BSNL 'ಸೂಪರ್‌ ಸ್ಟಾರ್‌ 300' ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌!.ಹಾಟ್‌ಸ್ಟಾರ್‌ ಉಚಿತ!

|

ಭಾರತೀಯ ಸರಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಎನಿಸಿಕೊಂಡಿರುವ ಬಿಎಸ್‌ಎನ್‌ಎಲ್‌ ಈಗಾಗಲೇ ಹಲವು ಪ್ರಯತ್ನಗಳ ಮೂಲಕ ಮತ್ತೆ ತನ್ನ ಸ್ಥಾನ ಗಟ್ಟಿ ಮಾಡಿಕೊಳ್ಳುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿ ಟೆಲಿಕಾಂ ಸಂಸ್ಥೆಗಳು ಬ್ರಾಡ್‌ಬ್ಯಾಂಡ್‌ ಸೇವೆ ಒದಗಿಸುವ ನಿಟ್ಟಿನಲ್ಲಿ ಮುಂದುವರೆದಿದ್ದು, ಅದಕ್ಕಾಗಿ ಬಿಎಸ್‌ಎನ್‌ಎಲ್‌ ಸಹ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈಗ ಖುಷಿ ವಿಷಯವೆನೆಂದರೇ ಬಿಎಸ್‌ಎನ್‌ಎಲ್‌ ಹೊಸ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ ಒಂದನ್ನು ಪರಿಚಯಿಸಿದೆ.

BSNL 'ಸೂಪರ್‌ ಸ್ಟಾರ್‌ 300' ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌!.ಹಾಟ್‌ಸ್ಟಾರ್‌ ಉಚಿತ

ಹೌದು, ಬಿಎಸ್‌ಎನ್‌ಎಲ್‌ ಹೊಸದಾಗಿ ಸೂಪರ್‌ಸ್ಟಾರ್‌ 300 ಬ್ರಾಡ್‌ಬ್ಯಾಂಡ್‌ ಯೋಜನೆಯನ್ನು ಬಿಡುಗಡೆ ಮಾಡಿದ್ದು, ಈ ಪ್ಲ್ಯಾನಿನ ತಿಂಗಳ ದರವು 749ರೂ.ಗಳು ಆಗಿದೆ. ಈ ಆರಂಭಿಕ ಪ್ಲ್ಯಾನ್‌ನಲ್ಲಿ 50Mbps ವೇಗದಲ್ಲಿ ಇಂಟರ್ನೆಟ್‌ ಸೇವೆ ಲಭ್ಯವಾಗಲಿದ್ದು, ಒಟ್ಟು 300GB ಡೇಟಾ ದೊರೆಯಲಿದೆ. ಈ ಮೂಲಕ ಬಿಎಸ್‌ಎನ್‌ಎಲ್‌ ಸಹ ಖಾಸಗಿ ಟೆಲಿಕಾಂ ಸಂಸ್ಥೆಗಳಿಗೆ ಟಫ್‌ ಪೈಪೋಟಿ ನೀಡಲು ಯೋಜಿಸಿದೆ.

BSNL 'ಸೂಪರ್‌ ಸ್ಟಾರ್‌ 300' ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌!.ಹಾಟ್‌ಸ್ಟಾರ್‌ ಉಚಿತ

ಬಿಎಸ್‌ಎನ್‌ಎಲ್‌ನ ಹೊಸ ಫೈಬರ್ ಟು ಹೋಮ್ ಪ್ಲ್ಯಾನಿನ ಹೈಲೈಟ್ ಎಂದರೇ ಗ್ರಾಹಕರಿಗೆ ಒಂದು ವರ್ಷದ ಉಚಿತ ಹಾಟ್‌ಸ್ಟಾರ್‌ ಪ್ರೀಮಿಯಮ್‌ ಚಂದಾದಾರತ್ವ ದೊರೆಯಲಿದೆ. ಪ್ರಸ್ತುತ ಐಸಿಸಿ ವಿಶ್ವಕಪ್ ಕ್ರಿಕೆಟ್ ಮ್ಯಾಚ್‌ಗಳು ಸಹ ನಡೆಯುತ್ತಿದ್ದು, ಹಾಟ್‌ಸ್ಟಾರ್ ನಲ್ಲಿ ಉಚಿತವಾಗಿ ಸ್ಟ್ರೀಮಿಂಗ್ ಮಾಡಬಹುದಾಗಿದೆ. ಈ ಯೋಜನೆಯ ಪ್ರಯೋಜನ ಪಡೆಯಲು ಆಸಕ್ತಿ ಇರುವ ಗ್ರಾಹಕರು ಆನ್‌ಲೈನ್‌ ಮೂಲಕ ರೀಕ್ಚೇಸ್ಟ್‌ ಸಲ್ಲಿಸಬಹುದಾಗಿದೆ. ಭಾರತದ ಎಲ್ಲ ಪ್ರದೇಶಗಳಲ್ಲಿಯೂ ಈ ಸೇವೆ ಲಭ್ಯ.

BSNL 'ಸೂಪರ್‌ ಸ್ಟಾರ್‌ 300' ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌!.ಹಾಟ್‌ಸ್ಟಾರ್‌ ಉಚಿತ

ಹಾಗೆಯೇ ಉಚಿತ ಟೋಲ್‌ ಫ್ರೀ ನಂಬರ್‌ ಸಹ ನಿಡಲಾಗಿದ್ದು, (18003451500) ಈ ನಂಬರ್‌ಗೆ ಕರೆ ಮಾಡಿಯೂ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ. ಈ ವರ್ಷದ ಜನೆವರಿಯಲ್ಲಿ BSNL ತನ್ನ ಗ್ರಾಹಕರಿಗೆ ಒಂದು ವರ್ಷದ ಮೌಲ್ಯದ ಉಚಿತ ಅಮೆಜಾನ್ ಪ್ರೈಮ್ ಸದಸ್ಯತ್ವ ಸಿಗಲಿದೆ ಎಂದಿತ್ತು. ಅದೇ ರೀತಿ ಏರ್‌ಟೆಲ್‌ ಸಹ ಇತ್ತೀಚಿಗೆ ತನ್ನ ಪ್ಲಾಟಿನಂ ಗ್ರಾಹಕರಿಗೆ Zee5 ಪ್ರೀಮಿಯಂ ಸೇವೆಯ ಸದಸ್ಯತ್ವ ಸೀಗಲಿದೆ ಎಂದು ಘೋಷಿಸಿತ್ತು.

ಓದಿರಿ : 4,000mAh ಬ್ಯಾಟರಿ ಫುಲ್‌ ಚಾರ್ಜ್‌ ಆಗಲು ಕೇವಲ 13 ನಿಮಿಷ ಅಷ್ಟೇ ಸಾಕು!ಓದಿರಿ : 4,000mAh ಬ್ಯಾಟರಿ ಫುಲ್‌ ಚಾರ್ಜ್‌ ಆಗಲು ಕೇವಲ 13 ನಿಮಿಷ ಅಷ್ಟೇ ಸಾಕು!

ಗ್ರಾಹಕರು ಬ್ರಾಡ್‌ಬ್ಯಾಂಡ್‌ ಇಂಟರ್ನೆಟ್‌ ಸೇವೆಯಲ್ಲಿ ವೇಗದ ಮತ್ತು ಸ್ಥಿರ ಇಂಟರ್ನೆಟ್‌ ಸೇವೆಯನ್ನು ಪಡೆಯಬಹುದಾಗಿದೆ. ಸದ್ಯ ಮುಂದಿನ ದಿನಗಳಲ್ಲಿ ಜಿಯೋ ಸಹ ತನ್ನ ಗಿಗಾಫೈಬರ್‌ ಬ್ರಾಡ್‌ಬ್ಯಾಂಡ್‌ ಸೇವೆಯನ್ನು ಆರಂಭಿಸಲಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಮತ್ತಷ್ಟು ಪೈಪೋಟಿ ಏರ್ಪಡಲಿದ್ದು, ಟೆಲಿಕಾಂ ಸಂಸ್ಥೆಗಳ ನಡುವೆ ಬೆಲೆ ಸಮರ ಶುರುವಾಗಲಿದೆ. ಅತ್ಯುತ್ತಮ ಆಫರ್‌ಗಳು ಲಭ್ಯವಾಗಬಹುದು.

ಓದಿರಿ : 'ಸಾಂಗ್‌ ಟ್ರಾಕ್‌' ಸರ್ಚ್ ಮಾಡಲು ಹೀಗೆ ಮಾಡಿ!ಓದಿರಿ : 'ಸಾಂಗ್‌ ಟ್ರಾಕ್‌' ಸರ್ಚ್ ಮಾಡಲು ಹೀಗೆ ಮಾಡಿ!

4,000mAh ಬ್ಯಾಟರಿ ಫುಲ್‌ ಚಾರ್ಜ್‌ ಆಗಲು ಕೇವಲ 13 ನಿಮಿಷ ಅಷ್ಟೇ ಸಾಕು!

4,000mAh ಬ್ಯಾಟರಿ ಫುಲ್‌ ಚಾರ್ಜ್‌ ಆಗಲು ಕೇವಲ 13 ನಿಮಿಷ ಅಷ್ಟೇ ಸಾಕು!

ಸ್ಮಾರ್ಟ್‌ಫೋನ್‌ಗಳಲ್ಲಿ ಈಗ ಸಾಕಷ್ಟು ಬದಲಾವಣೆಗಳು ಆಗುತ್ತಿದ್ದು, ಮುಖ್ಯವಾಗಿ ಕ್ಯಾಮೆರಾ ಮತ್ತು ಬ್ಯಾಟರಿಗಳತ್ತ ಹೆಚ್ಚಿನ ಗಮನ ನೀಡಲಾಗುತ್ತಿದೆ. ಸ್ಮಾರ್ಟ್‌ಫೋನ್‌ ಜೀವಾಳ ಎನಿಸಿಕೊಂಡಿರುವ ಬ್ಯಾಟರಿಗಳಿಗೆ ಹೆಚ್ಚಿನ ಸಾಮರ್ಥ್ಯವನ್ನು ಒದಗಿಸುವುದರ ಜೊತೆಗೆ ಫೋನ್‌ಗಳ ಚಾರ್ಜಿಂಗ್ ಸೌಲಭ್ಯದಲ್ಲಿಯೂ ಭಾರಿ ಹೊಸತನದ ಆಯ್ಕೆಗಳು ಸೇರ್ಪಡೆಗೊಳ್ಳುತ್ತಲಿವೆ. ಈ ನಿಟ್ಟಿನಲ್ಲಿ ವಿವೋ ಇದೀಗ ಒಂದು ಹೆಜ್ಜೆ ಮುಂದಿರಿಸಿದೆ.

ಹೌದು, ಈಗಾಗಲೇ ಸ್ಮಾರ್ಟ್‌ಫೋನ್‌ ವಲಯದಲ್ಲಿ ಹಲವು ಹೊಸತನಗಳನ್ನು ಪರಿಚಯಿಸಿರುವ ವಿವೋ ಸಂಸ್ಥೆಯು ಈಗ ಮತ್ತೊಂದು ಹೊಸ ಪ್ರಯತ್ನಕ್ಕೆ ಮುಂದಾಗಿದೆ. ಇದೇ ಜೂನ್‌ 26 ರಿಂದ ಜೂನ್ 28 ವರೆಗೂ ಶಾಂಘೈನಲ್ಲಿ ನಡೆಯುವ ಮೊಬೈಲ್‌ ವರ್ಲ್ಡ್‌ ಕಾಂಗ್ರೆಸ್‌ 2019 ಕಾರ್ಯಕ್ರಮದಲ್ಲಿ ವಿವೋ ತನ್ನ '120w ಸಾಮರ್ಥ್ಯದ ಸೂಪರ್‌ ಫ್ಲ್ಯಾಶ್‌ಚಾರ್ಜ್‌' ತಂತ್ರಜ್ಞಾನ ಪರಿಚಯಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.

ವಿವೋ ಕಂಪನಿ ಮ್ಯಾನೇಜರ್ Weibo ತಾಣದಲ್ಲಿ ಹೊಸ ಚಾರ್ಜಿಂಗ್ ಕುರಿತು ವಿಡಿಯೊಂದನ್ನು ಪೋಸ್ಟ್‌ ಮಾಡಿದ್ದಾರೆ. ಆ ಡೆಮೊ ವಿಡಿಯೊದಲ್ಲಿ ಸ್ಮಾರ್ಟ್‌ಫೋನ್‌ ಬ್ಯಾಟರಿಯು 16 ಸೆಕೆಂಡಿಗೆ ಶೇ.10% ರಿಂದ ಶೇ.14% ನಷ್ಟು ಚಾರ್ಜ್‌ ಒದಗಿಸಲಿದೆ. ಆದರೆ ಹೊಸ ಚಾರ್ಜಿಂಗ್ ಕುರಿತು ಹೆಚ್ಚಿನ ಮಾಹಿತಿಯನ್ನು ಹೊರಹಾಕಿಲ್ಲ. ಹಾಗಾದರೇ ಅತೀ ವೇಗದ ಚಾರ್ಜಿಂಗ್ ತಂತ್ರಜ್ಞಾನದ ವಿಶೇಷತೆಗಳೆನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಶಾಕಿಂಗ್ ತಂತ್ರಜ್ಞಾನ

ಶಾಕಿಂಗ್ ತಂತ್ರಜ್ಞಾನ

ವಿವೋ ಕಂಪನಿಯು ಅಭಿವೃದ್ದಿ ಪಡಿಸಿರುವ 120w ಸಾಮರ್ಥ್ಯದ ಚಾರ್ಜಿಂಗ್ ತಂತ್ರಜ್ಞಾನವು ಸ್ಮಾರ್ಟ್‌ಫೋನ್‌ ವಲಯದಲ್ಲಿ ಹೊಸ ಸಂಚಲನ ಮೂಡಿಸಲಿದೆ. ಏಕೆಂದರೇ ಈ ಹೊಸ ತಂತ್ರಜ್ಞಾನವು 4000mAh ಸಾಮರ್ಥ್ಯದ ಸ್ಮಾರ್ಟ್‌ಫೋನ್‌ ಬ್ಯಾಟರಿಯನ್ನು ಕೇವಲ 13 ನಿಮಿಷದಲ್ಲಿ ಪೂರ್ಣಗೊಳಿಸಲಿದೆ. ಈ ಮೂಲಕ ಅತೀ ವೇಗದ ಸ್ಮಾರ್ಟ್‌ಫೋನ್‌ ಚಾರ್ಜರ್‌ ಎನಿಸಿಕೊಳ್ಳಲಿದೆ.

ಶಿಯೋಮಿಗಿಂತ ವಿವೋ ಮುಂದೆ

ಶಿಯೋಮಿಗಿಂತ ವಿವೋ ಮುಂದೆ

ವೇಗದ ಚಾರ್ಜಿಂಗ್ ತಂತ್ರಜ್ಞಾನ ಸದ್ಯ ಟ್ರೆಂಡ್‌ನಲ್ಲಿದ್ದು, ಶಿಯೋಮಿ ಕಂಪನಿಯು ಇತ್ತೀಚಿಗೆ 100w ಸಾಮರ್ಥ್ಯ ವೇಗದ ಚಾರ್ಜಿಂಗ್ ತಂತ್ರಜ್ಞಾನದ ಘೋಷಿಸಿತ್ತು. 4,000mAh ಬ್ಯಾಟರಿಯು ಕೇವಲ 17 ನಿಮಿಷಕ್ಕೆ ಪೂರ್ಣವಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ಇದೀಗ ವಿವೋ ಈಗ 120w ಸಾಮರ್ಥ್ಯದ ಚಾರ್ಜಿಂಗ್ ತಂತ್ರಜ್ಞಾನವು ಕೇವಲ 13 ನಿಮಿಷದಲ್ಲಿ 4,000mAh ಬ್ಯಾಟರಿ ಪೂರ್ಣಮಾಡಲಿದೆ.

ಓದಿರಿ : ಸರ್ಚ್‌ ಪ್ರೈವೆಸಿ ಕಾಪಾಡುವ 5 ಬೆಸ್ಟ್‌ ಬ್ರೌಸರ್‌ಗಳು!ಓದಿರಿ : ಸರ್ಚ್‌ ಪ್ರೈವೆಸಿ ಕಾಪಾಡುವ 5 ಬೆಸ್ಟ್‌ ಬ್ರೌಸರ್‌ಗಳು!

ವಿವೋ ಗೇಮಿಂಗ್‌ ಪೋನ್‌ನಲ್ಲಿ 44W!

ವಿವೋ ಗೇಮಿಂಗ್‌ ಪೋನ್‌ನಲ್ಲಿ 44W!

ವಿವೋ iQOO ಹೆಸರಿನ ವೇಗದ ಗೇಮಿಂಗ್‌ ಸ್ಮಾರ್ಟ್‌ಫೋನ್‌ ಇತ್ತೀಚಿಗೆ ಬಿಡುಗಡೆ ಮಾಡಿದ್ದು, ಈ ಗೇಮಿಂಗ್ ಸ್ಮಾರ್ಟ್‌ಪೋನ್‌ ವಿಶೇಷವೆಂದರೇ ಅದರ ಬ್ಯಾಟರಿ ಮತ್ತು RAM ಆಗಿದೆ. ಹಾಗೆಯೇ ಈ ಫೋನಿನಲ್ಲಿ ವಿವೋ 44W ಸಾಮರ್ಥ್ಯದ ಚಾರ್ಜಿಂಗ್ ತಂತ್ರಜ್ಞಾನ ಒದಗಿಸಲಾಗಿದ್ದು, 45 ನಿಮಿಷದಲ್ಲಿ 4,000mAh ಬ್ಯಾಟರಿ ಪೂರ್ಣ ಚಾರ್ಜ್‌ ಪಡೆದುಕೊಳ್ಳುವ ಶಕ್ತಿ ಇದೆ.

ಇತರೆ ಕಂಪನಿಗಳ ಚಾರ್ಜಿಂಗ್ ವೇಗ

ಇತರೆ ಕಂಪನಿಗಳ ಚಾರ್ಜಿಂಗ್ ವೇಗ

ಪ್ರಸ್ತುತ ಎಲ್ಲ ಕಂಪನಿಗಳು ವೇಗದ ಚಾರ್ಜರ್‌ ಒದಗಿಸುತ್ತಿದ್ದು, ಈ ವಿಷಯದಲ್ಲಿ ಯಾವ ಕಂಪನಿಗಳು ಹಿಂದೆ ಬಿದ್ದಿಲ್ಲ. ಒಪ್ಪೊ ಸೂಪರ್ VOOC ತಂತ್ರಜ್ಞಾನ, ಹುವಾವೆ ಮೇಟ್ 20 ಪ್ರೊ ಫೋನ್‌ನಲ್ಲಿ ಹುವಾವೆ ಕಂಪನಿ 40W ಚಾರ್ಜಿಂಗ್ ಸೌಲಭ್ಯ ನೀಡಿದೆ. ಹಾಗೆಯೇ ಒನ್‌ಪ್ಲಸ್‌ ಸಹ ತನ್ನ ಇತ್ತೀಚಿನ ಫೋನ್‌ಗಳಲ್ಲಿ 30W ಸಾಮರ್ಥ್ಯ ಚಾರ್ಜಿಂಗ್ ತಂತ್ರಜ್ಞಾನವನ್ನು ಪರಿಚಯಿಸಿವೆ.

ಓದಿರಿ : ಮಾರುಕಟ್ಟೆಯಲ್ಲಿ ಲಭ್ಯವಿರುವ 5 ಬೆಸ್ಟ್‌ ಬ್ಯುಸಿನೆಸ್‌ ಪ್ರೊಜೆಕ್ಟರ್‌ಗಳು! ಓದಿರಿ : ಮಾರುಕಟ್ಟೆಯಲ್ಲಿ ಲಭ್ಯವಿರುವ 5 ಬೆಸ್ಟ್‌ ಬ್ಯುಸಿನೆಸ್‌ ಪ್ರೊಜೆಕ್ಟರ್‌ಗಳು!

Best Mobiles in India

English summary
BSNL's new Superstar 300 broadband plan is priced at Rs. 749 and offers 300GB of high-speed data at 50Mbps per month. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X