ಬಿಎಸ್‌ಎನ್‌ಎಲ್‌ನಿಂದ ಮತ್ತೆ ಹೊಸ ಪ್ಲ್ಯಾನ್ : ಖಾಸಗಿ ಟೆಲಿಕಾಂಗಳಲ್ಲಿ ನಡುಕ!
ದೇಶದ ಟೆಲಿಕಾಂ ವಲಯದಲ್ಲಿ ಖಾಸಗಿ ಟೆಲಿಕಾಂಗಳು ಇತ್ತೀಚಿಗಷ್ಟೆ ತಮ್ಮ ಪ್ಲ್ಯಾನ್‌ಗಳ ಬೆಲೆಯಲ್ಲಿ ಭಾರಿ ಏರಿಕೆ ಮಾಡಿ ಗ್ರಾಹಕರಿಗೆ ಹೊರೆ ಮಾಡಿವೆ. ಈ ನಡುವೆ ಬಿಎಸ್‌ಎಬ್‌ಎಲ್ ಸಹ ತನ್ನ ಪ್ಲ್ಯಾನ್‌ಗಳ ದರ ಹೆಚ್ಚಳ ಮಾಡುವ ಲಕ್ಷಣಗಳು ಕಂಡುಬಂದಿದ್ದರು ಇದುವರೆಗೂ ಬೆಲೆ ಏರಿಕೆಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಹಾಕಿಲ್ಲ. ಬಿಎಸ್‌ಎನ್‌ಎಲ್ ಇದೀಗ ಹೊಸದೊಂದು ಪ್ರೀಪೇಡ್ ಪ್ಲ್ಯಾನ್ ಪರಿಚಯಿಸಿದ್ದು, ಈ ಪ್ಲ್ಯಾನ್ ಖಾಸಗಿ ಟೆಲಿಕಾಂಗಳಿಗೆ ತೀವ್ರ ಪೈಪೋಟಿ ನೀಡಲಿದೆ.

ಹೌದು, ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್ಎಲ್ ಟೆಲಕಾಂ ಸಂಸ್ಥೆಯು ಇದೀಗ ''ಮಿತ್ರಮ್ ಪ್ಲಸ್ 109ರೂ. ಪ್ಲ್ಯಾನ್'' ಅನ್ನು ಬಿಡುಗಡೆ ಮಾಡಿದೆ. ಈ ಹೊಸ 109ರೂ. ಪ್ಲ್ಯಾನ್ ಅಗ್ಗದ ಪ್ರೀಪೇಡ್ ಪ್ಲ್ಯಾನ್ ಆಗಿದ್ದು, ಅಧಿಕ ವ್ಯಾಲಿಡಿಟಿ ಮತ್ತು ಡಾಟಾ ಸೌಲಭ್ಯವನ್ನು ಸಹ ಪಡೆದುಕೊಂಡಿದೆ. ಜೊತೆಗೆ ಅನಿಯಮಿತ ಕರೆಗಳ ಪ್ರಯೋಜನವನ್ನು ಸಹ ಪಡೆದಿರುವುದು ಪ್ರಮುಖ ಹೈಲೈಟ್ಸ್‌ಗಳಾಗಿವೆ.

ಅಂದಹಾಗೇ ಮಿತ್ರಮ್ ಪ್ಲಸ್ 109ರೂ. ಪ್ಲ್ಯಾನ್ ಒಟ್ಟು 90 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ದೇಶದ ಯಾವುದೇ ನೆಟವರ್ಕಗೆ ಪ್ರತಿದಿನ 250 ನಿಮಿಷ ಉಚಿತ ಕರೆಗಳ ಸೌಲಭ್ಯ ಪಡೆದಿದೆ. ಇದರೊಂದಿಗೆ 5GB ಇಂಟರ್ನೆಟ್ ಪ್ರಯೋಜನ ಸಹ ಇರಲಿದೆ. ಇನ್ನು ಈ ಎಲ್ಲ ಸೌಲಭ್ಯಗಳು ವ್ಯಾಲಿಡಿಟಿಯ ಮೊದಲ 20 ದಿನಗಳ ಅವಧಿಯಲ್ಲಿ ಮಾತ್ರ ಲಭ್ಯವಾಗಲಿವೆ. ಆ ನಂತರ ವ್ಯಾಲಿಡಿಟಿ ಇರಲಿದೆ ಆದರೆ ಈ ಸೌಲಭ್ಯಗಳು ಅಲಭ್ಯವಾಗುತ್ತವೆ.

ಬಿಎಸ್‌ಎನ್‌ಎಲ್‌ನ ಈ ಹೊಸ ಮಿತ್ರಮ್ ಪ್ಲಸ್ 109ರೂ. ಪ್ಲ್ಯಾನ್ ಸದ್ಯ ಕೇರಳ ವ್ಯಾಪ್ತಿಯ ಟೆಲಿಕಾಂ ಸರ್ಕಲ್ ವ್ಯಾಪ್ತಿಯಲ್ಲಿ ಮಾತ್ರ ಲಭ್ಯವಿದೆ. ಮುಂದಿನ ದಿನಗಳಲ್ಲಿ ಇತರೆ ಟೆಲಿಕಾಂ ಸರ್ಕಲ್‌ಗಳಿಗೂ ಈ ಪ್ಲ್ಯಾನ್ ವಿಸ್ತರಿಸುವ ಸಾಧ್ಯತೆಗಳಿವೆ. ಆದರೆ ಇತರೆ ಟೆಲಿಕಾಂ ಸರ್ಕಲ್‌ಗಳಲ್ಲಿ ಸಂಸ್ಥೆಯು ಈ ಪ್ಲ್ಯಾನ್ ವ್ಯಾಲಿಡಿಟಿ ಅವಧಿಯಲ್ಲಿ ಇನ್ನಷ್ಟು ಹೆಚ್ಚಳ ಮಾಡುವ ಸಾಧ್ಯತೆಗಳಿವೆ. ಹಾಗೂ ಪ್ರಯೋಜನದ ಅವಧಿ ಸಹ ಹೆಚ್ಚಿರಲಿದೆ ಎಂದು ಹೇಳಲಾಗುತ್ತಿದೆ.

ಬಿಎಸ್ಎನ್ಎಲ್ ಸಂಸ್ಥೆಯು ಈ ಹಿಂದೆಯು ಮಿತ್ರಮ್ ಹೆಸರಿನ ಪ್ರೀಪೇಡ್ ಪ್ಲ್ಯಾನ್‌ವೊಂದನ್ನು ಕೇರಳದಲ್ಲಿ ಪರಿಚಯಿಸಿತ್ತು. ಇದೀಗ ಮಿತ್ರಮ್ ಪ್ಲಸ್ ಹೆಸರಿನಲ್ಲಿ ಪರಿಚಯಿಸಿದೆ. ಕೇರಳದಲ್ಲಿ ಸಂಸ್ಥೆಯ 187ರೂ.ಪ್ಲ್ಯಾನ್ 24 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಆದರೇ ಅದೇ ಪ್ಲ್ಯಾನ್ ಇತರೆ ಟೆಲಿಕಾಂ ಸರ್ಕಲ್‌ಗಳಲ್ಲಿ 28 ದಿನಗಳ ವ್ಯಾಲಿಡಿಟಿ ಅವಧಿಯಲ್ಲಿ ಲಭ್ಯವಾಗುತ್ತದೆ. ಆದರೆ ಬಿಎಸ್‌ಎನ್‌ಎಲ್‌ನ 1,699ರೂ ವಾರ್ಷಿಕ ಪ್ಲ್ಯಾನ್ ಬೆಸ್ಟ್ ಅನ್ನುವುದರಲ್ಲಿ ಎರಡು ಮಾತಿಲ್ಲ. ಏಕೆಂದರೇ 3665 ದಿನಗಳ ವ್ಯಾಲಿಡಿಟಿಯ ಈ ಪ್ಲ್ಯಾನ್ ಪ್ರತಿದಿನ 3GB ಡಾಟಾ, 100 ಎಸ್‌ಎಮ್ಎಸ್, 250 ನಿಮಿಷ ಕರೆ ಪ್ರಯೋಜನಗಳನ್ನು ಒಳಗೊಂಡಿದೆ.


Click it and Unblock the Notifications








