿಎಸ್‌ಎನ್‌ಎಲ್‌ ಐಪಿಎಲ್‌ ಪ್ಲಾನ್!.ಅಭಿಮಾನಿಗಳಿಗೆ ಸೀಗಲಿದೆ ಭರ್ಜರಿ ಗಿಫ್ಟ್!

ಹೌದು, ಬಿಎಸ್‌ಎನ್ಎಲ್ ಟೆಲಿಕಾಂ ಸಂಸ್ಥೆಯು ವಾಯಿಸ್‌ ಕರೆ ಮತ್ತು ಉಚಿತ ಡಾಟಾ ಒಳಗೊಂಡ ಎರಡು ಪ್ಲಾನ್‌ಗಳನ್ನು ಬಿಡುಗಡೆ ಮಾಡಿದ್ದು, ಅವು 149ರೂ.ಗಳು ಮತ್ತು 499ರೂ.ಗಳ ದರದಲ್ಲಿ ಗ್ರಾಹಕರಿಗೆ ಲಭ್ಯವಾಗಲಿವೆ. ಈ ಮೂಲಕ ಹೊಸ ಗ್ರಾಹಕರನ್ನು ಸೆಳೆಯಲಿದೆ ಎನ್ನಲಾಗುತ್ತಿದೆ. ಪ್ರಸ್ತುತ ಇರುವ ಗ್ರಾಹಕರು ಸಹ ಈ ಪ್ಲಾನ್‌ಗಳನ್ನು ಹಾಕಿಸಿಕೊಳ್ಳಬಹುದಾಗಿದೆ. ಹಾಗಾದರೇ ಬಿಎಸ್‌ಎನ್‌ಎಲ್ ಹೊಸ ಪ್ಲಾನ್‌ ಏನು ಆಫರ್‌ ನೀಡಲಿವೆ ಎಂಬುದನ್ನು ನೋಡೋಣ ಬನ್ನಿರಿ.

ಐಪಿಎಲ್ ಎಸ್‌ಎಮ್‌ಎಸ್‌ ಅಲರ್ಟ್

ಐಪಿಎಲ್ ಎಸ್‌ಎಮ್‌ಎಸ್‌ ಅಲರ್ಟ್

ಐಪಿಎಲ್ ಹವಾ ಜೋರಾಗಿದ್ದು, ಕ್ರಿಕೆಟ್ ಅಭಿಮಾನಿಗಳಿಗೆ ಮ್ಯಾಚ್‌ ಅಪ್‌ಡೇಟ್ ನೀಡಲು ಬಿಎಸ್‌ಎನ್‌ಎಲ್ ತನ್ನ ಹೊಸ ಪ್ಲಾನ್‌ಗಳಲ್ಲಿ ಉಚಿತ ಎಸ್‌ಎಮ್‌ಎಸ್‌ ಅಲರ್ಟ್‌ ಸೌಲಭ್ಯ ಒದಗಿಸಿದೆ. ಹೊಸ ಬಿಎಸ್‌ಎನ್‌ಎಲ್ ಪ್ಲಾನ್‌ ಹಾಕಿಸಿಕೊಳ್ಳುವ ಗ್ರಾಹಕರು ಎಸ್‌ಎಮ್‌ಎಸ್‌ ಮೂಲಕ ಪ್ರತಿ ಕ್ರಿಕೆಟ್‌ ಪಂದ್ಯಗಳ ಮಾಹಿತಿಯನ್ನು ಪಡೆಯಬಹುದಾಗಿದೆ.

149ರೂ.ಗಳ ಪ್ಲಾನ್

149ರೂ.ಗಳ ಪ್ಲಾನ್

149ರೂ.ಗಳ ಈ ಪ್ಲಾನಿನಲ್ಲಿ ಗ್ರಾಹಕರಿಗೆ ಪ್ರತಿದಿನ 1GB ಡೇಟಾ ಉಚಿತವಾಗಿ ದೊರೆಯಲಿದ್ದು, ಇದರೊಂದಿಗೆ ಕರೆಗಳ ಸೌಲಭ್ಯವು ಇರಲಿದೆ. ಕ್ರಿಕೆಟ್‌ ಪಂದ್ಯಗಳ ಎಸ್‌ಎಮ್‌ಎಸ್‌ ಅಲರ್ಟ್ ಸಹ ಪಡೆಯುವ ಆಯ್ಕೆಯನ್ನು ಹೊಂದಿರುವ ಈ ಪ್ಲಾನ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.

499ರೂ.ಗಳ ಪ್ಲಾನ್

499ರೂ.ಗಳ ಪ್ಲಾನ್

ಬಿಎಸ್‌ಎನ್‌ಎಲ್‌ 449ರೂ.ಗಳ ಈ ಪ್ಲಾನ 90ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಗ್ರಾಹಕರಿಗೆ ಪ್ರತಿದಿನ 1GB ಡೇಟಾ ಉಚಿತವಾಗಿ ದೊರೆಯಲಿದೆ. ಇದರೊಂದಿಗೆ ಉಚಿತ ಅನಿಯಮಿತ ಕರೆಗಳ ಸೌಲಭ್ಯವು ಲಭ್ಯವಾಗಲಿದೆ. ಕ್ರಿಕೆಟ್‌ ಪಂದ್ಯಗಳ ಎಸ್‌ಎಮ್‌ಎಸ್‌ ಅಲರ್ಟ್ ಸಹ ಪಡೆಯುವ ಆಯ್ಕೆ ಸಹ ಇದೆ.

Best Mobiles in India

English summary
Government-owned telecom operator BSNL has launched IPL plans that start at Rs 199 and go up to Rs 499. Apart from data benefits, the plans also offer unlimited voice calling..to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X