ಟೆಲಿಕಾಮ್ ಸಂಸ್ಥೆ ಬಿಎಸ್‌ಎನ್ಎಲ್ ಸಂಕಷ್ಟದಲ್ಲಿ!!!

  By Shwetha
  |

  ಮೊಬೈಲ್ ಇಂಟರ್ನೆಟ್‌ ಅನ್ನು ಬಳಸದವರು ಇಂದಿನ ಆಧುನಿಕ ಯುಗದಲ್ಲಿ ಯಾರೂ ಇಲ್ಲ. ಅದಕ್ಕೆಂದೇ ಈ ಕಂಪೆನಿಗಳು ವಿಶೇಷ ರಿಯಾಯಿತಿ ದರದಲ್ಲಿ ಇಂಟರ್ನೆಟ್ ಸೇವೆಯನ್ನು ಒದಗಿಸುತ್ತಿದ್ದು ಬಳಕೆದಾರರು ಕಡಿಮೆ ದರದಲ್ಲಿ ಇಂಟರ್ನೆಟ್‌ನ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ ಎಂದೇ ಹೇಳಬಹುದು. ಇನ್ನು ಇಂಟರ್ನೆಟ್ ಸೇವೆಯಲ್ಲಿ ಅಸಾಧಾರಣವಾಗಿದ್ದ ಬಿಎಸ್‌ಎನ್‌ಎಲ್ ಪ್ರಸಕ್ತ ಸಾಲಿನಲ್ಲಿ ನಷ್ಟವನ್ನು ಅನುಭವಿಸಿದೆ.

  ಓದಿರಿ: ಬಿಎಸ್‌ಎನ್‌ಎಲ್ 3ಜಿ ಇಂಟರ್ನೆಟ್ ದರದಲ್ಲಿ ಕಡಿತ ಸಂಭವ

  ಈ ನಷ್ಟಕ್ಕೆ ಕಾರಣವೇನು ಮತ್ತು ಸಂಸ್ಥೆಯ ಮುಂದಿನ ಯೋಜನೆಗಳೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿದುಕೊಳ್ಳಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ದೋಷ ಮತ್ತು ಕವರೇಜ್ ಸಮಸ್ಯೆ

  ಸೇವಾ ಗುಣಮಟ್ಟದಲ್ಲಿರುವ ದೋಷ ಮತ್ತು ಕವರೇಜ್ ಸಮಸ್ಯೆಯನ್ನು ಬಿಎಸ್‌ಎನ್‌ಎಲ್ ಕಂಡುಕೊಂಡಿದೆ.

  ಮಾರುಕಟ್ಟೆ ಕುಸಿತ

  ಇದರಿಂದಾಗಿ ಮಾರುಕಟ್ಟೆ ಕುಸಿತವನ್ನು ಸಂಸ್ಥೆ ಕಂಡಿದೆ.

  ವೈರ್‌ಲೆಸ್ ವಿಭಾಗ

  ಟೆಲಿಕಾಮ್‌ನ ಅಧಿಕೃತ ವಿಭಾಗದ ಪ್ರಕಾರ, ಬಿಎಸ್‌ಎನ್‌ಎಲ್ ವೈರ್‌ಲೆಸ್ ವಿಭಾಗದಲ್ಲಿ 1.78 ಅಂತೆಯೇ ಮಾರ್ಚ್ 2014 ಮತ್ತು 2015 ರಲ್ಲಿ 20 ಲಕ್ಷ ವೈರ್‌ಲೈನ್ ಚಂದಾದಾರಿಕೆಗಳಲ್ಲಿ ನಷ್ಟ ಅನುಭವಿಸಿದೆ.

  ಸೇವೆಗಳ ಮಾರುಕಟ್ಟೆ

  ಖಾಸಗಿ ಟೆಲಿಕಾಮ್ ಆಪರೇಟರ್‌ಗಳಿಂದಾಗಿ ಸರಾಸರಿ ಸೇವೆಗಳ ಮಾರುಕಟ್ಟೆಯನ್ನು ಬಿಎಸ್‌ಎನ್‌ಎಲ್ ಸರಿಹೊಂದಲು ಸಾಧ್ಯವಾಗಿಲ್ಲ.

  ನೆಟ್‌ವರ್ಕ್ ಅಪ್‌ಗ್ರೇಡಶನ್ ಹೂಡಿಕೆ

  ಇನ್ನು 2008-2012 ರ ಸಮಯದಲ್ಲಿ ನೆಟ್‌ವರ್ಕ್ ಅಪ್‌ಗ್ರೇಡಶನ್ ಹೂಡಿಕೆಯಲ್ಲಿ ಸಂಸ್ಥೆ ಕಂಡುಕೊಂಡ ಅಸಾಮರ್ಥ್ಯ ಸಂಸ್ಥೆಯ ನಷ್ಟಕ್ಕೆ ಕಾರಣವಾಗಿದೆ.

  ಚಂದಾದಾರಿಕೆ ಮಟ್ಟ

  ಇನ್ನು ಕಂಪೆನಿಯು ಚಂದಾದಾರಿಕೆ ಮಟ್ಟವನ್ನು ಮೇಲಕ್ಕೆ ಕೊಂಡೊಯ್ಯುವಲ್ಲಿ ಶಕ್ತಿಮೀರಿ ಪ್ರಯತ್ನವನ್ನು ಮಾಡುತ್ತಿದ್ದು ಸೇವೆಯ ಮಟ್ಟದಲ್ಲಿ ಪ್ರಗತಿಯನ್ನು ಸಾಧಿಸುವ ನಿಟ್ಟಿನಲ್ಲಿದೆ.

  ಫಲಿತಾಂಶ

  ಇನ್ನು ಯೋಜನೆಯ ನಿಟ್ಟಿನಲ್ಲಿ ಕಂಪೆನಿ 4,804.77 ಕೋಟಿಯನ್ನು ಹೂಡಿಕೆ ಮಾಡುತ್ತಿದ್ದು ದೇಶಾದ್ಯಂತ ಇದು 14,421 2ಜಿ ಸೈಟ್‌ಗಳು ಮತ್ತು 10,605 3ಜಿ ಸೈಟ್‌ಗಳಲ್ಲಿ ಫಲಿತಾಂಶವನ್ನು ತೋರಲಿದೆ.

  ಕೊಡುಗೆ

  ಇನ್ನು ಗ್ರಾಹಕರನ್ನು ಸೆಳೆಯುವ ಸಲುವಾಗಿ ಸಂಸ್ಥೆಯು ಕೆಲವೊಂದು ಕೊಡುಗೆಗಳನ್ನು ಕೂಡ ಒದಗಿಸುತ್ತಿದೆ

  ಅನಿಯಮಿತ ಕರೆ

  ಲ್ಯಾಂಡ್‌ಲೈನ್‌ನಿಂದ ರಾತ್ರಿವೇಳೆಯಲ್ಲಿ ಅನಿಯಮಿತ ಕರೆಗಳು, ರೋಮಿಂಗ್‌ನಲ್ಲಿ ಉಚಿತ ಇನ್‌ಕಮಿಂಗ್ ಕರೆಗಳು ಮತ್ತು ವಿವಿಧ ಯೋಜನೆಗಳನ್ನು ಗ್ರಾಹಕರಿಗೆ ಸಂಸ್ಥೆ ಒದಗಿಸಿದೆ.

  ಕಠಿಣ ಸ್ಪರ್ಧೆ

  ಬಿಎಸ್‌ಎನ್‌ಎಲ್ ಅಂತೂ ತನ್ನ ಬಿದ್ದುಹೋಗುತ್ತಿರುವ ಮಾರುಕಟ್ಟೆಯನ್ನು ಕಠಿಣ ಸ್ಪರ್ಧೆಯ ನಡುವೆಯೂ ಸಾಧನೆಯ ಕಡೆಗೆ ಸಾಗಿಸುವ ಪ್ರಯತ್ನದಲ್ಲಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  State-run BSNL lost about 2 crore subscribers in the last financial year as the telco could not match aggressive marketing by private operators besides persisting issues related to coverage and quality of its services.

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more