BSNLನಿಂದ ಹೊಸದಾಗಿ 399ರೂ.ಪ್ಲ್ಯಾನ್; ಸಿಕ್ಕಾಪಟ್ಟೆ ಪ್ರಯೋಜನ!
ದೇಶದ ಟೆಲಿಕಾಂ ಸಂಸ್ಥೆಗಳು ಗ್ರಾಹಕರನ್ನು ಸೆಳೆಯಲು ಆಕರ್ಷಕ ಪ್ರಯೋಜನಗಳ ಪ್ರೀಪೇಯ್ಡ್ ಪ್ಲ್ಯಾನ್ ಪರಿಚಯಿಸುತ್ತಿವೆ. ಈ ನಿಟ್ಟಿನಲ್ಲಿ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಟೆಲಿಕಾಂ ಸಹ ಹಲವು ಅತ್ಯುತ್ತಮ, ಡೇಟಾ ಹಾಗೂ ವ್ಯಾಲಿಡಿಟಿ ಯೋಜನೆಗಳನ್ನು ನೀಡಿದೆ. ಇದೇ ಹಾದಿಯಲ್ಲಿ ಬಿಎಸ್‌ಎನ್‌ಎಲ್ ಈಗ ಮತ್ತೊಂದು ಹೊಸ ಪ್ರೀಪೇಯ್ಡ್ ಯೋಜನೆಯನ್ನು ಬಿಡುಗಡೆ ಮಾಡಿದ್ದು, ಖಾಸಗಿ ಟೆಲಿಕಾಂಗಳಿಗೆ ಪೈಪೋಟಿ ನೀಡುವ ಸೌಲಭ್ಯಗಳನ್ನು ಪಡೆದಿದೆ.

ಹೌದು, ಬಿಎಸ್‌ಎನ್‌ಎಲ್ ಸಂಸ್ಥೆಯು ಹೊಸದಾಗಿ PV399ರೂ. ಪ್ರೀಪೇಯ್ಡ್ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯು ಉಚಿತ ವಾಯಿಸ್ ಕರೆ, ಪ್ರತಿದಿನ ಡೇಟಾ ಸೌಲಭ್ಯ, ಎಸ್‌ಎಮ್‌ಎಸ್ ಪ್ರಯೋಜನ ಹಾಗೂ ಬಿಗ್ ವ್ಯಾಲಿಡಿಟಿಯನ್ನು ಒಳಗೊಂಡಿದೆ. ಈ ಹೊಸ ಯೋಜನೆಯು ಇದೇ ಆಗಸ್ಟ್ 15ರಂದು ಗ್ರಾಹಕರಿಗೆ ಲಭ್ಯವಾಗಲಿದೆ. ಹಾಗಾದರೇ ಬಿಎಸ್‌ಎನ್‌ಎಲ್ PV399ರೂ. ಪ್ಲ್ಯಾನಿನ ಪ್ರಯೋಜನಗಳೆನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಬಿಎಸ್‌ಎನ್‌ಎಲ್ PV399ರೂ. ಪ್ಲ್ಯಾನ್
ಬಿಎಸ್‌ಎನ್‌ಎಲ್ ಈ ಹೊಸ ಯೋಜನೆಯಲ್ಲಿ ಪ್ರತಿದಿನ 1GB ಡೇಟಾ ಸೌಲಭ್ಯ ದೊರೆಯುತ್ತದೆ. ಇದರೊಂದಿಗೆ ಪ್ರತಿದಿನ 100 ಎಸ್‌ಎಮ್‌ಎಸ್ ಹಾಗೂ ಯಾವುದೇ ನೆಟವರ್ಕ್‌ಗೆ ಪ್ರತಿದಿನ 250 ನಿಮಿಷಗಳ ವಾಯಿಸ್ ಕರೆಯ ಸೌಲಭ್ಯ ಲಭ್ಯವಾಗುತ್ತವೆ. ಇನ್ನು ಈ ಯೋಜನೆಯು ಒಟ್ಟು 80 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ನಿಗದಿತ 1 ಜಿಬಿ ದೈನಂದಿನ ಡೇಟಾ ಬಳಕೆಯಾದ ಬಳಿಕ 80 ಕೆಬಿಪಿಎಸ್ ವೇಗದಲ್ಲಿ ಡೇಟಾ ಮುಂದುವರೆಯಲಿದೆ. ಜೊತೆಗೆ ಗ್ರಾಹಕರಿಗೆ ಉಚಿತ ಬಿಎಸ್‌ಎನ್‌ಎಲ್ ಟ್ಯೂನ್ಸ್ ಲಭ್ಯವಿದೆ.

ಪ್ಲ್ಯಾನ್ ಲಭ್ಯತೆ
ಬಿಎಸ್‌ಎನ್‌ಎಲ್‌ನ ನೂತನ PV399ರೂ. ಪ್ಲ್ಯಾನ್ ಇದೇ ಆಗಸ್ಟ್ 15ರಂದು ಗ್ರಾಹಕರಿಗೆ ಲಭ್ಯವಾಗಲಿದೆ. ಹಾಗೆಯೇ ಬಿಎಸ್‌ಎನ್‌ಎಲ್‌ನ PV1699 ಮತ್ತು STV399 ಪ್ಲ್ಯಾನ್‌ಗಳು ಇಂದು (ಆಗಷ್ಟ್ 14) ಸ್ಥಗಿತವಾಗಲಿವೆ. ಇವೆರಡಕ್ಕೆ ಪರ್ಯಾಯವೆಂಬಂತೆ ಬಿಎಸ್‌ಎನ್‌ಎಲ್ PV399ರೂ. ಪ್ಲ್ಯಾನ್ ಗ್ರಾಹಕರಿಗೆ ಲಭ್ಯವಾಗಲಿದೆ. ಬಿಎಸ್‌ಎನ್‌ಎಲ್‌ನ ಇತರೆ ಇತ್ತೀಚಿನ ಪ್ಲ್ಯಾನ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಬಿಎಸ್‌ಎನ್‌ಎಲ್ 599ರೂ. ಪ್ಲ್ಯಾನ್
ಬಿಎಸ್‌ಎನ್‌ಎಲ್ ಈ ಹೊಸ ಯೋಜನೆಯಲ್ಲಿ ಪ್ರತಿದಿನ 5GB ಡೇಟಾ ಸೌಲಭ್ಯ ದೊರೆಯುತ್ತದೆ. ಇದರೊಂದಿಗೆ ಪ್ರತಿದಿನ 100 ಎಸ್‌ಎಮ್‌ಎಸ್ ಹಾಗೂ ಪ್ರತಿದಿನ 250 ನಿಮಿಷಗಳ ಕರೆಯ ಸೌಲಭ್ಯಗಳು ಲಭ್ಯವಾಗುತ್ತವೆ. ಇನ್ನು ಈ ಯೋಜನೆಯು ಒಟ್ಟು 90 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಒಟ್ಟು ಪೂರ್ಣ ಅವಧಿಯ ವ್ಯಾಲಿಡಿಟಿಯಲ್ಲಿ ಒಟ್ಟು 450GB ಡೇಟಾ ಪ್ರಯೋಜನ ದೊರೆಯುತ್ತದೆ.

ಬಿಎಸ್‌ಎನ್‌ಎಲ್ 151ರೂ. ಪ್ಲ್ಯಾನ್
ಬಿಎಸ್‌ಎನ್‌ಎಲ್‌ನ ಈ ಹೊಸ ಡೇಟಾ ವೋಚರ್ (STV DATA151) ಒಟ್ಟು 30 ದಿನಗಳ ವ್ಯಾಲಿಡಿಟಿ ಪ್ರಯೋಜನ ಹೊಂದಿದೆ. ಈ ಅವಧಿಯಲ್ಲಿ ಒಟ್ಟು 40GB ಡೇಟಾ ಸೌಲಭ್ಯವನ್ನು ಒದಗಿಸಲಿದೆ.

ಬಿಎಸ್‌ಎನ್‌ಎಲ್ 251ರೂ. ಪ್ಲ್ಯಾನ್
ಬಿಎಸ್‌ಎನ್‌ಎಲ್‌ನ ಈ ಹೊಸ ಡೇಟಾ ವೋಚರ್ ಸಹ (STV DATA251) ಒಟ್ಟು 30 ದಿನಗಳ ವ್ಯಾಲಿಡಿಟಿ ಪ್ರಯೋಜನ ಹೊಂದಿದೆ. ಆದರೆ ಈ ಅವಧಿಯಲ್ಲಿ ಒಟ್ಟು 70GB ಡೇಟಾ ಸೌಲಭ್ಯವನ್ನು ಒದಗಿಸಲಿದೆ.


Click it and Unblock the Notifications








