ಬಿಎಸ್‌ಎನ್‌ಎಲ್‌ನಿಂದ ಗ್ರಾಹಕರಿಗೆ ಭರ್ಜರಿ ಗಿಫ್ಟ್‌!..ಪ್ರತಿದಿನ 3GB ಡೇಟಾ!

|

ದೇಶಿಯ ಟೆಲಿಕಾಂ ಮಾರುಕಟ್ಟೆಯಲ್ಲಿ ಪೈಪೋಟಿ ಜೋರಾಗಿದ್ದು, ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಸಂಸ್ಥೆಯು ಇದೀಗ ಅತ್ಯುತ್ತಮ ಪ್ರೀಪೇಡ್‌ ಪ್ಲ್ಯಾನ್‌ಗಳನ್ನು ಪರಿಚಯಿಸುತ್ತಿದೆ. ಝಾಸಗಿ ಟೆಲಿಅಕಂ ಕಂಪನಿಗಳಿಗೂ ಶಾಕ್‌ ನೀಡುವಂತೆ ಬಿಎಸ್‌ಎನ್‌ಎಲ್‌ ಮುನ್ನುಗ್ಗುತ್ತಿದ್ದು, ಹಲವು ಆಕರ್ಷಕ ಪ್ಲ್ಯಾನ್‌ಗಳಿಂದ ಗ್ರಾಹಕರನ್ನು ಖಷಿಪಡಿಸುತ್ತಿದೆ. ಈಗ ಮತ್ತೆ ಹೊಸ ಪ್ರೀಪೇಡ್‌ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ.

ಬಿಎಸ್‌ಎನ್‌ಎಲ್‌

ಹೌದು, ಬಿಎಸ್‌ಎನ್‌ಎಲ್‌ ಸಂಸ್ಥೆಯು ಈಗ ಹೊಸದಾಗಿ STV 187 ಪ್ಲ್ಯಾನ್‌ ಅನ್ನು ಬಿಡುಗಡೆ ಮಾಡಿದ್ದು, ಇದರೊಂದಿಗೆ ತನ್ನ ಹಳೆಯ 186ರೂ. ಪ್ರೀಪೇಡ್‌ ರೀಚಾರ್ಜ್ ವೊಚರ್‌ ಅನ್ನು ಮತ್ತೆ ಪರಿಚಯಿಸಿದೆ. ಹೊಸ ಎಸ್‌ಟಿವಿ 187ರೂ ಪ್ಲ್ಯಾನಿನಲ್ಲಿ ಗ್ರಾಹಕರಿಗೆ ಪ್ರತಿದಿನ 3GB ಡೇಟಾ ಲಭ್ಯವಾಗಲಿದ್ದು, ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ಗಳು ದೊರೆಯಲಿವೆ. ಹಾಗಾದರೇ ಬಿಎಸ್‌ಎನ್‌ಎಲ್‌ನ ಎಸ್‌ಟಿವಿ 187ರೂ ಪ್ಲ್ಯಾನ್‌ ಮತ್ತು ಇತರೆ ಜನಪ್ರಿಯ ಕುರಿತು ಇನ್ನಷ್ಟು ಮಾಹಿತಿ ಮುಂದೆ ನೋಡೋಣ ಬನ್ನಿರಿ.

ಎಸ್‌ಟಿವಿ 187ರೂ ಪ್ಲ್ಯಾನ್

ಎಸ್‌ಟಿವಿ 187ರೂ ಪ್ಲ್ಯಾನ್

ಬಿಎಸ್‌ಎನ್‌ಎಲ್‌ ಪರಿಚಯಿಸಿರುವ ಹೊಸ ಎಸ್‌ಟಿವಿ 187ರೂ ಪ್ಲ್ಯಾನಿನಲ್ಲಿ ಗ್ರಾಹಕರಿಗೆ ಪ್ರತಿದಿನ 3GB ಡೇಟಾ ಲಭ್ಯವಾಗಲಿದ್ದು, ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ಗಳು ದೊರೆಯಲಿವೆ. ಇದರೊಂದಿಗೆ ಪ್ರತಿದಿನ 250 ನಿಮಿಷಗಳ ಸ್ಥಳೀಯ ಮತ್ತು ನ್ಯಾಶನಲ್ ಕರೆಗಳ ಪ್ರಯೋಜನ ಲಭ್ಯವಾಗಲಿದೆ. ಹಾಗೆಯೇ ಈ ಪ್ಲ್ಯಾನಿನಲ್ಲಿ ಗ್ರಾಹಕರಿಗೆ 40Kbps ವೇಗದಲ್ಲಿ ಇಂಟರ್ನೆಟ್‌ ಸೌಲಭ್ಯವು ದೊರೆಯಲಿದೆ. ವ್ಯಾಲಿಡಿಟಿಯು 28ದಿನಗಳು ಆಗಿದೆ.

186ರೂ. ಪ್ರೀಪೇಡ್‌ ರೀಚಾರ್ಜ್

186ರೂ. ಪ್ರೀಪೇಡ್‌ ರೀಚಾರ್ಜ್

ಬಿಎಸ್‌ಎನ್‌ಎಲ್‌ ಮತ್ತೆ 186ರೂ. ಪ್ರೀಪೇಡ್‌ ರೀಚಾರ್ಜ್ ವೋಚರ್‌ ಅನ್ನು ಪರಿಚಯಿಸಿದೆ. ಈ ಪ್ಲ್ಯಾನ್‌ ಸಹ 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದ್ದು, ಪ್ರತಿದಿನ 3GB ಡೇಟಾ ಲಭ್ಯವಾಗಲಿದ್ದು, ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ಗಳು ದೊರೆಯಲಿವೆ. 40Kbps ವೇಗದಲ್ಲಿ ಇಂಟರ್ನೆಟ್‌ ಸೌಲಭ್ಯವು ಲಭ್ಯವಾಗಲಿದೆ ಇನ್ನು ನ್ಯಾಶನಲ್ ಮತ್ತು ಸ್ಥಳೀಯ ಕರೆಗಳ ಸೌಲಭ್ಯವು ಇರಲಿದೆ.

153ರೂ.ಗಳ ಪ್ಲ್ಯಾನ್

153ರೂ.ಗಳ ಪ್ಲ್ಯಾನ್

ಬಿಎಸ್‌ಎನ್‌ಎಲ್‌ ತನ್ನ 153ರೂ.ಗಳ ಪ್ಲ್ಯಾನ್ ಅನ್ನು ಮರಳಿ ಅಪ್‌ಡೇಟ್‌ ಮಾಡಿದ್ದು, ಈಗ ಈ ಪ್ಲ್ಯಾನಿನಲ್ಲಿ ಗ್ರಾಹಕರಿಗೆ 1.5GB ಡೇಟಾ ಪ್ರಯೋಜನವು ದೊರೆಯಲಿದೆ. ಹಾಗೆಯೇ ಇಂಟರ್ನೆಟ್‌ ವೇಗವು 40 Kbps ಸಾಮರ್ಥ್ಯದಲ್ಲಿರಲಿದ್ದು, ಇದರೊಮದಿಗೆ ಪ್ರತಿದಿನ 100 ಉಚಿತ ಎಸ್‌ಎಮ್ಎಸ್‌ಗಳು ದೊರೆಯಲಿವೆ. ನ್ಯಾಶನಲ್ ಮತ್ತು ಸ್ಥಳೀಯ ಕರೆಗಳ ಸೌಲಭ್ಯವು ಇರಲಿದ್ದು, ವ್ಯಾಲಿಡಿಟಿ ಅವಧಿಯು 28 ದಿನಗಳಾಗಿವೆ.

STV 192 ಮತ್ತು 118ರೂ ಪ್ಲ್ಯಾನ್

STV 192 ಮತ್ತು 118ರೂ ಪ್ಲ್ಯಾನ್

ಬಿಎಸ್‌ಎನ್‌ಎಲ್‌ STV 192 ಪ್ಲ್ಯಾನ್ ಸಹ 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಮದಿದ್ದು, ಪ್ರತಿದಿನ 3GB ಡೇಟಾ ಸೌಲಭ್ಯವು ದೊರೆಯಲಿದೆ. ಇದರೊಂದಿಗೆ ಪ್ರತಿದಿನ 250 ನಿಮಿಷಗಳ ಸ್ಥಳೀಯ ಮತ್ತು ನ್ಯಾಶನಲ್ ಕರೆಗಳ ಪ್ರಯೋಜನ ಲಭ್ಯವಾಗಲಿದೆ. ಪ್ರತಿದಿನ 100ಎಸ್‌ಎಮ್ಎಸ್‌ ಉಚಿತವಾಗಿ ಸಿಗಲಿದೆ. ಹಾಗೆಯೇ ಬಿಎಸ್‌ಎನ್‌ಎಲ್‌ 118ರೂ ಪ್ಲ್ಯಾನ್‌ನಲ್ಲಿಯೂ ಸಹ ಪ್ರತಿದಿನ 250 ನಿಮಿಷಗಳ ಸ್ಥಳೀಯ ಮತ್ತು ನ್ಯಾಶನಲ್ ಕರೆಗಳ ಪ್ರಯೋಜನ ಇದ್ದು, 28ದಿನಗಳ ವ್ಯಾಲಿಡಿಟಿ ಅವಧಿ ದೊರೆಯಲಿದೆ.

Best Mobiles in India

English summary
BSNL introduced the new STV for Rs 187, and also brought back Rs 186 prepaid recharge voucher recently. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X