ಬಿಎಸ್‌ಎನ್‌ಎಲ್‌ನ 997ರೂ. ಪ್ಲ್ಯಾನ್ ಮುಂದೆ ಮಂಕಾದ ಏರ್‌ಟೆಲ್, ವೊಡಾಫೋನ್!
ಭಾರತೀಯ ಟೆಲಿಕಾಂ ವಲಯದಲ್ಲಿ ಸದ್ಯ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಟೆಲಿಕಾಂ ಸಂಸ್ಥೆಯು ಖಾಸಗಿ ಟೆಲಿಕಾಂ ಸಂಸ್ಥೆಗಳಿಗೆ ತ್ರೀವ ಪೈಪೋಟಿ ನೀಡುತ್ತಿದೆ. ಈ ನಿಟ್ಟಿನಲ್ಲಿ ಇತ್ತೀಚಿಗೆ ಬಿಎಸ್ಎನ್‌ಎಲ್ ಹಲವು ಅತ್ಯುತ್ತಮ ಪ್ರೀಪೇಡ್ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ. ಮತ್ತೆ ಅದೇ ಹಾದಿಯಲ್ಲಿ ಮುನ್ನಡೆದಿರುವ ಬಿಎಸ್‌ಎನ್‌ಎಲ್ ಇದೀಗ ಹೊಸದೊಂದು ಪ್ರೀಪೇಡ್ ಪ್ಲ್ಯಾನ್ ಬಿಡುಗಡೆ ಮಾಡಿದ್ದು, ಆಕರ್ಷಕ ಪ್ರಯೋಜನಗಳನ್ನು ಹೊಂದಿದೆ.

ಹೌದು, ಬಿಎಸ್‌ಎನ್‌ಎಲ್ ಇದೀಗ ನೂತನವಾಗಿ 997ರೂ. ಪ್ರೀಪೇಡ್ ಪ್ಲ್ಯಾನ್‌ವೊಂದನ್ನು ಪರಿಚಯಿಸಿದ್ದು, ಈ ಪ್ಲ್ಯಾನ್ ಬರೊಬ್ಬರಿ 180 ದಿನಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದೆ. ಜೊತೆಗೆ ಅನಿಯಮಿತ ಕರೆಗಳು, ಡೇಟಾ ಸೌಲಭ್ಯಗಳನ್ನು ಹೊಂದಿರುವ ಈ ಪ್ಲ್ಯಾನ್ ಮೂಲಕ ಏರ್‌ಟೆಲ್‌ನ 998ರೂ ಪ್ಲ್ಯಾನ್ ಮತ್ತು ವೊಡಾಫೋನ್ ಸಂಸ್ಥೆಯ 999ರೂ. ಪ್ರೀಪೇಡ್ ಪ್ಲ್ಯಾನ್‌ಗಳಿಗೆ ನೇರ ಸ್ಪರ್ಧೆ ನೀಡಲಿದೆ. ಹಾಗಾದರೇ ಬಿಎಸ್‌ಎನ್‌ಎಲ್ ಹೊಸ 997ರೂ. ಪ್ಲ್ಯಾನ್ ಪ್ರಯೋಜನಗಳೆನು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಬಿಎಸ್‌ಎನ್‌ಎಲ್ 997ರೂ. ಪ್ಲ್ಯಾನ್
ಬಿಎಸ್‌ಎನ್‌ಎಲ್ ಹೊಸದಾಗಿ 997ರೂ. ಪ್ರೀಪೇಡ್ ಪ್ಲ್ಯಾನ್ ಬಿಡುಗಡೆ ಮಾಡಿದ್ದು, ಈ ಪ್ಲ್ಯಾನ್ ಒಟ್ಟು 180 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಈ ಅವಧಿಯಲ್ಲಿ ಅನಿಯಮಿತ ಲೋಕಲ್ ಮತ್ತಯ ನ್ಯಾಶನಲ್ ಕರೆಗಳು ಉಚಿತವಾಗಿ ಲಭ್ಯವಾಗಲಿದ್ದು, ಇದರೊಂದಿಗೆ ಪ್ರತಿದಿನ 3GB ಡೇಟಾ ಸೌಲಭ್ಯವು ದೊರೆಯಲಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್‌ಎಮ್ಎಸ್‌ಗಳ ಪ್ರಯೋಜನವು ಲಭ್ಯವಾಗಲಿದೆ.

ಏರ್‌ಟೆಲ್ ಮತ್ತು ವೊಡಾಫೋನ್ ಪೈಪೋಟಿ
ಏರ್‌ಟೆಲ್‌ನ 998ರೂ.ಪ್ಲ್ಯಾನಿನಲ್ಲಿ ಒಟ್ಟು 336 ದಿನಗಳ ವ್ಯಾಲಿಡಿಟಿ, ಅನಿಯಮಿತ ಕರೆಗಳು, 300ಎಸ್‌ಎಮ್‌ಎಸ್ ಮತ್ತು 12GB ಡೇಟಾ ಪ್ರಯೋಜನ ಹೊಂದಿದೆ. ಹಾಗೆಯೇ ವೊಡಾಫೋನ್ 999ರೂ. ಪ್ಲ್ಯಾನ್ ಸಹ ಏರ್‌ಟೆಲ್‌ನ ಪ್ಲ್ಯಾನಿನಂತೆಯೇ ಪ್ರಯೋಜನಗಳನ್ನು ಹೊಂದಿದ್ದು, ಆದ್ರೆ ವ್ಯಾಲಿಡಿಟಿಯು 365ದಿನಗಳಾಗಿವೆ. ಆದ್ರೆ ಬಿಎಸ್‌ಎನ್‌ಎಲ್ 997ರೂ,ಪ್ಲ್ಯಾನ್ ಅನಿಯಮಿತ ಕರೆಗಳು ಜೊತೆಗೆ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್ ಮತ್ತು ಪ್ರತಿದಿನ 3GB ಡೇಟಾ ಪ್ರಯೋಜನ ಹೊಂದಿದೆ.

ಪ್ಲ್ಯಾನ್ ಲಭ್ಯತೆ
ಬಿಎಸ್‌ಎನ್‌ಎಲ್ ಸಂಸ್ಥೆಯು ನೂತನವಾಗಿ ಬಿಡುಗಡೆ ಮಾಡಿರುವ 997ರೂ. ಪ್ರೀಪೇಡ್ ಪ್ಲ್ಯಾನ್ ಸದ್ಯ ಕೇರಳ ಟೆಲಿಕಾಂ ಸರ್ಕಲ್ ವ್ಯಾಪ್ತಿಯಲ್ಲಿ ಮಾತ್ರ ಲಭ್ಯವಾಗಲಿದೆ. ಬಹುಶಃ ಮುಂದಿನ ಹಂತದಲ್ಲಿ ಸಂಸ್ಥೆಯು ಈ ಪ್ರೀಪೇಡ್ ಪ್ಲ್ಯಾನ್ ಅನ್ನು ಇತರೆ ಟೆಲಿಕಾಂ ಸರ್ಕಲ್ ವ್ಯಾಪ್ತಿಗಳಲ್ಲಿ ವಿಸ್ತರಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ. ಈ ಹೊಸ ಪ್ಲ್ಯಾನ್ ಇದೇ ನವೆಂಬರ್ 10ರಿಂದ ಚಾಲ್ತಿಯಾಗಿದೆ.

ಬಿಎಸ್‌ಎನ್‌ಎಲ್ 1699ರೂ.ಪ್ಲ್ಯಾನ್
ಬಿಎಸ್‌ಎನ್‌ಎಲ್ ಸಂಸ್ಥೆಯ 1699ರೂ. ವಾರ್ಷಿಕ ಪ್ರೀಪೇಡ್ ರೀಚಾರ್ಜ್ ಪ್ಲ್ಯಾನ್ ಹೊಂದಿದ್ದು, ಈ ಪ್ಲ್ಯಾನ್ ಒಟ್ಟು 365 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಈ ಅವಧಿಯಲ್ಲಿ ಅನಿಯಮಿತ ಉಚಿತ ಸ್ಥಳಿಯ ಮತ್ತು ರಾಷ್ಟ್ರಿಯ ವಾಯಿಸ್ ಕರೆಗಳು, ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್ ಹಾಗೂ ಪ್ರತಿದಿನ 2GB ಉಚಿತ ಡೇಟಾ ಪ್ರಯೋಜನಗಳು ಗ್ರಾಹಕರಿಗೆ ದೊರೆಯಲಿವೆ. ಡೇಟಾ ಮತ್ತು ವ್ಯಾಲಿಡಿಟಿ ಪ್ರಿಯ ಗ್ರಾಹಕರಿಗೆ ಬೆಸ್ಟ್ ಎನಿಸಲಿದೆ.

ಬಿಎಸ್‌ಎನ್‌ಎಲ್ ಹೊಸ ಆಫರ್ : ಅಧಿಕ ಡೇಟಾ, ವ್ಯಾಲಿಡಿಟಿಯಲ್ಲಿ ಹೆಚ್ಚಳ!
ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಸಂಸ್ಥೆಯು ಈಗಾಗಲೇ ಕೆಲವು ಪ್ರೀಪೇಡ್ ಪ್ಲ್ಯಾನ್‌ಗಳ ಮೂಲಕ ಖಾಸಗಿ ಟೆಲಿಕಾಂ ಸಂಸ್ಥೆಗಳಿಗೆ ಸೆಡ್ಡು ಹೊಡೆದಿದೆ. ಹೆಚ್ಚಿನ ಡೇಟಾ ಸೌಲಭ್ಯ, ಅಧಿಕ ವ್ಯಾಲಿಡಿಟಿ ಸೌಲಭ್ಯ ಸೇರಿದಂತೆ ಅಗತ್ಯ ಪ್ರಯೋಜನಗಳನ್ನು ನೀಡಿದೆ. ಇದೀಗ ತನ್ನ ವಾರ್ಷಿಕ ಪ್ರೀಪೇಡ್ ಪ್ಲ್ಯಾನಿನಲ್ಲಿ ಭಾರಿ ಮಹತ್ತರ ಬದಲಾವಣೆಯನ್ನು ಬಂದದ್ದು ಗ್ರಾಹಕರಿಗೆ ಸಂಭ್ರಮ ಡಬಲ್ ಮಾಡಿದೆ.

ಹೌದು, ಬಿಎಸ್‌ಎನ್‌ಎಲ್ ತನ್ನ 1699ರೂ ಪ್ರೀಪೇಡ್ ವಾರ್ಷಿಕ ಯೋಜನೆಯಲ್ಲಿ ಇದೀಗ ಎರಡು ತಿಂಗಳ ವ್ಯಾಲಿಡಿಟಿ ಅವಧಿಯನ್ನು ಹೆಚ್ಚಿಸಿದೆ. ಹೀಗಾಗಿ ಪ್ರಸ್ತುತ ಇದ್ದ 365 ದಿನಗಳ ವ್ಯಾಲಿಡಿಟಿಗೆ ಬದಲಾಗಿ 425 ದಿನಗಳು ಲಭ್ಯವಾಗಲಿವೆ. ಹಾಗೆಯೇ ಪ್ರತಿದಿನ 2GB ಡೇಟಾ ಬದಲಿಗೆ 3GB ಡೇಟಾ ಸೌಲಭ್ಯ ದೊರೆಯಲಿದೆ. ಆದ್ರೆ ಈ ಕೊಡುಗೆ ಸೀಮಿತ ಅವಧಿಯದ್ದಾಗಿದ್ದು, ಇದೇ ನವಂಬರ್ 7 ರಿಂದ ಇದೇ ನವಂಬರ್ 30ರ ವರೆಗೆ ಮಾತ್ರ ಇರಲಿದೆ.

ಬಿಎಸ್‌ಎನ್‌ಎಲ್‌ನ ಹೊಸ 1699ರೂ. ಯೋಜನೆಯ ಪ್ಲ್ಯಾನಿನಲ್ಲಿ ಗ್ರಾಹಕರಿಗೆ ಪ್ರತಿದಿನ ಒಟ್ಟು 3GB ಡೇಟಾ ಸಿಗಲಿದ್ದು, ಜೊತೆಗೆ ಅನಿಯಮಿತ ಕರೆಗಳ ಸೌಲಭ್ಯ ಸಹ ಇರಲಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ಗಳು, ಲಭ್ಯ ಇರಲಿದ್ದು, ಒಟ್ಟು 425 ದಿನಗಳ ವ್ಯಾಲಿಡಿಟಿ ಅವಧಿಯಲ್ಲಿ ಗ್ರಾಹಕರಿಗೆ ಸಿಗಲಿದೆ. ಸೀಮಿತ ಅವಧಿಗೆ ಮಾತ್ರ (ಇದೇ ನ.30) ಈ ಆಫರ್ ಗ್ರಾಹಕರಿಗೆ ದೊರೆಯಲಿದೆ.

ಈ ಮೊದಲು ಬಿಎಸ್‌ಎನ್‌ಎಲ್‌ನ 1699ರೂ.ಗಳ ವಾರ್ಷಿಕ ಪ್ಲ್ಯಾನಿನಲ್ಲಿ ಗ್ರಾಹಕರಿಗೆ 365 ದಿನಗಳ ವ್ಯಾಲಿಡಿಟಿ ಅವಧಿ ದೊರೆಯುತ್ತಿತ್ತು, ಈ ಅವಧಿಯಲ್ಲಿ ಪ್ರತಿದಿನ 1.5GB ಡೇಟಾ ಲಭ್ಯ ಪ್ರಯೋಜನವಿತ್ತು. ಹಾಗೆಯೇ ಉಚಿತ 100 ಎಸ್‌ಎಮ್‌ಎಸ್‌ಗಳು, ಉಚಿತ ಕರೆಗಳ ಸೌಲಭ್ಯ ಸಹ ಲಭ್ಯವಿತ್ತು. ಇದೇ ರೀತಿ ಬಿಎಸ್‌ಎನ್‌ಎಲ್ ಈ ಹಿಂದೆ ತನ್ನ ವಾರ್ಷಿಕ ಪ್ಲ್ಯಾನಿನಲ್ಲಿ ಅಕ್ಟೋಬರ್ ಆಫರ್ ಹೆಸರಿನಲ್ಲಿ 455 ವ್ಯಾಲಿಡಿಟಿ ಅವಧಿ ಘೋಷಿಸಿತ್ತು.

ಬಹುತೇಕ ಗ್ರಾಹಕರು ವಾರ್ಷಿಕ ಅವಧಿಯ ಪ್ಲ್ಯಾನ್‌ಗಳನ್ನು ಬಯಸುತ್ತಾರೆ ಹೀಗಾಗಿಯೇ ಇತರೆ ಟೆಲಿಕಾಂಗಳು ಸಹ 1699ರೂ.ಗಳಿಗೆ ವಾರ್ಷಿಕ ಪ್ಲ್ಯಾನ್ ಪರಿಚಯಿಸಿವೆ. ಆದ್ರೆ ಖಾಸಗಿ ಟೆಲಿಕಾಂಗಳ ವಾರ್ಷಿಕ ಪ್ಲ್ಯಾನಿನಲ್ಲಿ 365 ದಿನಗಳ ವ್ಯಾಲಿಡಿಟಿ ನೀಡುತ್ತವೆ. ಉಳಿದಂತೆ ಪ್ರತಿದಿನ ಉಚಿತ ಡೇಟಾ(ಏರ್‌ಡೆಲ್ 1.4GB, ಜಿಯೋ1.5GB), ಉಚಿತ ಕರೆಗಳ ಸೌಲಭ್ಯ, ಉಚಿತ ಎಸ್‌ಎಮ್‌ಎಸ್ ಪ್ರಯೋಜನಗಳನ್ನು ನೀಡುತ್ತಿವೆ.


Click it and Unblock the Notifications








