Home
ಸುದ್ದಿಜಾಲ

BSNLನಿಂದ ಹೈ ಸ್ಪೀಡ್ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ ಲಾಂಚ್!..ಥಂಡಾ ಹೊಡೆದ ಜಿಯೋ!

ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಟೆಲಿಕಾಂ ಖಾಸಗಿ ಟೆಲಿಕಾಂಗಳಿಗೆ ಪೈಪೋಟಿ ನೀಡುವಂತಹ ಆಕರ್ಷಕ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ. ಬಿಎಸ್‌ಎನ್‌ಎಲ್‌ ಟೆಲಿಕಾಂ ಕಡಿಮೆ ಬೆಲೆಯಿಂದ ದುಬಾರಿ ಬೆಲೆಯ ವರೆಗೂ ಹಲವು ಭಿನ್ನ ಬ್ರಾಡ್‌ಬ್ಯಾಂಡ್‌ ಯೋಜನೆಗಳ ಆಯ್ಕೆ ಹೊಂದಿದೆ. ಆದರೆ ಬಿಎಸ್‌ಎನ್‌ಎಲ್‌ ಸಂಸ್ಥೆಯು ತನ್ನ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ಗಳ ಲಿಸ್ಟ್‌ಗೆ ಈಗ ಮತ್ತೆ ಎರಡು ಹೈ ಸ್ಪೀಡ್ ಬ್ರಾಡ್‌ಬ್ಯಾಂಡ್‌ ಯೋಜನೆಗಳನ್ನು ಸೇರ್ಪಡೆ ಮಾಡಿದೆ. ಈ ಮೂಲಕ ಜಿಯೋ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ಗಳಿಗೆ ಪೈಪೋಟಿ ನೀಡುವಂತಹ ಲಕ್ಷಣಗಳನ್ನು ಸೂಚಿಸಿದೆ.

ಬ್ರಾಡ್‌ಬ್ಯಾಂಡ್‌

ಹೌದು, ಬಿಎಸ್‌ಎನ್‌ಎಲ್‌ ಸಂಸ್ಥೆಯು ಈಗ ಹೊಸದಾಗಿ ಸೂಪರ್‌ಸ್ಟಾರ್ ಪ್ರೀಮಿಯಂ ಹೆಸರಿನಲ್ಲಿ ಎರಡು ಹೈ ಸ್ಪೀಡ್ ಬ್ರಾಡ್‌ಬ್ಯಾಂಡ್‌ ಯೋಜನೆಗಳನ್ನು ಲಾಂಚ್ ಮಾಡಿದೆ. ಅವುಗಳು ಕ್ರಮವಾಗಿ 749ರೂ ಮತ್ತು 949ರೂ. ಆಗಿವೆ. ಈ ಎರಡು ನೂತನ ಭಾರತ್ ಫೈಬರ್ ಯೋಜನೆಗಳು OTT ಓಟಿಟಿ ಪ್ರಯೋಜನಗಳನ್ನು ಒಳಗೊಂಡಿದ್ದು, ಆಕರ್ಷಕ ಎನಿಸಿವೆ. ಹಾಗಾದರೇ ಬಿಎಸ್‌ಎನ್‌ಎಲ್‌ ಟೆಲಿಕಾಂನ ಹೊಸ ಭಾರತ್ ಫೈಬರ್ ಬ್ರಾಡ್‌ಬ್ಯಾಂಡ್‌ ಯೋಜನೆಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಬಿಎಸ್‌ಎನ್‌ಎಲ್‌ 749ರೂ. ಭಾರತ್ ಫೈಬರ್ ಪ್ಲ್ಯಾನ್ ಪ್ರಯೋಜನ

ಬಿಎಸ್‌ಎನ್‌ಎಲ್‌ 749ರೂ. ಭಾರತ್ ಫೈಬರ್ ಪ್ಲ್ಯಾನ್ ಪ್ರಯೋಜನ

ಬಿಎಸ್ಎನ್ಎಲ್ 749ರೂ. ಭಾರತ್ ಫೈಬರ್ ಪ್ಲ್ಯಾನ್ ಅನ್ನು ಫೈಬರ್ ಹೈ ಸ್ಪೀಡ್‌ ಪಡೆದಿದೆ. ಈ ಯೋಜನೆಯು ತಿಂಗಳಿಗೆ 1000GB ಡೇಟಾ ಪ್ರಯೋಜನವನ್ನು ಪಡೆದಿದ್ದು, 100 Mbps ವೇಗದಲ್ಲಿ ಇಂಟರ್ನೆಟ್‌ ಸೌಲಭ್ಯ ನೀಡುತ್ತದೆ. ಇದಲ್ಲದೆ, ಈ ಯೋಜನೆಯು ಬಿಎಸ್ಎನ್ಎಲ್ ಸಿನಿಮಾ ಪ್ಲಸ್, ಸೋನಿಲೈವ್ ಪ್ರೀಮಿಯಂ, ಜೀ5 ಪ್ರೀಮಿಯಂ, ವೂಟ್ ಸೆಲೆಕ್ಟ್, ಯಪ್ ಟಿವಿ ಮತ್ತು ಇತರೆ ಕೆಲವು OTT ಪ್ಲಾಟ್‌ಫಾರ್ಮ್‌ಗಳಿಗೆ ಚಂದಾದಾರಿಕೆಯೊಂದಿಗೆ ಬರುತ್ತದೆ.

ಬಿಎಸ್‌ಎನ್‌ಎಲ್‌ 949ರೂ. ಭಾರತ್ ಫೈಬರ್ ಪ್ಲ್ಯಾನ್ ಪ್ರಯೋಜನ

ಬಿಎಸ್‌ಎನ್‌ಎಲ್‌ 949ರೂ. ಭಾರತ್ ಫೈಬರ್ ಪ್ಲ್ಯಾನ್ ಪ್ರಯೋಜನ

ಬಿಎಸ್ಎನ್ಎಲ್ 949ರೂ. ಹೊಸ ಸೂಪರ್‌ಸ್ಟಾರ್ ಪ್ರೀಮಿಯಂ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯು ತಿಂಗಳಿಗೆ 2000GB ಡೇಟಾ ಪ್ರಯೋಜನವನ್ನು ಪಡೆದಿದ್ದು, 150 Mbps ವೇಗದಲ್ಲಿ ಇಂಟರ್ನೆಟ್‌ ಸೌಲಭ್ಯ ನೀಡುತ್ತದೆ. ಇದಲ್ಲದೆ, ಈ ಯೋಜನೆಯು ಬಿಎಸ್ಎನ್ಎಲ್ ಸಿನಿಮಾ ಪ್ಲಸ್, ಸೋನಿಲೈವ್ ಪ್ರೀಮಿಯಂ, ಜೀ5 ಪ್ರೀಮಿಯಂ, ವೂಟ್ ಸೆಲೆಕ್ಟ್, ಯಪ್ ಟಿವಿ ಮತ್ತು ಇತರೆ ಕೆಲವು OTT ಪ್ಲಾಟ್‌ಫಾರ್ಮ್‌ಗಳಿಗೆ ಚಂದಾದಾರಿಕೆಯೊಂದಿಗೆ ಬರುತ್ತದೆ.

ಬಿಎಸ್‌ಎನ್‌ಎಲ್‌ 999ರೂ. ಭಾರತ್ ಫೈಬರ್ ಪ್ಲ್ಯಾನ್ ಪ್ರಯೋಜನ

ಬಿಎಸ್‌ಎನ್‌ಎಲ್‌ 999ರೂ. ಭಾರತ್ ಫೈಬರ್ ಪ್ಲ್ಯಾನ್ ಪ್ರಯೋಜನ

ಬಿಎಸ್ಎನ್ಎಲ್ 999ರೂ. ಭಾರತ್ ಫೈಬರ್ ಪ್ಲ್ಯಾನ್ ಅನ್ನು ಫೈಬರ್ ಹೈ ಸ್ಪೀಡ್‌ ಪಡೆದಿದೆ. ಈ ಯೋಜನೆಯು ತಿಂಗಳಿಗೆ 3300GB ಅಥವಾ 3.3TB ವರೆಗೆ ಡೇಟಾ ಪ್ರಯೋಜನವನ್ನು ಪಡೆದಿದ್ದು, 200 Mbps ವೇಗದಲ್ಲಿ ಇಂಟರ್ನೆಟ್‌ ಸೌಲಭ್ಯ ನೀಡುತ್ತದೆ. ಇದಲ್ಲದೆ, ಈ ಯೋಜನೆಯು ಅನಿಯಮಿತ ಧ್ವನಿ ಕರೆ ಪ್ರಯೋಜನದೊಂದಿಗೆ ಉಚಿತ ಫಿಕ್ಸಡ್ ಲೈನ್ ಸಂಪರ್ಕದೊಂದಿಗೆ ಬರುತ್ತದೆ. ಹಾಗೆಯೇ ಒಂದು ವರ್ಷಕ್ಕೆ ಡಿಸ್ನಿ+ ಹಾಟ್‌ಸ್ಟಾರ್ ಪ್ರೀಮಿಯಂ ಓಟಿಟಿ ಪ್ರಯೋಜನ ಲಭ್ಯ.

ಬಿಎಸ್‌ಎನ್‌ಎಲ್‌ 1,499ರೂ. ಭಾರತ್ ಫೈಬರ್ ಪ್ಲ್ಯಾನ್ ಪ್ರಯೋಜನ

ಬಿಎಸ್‌ಎನ್‌ಎಲ್‌ 1,499ರೂ. ಭಾರತ್ ಫೈಬರ್ ಪ್ಲ್ಯಾನ್ ಪ್ರಯೋಜನ

ಬಿಎಸ್‌ಎನ್‌ಎಲ್‌ 1,499ರೂ. ಯೋಜನೆಯು ದುಬಾರಿ ಮಾಸಿಕ ಫೈಬರ್ ಬ್ರಾಡ್‌ಬ್ಯಾಂಡ್ ಆಗಿದೆ. ಈ ಯೋಜನೆಯು ತಿಂಗಳಿಗೆ 4TB ಡೇಟಾ ಪ್ರಯೋಜನವನ್ನು ಒಳಗೊಂಡಿದ್ದು, 300 Mbps ಎಮ್‌ಬಿಪಿಎಸ್ ವೇಗದೊಂದಿಗೆ ಬರುತ್ತದೆ. ಇದರೊಂದಿಗೆ ಈ ಯೋಜನೆಯು ಅನಿಯಮಿತ ಧ್ವನಿ ಕರೆ ಪ್ರಯೋಜನದೊಂದಿಗೆ ಉಚಿತ ಫಿಕ್ಸಡ್ ಲೈನ್ ಸಂಪರ್ಕದೊಂದಿಗೆ ಬರುತ್ತದೆ. ಹಾಗೆಯೇ ಒಂದು ವರ್ಷಕ್ಕೆ ಡಿಸ್ನಿ+ ಹಾಟ್‌ಸ್ಟಾರ್ ಪ್ರೀಮಿಯಂ ಓಟಿಟಿ ಪ್ರಯೋಜನ ದೊರೆಯುತ್ತದೆ.

ಬಿಎಸ್‌ಎನ್‌ಎಲ್‌ 499ರೂ. ಭಾರತ್ ಫೈಬರ್ ಪ್ಲ್ಯಾನ್

ಬಿಎಸ್‌ಎನ್‌ಎಲ್‌ 499ರೂ. ಭಾರತ್ ಫೈಬರ್ ಪ್ಲ್ಯಾನ್

ಬಿಎಸ್‌ಎನ್‌ಎಲ್‌ ಹೊಸ 499ರೂ.ಗಳ ಭಾರತ ಫೈಬರ್‌ ಪ್ಲ್ಯಾನ್‌ ಒಂದು ಅಗ್ಗದ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ ಆಗಿದೆ. 3.3TB ಡೇಟಾ ಬಳಕೆಯ ವರೆಗೂ 30 Mbps ವೇಗದಲ್ಲಿ ಇಂಟರ್ನೆಟ್ ಸೌಲಭ್ಯವು ಇರುತ್ತದೆ. ನಿಗದಿತ ಡೇಟಾ ಮಿತಿ ಮುಗಿದ ಬಳಿಕ 2 Mbps ವೇಗದಲ್ಲಿ ಇಂಟರ್ನೆಟ್ ಮುಂದುವರೆಯುತ್ತದೆ. ಇದರೊಂದಿಗೆ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ವಾಯಿಸ್‌ ಕರೆ ಪ್ರಯೋಜನ ಲಭ್ಯ.

ಬಿಎಸ್‌ಎನ್‌ಎಲ್‌ 799ರೂ. ಭಾರತ್ ಫೈಬರ್ ಪ್ಲ್ಯಾನ್

ಬಿಎಸ್‌ಎನ್‌ಎಲ್‌ 799ರೂ. ಭಾರತ್ ಫೈಬರ್ ಪ್ಲ್ಯಾನ್

ಬಿಎಸ್‌ಎನ್‌ಎಲ್ 799ರೂ. ಭಾರತ್ ಫೈಬರ್ ಪ್ಲ್ಯಾನ್ ಅನ್ನು ಫೈಬರ್ ವ್ಯಾಲ್ಯೂ ಎಂದು ಹೆಸರಿಸಲಾಗಿದೆ. ಈ ಪ್ಲ್ಯಾನ್ ತಿಂಗಳಿಗೆ 799ರೂ. ಆಗಿದ್ದು, 3300GB ಅಥವಾ 3.3TB ವರೆಗೆ 100 Mbps ವೇಗದಲ್ಲಿ ಇಂಟರ್ನೆಟ್‌ ಸೌಲಭ್ಯ ನೀಡುತ್ತದೆ. ಡೇಟಾ ಮಿತಿ ಮುಗಿದ ಬಳಿಕ 2 Mbps ವೇಗದಲ್ಲಿ ಇಂಟರ್ನೆಟ್ ಮುಂದುವರೆಯುತ್ತದೆ.

Best Mobiles in India

English summary
BSNL Launches Two New Superstar Premium Broadband Plans With OTT Benefits.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+