Home
ಸುದ್ದಿಜಾಲ

ಬಿಎಸ್‌ಎನ್‌ಎಲ್‌ನಿಂದ MTNL ನೆಟವರ್ಕ್‌ಗೆ ಇನ್ನು ಕರೆಗಳು ಸಂಪೂರ್ಣ ಉಚಿತ!

ಭಾರತೀಯ ಟೆಲಿಕಾಂ ವಲಯದಲ್ಲಿ ಖಾಸಗಿ ಟೆಲಿಕಾಂ ಸಂಸ್ಥೆಗಳ ನಡುವೆ ಬೆಲೆ ಸಮರ ನಡೆಯುತ್ತಲೇ ಸಾಗಿದ್ದು, ಸಂಸ್ಥೆಗಳು ಗ್ರಾಹಕರನ್ನು ಸೆಳೆಯಲು ಆಫರ್‌ಗಳ ಮೇಲೆ ಆಫರ್‌ ಪರಿಚಯಿಸುತ್ತಲೇ ಇವೆ. ಖಾಸಗಿ ಟೆಲಿಕಾಂ ಸಂಸ್ಥೆಗಳ ಅಬ್ಬರದ ನಡುವೆ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಸಂಸ್ಥೆಯು ಫಿನಿಕ್ಸ್‌ನಂತೆ ಗುರುತಿಸಿಕೊಂಡಿದೆ. ಇತ್ತೀಚಿಗೆ ಹಲವು ಆಫರ್‌ಗಳ ಮೂಲಕ ಗ್ರಾಹಕರಿಗೆ ಬೆಸ್ಟ್‌ ಎನಿಸಿದ್ದು, ಇದೀಗ ಮತ್ತೊಂದು ಖುಷಿ ಸುದ್ದಿ ನೀಡಿದೆ.

ಬಿಎಸ್‌ಎನ್‌ಎಲ್‌

ಹೌದು, ಬಿಎಸ್‌ಎನ್‌ಎಲ್‌ ಸಂಸ್ಥೆಯ ಹಲವು ಪ್ರೀಪೇಡ್‌ ಪ್ಲ್ಯಾನ್‌ಗಳು ಉಚಿತ ವಾಯಿಸ್‌ ಕಾಲ್ ಸೌಲಭ್ಯವನ್ನು ಪಡೆದಿವೆ ಆದರೆ (MTNL) ಮುಂಬೈ ಮತ್ತು ದೆಹಲಿ ವ್ಯಾಪ್ತಿಯ ಸರ್ಕಲ್‌ಗಳಲ್ಲಿ ಕೆಲವು ಪ್ಲ್ಯಾನ್‌ಗಳ್ ಉಚಿತ ವಾಯಿಸ್‌ ಕರೆಗಳು ಲಭ್ಯವಾಗುವುದಿಲ್ಲ. ಆದ್ರೆ ಈಗ ಬಿಎಸ್‌ಎನ್‌ಎಲ್‌ನ 429ರೂ, ಪ್ಲ್ಯಾನ್ 485ರೂ, ಪ್ಲ್ಯಾನ್ ಮತ್ತು 666ರೂ,ಪ್ಲ್ಯಾನ್‌ಗಳು MTNL ಗ್ರಾಹಕರಿಗೂ ಸಹ ಉಚಿತ ವಾಯಿಸ್‌ ಕರೆಗಳ ಸೌಲಭ್ಯ ಒದಗಿಸಲಿವೆ.

MTNL

ಮುಂಬೈ ಮತ್ತು ದೆಹಲಿ ನಗರ ವ್ಯಾಪ್ತಿಯಲ್ಲಿ MTNL ಸಂಸ್ಥೆಯ ಸೇವೆ ಇದ್ದು, MTNL ಅನ್ನು ಬಿಎಸ್‌ಎನ್‌ಎಲ್‌ನೊಂದಿಗೆ ವಿಲಿನ ಮಾಡುವ ಸಾಧ್ಯತೆಗಳಿವೆ. ವಿಲಿನದ ನಂತರ MTNL ಗ್ರಾಹಕರು ಬಿಎಸ್‌ಎನ್‌ಎಲ್‌ ವ್ಯಾಪ್ತಿಗೆ ಒಳಪಡುತ್ತಾರೆ. ಬಿಎಸ್‌ಎನ್‌ಎಲ್‌ ತನ್ನ ಮೂರು ಜನಪ್ರಿಯ ಪ್ರೀಪೇಡ್‌ ಪ್ಲ್ಯಾನ್‌ಗಳಲ್ಲಿ MTNL ನೆಟವರ್ಕ್ ಕರೆಗಳಿಗೂ ಉಚಿತ ವಾಯಿಸ್‌ ಸೇವೆಯ ಪ್ರಯೋಜನೆ ಒದಗಿಸಿದೆ. ಹಾಗಾದರೇ ಬಿಎಸ್‌ಎನ್‌ಎಲ್‌ ಸಂಸ್ಥೆ ಆ ಮೂರು ಪ್ರೀಪೇಡ್‌ ಪ್ಲ್ಯಾನ್‌ಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ನೋಡೋಣ ಬನ್ನಿರಿ.

ಪ್ರೀಪೇಡ್‌

ಬಿಎಸ್‌ಎನ್‌ಎಲ್‌ನ ಜನಪ್ರಿಯ ಪ್ರೀಪೇಡ್‌ ಪ್ಲ್ಯಾನ್‌ಗಳಾದ 429ರೂ, ಪ್ಲ್ಯಾನ್ 485ರೂ, ಪ್ಲ್ಯಾನ್ ಮತ್ತು 666ರೂ,ಪ್ಲ್ಯಾನ್‌ಗಳಲ್ಲಿ ಇನ್ನು MTNL ನೆಟವರ್ಕ್‌ಗಳಿಗೂ ಉಚಿತ ವಾಯಿಸ್‌ ಕರೆ ಮಾಡುವ ಪ್ರಯೋಜನ ಲಭ್ಯವಾಗಲಿದೆ. ಆದ್ರೆ, ಪ್ರತಿದಿನ 250 ನಿಮಿಷಗಳು (ಮುಂಬೈ ಮತ್ತು ದೆಹಲಿ MTNL ಕರೆಗಳನ್ನು ಒಳಗೊಂಡಂತೆ) ಮಾತ್ರ ಉಚಿತ ವಾಯಿಸ್‌ ಕರೆ ಸೌಲಭ್ಯ ದೊರೆಯಲಿದೆ.

ವಿಲಿನ

ಬಿಎಸ್‌ಎನ್‌ಎನ್‌ ಈ ಮೇಲೆ ತಿಳಿಸಿದ ಮೂರು ಪ್ರೀಪೇಡ್‌ ಪ್ಲ್ಯಾನ್‌ಗಳು ಮಾತ್ರ MTNL ನೆಟವರ್ಕ್‌ಗೆ ಫ್ರೀ ವಾಯಿಸ್‌ ಕರೆ ಪ್ರಯೋಜನ ನೀಡಲಿದೆ. ಬಿಎಸ್‌ಎನ್‌ಎಲ್‌ ಮತ್ತು ಎಮ್‌ಟಿಎನ್‌ಎಲ್‌ ಅಧಿಕೃತವಾಗಿ ವಿಲಿನಗೊಂಡ ನಂತರ ಇನ್ನುಳಿದ ಇತರೆ ಬಿಎಸ್‌ಎನ್‌ಎಲ್‌ನ ಪ್ರೀಪೇಡ್‌ ಪ್ಲ್ಯಾನ್‌ಗಳು ಸಹ MTNL ನೆಟವರ್ಕ್‌ಗೆ ಉಚಿತ ವಾಯಿಸ್‌ ಕರೆಗಳ ಪ್ರಯೋಜನ ಒದಗಿಸುವ ಸಾಧ್ಯತೆಗಳಿವೆ.

Best Mobiles in India

English summary
Popular BSNL plans like Rs 429, Rs 485 and Rs 666 now offer voice calling to MTNL network as well. to know more visit to kannada.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+