BSNLನ ಮತ್ತೆ ಹೊಸ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್; ಭರ್ಜರಿ ಪ್ರಯೋಜನಗಳು!

|

ಬಿಎಸ್‌ಎನ್‌ಎಲ್‌ ಟೆಲಿಕಾಂ ಸಂಸ್ಥೆಯು ಇತ್ತೀಚಿನ ದಿನಗಳಲ್ಲಿ ಅತ್ಯುತ್ತಮ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ಗಳನ್ನು ಪರಿಚಯಿಸಿ ಗ್ರಾಹಕರಿಂದ ಸೈ ಎನಿಸಿಕೊಂಡಿದೆ. ಅದೇ ಹಾದಿಯಲ್ಲಿ ಮುನ್ನಡೆದಿರುವ ಬಿಎಸ್‌ಎನ್‌ಎಲ್‌ ಇದೀಗ ಹೊಸದಾಗಿ ಮತ್ತೊಂದು ಬ್ರಾಡ್‌ಬ್ಯಾಂಡ್‌ ಯೋಜನೆಯನ್ನು ಪರಿಚಯಿಸಿದೆ. ಬಿಎಸ್‌ಎನ್‌ಎಲ್‌ ಟೆಲಿಕಾಂನ ನೂತನ ಯೋಜನೆಯು ಆಕರ್ಷಕ ಪ್ರಯೋಜನಗಳನ್ನು ಒಳಗೊಂಡಿದೆ.

ಬಿಎಸ್‌ಎನ್‌ಎಲ್‌

ಹೌದು, ಬಿಎಸ್‌ಎನ್‌ಎಲ್‌ ಟೆಲಿಕಾಂ ಹೊಸದಾಗಿ 599ರೂ.ಗಳ ಬೇಸಿಕ್ ಫೈಬರ್ ಪ್ಲಸ್‌ ಬ್ರಾಡ್‌ಬ್ಯಾಂಡ್‌ ಯೋಜನೆಯನ್ನು ಲಾಂಚ್ ಮಾಡಿದೆ. ಈ ಯೋಜನೆಯು ಅನಿಯಮಿಯ ಡೇಟಾ ಪ್ರಯೋಜನವನ್ನು ಹೊಂದಿದ್ದು, 60 Mbps ಸಾಮರ್ಥ್ಯದ ಇಂಟರ್ನೆಟ್ ವೇಗವನ್ನು ಪಡೆದಿದೆ. ಬಿಎಸ್‌ಎನ್‌ಎಲ್‌ನ ಈ ನೂತನ ಯೋಜನೆಯ ಬಗ್ಗೆ ಹಾಗೂ ಇತರೆ ಆಕರ್ಷಕ ಯೋಜನೆಗಳ ಇನ್ನಷ್ಟು ಮಾಹಿತಿಗಾಗಿ ಮುಂದಿನ ಸ್ಲೈಡರ್‌ಗಳನ್ನು ಓದಿರಿ.

ಬಿಎಸ್‌ಎನ್‌ಎಲ್‌ ಫೈಬರ್ ಬೇಸಿಕ್ ಪ್ಲಸ್‌ 599ರೂ.

ಬಿಎಸ್‌ಎನ್‌ಎಲ್‌ ಫೈಬರ್ ಬೇಸಿಕ್ ಪ್ಲಸ್‌ 599ರೂ.

ಬಿಎಸ್‌ಎನ್‌ಎಲ್‌ನ ಹೊಸ ಫೈಬರ್ ಬೇಸಿಕ್ ಪ್ಲಸ್ ಬ್ರಾಡ್‌ಬ್ಯಾಂಡ್ ಯೋಜನೆ 3300GB ವರೆಗೆ 60 Mbps ವೇಗವನ್ನು ನೀಡುತ್ತದೆ. ಆದಾಗ್ಯೂ, ISP ಯೋಜನೆಯನ್ನು ಪ್ರತಿಸ್ಪರ್ಧಿ ಬ್ರಾಡ್‌ಬ್ಯಾಂಡ್ ಆಪರೇಟರ್‌ಗಳಂತೆಯೇ ಅನಿಯಮಿತ ಡೇಟಾ ಯೋಜನೆ ನೀಡಿದೆ. ಬಳಕೆದಾರರು ಮಾಸಿಕ FUP ಮಿತಿಯನ್ನು ಖಾಲಿ ಮಾಡಿದ ನಂತರ, ವೇಗವನ್ನು 2 Mbpsಗೆ ಇಳಿಸಲಾಗುತ್ತದೆ.

ಬಿಎಸ್‌ಎನ್‌ಎಲ್‌ ಫೈಬರ್ ಬೇಸಿಕ್ 449.ರೂ

ಬಿಎಸ್‌ಎನ್‌ಎಲ್‌ ಫೈಬರ್ ಬೇಸಿಕ್ 449.ರೂ

ಬಿಎಸ್‌ಎನ್‌ಎಲ್‌ ಫೈಬರ್ ಬೇಸಿಕ್ 449.ರೂ ಬೆಲೆ ಹೊಂದಿದ್ದು, ಯೋಜನೆ ಬಳಕೆದಾರರಿಗೆ ತಿಂಗಳಿಗೆ 3.3 ಟಿಬಿ (3,300 ಜಿಬಿ) ವರೆಗೆ 30 ಎಮ್‌ಬಿಪಿಎಸ್ ವೇಗವನ್ನು ಬ್ರೌಸ್ ಮಾಡಲು ಅನುವು ಮಾಡಿಕೊಡುತ್ತದೆ. ಎಫ್‌ಯುಪಿ ಡೇಟಾದ ಬಳಕೆಯ ನಂತರ, ಆಪರೇಟರ್ ವೇಗವನ್ನು 2 ಎಮ್‌ಬಿಪಿಎಸ್‌ಗೆ ನಿರ್ಬಂಧಿಸುತ್ತದೆ. ಭಾರತದ ಪ್ರಮುಖ ಪ್ರದೇಶಗಳಲ್ಲಿ ಈ ಯೋಜನೆಯ ಲಭ್ಯತೆ ಪಡೆದಿದೆ.

ಬಿಎಸ್‌ಎನ್‌ಎಲ್‌ ಫೈಬರ್ ವ್ಯಾಲ್ಯೂ 799.ರೂ

ಬಿಎಸ್‌ಎನ್‌ಎಲ್‌ ಫೈಬರ್ ವ್ಯಾಲ್ಯೂ 799.ರೂ

ಬಿಎಸ್‌ಎನ್‌ಎಲ್ ‘ಫೈಬರ್ ವ್ಯಾಲ್ಯೂ' ಯೋಜನೆ ಶುಲ್ಕವು ಗಾಗಿ ತಿಂಗಳಿಗೆ 799 ರೂ. ಆಗಿದೆ. ಬಳಕೆದಾರರು ಅದೇ 3.3 ಟಿಬಿ (3,300 ಜಿಬಿ) ಮಾಸಿಕ ಡೇಟಾದವರೆಗೆ 100 ಎಮ್‌ಬಿಪಿಎಸ್ ವೇಗದಲ್ಲಿ ಬ್ರೌಸ್ ಮಾಡಲು ಅನುವು ಮಾಡಿಕೊಡುವ ಯೋಜನೆ ಇದಾಗಿದೆ. ಫೈಬರ್ ಬೇಸಿಕ್ ಯೋಜನೆಯಂತೆಯೇ, ಆಪರೇಟರ್ 3.3 ಟಿಬಿ ಡೇಟಾ ಮಿತಿಯನ್ನು ತಲುಪಿದ ನಂತರ ವೇಗವನ್ನು 2 ಎಮ್‌ಬಿಪಿಎಸ್‌ಗೆ ನಿರ್ಬಂಧಿಸುತ್ತದೆ.

Best Mobiles in India

English summary
BSNL's all-new Fiber Basic Plus broadband plan offers 60 Mbps speeds up to 3300GB.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X