ಬಿಎಸ್ಎನ್‌ಎಲ್ 108ರೂ.ಪ್ಲ್ಯಾನ್ : ಉಚಿತ ಡೇಟಾ, ವ್ಯಾಲಿಡಿಟಿಯಲ್ಲಿ ಟ್ವಿಸ್ಟ್!
ಖಾಸಗಿ ಟೆಲಿಕಾಂ ಸಂಸ್ಥೆಗಳಿಗೆ ಏಕ್‌ಧಮ್ ಟಫ್ ಫೈಟ್ ನೀಡುತ್ತ ಮುನ್ನುಗ್ಗುತ್ತಿರುವ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಟೆಲಿಕಾಂ ಸಂಸ್ಥೆಯು ಇತ್ತೀಚಿಗೆ ಹಲವು ಹೊಸ ಪ್ಲ್ಯಾನ್‌ಗಳನ್ನು ಬಿಡುಗಡೆ ಮಾಡಿದೆ. ಬಿಎಸ್‌ಎನ್‌ಎಲ್ ಮತ್ತೊಂದು ನೂತನ ಪ್ರೀಪೇಡ್ ಪ್ಲ್ಯಾನ್ ಬಿಡುಗಡೆ ಮಾಡಿದ್ದು, ಈ ಮೂಲಕ ಖಾಸಗಿ ಟೆಲಿಕಾಂ ಸಂಸ್ಥೆಗಳಿಗೆ ಬಿಸಿ ಮುಟ್ಟಿಸಿದೆ. ಅಗ್ಗದ ಪ್ರೈಸ್‌ಟ್ಯಾಗ್‌ನಲ್ಲಿರುವ ಈ ರೀಚಾರ್ಜ್ ಪ್ಲ್ಯಾನ್ ಗ್ರಾಹಕರನ್ನು ಆಕರ್ಷಿಸಲಿದೆ.

ಹೌದು, ಬಿಎಸ್‌ಎನ್ಎಲ್ ಸಂಸ್ಥೆಯು ಇದೀಗ ಹೊಸದಾಗಿ 108ರೂ. ಪ್ರೀಪೇಡ್ ಪ್ಲ್ಯಾನ್ ಅನ್ನು ಪರಿಚಯಿಸಿದ್ದು, ಈ ಪ್ಲ್ಯಾನ್ 180 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದುಕೊಂಡಿದೆ. ಇದರೊಂದಿಗೆ ಪ್ರತಿದಿನ ಉಚಿತ 1GB ಡೇಟಾ, ಉಚಿತ ವಾಯಿಸ್ ಕರೆಗಳು, ಉಚಿತ ಎಸ್‌ಎಮ್‌ಎಸ್ ಸೌಲಭ್ಯಗಳು ಲಭ್ಯವಾಗಲ ದೊರೆಯಲಿದೆ. ಆದರೆ ಉಚಿತ ಪ್ರಯೋಜನೆಗಳ ವ್ಯಾಲಿಡಿಟಿ ಅವಧಿ 28 ದಿನಗಳು ಮಾತ್ರ. ಹಾಗಾದರೇ ಬಿಎಸ್ಎನ್‌ಎಲ್‌ನ 108ರೂ. ಪ್ಲ್ಯಾನಿನ ವಿಶೇಷತೆಗಳೆನು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಬಿಎಸ್‌ಎನ್‌ಎಲ್- 108ರೂ.ಪ್ಲ್ಯಾನ್
ಬಿಎಸ್‌ಎನ್‌ಎಲ್‌ನ 108ರೂ.ಗಳ ಪ್ರೀಪೇಡ್ ಪ್ಲ್ಯಾನ್‌ನಲ್ಲಿ ಗ್ರಾಹಕರಿಗೆ ಪ್ರತಿದಿನ 1GB ಡೇಟಾ ಸೌಲಭ್ಯ, ಉಚಿತ ಅನಿಯಮಿತ (ಪ್ರತಿದಿನ 250 ನಿಮಿಷಗಳು) ಕರೆಗಳ ಪ್ರಯೋಜನ, 28 ದಿನಗಳಿಗೆ 500 ಉಚಿತ ಎಸ್‌ಎಮ್‌ಎಸ್‌ಗಳ ಪ್ರಯೋಜನೆಗಳು ದೊರೆಯಲಿವೆ. ಹಾಗೆಯೇ ದೆಹಲಿ ಮತ್ತು ಮುಂಬೈ ಸರ್ಕಲ್ ವ್ಯಾಪ್ತಿಯ MTNL ನೆಟವರ್ಕ್‌ಗಳಿಗೂ ಉಚಿತ ಕರೆಗಳು ಸಿಗಲಿವೆ.

ಬಿಗ್ ವ್ಯಾಲಿಡಿಟಿ
ಬಿಎಸ್‌ಎನ್‌ಎಲ್ FRC-108ರೂ.ಗಳ ಪ್ರೀಪೇಡ್ ಪ್ಲ್ಯಾನ್ ಒಟ್ಟು 180 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದುಕೊಂಡಿದ್ದು, ಆದರೆ ಗ್ರಾಹಕರಿಗೆ ಮೊದಲ 28 ದಿನಗಳು ಮಾತ್ರ ಉಚಿತ ಡೇಟಾ, ಕರೆಗಳು, ಎಸ್‌ಎಮ್‌ಎಸ್ ಪ್ರಯೋಜನಗಳ ಸೌಲಭ್ಯ ದೊರೆಯುತ್ತದೆ. 28 ದಿನಗಳಿಗೆ ಅವಧಿ ಮುಗಿದ ನಂತರ ಉಚಿತ ಕರೆಗಳು ಇರುವುದಿಲ್ಲ. ಮತ್ತೆ ಪ್ಲ್ಯಾನ್ ರೀಚಾರ್ಜ್ ಮಾಡಿಕೊಳ್ಳಬೇಕು.

ಹೊಸ ಪ್ಲ್ಯಾನ್ ಲಭ್ಯತೆ
ಬಿಎಸ್‌ಎನ್‌ಎಲ್‌ನ ಹೊಸ 108ರೂ.ಗಳ ಪ್ರೀಪೇಡ್ ಪ್ಲ್ಯಾನ್ ಚೆನೈ ಮತ್ತು ತಮಿಳನಾಡು ನಗರಗಳ ಟೆಲಿಕಾಂ ಸರ್ಕಲ್ ವ್ಯಾಪ್ತಿಯಲ್ಲಿನ ಗ್ರಾಹಕರಿಗೆ ಮಾತ್ರ ಲಭ್ಯವಾಗಲಿದೆ. ಹಾಗೂ ಈ ಪ್ಲ್ಯಾನ್ ಬಿಎಸ್‌ಎನ್‌ಎಲ್‌ನ ಹೊಸ ಗ್ರಾಹಕರಿಗೆ ಮಾತ್ರ ಅನ್ವಯವಾಗಲಿದೆ. ಮುಂದಿನ ದಿನಗಳಲ್ಲಿ ಈ ಪ್ಲ್ಯಾನ್ ಅನ್ನು ಇತರೆ ಟೆಲಿಕಾಂ ಸರ್ಕಲ್‌ಗಳಿಗೂ ಬಿಎಸ್‌ಎನ್‌ಎಲ್ ವಿಸ್ತರಿಸುವ ಸಾಧ್ಯತೆಗಳಿವೆ.

MTNL ನೆಟವರ್ಕಗೆ ಫ್ರೀ ಕಾಲ್
ಬಿಎಸ್‌ಎನ್‌ಎಲ್‌ನ ಇತ್ತೀಚಿಗೆ ತನ್ನ ಜನಪ್ರಿಯ ಪ್ರೀಪೇಡ್ ಪ್ಲ್ಯಾನ್‌ಗಳಾದ 429ರೂ, ಪ್ಲ್ಯಾನ್ 485ರೂ, ಪ್ಲ್ಯಾನ್ ಮತ್ತು 666ರೂ,ಪ್ಲ್ಯಾನ್‌ಗಳಲ್ಲಿ ಇನ್ನು MTNL ನೆಟವರ್ಕ್‌ಗಳಿಗೂ ಉಚಿತ ವಾಯಿಸ್ ಕರೆ ಮಾಡುವ ಪ್ರಯೋಜನ ಲಭ್ಯವಾಗಲಿದೆ. ಆದ್ರೆ, ಪ್ರತಿದಿನ 250 ನಿಮಿಷಗಳು (ಮುಂಬೈ ಮತ್ತು ದೆಹಲಿ MTNL ಕರೆಗಳನ್ನು ಒಳಗೊಂಡಂತೆ) ಮಾತ್ರ ಉಚಿತ ವಾಯಿಸ್ ಕರೆ ಸೌಲಭ್ಯ ದೊರೆಯಲಿದೆ.

MTNL-BSNL ವಿಲಿನ
ಬಿಎಸ್‌ಎನ್‌ಎನ್ ಈ ಮೇಲೆ ತಿಳಿಸಿದ ಮೂರು ಪ್ರೀಪೇಡ್ ಪ್ಲ್ಯಾನ್‌ಗಳು ಮಾತ್ರ MTNL ನೆಟವರ್ಕ್‌ಗೆ ಫ್ರೀ ವಾಯಿಸ್ ಕರೆ ಪ್ರಯೋಜನ ನೀಡಲಿದೆ. ಬಿಎಸ್‌ಎನ್‌ಎಲ್ ಮತ್ತು ಎಮ್‌ಟಿಎನ್‌ಎಲ್ ಅಧಿಕೃತವಾಗಿ ವಿಲಿನಗೊಂಡ ನಂತರ ಇನ್ನುಳಿದ ಇತರೆ ಬಿಎಸ್‌ಎನ್‌ಎಲ್‌ನ ಪ್ರೀಪೇಡ್ ಪ್ಲ್ಯಾನ್‌ಗಳು ಸಹ MTNL ನೆಟವರ್ಕ್‌ಗೆ ಉಚಿತ ವಾಯಿಸ್ ಕರೆಗಳ ಪ್ರಯೋಜನ ಒದಗಿಸುವ ಸಾಧ್ಯತೆಗಳಿವೆ.


Click it and Unblock the Notifications








