ಬಿಎಸ್‌ಎನ್‌ಎಲ್ 3ಜಿ ಇಂಟರ್ನೆಟ್ ದರದಲ್ಲಿ ಕಡಿತ ಸಂಭವ

Written By:

ಮೊಬೈಲ್ ಇಂಟರ್ನೆಟ್ ದರವು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದರ ಹಿನ್ನಲೆಯಲ್ಲಿ ಬಿಎಸ್‌ಎನ್‌ಎಲ್ ತನ್ನ 3ಜಿ ಡೇಟಾ ದರವನ್ನು 50 ಶೇಕಡಾಕ್ಕೆ ಇಳಿಕೆ ಮಾಡುವ ನಿರ್ಧಾರವನ್ನು ಕೈಗೊಂಡಿದೆ.

ಬಿಎಸ್‌ಎನ್‌ಎಲ್ 3ಜಿ ಇಂಟರ್ನೆಟ್ ದರದಲ್ಲಿ ಕಡಿತ ಸಂಭವ

3ಜಿ ಡೇಟಾ ದರವನ್ನು ಕನಿಷ್ಟ ಪಕ್ಷ 50 ಶೇಕಡಾಕ್ಕೆ ಇಳಿಸುವ ತೀರ್ಮಾನವನ್ನು ಸಂಸ್ಥೆ ಕೈಗೊಂಡಿದ್ದು ನೆಟ್‌ವರ್ಕ್ ವಿಸ್ತರಣೆ ಹಿನ್ನಲೆಯಲ್ಲಿ ಈ ನಿರ್ಧಾರ ಮುಖ್ಯವಾಗಿದೆ ಎಂದು ಬಿಎಸ್ಎನ್‌ಎಲ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನುಪಮ್ ಶ್ರೀವಾಸ್ತವ ತಿಳಿಸಿದ್ದಾರೆ.

ಬಿಎಸ್‌ಎನ್‌ಎಲ್ 3ಜಿ ಇಂಟರ್ನೆಟ್ ದರದಲ್ಲಿ ಕಡಿತ ಸಂಭವ

ಪ್ರಸ್ತುತ ದಿನಗಳಲ್ಲಿ 3 ಜಿ ಮೊಬೈಲ್ ಇಂಟರ್ನೆಟ್ ಅನ್ನು 2ಜಿ ದರದಲ್ಲಿ ಕಂಪೆನಿಯು ವಿತರಿಸುತ್ತಿದ್ದು 3ಜಿ ಮೊಬೈಲ್‌ನ 1ಜಿಬಿ ಅನ್ನು ರೂ 175 ಕ್ಕೆ ಮತ್ತು 2ಜಿಬಿ ಯನ್ನು 251 ರೂಪಾಯಿಗಳಿಗೆ ಕಂಪೆನಿ ವಿತರಿಸುತ್ತಿದೆ.

ಬಿಎಸ್‌ಎನ್‌ಎಲ್ 3ಜಿ ಇಂಟರ್ನೆಟ್ ದರದಲ್ಲಿ ಕಡಿತ ಸಂಭವ

ನಾವು 3ಜಿಯ ತೊಂಭತ್ತು ಶೇಕಡಾವನ್ನು ಖರ್ಚು ಮಾಡಿದ್ದೇವೆ. ನಾವು ಟಾರಿಫ್ ಅನ್ನು ಕಡಿಮೆ ಮಾಡಿದಲ್ಲಿ, ಟ್ರಾಫಿಕ್‌ನಲ್ಲಿ ಒಮ್ಮೆಲೆ ಏರಿಕೆಯುಂಟಾಗುತ್ತದೆ ಮತ್ತು ನೆಟ್‌ವರ್ಕ್ ಲೋಡ್ ಅನ್ನು ಭರಿಸಲು ಸಾಧ್ಯವಾಗದೇ ಇರಬಹುದು. ಇದನ್ನು ಒಮ್ಮೆ ನಾವು ಸಮತೋಲನ ಮಾಡಿಕೊಂಡೆವು ಎಂದಾದಲ್ಲಿ ದರಗಳನ್ನು ನಾವು ಕಡಿತಗೊಳಿಸುತ್ತೇವೆ ಎಂದು ಶ್ರೀವಾಸ್ತವ ತಿಳಿಸಿದ್ದಾರೆ.

English summary
This article tells about BSNL to Slash 3G Data Rates by 50 Percent.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot