BSNLನಿಂದ 49ರೂ. ರೀಚಾರ್ಜ್ ಯೋಜನೆ; 2GB ಡೇಟಾ, ಉಚಿತ ವಾಯಿಸ್ ಕರೆ!

|

ದೇಶದ ಟೆಲಿಕಾಂ ವಲಯದಲ್ಲಿ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಸದ್ಯ ಖಾಸಗಿ ಟೆಲಿಕಾಂಗಳಿಗೆ ಪೈಪೋಟಿ ನೀಡುವಂತಹ ಆಕರ್ಷಕ ಪ್ಲ್ಯಾನ್‌ಗಳನ್ನು ಪರಿಚಯಿಸುತ್ತಾ ಸಾಗಿದೆ. ಸಂಸ್ಥೆಯ ಇತ್ತೀಚಿನ ಕೆಲವು ಹೊಸ ಪ್ರೀಪೇಯ್ಡ್‌ ಪ್ಲ್ಯಾನ್‌ಗಳು ಡೇಟಾ ಪ್ರಯೋಜನ ಹಾಗೂ ಅಧಿಕ ವ್ಯಾಲಿಡಿಟಿ ಸೌಲಭ್ಯದಿಂದ ಚಂದಾದಾರರನ್ನು ಆಕರ್ಷಿಸಿವೆ. ಅದರ ಬೆನ್ನಲ್ಲೇ ಬಿಎಸ್‌ಎನ್‌ಎಲ್‌ ಈಗ ಮತ್ತೆ ಅಗ್ಗದ ಹೊಸದೊಂದು ಪ್ಲ್ಯಾನ್ ಪರಿಚಯಿಸಿದೆ.

 STV-49

ಹೌದು, ಬಿಎಸ್‌ಎನ್‌ಎಲ್‌ ಟೆಲಿಕಾಂ ಹೊಸದಾಗಿ STV-49 ಯೋಜನೆಯನ್ನು ಬಿಡುಗಡೆ ಮಾಡಿದೆ. ಬಿಎಸ್ಎನ್ಎಲ್ STV-49 ಸೆಪ್ಟೆಂಬರ್ 1, 2020 ರಿಂದ ಆಫರ್‌ಗಳ ಲಿಸ್ಟ್‌ನಲ್ಲಿ ಕಾಣಿಸಿಕೊಂಡಿದೆ. ಈ ಯೋಜನೆಯು ಸೀಮಿತ ಅವಧಿಯ ಆಫರ್ ಹೊಂದಿದೆ. ಅಂದಹಾಗೇ ಈ ಯೋಜನೆಯು ಒಟ್ಟು 90 ದಿನಗಳವರೆಗೆ ಮಾತ್ರ ಕೊಡುಗೆಯಾಗಿರುತ್ತದೆ. ಇನ್ನು ಈ ಪ್ಲ್ಯಾನ್ 2 ಜಿಬಿ ಡೇಟಾ ಪ್ರಯೋಜನ ಪಡೆದಿದೆ.

ಬಿಎಸ್‌ಎನ್‌ಎಲ್‌ನ STV-49 ಪ್ಲ್ಯಾನ್

ಬಿಎಸ್‌ಎನ್‌ಎಲ್‌ನ STV-49 ಪ್ಲ್ಯಾನ್

ಬಿಎಸ್‌ಎನ್‌ಎಲ್‌ನ 49 ರೂ. ಪ್ಲ್ಯಾನ್‌ನಲ್ಲಿ ಡೇಟಾದೊಂದಿಗೆ, ಗ್ರಾಹಕರು 100 ನಿಮಿಷಗಳ ಉಚಿತ ಕರೆ ಪಡೆಯಲು ಮಾತ್ರ ಅರ್ಹರಾಗಿದ್ದಾರೆ. ಅದರ ನಂತರ, ಕರೆಗಳಿಗೆ ನಿಮಿಷಕ್ಕೆ 45 ಪೈಸಾ ಶುಲ್ಕ ವಿಧಿಸಲಾಗುತ್ತದೆ. ಡೇಟಾ ಮತ್ತು ವಾಯ್ಸ್ ಕಾಲಿಂಗ್ ಜೊತೆಗೆ, ಒಟ್ಟು 100 ಉಚಿತ ಎಸ್‌ಎಮ್‌ಎಸ್‌ ಸೌಲಭ್ಯ ಲಭ್ಯ. ಎಸ್‌ಟಿವಿ -49 ಯೋಜನೆಯು ಕೇವಲ 28 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ, ಇದು ಅಲ್ಪಾವಧಿಯ ಯೋಜನೆಯನ್ನು ಬಯಸುವ ಗ್ರಾಹಕರಿ ಉತ್ತಮ ಆಯ್ಕೆ. ಎಸ್‌ಟಿವಿ 49 ಗಾಗಿ ಸೆಲ್ಫ್‌ಕೇರ್ ಕೀವರ್ಡ್ - ‘ಎಸ್‌ಟಿವಿ ಕಾಂಬೊ 49'.

ಬಿಎಸ್‌ಎನ್‌ಎಲ್‌ 151ರೂ. ಪ್ಲ್ಯಾನ್

ಬಿಎಸ್‌ಎನ್‌ಎಲ್‌ 151ರೂ. ಪ್ಲ್ಯಾನ್

ಬಿಎಸ್‌ಎನ್‌ಎಲ್‌ನ ಈ ಹೊಸ ಡೇಟಾ ವೋಚರ್‌ (STV DATA151) ಒಟ್ಟು 30 ದಿನಗಳ ವ್ಯಾಲಿಡಿಟಿ ಪ್ರಯೋಜನ ಹೊಂದಿದೆ. ಈ ಅವಧಿಯಲ್ಲಿ ಒಟ್ಟು 40GB ಡೇಟಾ ಸೌಲಭ್ಯವನ್ನು ಒದಗಿಸಲಿದೆ.

ಬಿಎಸ್‌ಎನ್‌ಎಲ್‌ 251ರೂ. ಪ್ಲ್ಯಾನ್

ಬಿಎಸ್‌ಎನ್‌ಎಲ್‌ 251ರೂ. ಪ್ಲ್ಯಾನ್

ಬಿಎಸ್‌ಎನ್‌ಎಲ್‌ನ ಈ ಹೊಸ ಡೇಟಾ ವೋಚರ್‌ ಸಹ (STV DATA251) ಒಟ್ಟು 30 ದಿನಗಳ ವ್ಯಾಲಿಡಿಟಿ ಪ್ರಯೋಜನ ಹೊಂದಿದೆ. ಆದರೆ ಈ ಅವಧಿಯಲ್ಲಿ ಒಟ್ಟು 70GB ಡೇಟಾ ಸೌಲಭ್ಯವನ್ನು ಒದಗಿಸಲಿದೆ.

ಬಿಎಸ್‌ಎನ್‌ಎಲ್‌ 94ರೂ. ಮತ್ತು 95ರೂ. ಪ್ಲ್ಯಾನ್

ಬಿಎಸ್‌ಎನ್‌ಎಲ್‌ 94ರೂ. ಮತ್ತು 95ರೂ. ಪ್ಲ್ಯಾನ್

ಬಿಎಸ್‌ಎನ್‌ಎಲ್‌ನ 94ರೂ ಪ್ರಿಪೇಯ್ಡ್ ಯೋಜನೆ 60 ಸೆಕೆಂಡುಗಳ ಪಲ್ಸ್‌ ರೇಟ್‌ನಲ್ಲಿ ಲಭ್ಯವಿದ್ದರೆ, 95ರೂ ಯೋಜನೆಯು ಒಂದು ಸೆಕೆಂಡಿನ ಪಲ್ಸ್‌ ರೇಟ್‌ ಅನ್ನು ಒಳಗೊಂಡಿದೆ. ಸದ್ಯ ಬಿಎಸ್ಎನ್ಎಲ್ ಚೆನ್ನೈ ವಿಭಾಗದಲ್ಲಿ ರೂ. 94 ‘ಅಡ್ವಾನ್ಸ್‌ ಫಾರ್‌ ಮಿನಿಟ್' ಮತ್ತು ರೂ 95 ‘ಅಡ್ವಾನ್ಸ್ ಪರ್ ಸೆಕೆಂಡ್' ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳು 100 ನಿಮಿಷಗಳ ವಾಯ್ಸ್‌ ಕಾಲ್‌, 90 ದಿನಗಳವರೆಗೆ ಲಭ್ಯವಿರಲಿದೆ ಮತ್ತು 3GB ಹೈಸ್ಪೀಡ್ ಡೇಟಾವನ್ನು ಒಳಗೊಂಡಿದೆ.

Best Mobiles in India

English summary
BSNL STV-49 came on the list of offerings from September 1, 2020.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X